• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಮನರಂಜನೆ
  • /AI ಬಳಸಿ ಸಿನಿಮಾ ಮಾಡುವುದು ಅಷ್ಟು ಸುಲಭವಲ್ಲ : ನಿರ್ಮಾಪಕಿ ಲತಾ ಜಯಪ್ರಕಾಶ್‌

AI ಬಳಸಿ ಸಿನಿಮಾ ಮಾಡುವುದು ಅಷ್ಟು ಸುಲಭವಲ್ಲ : ನಿರ್ಮಾಪಕಿ ಲತಾ ಜಯಪ್ರಕಾಶ್‌

‘ಜೀ ಕನ್ನಡ ನ್ಯೂಸ್‌ ವೀರ ಕನ್ನಡಿಗ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ, ಖ್ಯಾತ ನಿರ್ಮಾಪಕಿ ಲತಾ ಜಯಪ್ರಕಾಶ್ ಅವರು ತಾವು ನಿರ್ಮಿಸುತ್ತಿರುವ ಎಐ (AI) ಆಧಾರಿತ ‘ಕಿತ್ತೂರು ರಾಣಿ ಚೆನ್ನಮ್ಮ’ ಸಿನಿಮಾದ ಕುರಿತು ಕುತೂಹಲಕಾರಿ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಹೊಸ ತಂತ್ರಜ್ಞಾನದ ಸವಾಲುಗಳು, ಚಿತ್ರದ ವಿಶೇಷತೆಗಳ ಕುರಿತು ಮಾಹಿತಿ ನೀಡಿದರು..

Written ByKrishna NK
Published: Nov 18, 2026, 19:26 IST|Updated: Nov 18, 2026, 19:28 IST
joinshare
AI ಬಳಸಿ ಸಿನಿಮಾ ಮಾಡುವುದು ಅಷ್ಟು ಸುಲಭವಲ್ಲ : ನಿರ್ಮಾಪಕಿ ಲತಾ ಜಯಪ್ರಕಾಶ್‌
Image Credit: latha jayaprakash

About the Author

Krishna NK

Krishna NK

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

2

ಭಾರತದಲ್ಲಿ ಅತಿ ಹೆಚ್ಚು ಬಳಕೆಯಾಗುವ ಪಾಸ್‌ವರ್ಡ್ ಇಲ್ಲಿದೆ ನೋಡಿ

3

ಆಸಿಯಾ ಮೇಲೆ ಸೌಂದರ್ಯಾ ಶೆಟ್ಟಿ ಹಲ್ಲೆ! ಇಂದೇ ಬಿಗ್‌ ಬಾಸ್‌ನಿಂದ ಹೊರ ಹೋಗ್ತಾರಾ?

