• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಅಂತರಾಷ್ಟ್ರೀಯ
  • /ಆಕಾಶದಲ್ಲಿ ಎದುರಾದ ಭೀಕರ ದುರಂತ ತಪ್ಪಿಸಿದ ಇಸ್ರೇಲಿ ಪ್ರಯಾಣಿಕರು: ನಾಲ್ವರಿಗೆ ಅಧ್ಯಕ್ಷೀಯ ಶೌರ್ಯ ಪದಕ

ಆಕಾಶದಲ್ಲಿ ಎದುರಾದ ಭೀಕರ ದುರಂತ ತಪ್ಪಿಸಿದ ಇಸ್ರೇಲಿ ಪ್ರಯಾಣಿಕರು: ನಾಲ್ವರಿಗೆ ಅಧ್ಯಕ್ಷೀಯ ಶೌರ್ಯ ಪದಕ

ಈ ಸಾಹಸ ಮೆರೆದ ನಾಲ್ವರು ನಾಗರಿಕರಿಗೆ ಇಸ್ರೇಲ್ ಅಧ್ಯಕ್ಷ ಐಸಾಕ್ ಹೆರ್ಜಾಗ್ ನಾಗರಿಕ ಶೌರ್ಯಕ್ಕಾಗಿ ನೀಡಲಾಗುವ ಅತ್ಯುನ್ನತ ‘ಅಧ್ಯಕ್ಷೀಯ ಪದಕ’ ಗೌರವವನ್ನು ಶಿಫಾರಸು ಮಾಡುವುದಾಗಿ ಗುರುವಾರ ಘೋಷಿಸಿದ್ದಾರೆ.

Reported ByManjunath NaragundEdited ByManjunath Naragund
Published: Oct 01, 2026, 02:11 PM IST|Updated: Oct 01, 2026, 02:19 PM IST
joinshare
ಆಕಾಶದಲ್ಲಿ ಎದುರಾದ ಭೀಕರ ದುರಂತ ತಪ್ಪಿಸಿದ ಇಸ್ರೇಲಿ ಪ್ರಯಾಣಿಕರು: ನಾಲ್ವರಿಗೆ ಅಧ್ಯಕ್ಷೀಯ ಶೌರ್ಯ ಪದಕ
Image Credit: Representation only

About the Author

Manjunath Naragund

Manjunath Naragund

ಮಂಜುನಾಥ ನರಗುಂದ (Manjunath Naragund) 11 ವರ್ಷಗಳಿಗೂ ಹೆಚ್ಚು ಕಾಲ ಪತ್ರಿಕೋದ್ಯಮ, ಬರವಣಿಗೆ ಮತ್ತು ಭಾಷಾಂತರ ಕ್ಷೇತ್ರದಲ್ಲಿ ವಿವಿಧ ಮಾಧ್ಯಮ ವೇದಿಕೆಗಳಲ್ಲಿ ವೃತ್ತಿಪರ ಅನುಭವವನ್ನು ಹೊಂದಿದ್ದೇನೆ. 2017ರಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಿಂಟ್‌ವೀಕ್, ಅಕ್ಷರ ಸಂಗಾತ, ರೌಂಡ್ ಟೇಬಲ್ ಇಂಡಿಯಾ ಮತ್ತು ವಾರ್ತಾ ಭಾರತಿಯಂತಹ ಪ್ರತಿಷ್ಠಿತ ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳಲ್ಲಿ ನನ್ನ ಲೇಖನಗಳು ಪ್ರಕಟವಾಗಿವೆ. ಅಲ್ಲದೆ, ನಾನು ಅನುಭವಿ ಭಾಷಾಂತರಕಾರನಾಗಿದ್ದು, ಪರಿ ಮತ್ತು ದೆಹಲಿಯ ಸೆಂಟರ್ ಫಾರ್ ಪಾಲಿಸಿ ರಿಸರ್ಚ್‌ನಂತಹ ಸಂಸ್ಥೆಗಳಲ್ಲಿ ನನ್ನ ಅನುವಾದಿತ ಲೇಖನಗಳು ಪ್ರಕಟಗೊಂಡಿವೆ.
Read More

