• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಅಂತಾರಾಷ್ಟ್ರೀಯ
  • /ಪಾಕ್‌ ನೆಲದಲ್ಲೇ ಉಗ್ರರಿಗೆ ದುರಂಧರ್‌ ಭೀತಿ : ಪ್ರಾಣ ಉಳಿಸಿಕೊಳ್ಳಲು ಹಫೀಜ್-ಮಸೂದ್ ಪರದಾಟ!

ಪಾಕ್‌ ನೆಲದಲ್ಲೇ ಉಗ್ರರಿಗೆ ದುರಂಧರ್‌ ಭೀತಿ : ಪ್ರಾಣ ಉಳಿಸಿಕೊಳ್ಳಲು ಹಫೀಜ್-ಮಸೂದ್ ಪರದಾಟ!

ಭಾರತದ ಮೋಸ್ಟ್‌ ವಾಂಟೆಡ್‌ ಉಗ್ರರಾದ ಲಷ್ಕರ್‌-ಎ-ತೊಯ್ಬಾ ಮುಖ್ಯಸ್ಥ ಹಫೀಜ್‌ ಸಯೀದ್ ಮತ್ತು ಜೈಶ್‌-ಎ-ಮೊಹಮ್ಮದ್‌ ಮುಖ್ಯಸ್ಥ ಮಸೂದ್‌ ಅಜರ್‌ ಈಗ ಪಾಕಿಸ್ತಾನದಲ್ಲೇ ತೀವ್ರ ಜೀವಭಯದಿಂದ ದಿನ ದೂಡುವಂತಾಗಿದೆ. ಭಾರತದ ನಿರಂತರ ಗುಪ್ತಚರ ನಿಗಾ, 'ಆಪರೇಷನ್ ಸಿಂದೂರ್' ಬಳಿಕದ ದಾಳಿಯ ಭೀತಿ ಹಾಗೂ ಇತ್ತೀಚಿನ ತಿಂಗಳುಗಳಲ್ಲಿ ಅಜ್ಞಾತ ಬಂದೂಕುಧಾರಿಗಳ ದಾಳಿಗೆ ಕೆಲ ಉಗ್ರರು ಬಲಿಯಾಗಿರುವುದು ಪಾಕಿಸ್ತಾನದ ನಿದ್ದೆಗೆಡಿಸಿದೆ. ಈ ಕುರಿತ ಇಂಟ್ರಸ್ಟಿಂಗ್‌ ವರದಿ ಇಲ್ಲಿದೆ..

Written ByKrishna NK
Published: Nov 15, 2026, 22:00 IST|Updated: Nov 15, 2026, 22:01 IST
joinshare
ಪಾಕ್‌ ನೆಲದಲ್ಲೇ ಉಗ್ರರಿಗೆ ದುರಂಧರ್‌ ಭೀತಿ : ಪ್ರಾಣ ಉಳಿಸಿಕೊಳ್ಳಲು ಹಫೀಜ್-ಮಸೂದ್ ಪರದಾಟ!
Image Credit: Pakistan news

About the Author

Krishna NK

Krishna NK

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

2

ಭಾರತದಲ್ಲಿ ಅತಿ ಹೆಚ್ಚು ಬಳಕೆಯಾಗುವ ಪಾಸ್‌ವರ್ಡ್ ಇಲ್ಲಿದೆ ನೋಡಿ

3

ಆಸಿಯಾ ಮೇಲೆ ಸೌಂದರ್ಯಾ ಶೆಟ್ಟಿ ಹಲ್ಲೆ! ಇಂದೇ ಬಿಗ್‌ ಬಾಸ್‌ನಿಂದ ಹೊರ ಹೋಗ್ತಾರಾ?

