SOCIAL MEDIA

Newsletter

PARTNER SITES
Select Language Select State

ಮತ್ತೆ ಭೂಕುಸಿತ, ಪ್ರವಾಹ: ಅಪಾಯ ಮಟ್ಟ ಮೀರಿ ಹರಿಯುತ್ತಿರೋ ನದಿಗಳ ನರ್ತನಕ್ಕೆ 21 ಜನ ಬಲಿ

ನೇಪಾಳದಲ್ಲಿ ಮತ್ತೆ ಭೂಕುಸಿತ ಮತ್ತು ಭೀಕರವಾದ ಪ್ರವಾಹದಿಂದ 21 ಜನರು ಸಾವನ್ನಪ್ಪಿದ್ದಾರೆ. ದೇಶದ ಹಲವಾರು ಭಾಗಗಳಲ್ಲಿ ನಿರಂತರ ಮಳೆಯಿಂದಾಗಿ ಪ್ರವಾಹಗಳು ಉಂಟಾಗುತ್ತಿದ್ದರಿಂದ ಮನೆಗಳು ನಾಶವಾಗಿವೆ.

Written By Bhimappa
Published: Sep 28, 2026, 12:08 PM IST | Updated: Sep 28, 2026, 01:34 PM IST
Image Credit: nepal_floods
Join

Nepal fresh landslides, floods Death toll rises: ನೇಪಾಳದಲ್ಲಿ ಮೊನ್ನೆ ಮೊನ್ನೆ ಅಷ್ಟೇ ಪ್ರವಾಹ ಬೀತಿಗೆ ಲೆಕ್ಕವಿಲ್ಲದಷ್ಟು ಜನರು, ಪ್ರವಾಸಿಗರು ಜೀವ ಕಳೆದಕೊಂಡಿದ್ದರು. ಸದ್ಯ ಇದರ ಬೆನ್ನಲ್ಲೇ ಭಾರತದ ನೆರೆ ದೇಶ ನೇಪಾಳದಲ್ಲಿ ಮತ್ತೆ ಭೂಕುಸಿತ ಮತ್ತು ಭೀಕರವಾದ ಪ್ರವಾಹದಿಂದ 21 ಜನರು ಸಾವನ್ನಪ್ಪಿದ್ದಾರೆ. ದೇಶದ ಹಲವಾರು ಭಾಗಗಳಲ್ಲಿ ನಿರಂತರ ಮಳೆಯಿಂದಾಗಿ ಪ್ರವಾಹಗಳು ಉಂಟಾಗುತ್ತಿದ್ದರಿಂದ ಮನೆಗಳು, ರಸ್ತೆ, ಕರೆಂಟ್‌ ಕಂಬಗಳು ಸೇರಿದಂತೆ ಎಲ್ಲವೂ ಕೊಚ್ಚಿಕೊಂಡು ಹೋಗುತ್ತಿದ್ದು ಅಲ್ಲಿನ ಜನರಲ್ಲಿ ತೀವ್ರ ಆತಂಕ ಮೂಡಿಸಿದೆ.  

ಕಳೆದ ತಿಂಗಳು ಅಷ್ಟೇ ನೇಪಾಳದಲ್ಲಿ ನದಿಯೊಂದರಲ್ಲಿ ಬೃಹತ್‌ ಆದ ಬೆಟ್ಟದಂತಹ ಮಂಜುಗಡ್ಡೆ ಬಿದ್ದು ಭೀಕರವಾದ ಪ್ರವಾಹ ಸಂಭವಿಸುತ್ತು. ಈ ಭಯಾನಕ ಪ್ರವಾಹದಲ್ಲಿ 1453 ಕ್ಕೂ ಹೆಚ್ಚು ಜನರು, ಪ್ರವಾಸಿಗರು ಮತ್ತು 5000 ಕ್ಕೂ ಹೆಚ್ಚು ಜನರು ನಾಪತ್ತೆ ಆಗಿದ್ದರು. ಇದರ ಜೊತೆಗೆ ದನ, ಕರುಗಳು ಸೇರಿದಂತೆ ಜಾನುವಾರಗಳೆಲ್ಲ ಪ್ರಾಣ ಕಳೆದುಕೊಂಡಿದ್ದವು. ನೋಡ್‌ ನೋಡ್ತಿದ್ದ ಅಪ್ಪಳಿಸಿದ್ದ ಭೀಕರವಾದ ಪ್ರವಾಹ ನದಿ ಪಾತ್ರದ ಮನೆ, ಕಟ್ಟಡ, ಕಂಪನಿ, ಕಾರು, ಬೈಕ್‌, ಬಸ್‌, ವಾಹನಗಳು, ರಸ್ತೆ, ವಿದ್ಯುತ್‌ ಕಂಬ, ಮರ, ಗಿಡ ಸೇರಿದಂತೆ ಎಲ್ಲವನ್ನು ನಾಶ ಮಾಡಿತ್ತು.  