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಟೆಲ್ ಅವೀವ್: ದುಬೈನಿಂದ ಇಸ್ರೇಲ್‌ನ ಟೆಲ್ ಅವೀವ್‌ಗೆ ಹೊರಟಿದ್ದ ಫ್ಲೈದುಬೈ FZ1073 ವಿಮಾನದಲ್ಲಿ ಮಧ್ಯ ಆಕಾಶದಲ್ಲೇ ಸಂಭವಿಸಬಹುದಾಗಿದ್ದ ಭೀಕರ ವಿಮಾನ ದುರಂತವೊಂದು ಪ್ರಯಾಣಿಕರ ಸಮಯಪ್ರಜ್ಞೆಯಿಂದ ಕೂದಲೆಳೆಯ ಅಂತರದಲ್ಲಿ ತಪ್ಪಿದೆ. ವಿಮಾನದ ಸಹ-ಪೈಲಟ್ ಇದ್ದಕ್ಕಿದ್ದಂತೆ ಕ್ಯಾಪ್ಟನ್ ಮೇಲೆ ಚಾಕುವಿನಿಂದ ಮಾರಣಾಂತಿಕ ದಾಳಿ ನಡೆಸಿದ ಪರಿಣಾಮ, ನಿಯಂತ್ರಣ ತಪ್ಪಿದ ವಿಮಾನ ಕ್ಷಣಾರ್ಧದಲ್ಲಿ ಸಾವಿರಾರು ಅಡಿ ಕೆಳಕ್ಕೆ ಕುಸಿದು ಭೀತಿ ಹುಟ್ಟಿಸಿತ್ತು. ಆದರೆ ತಕ್ಷಣವೇ ಕಾರ್ಯಪ್ರವೃತ್ತರಾದ ನಾಲ್ವರು ಇಸ್ರೇಲಿ ಪ್ರಯಾಣಿಕರು ಸಹ-ಪೈಲಟ್‌ನನ್ನು ನಿಗ್ರಹಿಸಿ, ನೂರಾರು ಜನರ ಜೀವ ಉಳಿಸಿದ್ದಾರೆ.

ಈ ಸಾಹಸ ಮೆರೆದ ನಾಲ್ವರು ನಾಗರಿಕರಿಗೆ ಇಸ್ರೇಲ್ ಅಧ್ಯಕ್ಷ ಐಸಾಕ್ ಹೆರ್ಜಾಗ್ ನಾಗರಿಕ ಶೌರ್ಯಕ್ಕಾಗಿ ನೀಡಲಾಗುವ ಅತ್ಯುನ್ನತ ‘ಅಧ್ಯಕ್ಷೀಯ ಪದಕ’ ಗೌರವವನ್ನು ಶಿಫಾರಸು ಮಾಡುವುದಾಗಿ ಗುರುವಾರ ಘೋಷಿಸಿದ್ದಾರೆ.

ಮಧ್ಯ ಆಕಾಶದಲ್ಲಿ ಘೋರ ಘಟನೆ

ಬುಧವಾರ ದುಬೈನಿಂದ ಟೆಲ್ ಅವೀವ್‌ಗೆ ಪ್ರಯಾಣಿಸುತ್ತಿದ್ದ ವಿಮಾನ ಆಕಾಶದಲ್ಲಿ ಹಾರಾಟ ನಡೆಸುತ್ತಿದ್ದಾಗ ಈ ಘಟನೆ ನಡೆದಿದೆ. ಕಾಕ್‌ಪಿಟ್‌ನಲ್ಲಿದ್ದ ಸಹ-ಪೈಲಟ್ ದಿಢೀರನೆ ಮುಖ್ಯ ಕ್ಯಾಪ್ಟನ್ ಮೇಲೆ ಚಾಕುವಿನಿಂದ ಭೀಕರ ದಾಳಿ ನಡೆಸಿದ್ದಾನೆ. ದಾಳಿಯಿಂದಾಗಿ ಕ್ಯಾಪ್ಟನ್ ಗಂಭೀರವಾಗಿ ಗಾಯಗೊಂಡು ವಿಮಾನದ ನಿಯಂತ್ರಣ ಕೈತಪ್ಪಿದೆ. ಪರಿಣಾಮವಾಗಿ, ಕೇವಲ ಎರಡು ನಿಮಿಷಗಳ ಅವಧಿಯಲ್ಲಿ ವಿಮಾನವು ಆಕಾಶದಿಂದ ಸುಮಾರು 15,000 ಅಡಿಗಳಷ್ಟು ಕೆಳಗೆ ಬಿದ್ದಿದೆ. ಈ ಸಂದರ್ಭದಲ್ಲಿ ವಿಮಾನದಿಂದ ನಿರಂತರ ಆಪಾಯದ ತುರ್ತು ಸಂಕೇತಗಳು ರವಾನೆಯಾಗುತ್ತಿದ್ದವು.

