• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಅಂತರಾಷ್ಟ್ರೀಯ
  • /ವೆರಿ ವೆರಿ ಶಾಕಿಂಗ್.. ಕಾದು ಕೆಂಡವಾಗೋಯ್ತು ಭೂಮಿ.. ಲಕ್ಷ ಲಕ್ಷ ಸಾವು..!

ವೆರಿ ವೆರಿ ಶಾಕಿಂಗ್.. ಕಾದು ಕೆಂಡವಾಗೋಯ್ತು ಭೂಮಿ.. ಲಕ್ಷ ಲಕ್ಷ ಸಾವು..!

ಸಾಮಾನ್ಯವಾಗಿ ಚಳಿಗಾಲ ಎಂದರೆ ತಂಪಾದ ಗಾಳಿ, ಮುಂಜಾನೆಯ ಮಂಜು ನೆನಪಿಗೆ ಬರುತ್ತದೆ. ಆದರೆ, ಈ ಬಾರಿ ‘ಸೂಪರ್ ಎಲ್ ನಿನೋ’ ಪ್ರಭಾವದಿಂದಾಗಿ ವಾತಾವರಣದ ತಾಪಮಾನವು ವಾಡಿಕೆಗಿಂತ ಬರೋಬ್ಬರಿ 1.2 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಾಗಲಿದೆ.

Reported ByManjunath NaragundEdited ByManjunath Naragund
Published: Sep 27, 2026, 04:52 PM IST|Updated: Sep 27, 2026, 05:11 PM IST
joinshare
ವೆರಿ ವೆರಿ ಶಾಕಿಂಗ್.. ಕಾದು ಕೆಂಡವಾಗೋಯ್ತು ಭೂಮಿ.. ಲಕ್ಷ ಲಕ್ಷ ಸಾವು..!
Image Credit: Representation only

About the Author

Manjunath Naragund

Manjunath Naragund

ಮಂಜುನಾಥ ನರಗುಂದ (Manjunath Naragund) 11 ವರ್ಷಗಳಿಗೂ ಹೆಚ್ಚು ಕಾಲ ಪತ್ರಿಕೋದ್ಯಮ, ಬರವಣಿಗೆ ಮತ್ತು ಭಾಷಾಂತರ ಕ್ಷೇತ್ರದಲ್ಲಿ ವಿವಿಧ ಮಾಧ್ಯಮ ವೇದಿಕೆಗಳಲ್ಲಿ ವೃತ್ತಿಪರ ಅನುಭವವನ್ನು ಹೊಂದಿದ್ದೇನೆ. 2017ರಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಿಂಟ್‌ವೀಕ್, ಅಕ್ಷರ ಸಂಗಾತ, ರೌಂಡ್ ಟೇಬಲ್ ಇಂಡಿಯಾ ಮತ್ತು ವಾರ್ತಾ ಭಾರತಿಯಂತಹ ಪ್ರತಿಷ್ಠಿತ ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳಲ್ಲಿ ನನ್ನ ಲೇಖನಗಳು ಪ್ರಕಟವಾಗಿವೆ. ಅಲ್ಲದೆ, ನಾನು ಅನುಭವಿ ಭಾಷಾಂತರಕಾರನಾಗಿದ್ದು, ಪರಿ ಮತ್ತು ದೆಹಲಿಯ ಸೆಂಟರ್ ಫಾರ್ ಪಾಲಿಸಿ ರಿಸರ್ಚ್‌ನಂತಹ ಸಂಸ್ಥೆಗಳಲ್ಲಿ ನನ್ನ ಅನುವಾದಿತ ಲೇಖನಗಳು ಪ್ರಕಟಗೊಂಡಿವೆ.
Read More

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಚಳಿಗಾಲ ಬಂದರೆ ಸಾಕು 'ಅಬ್ಬಾ... ಸೆಖೆಯಿಂದ ಮುಕ್ತಿ ಸಿಕ್ಕಿತು' ಎಂದು ಉಸಿರು ಚೆಲ್ಲುವ ದಿನಗಳು ಇನ್ಮುಂದೆ ಗತಕಾಲವಾಗಲಿವೆಯಾ? ಹೀಗೊಂದು ಕಟು ಸತ್ಯ ಮತ್ತು ಬೆಚ್ಚಿ ಬೀಳಿಸುವ ವರದಿ ಈಗ ಇಡೀ ಜಗತ್ತನ್ನೇ ಆತಂಕಕ್ಕೆ ತಳ್ಳಿದೆ. ಚಳಿಯ ದಿನಗಳಲ್ಲೂ ಇಡೀ ಭೂಮಂಡಲ ಕಾದು ಕೆಂಡವಾಗಲಿದ್ದು, ಲಕ್ಷಾಂತರ ಜನರ ಜೀವಕ್ಕೆ ಕಂಟಕ ಎದುರಾಗಲಿದೆ ಎಂದು ಅಮೆರಿಕದ 'ಚಿಕ್ಯಾಗೊ ವಿಶ್ವವಿದ್ಯಾಲಯ'ದ 'ಕ್ಲೈಮೇಟ್ ಇಂಪ್ಯಾಕ್ಟ್ ಲ್ಯಾಬ್' ಹೆದರಿಸುವಂತಹ ಭವಿಷ್ಯ ನುಡಿದಿದೆ.

