• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಅಂತಾರಾಷ್ಟ್ರೀಯ
  • /ಯುನೆಸ್ಕೋ ತಜ್ಞರಿಂದ ಐತಿಹಾಸಿಕ ತುಂಗಭದ್ರಾ ಅಣೆಕಟ್ಟಿಗೆ ಭೇಟಿ

ಯುನೆಸ್ಕೋ ತಜ್ಞರಿಂದ ಐತಿಹಾಸಿಕ ತುಂಗಭದ್ರಾ ಅಣೆಕಟ್ಟಿಗೆ ಭೇಟಿ

ಅಂತರರಾಷ್ಟ್ರೀಯ ತಜ್ಞರಾದ ಜಾರ್ಜ್ ಅಬುಂಗಾ ಹಾಗೂ ಐಕೋಮಸ್ ಪ್ರತಿನಿಧಿ ಇಚಿತಾ ಶಿಮೋದಾ ನೇತೃತ್ವದ ತಂಡವು ಪ್ರಸಿದ್ಧ ಶ್ರೀ ವಿರೂಪಾಕ್ಷ ದೇಗುಲಕ್ಕೆ ಭೇಟಿ ನೀಡಿ, ಅಲ್ಲಿನ ಭವ್ಯ ವಾಸ್ತುಶಿಲ್ಪದ ವೈಶಿಷ್ಟ್ಯಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿತು.

Reported ByManjunath NaragundEdited ByManjunath Naragund
Published: Oct 27, 2026, 02:00 PM IST|Updated: Oct 27, 2026, 02:10 PM IST
joinshare
ಯುನೆಸ್ಕೋ ತಜ್ಞರಿಂದ ಐತಿಹಾಸಿಕ ತುಂಗಭದ್ರಾ ಅಣೆಕಟ್ಟಿಗೆ ಭೇಟಿ
Image Credit: Dam

About the Author

Manjunath Naragund

Manjunath Naragund

ಮಂಜುನಾಥ ನರಗುಂದ (Manjunath Naragund) 11 ವರ್ಷಗಳಿಗೂ ಹೆಚ್ಚು ಕಾಲ ಪತ್ರಿಕೋದ್ಯಮ, ಬರವಣಿಗೆ ಮತ್ತು ಭಾಷಾಂತರ ಕ್ಷೇತ್ರದಲ್ಲಿ ವಿವಿಧ ಮಾಧ್ಯಮ ವೇದಿಕೆಗಳಲ್ಲಿ ವೃತ್ತಿಪರ ಅನುಭವವನ್ನು ಹೊಂದಿದ್ದೇನೆ. 2017ರಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಿಂಟ್‌ವೀಕ್, ಅಕ್ಷರ ಸಂಗಾತ, ರೌಂಡ್ ಟೇಬಲ್ ಇಂಡಿಯಾ ಮತ್ತು ವಾರ್ತಾ ಭಾರತಿಯಂತಹ ಪ್ರತಿಷ್ಠಿತ ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳಲ್ಲಿ ನನ್ನ ಲೇಖನಗಳು ಪ್ರಕಟವಾಗಿವೆ. ಅಲ್ಲದೆ, ನಾನು ಅನುಭವಿ ಭಾಷಾಂತರಕಾರನಾಗಿದ್ದು, ಪರಿ ಮತ್ತು ದೆಹಲಿಯ ಸೆಂಟರ್ ಫಾರ್ ಪಾಲಿಸಿ ರಿಸರ್ಚ್‌ನಂತಹ ಸಂಸ್ಥೆಗಳಲ್ಲಿ ನನ್ನ ಅನುವಾದಿತ ಲೇಖನಗಳು ಪ್ರಕಟಗೊಂಡಿವೆ.
Read More

Trending

  • News
  • Photos
  • Videos
ಡಿಸಿಎಂ ಡಾ. ಜಿ. ಪರಮೇಶ್ವರ್ ಆರೋಗ್ಯದಲ್ಲಿ ದಿಢೀರ್ ಏರುಪೇರು : ಆಸ್ಪತ್ರೆಗೆ ದಾಖಲು