4

'ಜೀ ನ್ಯೂಸ್' ಬಿಗ್‌ ಇಂಪ್ಯಾಕ್ಟ್: ದೆಹಲಿ ಫ್ಲಾಟ್ ಹರಾಜು ವಿವಾದದಲ್ಲಿ ತಪ್ಪೊಪ್ಪಿಕೊಂಡ NBCC

5

ಮುದ್ದು ಮಗಳ ಸಾವಿನ ನಂತರ ಬರಿಗಾಲಲ್ಲೇ ನಡೆಯುತ್ತಾರೆ ಈ ನಟ... ಕೋಟಿ ಕೋಟಿ ಒಡೆಯನಾದರೂ ಇದೆಂಥ ಸ್ಥಿತಿ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಪಾಕಿಸ್ತಾನ : ದುರಂಧರ್‌ಗಳ ಗುಂಡಿಗೆ ತಾವೇ ಬಲಿಯಾಗುವ ಭೀತಿಯಲ್ಲಿ ಪಾಕಿಸ್ತಾನದ ಕುಖ್ಯಾತ ಉಗ್ರರು..! ಭಾರತದ ಮೋಸ್ಟ್‌ ವಾಂಟೆಡ್‌ ಉಗ್ರರಾದ ಹಫೀಜ್‌ ಸಯೀದ್‌ ಮತ್ತು ಮಸೂದ್‌ ಅಜರ್‌ಗೆ ಈಗ ಜೀವಭಯ ಶುರುವಾಗಿದೆಯಾ..? ಅಜ್ಞಾತ ಬಂದೂಕುಧಾರಿಗಳ ಗುಂಡಿಗೆ ಬಲಿಯಾಗುವ ಆತಂಕದಲ್ಲಿ ಇಬ್ಬರನ್ನೂ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ರಹಸ್ಯ ಅಡಗುತಾಣಗಳಿಗೆ ಸ್ಥಳಾಂತರಿಸಿದೆ ಎನ್ನಲಾಗಿದೆ. ಲಾಹೋರ್‌ನಲ್ಲಿದ್ದ ಹಫೀಜ್‌ ಸಯೀದ್‌ನನ್ನು ರಾವಲ್ಪಿಂಡಿಗೆ, ಮಸೂದ್‌ ಅಜರ್‌ನನ್ನು ಸಿಂಧ್‌ ಪ್ರಾಂತ್ಯದ ನವಾಬ್‌ಶಾಗೆ ರವಾನಿಸಲಾಗಿದೆ. ಆಪರೇಷನ್‌ ಸಿಂದೂರ್‌ ಬಳಿಕ ಭಾರತದ ಮತ್ತೊಂದು ದಾಳಿಯ ಭೀತಿಯೂ ಪಾಕ್‌ ಉಗ್ರರನ್ನು ಕಾಡುತ್ತಿದೆ ಎನ್ನಲಾಗಿದೆ. ಇತ್ತ ಲಷ್ಕರ್‌ ಮತ್ತು ಜೈಶ್‌ ಸಂಘಟನೆಗಳ ಪ್ರಮುಖರನ್ನೂ ನೇರವಾಗಿ ಭೇಟಿಯಾಗದೆ, ಆಡಿಯೋ ಸಂದೇಶಗಳ ಮೂಲಕವೇ ಸಂಪರ್ಕ ಸಾಧಿಸುತ್ತಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಹಾಗಾದರೆ ಭಾರತದ ಮೋಸ್ಟ್‌ ವಾಂಟೆಡ್‌ ಉಗ್ರರಿಗೆ ಈಗ ಯಾಕೆ ಈ ಪರದಾಟ..? ಪಾಕಿಸ್ತಾನದ ಸೇನಾ ಪ್ರಧಾನ ಕಚೇರಿಯ ಸಮೀಪವೇ ಹಫೀಜ್‌ಗೆ ಅಡಗುತಾಣ ಕಲ್ಪಿಸಿರುವುದೇಕೆ..? ಮಸೂದ್‌ ಅಜರ್‌ ಸಂಪರ್ಕವನ್ನೇ ಕಡಿತಗೊಳಿಸಿರುವುದೇಕೆ..? ಬನ್ನಿ ನೋಡೋಣ

