• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಅಂತರಾಷ್ಟ್ರೀಯ
  • /ಪಾಕಿಸ್ತಾನದಲ್ಲಿ 'ಪೆಟ್ರೋಲ್ ಬಾಂಬ್': ಬೆಲೆ ಏರಿಕೆ ಖಂಡಿಸಿ ಕತ್ತೆ ಬಂಡಿಗಳ ಮೇಲೆ ಅಸೆಂಬ್ಲಿಗೆ ಸವಾರಿ ಮಾಡಿದ ಶಾಸಕರು!

ಪಾಕಿಸ್ತಾನದಲ್ಲಿ 'ಪೆಟ್ರೋಲ್ ಬಾಂಬ್': ಬೆಲೆ ಏರಿಕೆ ಖಂಡಿಸಿ ಕತ್ತೆ ಬಂಡಿಗಳ ಮೇಲೆ ಅಸೆಂಬ್ಲಿಗೆ ಸವಾರಿ ಮಾಡಿದ ಶಾಸಕರು!

ಪ್ರಸ್ತುತ ದೇಶದಲ್ಲಿ ಪೆಟ್ರೋಲ್ ಬಳಕೆ ಎನ್ನುವುದು ಸಾಮಾನ್ಯ ಜನರಿಗೆ ಭರಿಸಲಾಗದ ಹೊರೆಯಾಗಿದೆ. ಹೀಗಾಗಿ ಜನಸಾಮಾನ್ಯರ ಆಕ್ರೋಶಕ್ಕೆ ಧ್ವನಿಯಾಗಲು ಈ ವಿಶಿಷ್ಟ ಪ್ರತಿಭಟನೆ ನಡೆಸಲಾಯಿತು.

Reported ByManjunath NaragundEdited ByManjunath Naragund
Published: Sep 20, 2026, 04:14 PM IST|Updated: Sep 20, 2026, 04:22 PM IST
joinshare
ಪಾಕಿಸ್ತಾನದಲ್ಲಿ 'ಪೆಟ್ರೋಲ್ ಬಾಂಬ್': ಬೆಲೆ ಏರಿಕೆ ಖಂಡಿಸಿ ಕತ್ತೆ ಬಂಡಿಗಳ ಮೇಲೆ ಅಸೆಂಬ್ಲಿಗೆ ಸವಾರಿ ಮಾಡಿದ ಶಾಸಕರು!
Image Credit: ಇಂಧನ ದರ ಏರಿಕೆಯನ್ನು ವಿರೋಧಿಸಿದ್ದು ಕೇವಲ ಪಿಟಿಐ ರಾಜಕಾರಣಿಗಳು ಮಾತ್ರವಲ್ಲ. ಪಾಕಿಸ್ತಾನ ಬಾರ್ ಕೌನ್ಸಿಲ್‌ನ ಕಾರ್ಯಕಾರಿ ಸಮಿತಿಯು ಸರ್ಕಾರದ ವಿರುದ್ಧ ಬಹಿರಂಗವಾಗಿ ತಿರುಗಿಬಿದ್ದಿದ್ದು, ಸಾಲು ಸಾಲು ಬೆಲೆ ಏರಿಕೆಯಿಂದ ಸಾರ್ವಜನಿಕರನ್ನು ಪಾರು ಮಾಡಲು ತಕ್ಷಣವೇ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ.