ಸಾಮಾನ್ಯವಾಗಿ ಚಳಿಗಾಲ ಎಂದರೆ ತಂಪಾದ ಗಾಳಿ, ಮುಂಜಾನೆಯ ಮಂಜು ನೆನಪಿಗೆ ಬರುತ್ತದೆ. ಆದರೆ, ಈ ಬಾರಿ ‘ಸೂಪರ್ ಎಲ್ ನಿನೋ’ ಪ್ರಭಾವದಿಂದಾಗಿ ವಾತಾವರಣದ ತಾಪಮಾನವು ವಾಡಿಕೆಗಿಂತ ಬರೋಬ್ಬರಿ 1.2 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಾಗಲಿದೆ. ಇದರ ಪರಿಣಾಮವಾಗಿ ಜಗತ್ತಿನಾದ್ಯಂತ ಅತಿಯಾದ ಬಿಸಿಲಿನ ದಿನಗಳ ಪ್ರಮಾಣದಲ್ಲಿ ಶೇಕಡಾ 44 ರಷ್ಟು ಏರಿಕೆಯಾಗಲಿದೆ. ಸೆಪ್ಟೆಂಬರ್ 2026 ರಿಂದ ಫೆಬ್ರವರಿ 2027 ರವರೆಗಿನ ಕೇವಲ 6 ತಿಂಗಳ ಅವಧಿಯಲ್ಲಿ, ಬಿಸಿಲಿನ ಬೇಗೆ ತಾಳಲಾರದೆ ಜಗತ್ತಿನಾದ್ಯಂತ ಬರೋಬ್ಬರಿ 4.51 ಲಕ್ಷಕ್ಕೂ ಹೆಚ್ಚು ಹೆಚ್ಚುವರಿ ಸಾವುಗಳು ಸಂಭವಿಸಬಹುದು ಎಂದು ರಿಸರ್ಚ್ ರಿಪೋರ್ಟ್ ಎಚ್ಚರಿಸಿದೆ.

ಈ ಭೀಕರ ಹವಾಮಾನ ವೈಪರೀತ್ಯದಿಂದ ಭಾರತವೂ ಹೊರತಾಗಿಲ್ಲ. ನಮ್ಮ ದೇಶದಲ್ಲೂ ಈ ಬಿಸಿಲಿನ ತಾಪಮಾನಕ್ಕೆ ಅಂದಾಜು 15,800 ಜನರು ಪ್ರಾಣ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಅದರಲ್ಲೂ ವಿಶೇಷವಾಗಿ ಅಪ್ಪಟ ಚಳಿಗಾಲದ ಅವಧಿಯಾದ ಡಿಸೆಂಬರ್ ಮತ್ತು ಫೆಬ್ರವರಿ ನಡುವೆಯೇ ಸುಮಾರು 7,400 ಜನರು ಬಿಸಿಲಿಗೆ ಬಲಿಯಾಗಬಹುದು ಎಂದು ಅಂದಾಜಿಸಲಾಗಿದೆ.

ಅಧಿಕ ಸಾವು ಸಂಭವಿಸಬಹುದಾದ ಪ್ರಮುಖ ದೇಶಗಳು:

ನೈಜೀರಿಯಾ: 31,400 ಸಾವುಗಳು
ಇಂಡೋನೇಷ್ಯಾ: 19,300 ಸಾವುಗಳು
ಸುಡಾನ್: 17,500 ಸಾವುಗಳು
ಭಾರತ: 15,800 ಸಾವುಗಳು
ಬ್ರೆಜಿಲ್: 13,300 ಸಾವುಗಳು

ಅಗತ್ಯ ಕ್ರಮ ಕೈಗೊಳ್ಳದಿದ್ದರೆ ಗಂಡಾಂತರ ನಿಶ್ಚಿತ!

ಪ್ರಕೃತಿಯ ಈ ಏರುಪೇರಿನಿಂದಾಗಿ ಮುಂಬರುವ ದಿನಗಳಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಉಂಟಾಗುವ ಸಾಧ್ಯತೆಯಿದೆ. ಹವಾಮಾನ ಇಲಾಖೆ ಹಾಗೂ ಸರ್ಕಾರಗಳು ಈಗಿನಿಂದಲೇ ಎಚ್ಚೆತ್ತುಕೊಂಡು, ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳದಿದ್ದರೆ ದೊಡ್ಡ ಮಟ್ಟದ ಗಂಡಾಂತರವನ್ನು ಎದುರಿಸಬೇಕಾಗುತ್ತದೆ.

Add Zee News as a Preferred Source
TAGS:
Kannada News