ಡಿಸಿಎಂ ಡಾ. ಜಿ. ಪರಮೇಶ್ವರ್ ಆರೋಗ್ಯದಲ್ಲಿ ದಿಢೀರ್ ಏರುಪೇರು : ಆಸ್ಪತ್ರೆಗೆ ದಾಖಲು

2

ಧರ್ಮಸ್ಥಳದ ಸೌಜನ್ಯಾ ಪ್ರಕರಣ ತನಿಖೆ ಚುರುಕು : ಹಿಂದಿನ ತನಿಖಾಧಿಕಾರಿಗಳು ಹಾಗೂ ಸಿಬ್ಬಂದಿಗೆ ನೋಟಿಸ್

3

ಇಸ್ತ್ರಿ ಮಾಡುವಾಗ ವಿದ್ಯುತ್ ಶಾರ್ಟ್ ಸರ್ಕ್ಯೂಟ್, 14 ವರ್ಷದ ಶಾಲಾ ಬಾಲಕ ಸಾವು

4

ಸರಣಿ ಗೆಲುವಿನ ನಿರೀಕ್ಷೆಯಲ್ಲಿದ್ದ ಭಾರತಕ್ಕೆ ಬಿಗ್ ಶಾಕ್! ಮೂರನೇ ಟಿ20 ಪಂದ್ಯದಿಂದಲೂ ಸ್ಟಾರ್‌ ಆಟಗಾರ ಔಟ್

5

SIR ಮುಕ್ತಾಯ, ಅಂತಿಮ ಮತದಾರರ ಪಟ್ಟಿ ಪ್ರಕಟ : ನಿಮ್ಮ ವೋಟರ್ ಐಡಿ ಪಟ್ಟಿಯಲ್ಲಿದೆಯಾ? ಕೂಡಲೇ ಹೀಗೆ ಚೆಕ್ ಮಾಡಿ

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ವಿಜಯನಗರ: ವಿಶ್ವ ಪಾರಂಪರಿಕ ತಾಣವಾಗಿರುವ ಐತಿಹಾಸಿಕ ಹಂಪಿಗೆ ಯುನೆಸ್ಕೋ ಮತ್ತು ಐಕೋಮಸ್ ಅಂತರರಾಷ್ಟ್ರೀಯ ತಜ್ಞರ ತಂಡವು ಭೇಟಿ ನೀಡಿ, ಇಲ್ಲಿನ ಸ್ಮಾರಕಗಳ ಸಂರಕ್ಷಣೆ ಹಾಗೂ ಪ್ರಸ್ತುತ ಸ್ಥಿತಿಗತಿಗಳ ಕುರಿತು ಪರಿಶೀಲನೆ ನಡೆಸಿದೆ.ಹಂಪಿಯ ವಿಶಿಷ್ಟ ಶಿಲ್ಪಕಲೆ, ವಾಸ್ತುಶಿಲ್ಪ ಹಾಗೂ ಐತಿಹಾಸಿಕ ಪರಂಪರೆಯ ಅರಿವು ಪಡೆದ ಈ ತಂಡವು, ಸ್ಮಾರಕಗಳ ಮೂಲ ಸ್ವರೂಪವನ್ನು ಕಾಪಾಡುವ ನಿಟ್ಟಿನಲ್ಲಿ ಮಹತ್ವದ ಚರ್ಚೆಗಳನ್ನು ನಡೆಸಿದೆ.