ಭಾರತದ ವಿರುದ್ಧ ಭಯೋತ್ಪಾದಕ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡಿದ ಆರೋಪ ಎದುರಿಸುತ್ತಿರುವ ಇಬ್ಬರು ಕುಖ್ಯಾತ ಉಗ್ರರನ್ನೇ ಈಗ ಪಾಕಿಸ್ತಾನ ರಕ್ಷಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಗುಪ್ತಚರ ಮೂಲಗಳ ಮಾಹಿತಿಯ ಪ್ರಕಾರ, ಲಷ್ಕರ್‌-ಎ-ತೊಯ್ಬಾ ಮುಖ್ಯಸ್ಥ ಹಫೀಜ್‌ ಸಯೀದ್‌ ಮತ್ತು ಜೈಶ್‌-ಎ-ಮೊಹಮ್ಮದ್‌ ಮುಖ್ಯಸ್ಥ ಮಸೂದ್‌ ಅಜರ್‌ ಅವರನ್ನು ಕಳೆದ ವಾರ ಹೊಸ ರಹಸ್ಯ ತಾಣಗಳಿಗೆ ಸ್ಥಳಾಂತರಿಸಲಾಗಿದೆ. ಇಬ್ಬರಿಗೂ ಐಎಸ್‌ಐ ಅತ್ಯಂತ ಬಿಗಿ ಭದ್ರತೆ ಒದಗಿಸಿದೆ ಎನ್ನಲಾಗಿದೆ. ಪಾಕಿಸ್ತಾನದಲ್ಲಿ ಇತ್ತೀಚಿನ ತಿಂಗಳುಗಳಲ್ಲಿ ಭಾರತ ವಿರೋಧಿ ಉಗ್ರರು ಅಪರಿಚಿತ ಬಂದೂಕುಧಾರಿಗಳ ದಾಳಿಗೆ ಬಲಿಯಾಗಿರುವುದು ಆತಂಕ ಹೆಚ್ಚಿಸಿದೆ. ಜೊತೆಗೆ ಆಪರೇಷನ್‌ ಸಿಂದೂರ್‌ ಬಳಿಕ ಭಾರತ ಮತ್ತೆ ಸೇನಾ ಕಾರ್ಯಾಚರಣೆ ನಡೆಸಬಹುದು ಎಂಬ ಭಯವೂ ಪಾಕ್‌ ಗುಪ್ತಚರ ವಲಯದಲ್ಲಿದೆ ಎಂದು ವರದಿಗಳು ಹೇಳಿವೆ.

ಲಷ್ಕರ್‌-ಎ-ತೊಯ್ಬಾ ಮುಖ್ಯಸ್ಥ ಹಫೀಜ್‌ ಸಯೀದ್‌ನನ್ನು ಪಾಕಿಸ್ತಾನದ ಅತ್ಯಂತ ಸುರಕ್ಷಿತ ಪ್ರದೇಶಗಳಲ್ಲೊಂದಾದ ರಾವಲ್ಪಿಂಡಿಗೆ ಸ್ಥಳಾಂತರಿಸಲಾಗಿದೆ ಎನ್ನಲಾಗಿದೆ. ಈ ಹಿಂದೆ ಲಾಹೋರ್‌ನ ಜೋಹರ್‌ ಟೌನ್‌ನಲ್ಲಿ ನೆಲೆಸಿದ್ದ ಆತನನ್ನು ಗ್ಯಾರಿಸನ್‌ ಗ್ರೌಂಡ್‌ ಪ್ರದೇಶದ ಸುರಕ್ಷಿತ ನಿವಾಸಕ್ಕೆ ಕರೆದೊಯ್ಯಲಾಗಿದೆ. ಈ ಪ್ರದೇಶ ಪಾಕಿಸ್ತಾನದ ಸೇನಾ ಪ್ರಧಾನ ಕಚೇರಿಗೆ ಅತ್ಯಂತ ಸಮೀಪದಲ್ಲಿದೆ. ಆತನಿಗೆ ನೀಡಿರುವ ಭದ್ರತೆಯನ್ನೂ ಹೆಚ್ಚಿಸಲಾಗಿದೆ. ಹೊರಗಿನವರ ಭೇಟಿಗೆ ನಿರ್ಬಂಧ ವಿಧಿಸಲಾಗಿದ್ದು, ಸಂಚಾರವನ್ನೂ ನಿಯಂತ್ರಿಸಲಾಗಿದೆ. ಲಷ್ಕರ್‌ ಸಂಘಟನೆಯ ಕಾರ್ಯಕರ್ತರು ಮತ್ತು ಕಮಾಂಡರ್‌ಗಳನ್ನು ನೇರವಾಗಿ ಭೇಟಿಯಾಗುವುದನ್ನೂ ಹಫೀಜ್‌ ನಿಲ್ಲಿಸಿದ್ದಾನೆ ಎನ್ನಲಾಗಿದೆ. ಸಂಘಟನೆಯೊಂದಿಗೆ ಸಂಪರ್ಕದಲ್ಲಿರಲು ಈಗ ಆಡಿಯೋ ಸಂದೇಶಗಳನ್ನೇ ಬಳಸುತ್ತಿದ್ದಾನೆ ಎಂಬ ಮಾಹಿತಿ ಹೊರಬಿದ್ದಿದೆ.

