SOCIAL MEDIA

Newsletter

PARTNER SITES
Select Language Select State

ಇಂದಿನಿಂದ ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ 4 ದಿನಗಳ ಕೃಷಿಮೇಳ

ರಾಜ್ಯ ವಿವಿಧ ಜಿಲ್ಲೆಗಳಿಂದ ಧಾರವಾಡಕ್ಕೆ ಆಗಮಿಸಿ ಇಂದಿನಿಂದ ನಾಲ್ಕು ದಿನಗಳ ಕಾಲ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಕೃಷಿಮೇಳ ನಡೆಯುತ್ತಿದೆ. ಈ ಮೇಳಕ್ಕೆ ಬರುವ ಬಹುತೇಕ ರೈತರು ಮೊದಲಿಗೆ ಖರೀದಿಸುವುದು ಬಿತ್ತನೆ ಬೀಜ.

Reported By Manjunath Naragund Written By Manjunath Naragund
Published: Sep 25, 2026, 05:45 PM IST | Updated: Sep 25, 2026, 05:52 PM IST
Image Credit: Krishi Mela
Join

ಧಾರವಾಡ: ರೈತರ ಜಾತ್ರೆ ಎಂದು ಹೆಸರು ಮಾಡಿರುವ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕೃಷಿ ಮೇಳ ಇಂದಿನಿಂದ ಆರಂಭಗೊಂಡಿದೆ. ನಾಲ್ಕು ದಿನಗಳ ಕಾಲ ನಡೆಯಲಿರುವ ಈ ಮೇಳದಲ್ಲಿ ಲಕ್ಷಾಂತರ ರೈತರು ಭಾಗವಹಿಸುತ್ತಾರೆ.ಇಂಥ ಮೇಳದ ವಿಶೇಷತೆ ಎಂದರೆ ಬೀಜ ಮೇಳ. ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಉತ್ಪಾದನೆಯಾಗುವ ಬಿತ್ತನೆ ಬೀಜಗಳಿಗೆ ಎಲ್ಲಿಲ್ಲದ ಬೇಡಿಕೆ ಇದೆ. ಇದೇ ಕಾರಣಕ್ಕೆ ರೈತರು ತಮ್ಮ ಹಿಂಗಾರು ಬಿತ್ತನೆಗಾಗಿ ಬೆಳಿಗ್ಗೆಯಿಂದಲೇ ಕಾದು ನಿಂತು ವಿವಿಧ ಬಿತ್ತನೆ ಬೀಜಗಳನ್ನು ಖರೀದಿಸಿದರು.

ರಾಜ್ಯ ವಿವಿಧ ಜಿಲ್ಲೆಗಳಿಂದ ಧಾರವಾಡಕ್ಕೆ ಆಗಮಿಸಿ ಇಂದಿನಿಂದ ನಾಲ್ಕು ದಿನಗಳ ಕಾಲ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಕೃಷಿಮೇಳ ನಡೆಯುತ್ತಿದೆ. ಈ ಮೇಳಕ್ಕೆ ಬರುವ ಬಹುತೇಕ ರೈತರು ಮೊದಲಿಗೆ ಖರೀದಿಸುವುದು ಬಿತ್ತನೆ ಬೀಜ.

ಹೌದು, ಧಾರವಾಡ ಕೃಷಿ ವಿಶ್ವವಿದ್ಯಾಲಯ ಸಂಶೋಧಿಸಿ, ಉತ್ಪಾದಿಸುವ ಬಿತ್ತನೆ ಬೀಜಗಳೆಂದರೆ ರೈತರಿಗೆ ಅಚ್ಚುಮೆಚ್ಚಾಗಿದೆ. ಪ್ರತಿವರ್ಷವೂ ರೈತರು ಕೇಳಿದಷ್ಟು ಬಿತ್ತನೆ ಬೀಜ ಪೂರೈಸಲು ಕೃಷಿ ವಿವಿ ಅಧಿಕಾರಿಗಳಿಗೆ ಸಾಧ್ಯವಾಗುವುದೇ ಇಲ್ಲ. ಆದರೂ ಈ ಬಾರಿ 3600 ಕ್ವಿಂಟಾಲ್ ನಷ್ಟು ವಿವಿಧ ಬಗೆಯ ಬಿತ್ತನೆ ಬೀಜವನ್ನು ವಿಶ್ವವಿದ್ಯಾಲಯದ ಸಿಬ್ಬಂದಿ ಸಿದ್ಧವಾಗಿಸಿಕೊಂಡಿದ್ದಾರೆ. ರೈತರಿಗೆ ರಿಯಾಯತಿ ದರದಲ್ಲಿ ವಿತರಿಸಲಾಗು ಈ ಬೀಜಗಳನ್ನು ರೈತರು ಹಿಂಗಾರು ಬಿತ್ತನೆಗೋಸ್ಕರ ಉತ್ಸಾಹದಿಂದ ಖರೀದಿಸಿದರು.