ಇಂತಹ ದೊಡ್ಡ ಪ್ರವಾಹದಿಂದ ನೇಪಾಳ ಇನ್ನು ಚೇತರಿಕೆಯೇ ಕಂಡಿಲ್ಲ. ಅಷ್ಟರಲ್ಲೊ ಇನ್ನೊಂದು ಭೂಕುಸಿತ, ಪ್ರವಾಹ ಆಗುತ್ತಿದ್ದು ಅಲ್ಲಿನ ಜನರು ಆತಂಕದಲ್ಲಿ ಬದುಕುವಂತೆ ಆಗಿದೆ. ಇದು ಅಲ್ಲದೇ ನದಿ ಪಾತ್ರದಲ್ಲಿರುವ ಜನರು ಮತ್ತು ನದಿ ಅಕ್ಕಪಕ್ಕದಲ್ಲಿ ವಾಸಿಸುವವರು, ಬೆಟ್ಟದ ಮೇಲೆ, ಕಣಿವೆಗಳಲ್ಲಿ ಮನೆ ನಿರ್ಮಾಣ ಮಾಡಿಕೊಂಡು ಇರುವವರಿಗೆ ಸರ್ಕಾರ ಈಗಾಗಲೇ ಹಲವು ಸೂಚನೆಗಳನ್ನು ನೀಡಿದೆ. ಆದಷ್ಟು ಜನರು ಜಾಗರೂಕರಾಗಿ ಇರುವಂತೆ ಅಧಿಕಾರಿಗಳು ತಿಳಿಸಿದ್ದಾರೆ ಎನ್ನಲಾಗಿದೆ.  

ನೇಪಾಲದ ಪಾಲ್ಪಾ ಜಿಲ್ಲೆಯ ಮಥಗಢಿ ಗ್ರಾಮೀಣ ಪುರಸಭೆಯಲ್ಲಿ ರಾತ್ರಿ ಸಂಭವಿಸಿದ ಭೂಕುಸಿತದಲ್ಲಿ ಮನೆ ಸಂಪೂರ್ಣವಾಗಿ ಭೂಕುಸಿತದಲ್ಲಿ ನಾಶವಾಗಿದೆ. ಇದರಿಂದ ಮನೆಯಲ್ಲಿದ್ದ ಕುಟುಂಬದ ಎಲ್ಲರೂ ಅಂದರೆ ಐದು ಜನರು ಸಾವನ್ನಪ್ಪಿದ್ದಾರೆ. ಅಗ್ನಿ ಶಾಮಕ ಸಿಬ್ಬಂದಿ ಮತ್ತು ಪೊಲೀಸರು, ರಕ್ಷಣಾ ಪಡೆಗಳು ಕಾರ್ಯಾಚರಣೆ ನಡೆಸಿ ಎಲ್ಲ ಮೃತದೇಹಗಳನ್ನು ಹೊರ ತೆಗೆಯಲಾಗಿದೆ.  ಮೃತರು ಯಾರು ಎಂಬುದೇ ಗುರುತೇ ಸಿಗದಂತೆ ಆಗೋಗಿದೆ. ಘಟನಾ ಸ್ಥಳದಲ್ಲಿ ಮನೆಯ ಕುರುಹು ಇಲ್ಲದಂತೆ ಆಗೋಗಿದೆ ಎಂದು ತಿಳಿಸಲಾಗಿದೆ.

ನೇಪಾಳದಲ್ಲಿ ಕಳೆದ ನಾಲ್ಕು ದಿನಗಳಿಂದ ಭಾರೀ ಗಾಳಿಯ ಜೊತೆ ಜೋರಾಗಿ ಮಳೆ ಕೂಡ ಸುರಿಯುತ್ತಿದೆ. ಇದರಿಂತ ಮಳೆ ಸಂಬಂಧಿತ ಘಟನೆಗಳಲ್ಲಿ ಪ್ರತ್ಯೇಕವಾಗಿ 16 ಜನರು ಜೀವ ಕಳೆದುಕೊಂಡಿದ್ದಾರೆ. ಇದೀಗ ಪ್ರವಾಹ ಮತ್ತು ಭೂಕುಸಿತದಿಂದ ಸಾವನ್ನಪ್ಪಿದವರ ಸಂಖ್ಯೆ 21ಕ್ಕೆ ಏರಿಕೆ ಆಗಿದೆ. ನೇಪಾಳದಲ್ಲಿ ಕಳೆದ ಐದು ದಿನಗಳಿಂದ 439 ಮಳೆಗೆ ಸಂಬಂಧಿಸಿದ ಘಟನೆಗಳು ಆಗಿವೆ. ಅಲ್ಲದೇ ಇದರ ಜೊತೆಗೆ ರಕ್ಷಣಾ ಕಾರ್ಯ ಕೂಡ ಅಷ್ಟೇ ಪ್ರಮಾಣದಲ್ಲಿ ವೇಗವಾಗಿ ಮಾಡಲಾತ್ತಿದ್ದು ಭೂಕುಸಿತ, ಪ್ರವಾಹದಿಂದ 1284 ಜನರನ್ನು ಭದ್ರತಾ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.