About the Author

Manjunath Naragund

Manjunath Naragund

ಮಂಜುನಾಥ ನರಗುಂದ (Manjunath Naragund) 11 ವರ್ಷಗಳಿಗೂ ಹೆಚ್ಚು ಕಾಲ ಪತ್ರಿಕೋದ್ಯಮ, ಬರವಣಿಗೆ ಮತ್ತು ಭಾಷಾಂತರ ಕ್ಷೇತ್ರದಲ್ಲಿ ವಿವಿಧ ಮಾಧ್ಯಮ ವೇದಿಕೆಗಳಲ್ಲಿ ವೃತ್ತಿಪರ ಅನುಭವವನ್ನು ಹೊಂದಿದ್ದೇನೆ. 2017ರಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಿಂಟ್‌ವೀಕ್, ಅಕ್ಷರ ಸಂಗಾತ, ರೌಂಡ್ ಟೇಬಲ್ ಇಂಡಿಯಾ ಮತ್ತು ವಾರ್ತಾ ಭಾರತಿಯಂತಹ ಪ್ರತಿಷ್ಠಿತ ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳಲ್ಲಿ ನನ್ನ ಲೇಖನಗಳು ಪ್ರಕಟವಾಗಿವೆ. ಅಲ್ಲದೆ, ನಾನು ಅನುಭವಿ ಭಾಷಾಂತರಕಾರನಾಗಿದ್ದು, ಪರಿ ಮತ್ತು ದೆಹಲಿಯ ಸೆಂಟರ್ ಫಾರ್ ಪಾಲಿಸಿ ರಿಸರ್ಚ್‌ನಂತಹ ಸಂಸ್ಥೆಗಳಲ್ಲಿ ನನ್ನ ಅನುವಾದಿತ ಲೇಖನಗಳು ಪ್ರಕಟಗೊಂಡಿವೆ.
Read More

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಇಸ್ಲಾಮಾಬಾದ್/ಕರಾಚಿ: ಸದಾ ಒಂದಲ್ಲಾ ಒಂದು ರಾಜಕೀಯ ಮತ್ತು ಆರ್ಥಿಕ ಬಿಕ್ಕಟ್ಟಿನಿಂದ ಸುದ್ದಿಯಲ್ಲಿರುವ ನೆರೆರಾಷ್ಟ್ರ ಪಾಕಿಸ್ತಾನದಲ್ಲಿ ಇದೀಗ ಇಂಧನ ಬೆಲೆ ಏರಿಕೆ ದಂಗುಬಡಿಸುವ ಹಂತಕ್ಕೆ ತಲುಪಿದೆ. ಆಕಾಶಮುಖಿಯಾಗಿ ಬೆಳೆಯುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಪ್ರತಿಭಟಿಸಿ, ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷದ ಶಾಸಕರು ಶುಕ್ರವಾರ ಸಿಂಧ್ ವಿಧಾನಸಭೆಗೆ ಅಚ್ಚರಿಯ ರೀತಿಯಲ್ಲಿ ಆಗಮಿಸುವ ಮೂಲಕ ಇಡೀ ದೇಶದ ಗಮನ ಸೆಳೆದಿದ್ದಾರೆ. ತಮ್ಮ ಐಷಾರಾಮಿ ಕಾರುಗಳನ್ನು ಮನೆಗಳಲ್ಲೇ ಬಿಟ್ಟು, ಸಾಲು ಸಾಲು ಕತ್ತೆ ಬಂಡಿಗಳನ್ನೇರಿ ಅಸೆಂಬ್ಲಿಗೆ ಬಂದ ಶಾಸಕರು ಸರ್ಕಾರಕ್ಕೆ ತೀವ್ರ ಮುಜುಗರ ಉಂಟುಮಾಡಿದರು.

ಪ್ರಸ್ತುತ ದೇಶದಲ್ಲಿ ಪೆಟ್ರೋಲ್ ಬಳಕೆ ಎನ್ನುವುದು ಸಾಮಾನ್ಯ ಜನರಿಗೆ ಭರಿಸಲಾಗದ ಹೊರೆಯಾಗಿದೆ. ಹೀಗಾಗಿ ಜನಸಾಮಾನ್ಯರ ಆಕ್ರೋಶಕ್ಕೆ ಧ್ವನಿಯಾಗಲು ಈ ವಿಶಿಷ್ಟ ಪ್ರತಿಭಟನೆ ನಡೆಸಲಾಯಿತು.