ಜೈಶ್‌-ಎ-ಮೊಹಮ್ಮದ್‌ ಮುಖ್ಯಸ್ಥ ಮಸೂದ್‌ ಅಜರ್‌ಗೂ ಈಗ ರಹಸ್ಯ ಅಡಗುತಾಣವೇ ಆಸರೆಯಾಗಿದೆ. ಪಾಕಿಸ್ತಾನದ ಸಿಂಧ್‌ ಪ್ರಾಂತ್ಯದ ನವಾಬ್‌ಶಾದಲ್ಲಿರುವ ಸುರಕ್ಷಿತ ನಿವಾಸಕ್ಕೆ ಆತನನ್ನು ಸ್ಥಳಾಂತರಿಸಲಾಗಿದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ. ಸಂಘಟನೆಯ ಸಾಮಾನ್ಯ ಕಾರ್ಯಕರ್ತರು ಮತ್ತು ಸದಸ್ಯರನ್ನು ಭೇಟಿಯಾಗುವುದನ್ನು ಮಸೂದ್‌ ಕಡಿಮೆ ಮಾಡಿದ್ದಾನೆ. ಕೇವಲ ಆಯ್ದ ಹಿರಿಯ ಕಮಾಂಡರ್‌ಗಳ ಜೊತೆ ಮಾತ್ರ ಸಂಪರ್ಕದಲ್ಲಿದ್ದಾನೆ ಎನ್ನಲಾಗಿದೆ. ಆಪರೇಷನ್‌ ಸಿಂದೂರ್‌ ವೇಳೆ ಬಹಾವಲ್ಪುರದಲ್ಲಿರುವ ಜೈಶ್‌ನ ಪ್ರಮುಖ ನೆಲೆ ಮರ್ಕಜ್‌ ಮೇಲೆ ನಡೆದ ದಾಳಿಯಿಂದ ಸಂಘಟನೆಗೆ ಭಾರಿ ಹಾನಿಯಾಗಿತ್ತು. ಆ ಬಳಿಕ ಸಂಘಟನೆಯನ್ನು ಮತ್ತೆ ಸಂಘಟಿಸುವ ಪ್ರಯತ್ನಗಳೂ ಹಿನ್ನಡೆ ಅನುಭವಿಸಿವೆ ಎಂಬ ಮಾಹಿತಿ ಇದೆ. ಹೀಗಾಗಿ ಮಸೂದ್‌ ಅಜರ್‌ನ ಚಟುವಟಿಕೆಗಳ ಮೇಲೂ ಐಎಸ್‌ಐ ಕಟ್ಟುನಿಟ್ಟಿನ ನಿಯಂತ್ರಣ ಹೇರಿದೆ ಎನ್ನಲಾಗಿದೆ.