ಲುಂಬಿನಿ ಪ್ರಾಂತ್ಯದ ರೂಪಮ್‌ ದೇಹಿ ಜಿಲ್ಲೆಯಲ್ಲಿ ರಾತ್ರಿ ಟಿನೌ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಇದು ಸ್ಥಳೀಯ ಜನರಲ್ಲಿ ತೀವ್ರ ಆತಂಕ ಉಂಟು ಮಾಡಿದೆ. ಬುತ್ವಾಲ್‌ನಲ್ಲಿ ನದಿ ದಂಡೆಯ ಉದ್ದಕ್ಕೂ ಆರು ಮನೆಗಳು ಪ್ರವಾಹದಿಂದ ಕೊಚ್ಚಿ ಹೋಗಿವೆ. ಹೀಗಾಗಿ ಸ್ಥಳೀಯ ಜನರನ್ನು ಬೇರೆ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ. ಬಿಟ್ಟು ಬಿಡದೇ ಮಳೆ ಸುರಿಯುತ್ತಿದ್ದರಿಂದ ಜನರು ಕೂಡ ಹೊರಗೆ ಬಾರದ ಪರಿಸ್ಥಿತಿ ನಿರ್ಮಾಣವಾಗಿದೆ.

ನದಿಗಳು ಉಕ್ಕಿ ಹರಿಯುತ್ತಿದ್ದರಿಂದ ಸಣ್ಣ ಪುಟ್ಟ ಕಾಲುವೆಗಳು, ಹೊಳೆಗಳು ಕೂಡ ತುಂಬಿ ಹರಿಯುತ್ತಿವೆ. ಇದರಿಂದ 200 ಮನೆಗಳು ಅಪಾಯದಲ್ಲಿವೆ ಎಂದು ಹೇಳಲಾಗಿದ್ದು ಬೇರೆ ಸ್ಥಳಕ್ಕೆ ಹೋಗುವಂತೆ ಅಲ್ಲಿನವರಿಗೆ ಸೂಚನೆ ನೀಡಲಾಗಿದೆ. ಭದ್ರತಾ ಸಿಬ್ಬಂದಿ ಇದುವರೆಗೆ 1000 ಜನರನ್ನು ಸ್ಥಳಾಂತರ ಮಾಡಿದ್ದಾರೆ. ಚಿತ್ವಾನ್‌ ಜಿಲ್ಲೆಯಲ್ಲಿ ನಾರಾಯಣಿ ನದಿ ಮತ್ತು ರಿಯು ಹೊಳೆ ಅಪಾಯ ಮಟ್ಟವನ್ನು ಮೀರಿವೆ. ದೇವಘಾಟ್‌ನಲ್ಲಿ ನಾರಾಯಣಿ ನದಿಯು ಪ್ರವಾಹ ಉಂಟು ಮಾಡುವ ಸಾಧ್ಯತೆ ಇದ್ದೇ ಇದೆ. 

 

Add Zee News as a Preferred Source
TAGS:

About the Author

ಭೀಮಪ್ಪ (Bhimappa) ಜೀ ಕನ್ನಡ ನ್ಯೂಸ್‌ನಲ್ಲಿ ಸದ್ಯ ಡಿಜಿಟಲ್ (ವೆಬ್‌ಸೈಟ್‌) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ, ಸ್ಫೋರ್ಟ್ಸ್‌, ಸಿನಿಮಾ, ಆರೋಗ್ಯ, ಎಂಟರ್ಟೈನ್‌ಮೆಂಟ್, ಲೈಫ್‌ಸ್ಟೈಲ್‌, ವೈರಲ್‌ ಸುದ್ದಿಗಳನ್ನು ಓದುಗರಿಗೆ ನೀಡುತ್ತಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿರುವ ಇವರು ಪ್ರಜಾವಾಣಿಯಲ್ಲಿ ಒಂದು ವರ್ಷ ಅಪ್ರೆಂಟಿಸ್‌ ಹಾಗೂ ನ್ಯೂಸ್‌ಫಸ್ಟ್‌ನಲ್ಲಿ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. 

ZEENEWS TRENDING STORIES