ಕತ್ತೆ ಬಂಡಿಗಳ ಮೇಲೆ ಪಿಟಿಐ ಶಾಸಕರ ಸವಾರಿ!

ಪಿಟಿಐ ನಾಯಕ ಸಜ್ಜದ್ ಅಲಿ ಸೂಮ್ರೊ ಅವರ ನೇತೃತ್ವದಲ್ಲಿ ನಡೆದ ಈ ವಿಶಿಷ್ಟ ಪ್ರತಿಭಟನೆಯಲ್ಲಿ, ಹಲವಾರು ಶಾಸಕರು ಮತ್ತು ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು. ವಿಧಾನಸಭೆಯ ಸುತ್ತಮುತ್ತಲಿನ ಪ್ರದೇಶಗಳಿಂದ ಹೊರಟ ಈ ಕತ್ತೆ ಬಂಡಿಗಳ ಸಾಲು ಸಿಂಧ್ ಅಸೆಂಬ್ಲಿಯ ಮುಖ್ಯ ದ್ವಾರದವರೆಗೆ ತಲುಪಿತು. ಈ ವೇಳೆ ಶಾಸಕರು ಫೆಡರಲ್ ಸರ್ಕಾರದ ಆರ್ಥಿಕ ನೀತಿಗಳ ವಿರುದ್ಧ ಭಿತ್ತಿಪತ್ರಗಳನ್ನು ಪ್ರದರ್ಶಿಸಿ, ಉಗ್ರ ಘೋಷಣೆಗಳನ್ನು ಕೂಗಿದರು.

ತಮ್ಮ ಪ್ರತಿಭಟನೆಗೆ ಕತ್ತೆ ಬಂಡಿಗಳನ್ನು ಆಯ್ಕೆ ಮಾಡಿಕೊಂಡಿದ್ದರ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಸೂಮ್ರೊ, ಸರ್ಕಾರ ನಿರಂತರವಾಗಿ ಹೆಚ್ಚಿಸುತ್ತಿರುವ ಇಂಧನ ದರಗಳನ್ನು ಸಾರ್ವಜನಿಕರ ಮೇಲೆ ಎಸೆಯಲಾದ "ಪೆಟ್ರೋಲ್ ಬಾಂಬ್" ಎಂದು ಕರಿದಿದ್ದಾರೆ.

"ಪೆಟ್ರೋಲ್ ಬೆಲೆ ಗಗನಕ್ಕೇರಿದೆ, ನಮಗೆ ನಮ್ಮ ಕಾರುಗಳಲ್ಲಿ ವಿಧಾನಸಭೆಗೆ ಬರಲು ಸಹ ಸಾಧ್ಯವಾಗುತ್ತಿಲ್ಲ. ಪರಿಸ್ಥಿತಿ ಹೀಗಿರುವಾಗ ಸಚಿವರು ಮತ್ತು ಖಜಾನೆ ಪೀಠದ ಸಂಸದರು ಸಹ ತಮ್ಮ ದುಬಾರಿ ಕಾರುಗಳನ್ನು ಬಿಟ್ಟು ಇದೇ ರೀತಿ ಕತ್ತೆ ಬಂಡಿಗಳಲ್ಲೇ ಅಸೆಂಬ್ಲಿಗೆ ಬರಲಿ!" ಎಂದು ಅವರು ಡಾನ್ (Dawn) ದಿನಪತ್ರಿಕೆಗೆ ನೀಡಿದ ಹೇಳಿಕೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಾಕಿಸ್ತಾನದಲ್ಲಿ ಸದ್ಯದ ಇಂಧನ ದರ ಎಷ್ಟು?

