• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಅಂತರಾಷ್ಟ್ರೀಯ
  • /ಪಾಕ್‌ನಲ್ಲಿ ಗಗನಕ್ಕೇರಿದ ಇಂಧನ ದರ..! ಅಲ್ಲಿನ 1 ಲೀಟರ್‌ ಪೆಟ್ರೋಲ್‌ ಬೆಲೆಗೆ ಭಾರತದಲ್ಲಿ 4 ಲೀ. ಬರುತ್ತೆ

ಪಾಕ್‌ನಲ್ಲಿ ಗಗನಕ್ಕೇರಿದ ಇಂಧನ ದರ..! ಅಲ್ಲಿನ 1 ಲೀಟರ್‌ ಪೆಟ್ರೋಲ್‌ ಬೆಲೆಗೆ ಭಾರತದಲ್ಲಿ 4 ಲೀ. ಬರುತ್ತೆ

ಮಧ್ಯಪ್ರಾಚ್ಯ ಸಂಘರ್ಷ ಮತ್ತು ತೈಲ ಪೂರೈಕೆ ಮಾರ್ಗಗಳ ಅಡಚಣೆಯಿಂದಾಗಿ ಪಾಕಿಸ್ತಾನದಲ್ಲಿ ತೀವ್ರ ಇಂಧನ ಬಿಕ್ಕಟ್ಟು ಎದುರಾಗಿದೆ. ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಅಲ್ಲಿನ ಜನರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಈ ಪರಿಸ್ಥಿತಿ ನಿಭಾಯಿಸಲು ಶೆಹಬಾಜ್ ಷರೀಫ್ ಸರ್ಕಾರ 3 ತಿಂಗಳ ಕಠಿಣ ಕ್ರಮಗಳನ್ನು ಜಾರಿಗೊಳಿಸಿದೆ.. ಹೆಚ್ಚಿನ ಮಾಹಿತಿ ಇಲ್ಲಿದೆ..

Reported ByKrishna NKEdited ByKrishna NK
Published: Sep 18, 2026, 10:29 PM IST|Updated: Sep 18, 2026, 10:31 PM IST
joinshare
ಪಾಕ್‌ನಲ್ಲಿ ಗಗನಕ್ಕೇರಿದ ಇಂಧನ ದರ..! ಅಲ್ಲಿನ 1 ಲೀಟರ್‌ ಪೆಟ್ರೋಲ್‌ ಬೆಲೆಗೆ ಭಾರತದಲ್ಲಿ 4 ಲೀ. ಬರುತ್ತೆ
Image Credit: fuel crisis in Pakistan

About the Author

Krishna NK

Krishna NK

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Pakistan fuel crisis : ಸೌದಿ ಜೊತೆಗಿನ ಸಂಘರ್ಷದ ಬೆನ್ನಲ್ಲೇ ಪಾಕಿಸ್ತಾನಕ್ಕೆ ಈಗ ಇಂಧನ ಬಿಕ್ಕಟ್ಟಿನ ಬಿಸಿ ತಟ್ಟಿದೆ. ಅತ್ತ ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಿಚ್ಚು.. ಇತ್ತ ಹಾರ್ಮುಜ್ ಮತ್ತು ರೆಡ್ ಸೀ ಮಾರ್ಗದಲ್ಲಿ ತೈಲ ಸಾಗಣೆ ಅಸ್ತವ್ಯಸ್ತ.. ಇದರ ನೇರ ಹೊಡೆತ ಪಾಕಿಸ್ತಾನದ ಮೇಲೆ ಬಿದ್ದಿದೆ. ಪೆಟ್ರೋಲ್ ಬೆಲೆ ಬರೋಬ್ಬರಿ 384 ರೂಪಾಯಿಗೆ ಏರಿದೆ.. ಡೀಸೆಲ್ ಬೆಲೆ 415 ರೂಪಾಯಿ ದಾಟಿದೆ. ಬೆಲೆ ಏರಿಕೆಯಿಂದ ಕಂಗಾಲಾಗಿರುವ ಶೆಹಬಾಜ್ ಷರೀಫ್ ಸರ್ಕಾರ ಈಗ ಇಂಧನ ಉಳಿಸಲು ಕಠಿಣ ಕ್ರಮಗಳಿಗೆ ಮೊರೆ ಹೋಗಿದೆ. ಕಾರು ಖರೀದಿಗೆ ಬ್ರೇಕ್.. ಸರ್ಕಾರಿ ವಾಹನಗಳ ಇಂಧನ ಬಳಕೆಗೆ ಶೇ. 50ರಷ್ಟು ಕತ್ತರಿ.. ರಾತ್ರಿ 9 ಗಂಟೆಗೆ ಅಂಗಡಿ-ಮಾರುಕಟ್ಟೆ ಬಂದ್. ಮದುವೆ ಕಾರ್ಯಕ್ರಮಗಳಲ್ಲೂ ಒಂದೇ ಒಂದು ಖಾದ್ಯಕ್ಕೆ ಅವಕಾಶ. ಹಾಗಾದ್ರೆ ಪಾಕಿಸ್ತಾನದ ಆರ್ಥಿಕತೆಗೆ ಯುದ್ಧದ ಬಿಸಿ ಎಷ್ಟರಮಟ್ಟಿಗೆ ತಟ್ಟಿದೆ..? ನೋಡೋಣ ಡಿಎನ್‌ಎ ಮೂರನೇ ಸುದ್ದಿಯಲ್ಲಿ.