ಹಫೀಜ್‌ ಸಯೀದ್‌ನ ಇರುವಿಕೆಯ ಬಗ್ಗೆ ಪಾಕಿಸ್ತಾನ ನೀಡುತ್ತಿರುವ ಹೇಳಿಕೆ ಮತ್ತು ಗುಪ್ತಚರ ಮೂಲಗಳ ಮಾಹಿತಿ ನಡುವೆ ದೊಡ್ಡ ವ್ಯತ್ಯಾಸವಿದೆ. ಭಯೋತ್ಪಾದಕ ಚಟುವಟಿಕೆಗಳಿಗೆ ಹಣಕಾಸು ನೆರವು ನೀಡಿದ ಪ್ರಕರಣಗಳಲ್ಲಿ ಶಿಕ್ಷೆಯಾಗಿದ್ದು, ಲಾಹೋರ್‌ನ ಕೋಟ್‌ ಲಖ್‌ಪತ್‌ ಜೈಲಿನಲ್ಲಿ ಆತ ಸೆರೆವಾಸ ಅನುಭವಿಸುತ್ತಿದ್ದಾನೆ ಎಂಬುದು ಪಾಕಿಸ್ತಾನದ ಅಧಿಕೃತ ನಿಲುವು. ಆದರೆ ಭಾರತೀಯ ಗುಪ್ತಚರ ಮೂಲಗಳು ಈ ಹೇಳಿಕೆಯನ್ನು ಪ್ರಶ್ನಿಸಿವೆ. ಆತ ಜೈಲಿನಲ್ಲಿಲ್ಲ, ಐಎಸ್‌ಐ ನಿಯಂತ್ರಣದ ಸುರಕ್ಷಿತ ನಿವಾಸದಲ್ಲಿದ್ದಾನೆ ಎಂದು ಆರೋಪಿಸಿವೆ. ಇನ್ನು ಮಸೂದ್‌ ಅಜರ್‌ನ ಇರುವಿಕೆಯ ಬಗ್ಗೆಯೂ ಪಾಕಿಸ್ತಾನದ ಹೇಳಿಕೆಗಳು ಪ್ರಶ್ನೆಗೊಳಗಾಗಿವೆ. ಇಬ್ಬರನ್ನೂ ವಿಶ್ವಸಂಸ್ಥೆ ಜಾಗತಿಕ ಭಯೋತ್ಪಾದಕರು ಎಂದು ಗುರುತಿಸಿದೆ. ಮುಂಬೈ ದಾಳಿ ಸೇರಿದಂತೆ ಹಲವು ಪ್ರಕರಣಗಳಲ್ಲಿ ಹಫೀಜ್‌ ವಿರುದ್ಧ ಭಾರತ ಆರೋಪ ಮಾಡಿದ್ದರೆ, ಪುಲ್ವಾಮಾ, ಪಠಾಣ್‌ಕೋಟ್‌ ಮತ್ತು ಸಂಸತ್‌ ದಾಳಿಗಳಲ್ಲಿ ಮಸೂದ್‌ ಪಾತ್ರವಿದೆ ಎಂದು ಭಾರತ ಆರೋಪಿಸಿದೆ.

ಪಾಕಿಸ್ತಾನದಲ್ಲಿ ಭಾರತ ವಿರೋಧಿ ಉಗ್ರರ ಸುರಕ್ಷತೆಯೇ ಈಗ ದೊಡ್ಡ ಪ್ರಶ್ನೆಯಾಗಿದೆ. ಇತ್ತೀಚಿನ ತಿಂಗಳುಗಳಲ್ಲಿ ಹಲವು ಉಗ್ರರು ಅಪರಿಚಿತ ಬಂದೂಕುಧಾರಿಗಳ ಗುಂಡಿಗೆ ಬಲಿಯಾಗಿರುವ ಘಟನೆಗಳು ಪಾಕ್‌ ಗುಪ್ತಚರ ಸಂಸ್ಥೆಗಳ ಆತಂಕ ಹೆಚ್ಚಿಸಿವೆ. ಇದರ ಬೆನ್ನಲ್ಲೇ ಆಪರೇಷನ್‌ ಸಿಂದೂರ್‌ ವೇಳೆ ಪಾಕಿಸ್ತಾನ ಮತ್ತು ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ನೆಲೆಗಳ ಮೇಲೆ ಭಾರತ ನಡೆಸಿದ ದಾಳಿಯೂ ಉಗ್ರ ಸಂಘಟನೆಗಳಿಗೆ ದೊಡ್ಡ ಹೊಡೆತ ನೀಡಿತ್ತು. ಪ್ರಮುಖ ನೆಲೆಗಳು ಧ್ವಂಸಗೊಂಡ ಬಳಿಕ ಸಂಘಟನೆಗಳ ಕಾರ್ಯಾಚರಣೆಗಳ ಮೇಲೂ ಪರಿಣಾಮ ಬೀರಿದೆ ಎನ್ನಲಾಗಿದೆ. ಈಗ ಉಗ್ರ ಸಂಘಟನೆಗಳ ಮುಖ್ಯಸ್ಥರ ಭೇಟಿಗೆ ನಿರ್ಬಂಧ, ಸಂಚಾರದ ಮೇಲೆ ನಿಗಾ ಮತ್ತು ಸಂಪರ್ಕಕ್ಕೆ ಕಡಿವಾಣ ಹಾಕಲಾಗಿದೆ. ಪಾಕಿಸ್ತಾನವೇ ಆಶ್ರಯ ನೀಡಿದೆ ಎನ್ನಲಾಗುವ ಉಗ್ರರು ಈಗ ಅದೇ ನೆಲದಲ್ಲಿ ಜೀವಭಯದಿಂದ ಬದುಕುವ ಸ್ಥಿತಿ ಎದುರಿಸುತ್ತಿದ್ದಾರೆ ಎಂಬುದು ಈ ಬೆಳವಣಿಗೆಯ ಸಾರವಾಗಿದೆ.