ಅಂತರರಾಷ್ಟ್ರೀಯ ತಜ್ಞರಾದ ಜಾರ್ಜ್ ಅಬುಂಗಾ ಹಾಗೂ ಐಕೋಮಸ್ ಪ್ರತಿನಿಧಿ ಇಚಿತಾ ಶಿಮೋದಾ ನೇತೃತ್ವದ ತಂಡವು ಪ್ರಸಿದ್ಧ ಶ್ರೀ ವಿರೂಪಾಕ್ಷ ದೇಗುಲಕ್ಕೆ ಭೇಟಿ ನೀಡಿ, ಅಲ್ಲಿನ ಭವ್ಯ ವಾಸ್ತುಶಿಲ್ಪದ ವೈಶಿಷ್ಟ್ಯಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿತು. ಬಳಿಕ ಐತಿಹಾಸಿಕ ರಥಬೀದಿಯಲ್ಲಿ ಸಂಚರಿಸಿ ಪ್ರಾಚೀನ ಸ್ಮಾರಕಗಳನ್ನು ಕಣ್ತುಂಬಿಕೊಂಡಿತು. ಹಂಪಿಯ ಪಾರಂಪರಿಕ ಮೌಲ್ಯವನ್ನು ಉಳಿಸಿಕೊಳ್ಳಲು ಹಾಗೂ ಮುಂದಿನ ಪೀಳಿಗೆಗೆ ಈ ಐತಿಹಾಸಿಕ ಶ್ರೀಮಂತಿಕೆಯನ್ನು ವರ್ಗಾಯಿಸಲು ಕೈಗೊಳ್ಳಬೇಕಾದ ಸುಸ್ಥಿರ ಪ್ರವಾಸೋದ್ಯಮ ಮತ್ತು ಸಂರಕ್ಷಣಾ ಕ್ರಮಗಳ ಬಗ್ಗೆ ತಂಡವು ಒತ್ತು ನೀಡಿತು.

ಈ ಭೇಟಿಯ ಸಂದರ್ಭದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಆಪ್ತ ಕಾರ್ಯದರ್ಶಿ ಬಿ. ಸದಾನಂದ, ವಿಜಯನಗರ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ, ಜಿಪಂ ಸಿಇಒ ಗರಿಮಾ ಪನ್ವಾರ್ ಹಾಗೂ ಎಎಸ್‌ಐ ಅಧೀಕ್ಷಕ ರಾಮಕೃಷ್ಣ ರೆಡ್ಡಿ ಅವರು ಉಪಸ್ಥಿತರಿದ್ದು, ತಜ್ಞರ ತಂಡಕ್ಕೆ ಹಂಪಿಯ ಇತಿಹಾಸ ಮತ್ತು ಸಂರಕ್ಷಣಾ ಕಾರ್ಯಗಳ ಕುರಿತು ಸಮಗ್ರ ಮಾಹಿತಿ ನೀಡಿದರು. ಜಿಲ್ಲಾಡಳಿತ ಹಾಗೂ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಜವಾಬ್ದಾರಿಗಳ ಕುರಿತೂ ಚರ್ಚಿಸಲಾಯಿತು.

ಅಲ್ಲದೆ, ಯುನೆಸ್ಕೋ ತಂಡವು ಐತಿಹಾಸಿಕ ತುಂಗಭದ್ರಾ ಅಣೆಕಟ್ಟಿಗೂ ಭೇಟಿ ನೀಡಿ ವಿಶೇಷ ವೀಕ್ಷಣೆ ನಡೆಸಿತು. ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಅವರೊಂದಿಗೆ ಜಲಾಶಯದ ಕಾರ್ಯವೈಖರಿ, ನೀರಿನ ಸಂಗ್ರಹ ಸಾಮರ್ಥ್ಯ, ಅಣೆಕಟ್ಟಿನ ತಾಂತ್ರಿಕ ವ್ಯವಸ್ಥೆ ಹಾಗೂ ಇದರ ಐತಿಹಾಸಿಕ ಹಿನ್ನೆಲೆಯನ್ನು ತಂಡವು ಕುತೂಹಲದಿಂದ ವೀಕ್ಷಿಸಿತು. ವಿಜಯನಗರ ಸಾಮ್ರಾಜ್ಯದ ಉಗಮ ಮತ್ತು ವಿಕಾಸದಲ್ಲಿ ತುಂಗಭದ್ರಾ ನದಿಯ ಮಹತ್ವದ ಕುರಿತು ಅಧಿಕಾರಿಗಳು ತಜ್ಞರೊಂದಿಗೆ ಸಮಾಲೋಚನೆ ನಡೆಸಿದರು. ಯುನೆಸ್ಕೋ ಮತ್ತು ಐಕೋಮಸ್ ತಂಡದ ಈ ಮಹತ್ವದ ಭೇಟಿಯು ಹಂಪಿ ಸ್ಮಾರಕಗಳ ಜಾಗತಿಕ ಮಟ್ಟದ ಸಂರಕ್ಷಣೆಗೆ ಮತ್ತಷ್ಟು ಬಲ ತುಂಬಿದೆ.
 

Add Zee News as a Preferred Source
TAGS:
Kannada News