ಪಾಕಿಸ್ತಾನಿ ಜನ್ರಿಗೆ ಇಂಧನ ದರ ಎಷ್ಟು ದೊಡ್ಡ ಹೊರೆಯಾಗಿದೆ ಎಂಬುದು ಅಲ್ಲಿನ ದರಪಟ್ಟಿಯನ್ನು ನೋಡಿದರೆ ಅರಿವಾಗುತ್ತದೆ. ಪ್ರತಿಭಟನೆ ನಡೆದ ಸಮಯದಲ್ಲಿ 

ಪಾಕಿಸ್ತಾನದಲ್ಲಿ:

ಪೆಟ್ರೋಲ್ ಬೆಲೆ: ಪ್ರತಿ ಲೀಟರ್‌ಗೆ 390.79 ರೂ.
ಹೈ-ಸ್ಪೀಡ್ ಡೀಸೆಲ್ ಬೆಲೆ: ಪ್ರತಿ ಲೀಟರ್‌ಗೆ 424.92 ರೂ

ಇದರಲ್ಲಿ ಗಮನಿಸಬೇಕಾದ ಅಂಶವೆಂದರೆ, ಸರ್ಕಾರ ವಿಧಿಸುವ ತೆರಿಗೆಗಳು ಮತ್ತು ಸುಂಕಗಳ ಪಾಲು. ಪ್ರತಿ ಲೀಟರ್ ಪೆಟ್ರೋಲ್ ಮೇಲಿನ 390.79 ರೂ. ಬೆಲೆಯಲ್ಲಿ ಬರೋಬ್ಬರಿ 114 ರೂ. ಸರ್ಕಾರಿ ತೆರಿಗೆಯೇ ಸೇರಿದೆ. ಅಂತೆಯೇ, ಹೈ-ಸ್ಪೀಡ್ ಡೀಸೆಲ್‌ನಲ್ಲೂ ಪ್ರತಿ ಲೀಟರ್‌ಗೆ 100 ರೂ.ಗಳಷ್ಟು ಸರ್ಕಾರಿ ಸುಂಕವಿದೆ. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧ ಮತ್ತು ಸಂಘರ್ಷಗಳಿಂದಾಗಿ ಅಂತರರಾಷ್ಟ್ರೀಯ ತೈಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಪಾಕಿಸ್ತಾನವು ದಿನದಿಂದ ದಿನಕ್ಕೆ ಭಾರಿ ಸಂಕಷ್ಟಕ್ಕೆ ಸಿಲುಕುತ್ತಿದೆ.

ಇಂಧನ ಬೆಲೆ ಮತ್ತು ತೆರಿಗೆಗಳ ತೌಲನಿಕ ನೋಟ:

ವಿಧಾನಸಭೆ ಹೊರಗೆ ಕತ್ತೆ ಬಂಡಿ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಮತ್ತು ದೇಶಾದ್ಯಂತ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ, ಸರ್ಕಾರ ಸೆಪ್ಟೆಂಬರ್ 19 ರಿಂದ ಜಾರಿಗೆ ಬರುವಂತೆ ಬೆಲೆಯಲ್ಲಿ ಅತ್ಯಲ್ಪ ರಿಯಾಯಿತಿ ಘೋಷಿಸಿತು. ಪೆಟ್ರೋಲ್ ಬೆಲೆಯನ್ನು ಲೀಟರ್‌ಗೆ 1.65 ರೂ. ಇಳಿಸಿ 389.14 ರೂ. ಗೆ ಹಾಗೂ ಡೀಸೆಲ್ ಬೆಲೆಯನ್ನು 88 ಪೈಸೆ ಕಡಿತಗೊಳಿಸಿ 424.04 ರೂ. ಗೆ ನಿಗದಿಪಡಿಸಲಾಗಿದೆ. ಆದರೆ ಈ ಚಿಲ್ಲರೆ ಇಳಿತದಿಂದ ಜನರಿಗೇನೂ ಪರಿಹಾರ ಸಿಕ್ಕಂತಾಗಿಲ್ಲ.