ಆತಂಕದ ಸನ್ನಿವೇಶ ಸೃಷ್ಟಿಯಾಗುತ್ತಿದ್ದಂತೆ, ವಿಮಾನದಲ್ಲಿದ್ದ ಇಸ್ರೇಲ್ ನಾಗರಿಕರಾದ ಯಾನಿವ್ ಹಯುನ್, ಡಾ. ಶೋಟಾ ಮುಸಾಯೆವ್, ತ್ವಿಕಾ ಮಾನ್ಸ್ ಮತ್ತು ಅಸಫ್ ರೆಜ್ವಾನ್ ಅವರು ತಕ್ಷಣವೇ ಕಾಕ್‌ಪಿಟ್‌‌ಗೆ ಧಾವಿಸಿದರು. ಗಾಯಗೊಂಡ ಕ್ಯಾಪ್ಟನ್ ಹಾಗೂ ಕ್ಯಾಬಿನ್ ಸಿಬ್ಬಂದಿಯ ನೆರವಿನೊಂದಿಗೆ ಈ ನಾಲ್ವರು ಅಪಾಯಕಾರಿ ಸಹ-ಪೈಲಟ್‌ನನ್ನು ಹಿಡಿದು ನಿಗ್ರಹಿಸುವಲ್ಲಿ ಯಶಸ್ವಿಯಾದರು. ನಂತರ ಗಾಯಗೊಂಡ ಪೈಲಟ್ ಸಹಾಯದಿಂದ ವಿಮಾನದ ನಿಯಂತ್ರಣವನ್ನು ಮರಳಿ ಪಡೆಯಲಾಯಿತು.

ತಕ್ಷಣವೇ ವಿಮಾನದ ಮಾರ್ಗವನ್ನು ಬದಲಾಯಿಸಿ ಸೌದಿ ಅರೇಬಿಯಾದಲ್ಲಿ ಸುರಕ್ಷಿತವಾಗಿ ಇಳಿಸಲಾಯಿತು. ಇದರಿಂದಾಗಿ ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿ ಯಾವುದೇ ಜೀವಹಾನಿಯಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಅಧ್ಯಕ್ಷ ಹೆರ್ಜಾಗ್ ಅಭಿನಂದನೆ

ಸಮಯಪ್ರಜ್ಞೆ ಮೆರೆದು ನೂರಾರು ಜನರ ಜೀವ ಉಳಿಸಿದ ಯಾನಿವ್ ಹಯುನ್, ಡಾ. ಶೋಟಾ ಮುಸಾಯೆವ್, ತ್ವಿಕಾ ಮಾನ್ಸ್ ಮತ್ತು ಅಸಫ್ ರೆಜ್ವಾನ್ ಅವರನ್ನು ಇಸ್ರೇಲ್ ಅಧ್ಯಕ್ಷ ಐಸಾಕ್ ಹೆರ್ಜಾಗ್ ಅವರು ವೈಯಕ್ತಿಕವಾಗಿ ಫೋನ್ ಮೂಲಕ ಸಂಪರ್ಕಿಸಿ ಕೃತಜ್ಞತೆ ಸಲ್ಲಿಸಿದ್ದಾರೆ.

"ಇಂತಹ ಕ್ಲಿಷ್ಟ ಪರಿಸ್ಥಿತಿಯಲ್ಲಿ ನೀವು ಮೆರೆದ ಅಸಾಧಾರಣ ಶೌರ್ಯ ನಿಜಕ್ಕೂ ಪ್ರಶಂಸನೀಯ. ಯಾವುದೇ ವೃತ್ತಿಪರ ತರಬೇತಿಯಿಲ್ಲದೆ, ಸಾಮಾನ್ಯ ನಾಗರಿಕರಾಗಿ ನೀವು ತೋರಿದ ಈ ಧೈರ್ಯ ಬೃಹತ್ ವಾಯುಯಾನ ದುರಂತವನ್ನು ತಪ್ಪಿಸಿದೆ" ಎಂದು ಅಧ್ಯಕ್ಷ ಹೆರ್ಜಾಗ್ ಬಣ್ಣಿಸಿದ್ದಾರೆ. ಸಾಮಾನ್ಯ ನಾಗರಿಕರು ಕ್ಲಿಷ್ಟ ಸಮಯದಲ್ಲಿ ತೋರಿದ ಈ ಶೌರ್ಯವನ್ನು ಗೌರವಿಸಲು ಅವರನ್ನು ಅತ್ಯುನ್ನತ ರಾಷ್ಟ್ರೀಯ ಪದಕಕ್ಕೆ ಶಿಫಾರಸು ಮಾಡುತ್ತಿರುವುದಾಗಿ ಅವರು ತಿಳಿಸಿದ್ದಾರೆ.
 

Add Zee News as a Preferred Source
TAGS:
Kannada News