ಪಾಕಿಸ್ತಾನದ ಆರ್ಥಿಕತೆಯ ಮೇಲೆ ಇಂಧನ ಬೆಲೆ ಏರಿಕೆಯ ಭಾರೀ ಹೊಡೆತ ಬಿದ್ದಿದೆ. ಸೆಪ್ಟೆಂಬರ್ 16ರಿಂದ ಪೆಟ್ರೋಲ್ ಬೆಲೆಯನ್ನು ಪ್ರತಿ ಲೀಟರ್‌ಗೆ 384 ರೂಪಾಯಿ 34 ಪೈಸೆಗೆ ಮತ್ತು ಹೈ-ಸ್ಪೀಡ್ ಡೀಸೆಲ್ ಬೆಲೆಯನ್ನು 415 ರೂಪಾಯಿ 83 ಪೈಸೆಗೆ ನಿಗದಿಪಡಿಸಲಾಗಿದೆ. ಮಧ್ಯಪ್ರಾಚ್ಯ ಸಂಘರ್ಷದಿಂದ ಜಾಗತಿಕ ತೈಲ ಪೂರೈಕೆ ಮತ್ತು ಸಾಗಣೆ ಮಾರ್ಗಗಳ ಮೇಲೆ ಒತ್ತಡ ಹೆಚ್ಚಾಗಿರುವುದು ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ. ಈಗಾಗಲೇ ಇಂಧನ ಸಬ್ಸಿಡಿ ಯೋಜನೆ ಜಾರಿಗೊಳಿಸಿರುವ ಪಾಕಿಸ್ತಾನ ಸರ್ಕಾರ, ಬೆಲೆ ಏರಿಕೆಯ ಹೊಡೆತವನ್ನು ತಗ್ಗಿಸಲು ಮತ್ತಷ್ಟು ಮಿತವ್ಯಯ ಕ್ರಮಗಳನ್ನು ಜಾರಿಗೆ ತಂದಿದೆ.

ಇಂಧನ ಬಿಕ್ಕಟ್ಟು ತೀವ್ರಗೊಳ್ಳುತ್ತಿದ್ದಂತೆ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಸರ್ಕಾರ ರಾಷ್ಟ್ರವ್ಯಾಪಿ ಮಿತವ್ಯಯ ಅಭಿಯಾನಕ್ಕೆ ಚಾಲನೆ ನೀಡಿದೆ. ಮೂರು ತಿಂಗಳ ಅವಧಿಗೆ ಸರ್ಕಾರಿ ವಾಹನಗಳ ಇಂಧನ ಹಂಚಿಕೆಯನ್ನು ಶೇ.50ರಷ್ಟು ಕಡಿತಗೊಳಿಸಲಾಗಿದೆ. ಹೊಸ ಸರ್ಕಾರಿ ವಾಹನಗಳ ಖರೀದಿಗೆ ಸಂಪೂರ್ಣ ನಿಷೇಧ ಹೇರಲಾಗಿದೆ. ಸರ್ಕಾರಿ ಅಧಿಕಾರಿಗಳ ವಿದೇಶ ಪ್ರವಾಸಕ್ಕೂ ಮೂರು ತಿಂಗಳ ನಿರ್ಬಂಧ ವಿಧಿಸಲಾಗಿದೆ. 2026-27ನೇ ಹಣಕಾಸು ವರ್ಷದಲ್ಲಿ ಸಿಬ್ಬಂದಿಯೇತರ ವೆಚ್ಚವನ್ನು ಪ್ರತಿ ತಿಂಗಳು ಶೇ.5ರಷ್ಟು ಕಡಿತಗೊಳಿಸುವ ನಿರ್ಧಾರವೂ ಕೈಗೊಳ್ಳಲಾಗಿದೆ.