ಬೈಕ್ ಹಾಗೂ ಸಣ್ಣ ಕಾರು ಚಾಲಕರಿಗೆ 'ಪರಿಹಾರ' ಯೋಜನೆ

ಅತಿಯಾದ ದರದಿಂದ ಕುಸಿದುಬಿದ್ದಿರುವ ಜನಸಾಮಾನ್ಯರನ್ನು ಸಮಾಧಾನಪಡಿಸಲು ಇಸ್ಲಾಮಾಬಾದ್ ಸರ್ಕಾರ ಪ್ರತ್ಯೇಕ 'ಸಬ್ಸಿಡಿ/ಪರಿಹಾರ ಕಾರ್ಯಕ್ರಮ'ವೊಂದನ್ನು ಘೋಷಿಸಿದೆ.

ಈ ಯೋಜನೆಯಡಿ

1. ಮೋಟಾರ್ ಸೈಕಲ್‌ಗಳು, ರಿಕ್ಷಾಗಳು ಹಾಗೂ ತ್ರಿಚಕ್ರ ವಾಹನಗಳು: ಪ್ರತಿ ತಿಂಗಳು 20 ಲೀಟರ್ ಪೆಟ್ರೋಲ್‌ಗೆ ಲೀಟರ್‌ಗೆ 100 ರೂ.ಗಳ ರಿಯಾಯಿತಿ ಪಡೆಯಬಹುದು.
2. 800 ಸಿಸಿ ವರೆಗಿನ ಸಣ್ಣ ಕಾರುಗಳು: ಪ್ರತಿ ತಿಂಗಳು 30 ಲೀಟರ್ ಪೆಟ್ರೋಲ್‌ಗೆ ಲೀಟರ್‌ಗೆ 100 ರೂ.ಗಳಂತೆ ಸಬ್ಸಿಡಿ ನೀಡಲಾಗುತ್ತದೆ.

ಯೋಜನೆ ಜಾರಿಯಲ್ಲಿ ಗೊಂದಲ: ಪೆಟ್ರೋಲ್ ಪಂಪ್‌ಗಳಲ್ಲಿ ತೊಂದರೆ

ಸರ್ಕಾರ ಘೋಷಿಸಿದ ಈ ರಿಯಾಯಿತಿ ಯೋಜನೆಯು ನೆಲಮಟ್ಟದಲ್ಲಿ ಸಂಪೂರ್ಣ ವಿಫಲವಾಗಿದೆ. ತಾಂತ್ರಿಕ ಸಿದ್ಧತೆಗಳಿಲ್ಲದೆ ಈ ಯೋಜನೆ ಜಾರಿಗೆ ತಂದಿದ್ದರಿಂದ ಪೆಟ್ರೋಲ್ ಬಂಕ್ ಮಾಲೀಕರು ತೀವ್ರ ಕಿರಿಕಿರಿ ಅನುಭವಿಸುತ್ತಿದ್ದಾರೆ. ಸರ್ಕಾರದ ಡಿಜಿಟಲ್ ವ್ಯವಸ್ಥೆಯಲ್ಲಿ ತಾಂತ್ರಿಕ ದೋಷಗಳು ಎದುರಾಗುತ್ತಿದ್ದು, ಹಲವು ಬಂಕ್‌ಗಳು ಸಬ್ಸಿಡಿ ದರದಲ್ಲಿ ಇಂಧನ ನೀಡಲು ನಿರಾಕರಿಸುತ್ತಿವೆ.

ಇದಲ್ಲದೆ, "ನಾವು ಗ್ರಾಮಾಂತರ ಜನರಿಗೆ ಕಡಿಮೆ ಬೆಲೆಗೆ ಪೆಟ್ರೋಲ್ ಮಾರಾಟ ಮಾಡಿದ ನಂತರ, ಸರ್ಕಾರದಿಂದ ನಮಗೆ ಆ ಸಬ್ಸಿಡಿ ಹಣ ಯಾವಾಗ ಮತ್ತು ಹೇಗೆ ಮರುಪಾವತಿಯಾಗುತ್ತದೆ?" ಎಂದು ಇಂಧನ ವಿತರಕರ ಸಂಘ ಪ್ರಶ್ನಿಸಿದ್ದು, ಸಬ್ಸಿಡಿ ಜಾರಿಯಲ್ಲಿ ಗೊಂದಲ ಮುಂದುವರಿದಿದೆ.