ಉತ್ತರ ಕರ್ನಾಟಕದ ಏಳು ಜಿಲ್ಲೆಗಳ ರೈತರಂತೂ ಇಲ್ಲಿನ ಬೀಜಗಳೇ ಬೇಕು ಎಂದು ಪ್ರತಿಬಾರಿ ಬೇಡಿಕೆ ಇಡುತ್ತಲೇ ಇರುತ್ತಾರೆ. ಅಲ್ಲದೇ ಇಲ್ಲಿನ ಸಂಶೋಧನೆಗಳ ಬಗ್ಗೆಯೂ ರೈತರಿಗೆ ಅತಿಯಾದ ವಿಶ್ವಾಸವಿದೆ. ಇಲ್ಲಿಂದ ತೆಗೆದುಕೊಂಡು ಹೋದ ಬಿತ್ತನೆ ಬೀಜಗಳಿಂದ ಉತ್ತಮ ಬೆಳೆ ಸಿಗುತ್ತೆ ಅನ್ನೋ ನಂಬಿಕೆ ರೈತರದ್ದಾಗಿದೆ‌.

ಇತ್ತೀಚಿನ ವರ್ಷಗಳಲ್ಲಿ ಬಿತ್ತನೆ ಬೀಜಗಳಿಗೆ ಸಂಬಂಧಿಸಿದಂತೆ ಧಾರವಾಡ ಕೃಷಿ ವಿಶ್ವವಿದ್ಯಾಲಯ ಮತ್ತಷ್ಟು ಹೆಸರು ಪಡೆದುಕೊಂಡಿದೆ. ದೇಶ ವಿದೇಶಗಳಲ್ಲಿ ಇಲ್ಲಿ ಸಂಶೋಧಿಸಲ್ಪಟ್ಟ ಬಿತ್ತನೆ ಬೀಜಗಳು ಸಾಕಷ್ಟು ಪ್ರಸಿದ್ಧಿ ಪಡೆದಿವೆ. ಅಲ್ಲದೇ ಎಷ್ಟೋ ವರ್ಷಗಳ ಹಿಂದೆ ಸಂಶೋಧಿಸಲ್ಪಟ್ಟಿರುವ ಬೀಜಗಳಿಗೆ ಇತ್ತೀಚಿನ ವರ್ಷಗಳಲ್ಲಿ ವಿದೇಶದಲ್ಲಿ ಮನ್ನಣೆ ಸಿಗುತ್ತಿವೆ. 

Add Zee News as a Preferred Source
TAGS:

About the Author

ಮಂಜುನಾಥ ನರಗುಂದ (Manjunath Naragund) 11 ವರ್ಷಗಳಿಗೂ ಹೆಚ್ಚು ಕಾಲ ಪತ್ರಿಕೋದ್ಯಮ, ಬರವಣಿಗೆ ಮತ್ತು ಭಾಷಾಂತರ ಕ್ಷೇತ್ರದಲ್ಲಿ ವಿವಿಧ ಮಾಧ್ಯಮ ವೇದಿಕೆಗಳಲ್ಲಿ ವೃತ್ತಿಪರ ಅನುಭವವನ್ನು ಹೊಂದಿದ್ದೇನೆ. 2017ರಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಿಂಟ್‌ವೀಕ್, ಅಕ್ಷರ ಸಂಗಾತ, ರೌಂಡ್ ಟೇಬಲ್ ಇಂಡಿಯಾ ಮತ್ತು ವಾರ್ತಾ ಭಾರತಿಯಂತಹ ಪ್ರತಿಷ್ಠಿತ ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳಲ್ಲಿ ನನ್ನ ಲೇಖನಗಳು ಪ್ರಕಟವಾಗಿವೆ. ಅಲ್ಲದೆ, ನಾನು ಅನುಭವಿ ಭಾಷಾಂತರಕಾರನಾಗಿದ್ದು, ಪರಿ ಮತ್ತು ದೆಹಲಿಯ ಸೆಂಟರ್ ಫಾರ್ ಪಾಲಿಸಿ ರಿಸರ್ಚ್‌ನಂತಹ ಸಂಸ್ಥೆಗಳಲ್ಲಿ ನನ್ನ ಅನುವಾದಿತ ಲೇಖನಗಳು ಪ್ರಕಟಗೊಂಡಿವೆ.

ZEENEWS TRENDING STORIES