ಇಂಧನ ಉಳಿಸುವ ಹೆಸರಿನಲ್ಲಿ ಪಾಕಿಸ್ತಾನ ಸರ್ಕಾರ ಜನಜೀವನದ ಮೇಲೂ ಹಲವು ನಿರ್ಬಂಧಗಳನ್ನು ಹೇರಿದೆ. ದೇಶಾದ್ಯಂತ ಅಂಗಡಿ, ಮಾರುಕಟ್ಟೆ, ಶಾಪಿಂಗ್ ಮಾಲ್, ಬಜಾರ್ ಮತ್ತು ಸಾಮಾನ್ಯ ವಾಣಿಜ್ಯ ಕೇಂದ್ರಗಳು ರಾತ್ರಿ 9 ಗಂಟೆಗೆ ಬಂದ್ ಆಗಬೇಕು. ಮದುವೆ ಹಾಲ್‌ಗಳು ರಾತ್ರಿ 10 ಗಂಟೆಗೆ ಮುಚ್ಚಬೇಕು. ರೆಸ್ಟೋರೆಂಟ್, ಕೆಫೆ ಮತ್ತು ಆಹಾರ ಮಳಿಗೆಗಳಿಗೆ ರಾತ್ರಿ 11ರವರೆಗೆ ಅವಕಾಶ ನೀಡಲಾಗಿದೆ. ಆಸ್ಪತ್ರೆ, ಔಷಧ ಅಂಗಡಿ, ಇಂಧನ ಪಂಪ್, ಸಿಎನ್‌ಜಿ ಕೇಂದ್ರ ಸೇರಿದಂತೆ ಅಗತ್ಯ ಸೇವೆಗಳಿಗೆ ಈ ಸಮಯದ ನಿರ್ಬಂಧದಿಂದ ವಿನಾಯಿತಿ ನೀಡಲಾಗಿದೆ.

ಇಂಧನ ಉಳಿಸುವ ಜೊತೆಗೆ ಅನಗತ್ಯ ಖರ್ಚು ಕಡಿಮೆ ಮಾಡಲು ಪಾಕಿಸ್ತಾನ ಸರ್ಕಾರ ಮದುವೆ ಸಮಾರಂಭಗಳ ಮೇಲೂ ನಿಯಮ ಹೇರಿದೆ. ಮದುವೆ ಮತ್ತು ಇತರೆ ಕಾರ್ಯಕ್ರಮಗಳಲ್ಲಿ ಒಂದೇ ಒಂದು ಖಾದ್ಯವನ್ನು ಮಾತ್ರ ನೀಡಲು ಸೂಚಿಸಲಾಗಿದೆ. ಸರ್ಕಾರಿ ಇಲಾಖೆಗಳ ಅಧಿಕೃತ ಔತಣಗಳಿಗೂ ನಿರ್ಬಂಧ ವಿಧಿಸಲಾಗಿದೆ. ವಿದೇಶಿ ನಿಯೋಗಗಳ ಗೌರವಾರ್ಥ ಅಗತ್ಯವಾಗಿರುವ ಔತಣಗಳಿಗೆ ಮಾತ್ರ ವಿನಾಯಿತಿ ಇದೆ. ಹೀಗಾಗಿ ಇಂಧನ ಬಿಕ್ಕಟ್ಟಿನ ಪರಿಣಾಮ ಈಗ ಪಾಕಿಸ್ತಾನದ ಸಾಮಾನ್ಯ ಜೀವನಶೈಲಿಯ ಮೇಲೂ ಗೋಚರಿಸುತ್ತಿದೆ.