ಸರ್ಕಾರದ ವಿರುದ್ಧ ಬೀದಿಗಿಳಿದ ವಕೀಲರು, ಬಿಗಿಯಾದ ಕಠಿಣ ನಿಯಮಗಳು!

ಇಂಧನ ದರ ಏರಿಕೆಯನ್ನು ವಿರೋಧಿಸಿದ್ದು ಕೇವಲ ಪಿಟಿಐ ರಾಜಕಾರಣಿಗಳು ಮಾತ್ರವಲ್ಲ. ಪಾಕಿಸ್ತಾನ ಬಾರ್ ಕೌನ್ಸಿಲ್‌ನ ಕಾರ್ಯಕಾರಿ ಸಮಿತಿಯು ಸರ್ಕಾರದ ವಿರುದ್ಧ ಬಹಿರಂಗವಾಗಿ ತಿರುಗಿಬಿದ್ದಿದ್ದು, ಸಾಲು ಸಾಲು ಬೆಲೆ ಏರಿಕೆಯಿಂದ ಸಾರ್ವಜನಿಕರನ್ನು ಪಾರು ಮಾಡಲು ತಕ್ಷಣವೇ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ.

ಮತ್ತೊಂದೆಡೆ, ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಪಾಕಿಸ್ತಾನ ಸರ್ಕಾರ ಇಂಧನ ಉಳಿತಾಯಕ್ಕಾಗಿ ಕೆಲವು ಕಠಿಣ ನಿರ್ಧಾರಗಳನ್ನು ಕೈಗೊಂಡಿದೆ:

ದೇಶಾದ್ಯಂತ ವ್ಯಾಪಾರ ಮಳಿಗೆಗಳು ಮತ್ತು ಮಾರುಕಟ್ಟೆಗಳನ್ನು ರಾತ್ರಿ 9 ಗಂಟೆಯೊಳಗೆ ಮುಚ್ಚಲು ಆದೇಶಿಸಲಾಗಿದೆ.ಸರ್ಕಾರಿ ಹಾಗೂ ಅಧಿಕೃತ ವಾಹನಗಳಿಗೆ ನೀಡಲಾಗುತ್ತಿದ್ದ ಇಂಧನ ಹಂಚಿಕೆಯನ್ನು ಮೂರು ತಿಂಗಳ ಅವಧಿಗೆ ಶೇಕಡಾ 50 ರಷ್ಟು ಕಡಿತಗೊಳಿಸಲಾಗಿದೆ.

ಆದರೆ ಸರ್ಕಾರದ ಈ ಯಾವುದೇ ಕ್ರಮಗಳು ಸಾರ್ವಜನಿಕರ ಆಕ್ರೋಶವನ್ನು ತಣ್ಣಗಾಗಿಸಿಲ್ಲ. ಸಿಂಧ್ ಅಸೆಂಬ್ಲಿಯ ಹೊರಗೆ ಕತ್ತೆ ಬಂಡಿಗಳ ಏರಿ ಬಂದ ಶಾಸಕರ ಪ್ರತಿಭಟನೆಯು, ಪಾಕಿಸ್ತಾನಿ ರಾಜಕೀಯದಲ್ಲಿ ಆಡಳಿತಾರೂಢ ಸರ್ಕಾರದ ವೈಫಲ್ಯವನ್ನು ಎತ್ತಿಹಿಡಿಯುವ ಪ್ರಬಲ ಹೆಜ್ಜೆಯಾಗಿ ಮಾರ್ಪಟ್ಟಿದೆ.

Add Zee News as a Preferred Source