ಒಟ್ಟಿನಲ್ಲಿ, ಭಾರತದ ಮೋಸ್ಟ್‌ ವಾಂಟೆಡ್‌ ಉಗ್ರರಾದ ಹಫೀಜ್‌ ಸಯೀದ್‌ ಮತ್ತು ಮಸೂದ್‌ ಅಜರ್‌ ಈಗ ಪಾಕಿಸ್ತಾನದಲ್ಲೇ ಅಡಗಿಕೊಂಡು ಬದುಕುವ ಪರಿಸ್ಥಿತಿ ಎದುರಾಗಿದೆ. ಅಜ್ಞಾತ ಬಂದೂಕುಧಾರಿಗಳ ಭೀತಿ ಮತ್ತು ಆಪರೇಷನ್‌ ಸಿಂದೂರ್‌ ಬಳಿಕ ಭಾರತದ ಮತ್ತೊಂದು ದಾಳಿಯ ಆತಂಕ ಇಬ್ಬರನ್ನೂ ಹೊಸ ಸುರಕ್ಷಿತ ತಾಣಗಳಿಗೆ ತಲುಪಿಸಿದೆ ಎನ್ನಲಾಗಿದೆ. ಲಷ್ಕರ್‌ ಮತ್ತು ಜೈಶ್‌ ಸಂಘಟನೆಗಳ ಜೊತೆಗಿನ ನೇರ ಸಂಪರ್ಕಕ್ಕೂ ಕಡಿವಾಣ ಬಿದ್ದಿದೆ. ಇತ್ತ ಹಫೀಜ್‌ ಜೈಲಿನಲ್ಲಿದ್ದಾನೆ ಎಂಬ ಪಾಕಿಸ್ತಾನದ ವಾದವನ್ನೇ ಗುಪ್ತಚರ ಮೂಲಗಳು ಪ್ರಶ್ನಿಸಿವೆ. ಜಾಗತಿಕ ಉಗ್ರರೆಂದು ಗುರುತಿಸಲ್ಪಟ್ಟಿರುವ ಈ ಇಬ್ಬರ ರಕ್ಷಣೆಗೆ ಐಎಸ್‌ಐ ಇನ್ನೆಷ್ಟು ದಿನ ಕಾವಲು ಕಾಯಲಿದೆ..? ಭಾರತದ ವಿರುದ್ಧ ಸಂಚು ರೂಪಿಸುತ್ತಿದ್ದ ಉಗ್ರರೇ ಈಗ ತಮ್ಮ ಪ್ರಾಣ ಉಳಿಸಿಕೊಳ್ಳಲು ಅಡಗುತಾಣ ಹುಡುಕುತ್ತಿರುವರಾ..? ಪಾಕಿಸ್ತಾನದ ನೆಲವೇ ಉಗ್ರರಿಗೆ ಸುರಕ್ಷಿತವಲ್ಲದಂತಾಗಿದೆಯಾ..?

Add Zee News as a Preferred Source
TAGS:
India Pakistan News