ಪೆಟ್ರೋಲ್ ಬೆಲೆ ಏರಿಕೆಯಿಂದ ಜನರಿಗೆ ಹೊರೆ ಕಡಿಮೆ ಮಾಡಲು ಶೆಹಬಾಜ್ ಷರೀಫ್ ಸರ್ಕಾರ ಬೈಕ್, ರಿಕ್ಷಾ ಮತ್ತು 800 ಸಿಸಿ ವರೆಗಿನ ಸಣ್ಣ ಕಾರುಗಳಿಗೆ ಪ್ರತಿ ಲೀಟರ್‌ಗೆ 100 ಪಾಕಿಸ್ತಾನಿ ರೂಪಾಯಿ ಸಬ್ಸಿಡಿ ನೀಡುವ ಯೋಜನೆ ಜಾರಿಗೊಳಿಸಿದೆ. ಆದರೆ ಸಬ್ಸಿಡಿ ಪಡೆಯಲು ವಾಹನ ಮತ್ತು ಮೊಬೈಲ್ ನೋಂದಣಿ ಪ್ರಕ್ರಿಯೆಯಲ್ಲಿ ಜನರು ತೊಂದರೆ ಎದುರಿಸುತ್ತಿದ್ದಾರೆ ಎಂದು ಸದ್ದಿಸಂಸ್ಥೆಯೊಂದು ವರದಿ ಮಾಡಿದೆ. ಮತ್ತೊಂದೆಡೆ, ಹಾರ್ಮುಜ್ ಮತ್ತು ರೆಡ್ ಸೀ ಮಾರ್ಗಗಳಲ್ಲಿನ ಅಡಚಣೆಗಳಿಂದ ಏಷ್ಯಾದ LNG ಬೆಲೆಗಳೂ ಏರಿಕೆಯಾಗಿದ್ದು, ಪಾಕಿಸ್ತಾನದಂತಹ ಆಮದು ಅವಲಂಬಿತ ರಾಷ್ಟ್ರಗಳ ಮೇಲೆ ಹೆಚ್ಚುವರಿ ಒತ್ತಡ ಸೃಷ್ಟಿಯಾಗಿದೆ.

ಒಟ್ಟಾರೆಯಾಗಿ, ಮಧ್ಯಪ್ರಾಚ್ಯದ ಯುದ್ಧದ ಕಿಚ್ಚು ಪಾಕಿಸ್ತಾನದ ಆರ್ಥಿಕತೆಯನ್ನೂ ಬಿಸಿ ಮಾಡಿದೆ..! ಪೆಟ್ರೋಲ್ 384 ರೂಪಾಯಿ ದಾಟಿದೆ.. ಡೀಸೆಲ್ 415 ರೂಪಾಯಿ ಮೀರಿದೆ..! ಇಂಧನ ಉಳಿಸಲು ಸರ್ಕಾರಿ ವಾಹನಗಳ ಬಳಕೆಗೆ ಶೇ.50ರಷ್ಟು ಕತ್ತರಿ.. ಹೊಸ ವಾಹನ ಖರೀದಿಗೆ ಬ್ರೇಕ್.. ಅಧಿಕಾರಿಗಳ ವಿದೇಶ ಪ್ರವಾಸಕ್ಕೆ ನಿರ್ಬಂಧ.. ರಾತ್ರಿ 9 ಗಂಟೆಗೆ ಮಾರುಕಟ್ಟೆ ಬಂದ್.. ಮದುವೆಗೂ ಒಂದೇ ಡಿಶ್ ರೂಲ್ಸ್..! ಇತ್ತ ಜನರಿಗೆ ನೆರವಾಗಲು ಸಬ್ಸಿಡಿ ಘೋಷಿಸಿದ್ರೂ, ಇಂಧನ ಪೂರೈಕೆ ಮತ್ತು ಬೆಲೆಗಳ ಮೇಲಿನ ಜಾಗತಿಕ ಒತ್ತಡ ಮುಂದುವರಿದಿದೆ. ಹೀಗಾಗಿ ಮಧ್ಯಪ್ರಾಚ್ಯದ ಸಂಘರ್ಷ ಇನ್ನಷ್ಟು ವಿಸ್ತರಿಸಿದರೆ ಪಾಕಿಸ್ತಾನದ ಇಂಧನ ಮತ್ತು ಆರ್ಥಿಕ ಸಂಕಷ್ಟ ಯಾವ ಹಂತ ತಲುಪಲಿದೆ ಅನ್ನೋದೇ ಈಗ ದೊಡ್ಡ ಪ್ರಶ್ನೆ.

Add Zee News as a Preferred Source
TAGS:
India Pakistan News