4

'ಜೀ ನ್ಯೂಸ್' ಬಿಗ್‌ ಇಂಪ್ಯಾಕ್ಟ್: ದೆಹಲಿ ಫ್ಲಾಟ್ ಹರಾಜು ವಿವಾದದಲ್ಲಿ ತಪ್ಪೊಪ್ಪಿಕೊಂಡ NBCC

5

ಮುದ್ದು ಮಗಳ ಸಾವಿನ ನಂತರ ಬರಿಗಾಲಲ್ಲೇ ನಡೆಯುತ್ತಾರೆ ಈ ನಟ... ಕೋಟಿ ಕೋಟಿ ಒಡೆಯನಾದರೂ ಇದೆಂಥ ಸ್ಥಿತಿ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಬೆಂಗಳೂರು: ಪ್ರತಿಷ್ಠಿತ 'ಜೀ ಕನ್ನಡ ನ್ಯೂಸ್‌' ವತಿಯಿಂದ ಬೆಂಗಳೂರಿನ ಲಲಿತ್ ಅಶೋಕ್ ಹೋಟೆಲ್‌ನಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ಅದ್ಧೂರಿ ‘ಜೀ ಕನ್ನಡ ನ್ಯೂಸ್‌ ವೀರ ಕನ್ನಡಿಗ ಪ್ರಶಸ್ತಿ’ ಪ್ರದಾನ ಸಮಾರಂಭವು ಅದ್ಧೂರಿಯಾಗಿ ನೆರವೇರಿತು. ಸಮಾಜ ಸೇವೆ, ಕಲೆ, ಸಾಹಿತ್ಯ, ಸಿನಿಮಾ, ಕ್ರೀಡೆ, ಶಿಕ್ಷಣ, ವೈದ್ಯಕೀಯ, ಉದ್ಯಮ ಹಾಗೂ ಸಾರ್ವಜನಿಕ ಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ ರಾಜ್ಯದ ಮುಂಚೂಣಿಯ ಸಾಧಕರನ್ನು ಈ ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಈ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದ ಖ್ಯಾತ ನಿರ್ಮಾಪಕಿ ಲತಾ ಜಯಪ್ರಕಾಶ್‌, ತಾವು ನಿರ್ಮಿಸುತ್ತಿರುವ AI ಆಧಾರಿತ ‘ಕಿತ್ತೂರು ರಾಣಿ ಚೆನ್ನಮ್ಮ’ ಸಿನಿಮಾ ಹಾಗೂ ಅದರ ಹಿಂದಿನ ಸ್ವಾರಸ್ಯಕರ ಅನುಭವಗಳನ್ನು ಹಂಚಿಕೊಂಡರು. “ನಾವು ಒಂದು ಸಿನಿಮಾ ಅಥವಾ ಪ್ರೊಡಕ್ಷನ್ ಮಾಡಿದಾಗ ಮೊದಲನೆಯದಾಗಿ ಎಲ್ಲರೂ ಕೇಳುವ ಪ್ರಶ್ನೆ ಎಂದರೆ, ‘ಯಾಕೆ ಕಲಾವಿದರ ಹೊಟ್ಟೆ ಮೇಲೆ ಹೊಡೆಯುತ್ತೀರಿ? ನಿಮಗೆ AI ಸಿನಿಮಾ ಬೇಕಿತ್ತಾ?’ ಎಂಬುದು. ಆದರೆ, ನಿಜ ಹೇಳಬೇಕೆಂದರೆ ಸಿಸ್ಟಮ್ ಮುಂದೆ ಕೂತು ತಾಂತ್ರಿಕವಾಗಿ ಇಂಥದ್ದೇ ಸಿನಿಮಾ ಮಾಡುವುದು ಅಷ್ಟು ಸುಲಭವಲ್ಲ, ಅದೊಂದು ದೊಡ್ಡ ಸವಾಲಿನ ಪಯಣ. ಈ ಒಂದು ವರ್ಷದ ಪಯಣದಲ್ಲಿ ತಾಂತ್ರಿಕವಾಗಿ ನಾವು ಪಟ್ಟ ಶ್ರಮ ದೊಡ್ಡದು. ಅಂದುಕೊಂಡಂತೆ ಔಟ್‌ಪುಟ್ ಬರದಿದ್ದಾಗ ಪಟ್ಟ ಕಷ್ಟ ಅಷ್ಟಿಷ್ಟಲ್ಲ ಎಂದು ನೂತನ ತಂತ್ರಜ್ಞಾನದ ಪರಿಸ್ಥಿತಿಗಳನ್ನು ವಿವರಿಸಿದರು.

ಇನ್ನು ಮುಂದುವರೆದು ಮಾತನಾಡಿ.. ಜೀ ಕನ್ನಡ ನ್ಯೂಸ್ ವಾಹಿನಿಯೊಂದಿಗೆ ನನ್ನದು ಅವಿನಾಭಾವ ಸಂಬಂಧ. ರವಿ ಸರ್, ಯಶೋದಾ ಅವರು, ದಿವ್ಯಶ್ರೀ ಮ್ಯಾಮ್ ಹಾಗೂ ಪ್ರಕಾಶ್ ಸರ್ ಎಲ್ಲರೂ ನನ್ನನ್ನು ಮನೆಯ ಸದಸ್ಯರಂತೆ ಕಾಣುತ್ತಾರೆ. ಈ ಕಾರ್ಯಕ್ರಮದಲ್ಲಿ ಸಚಿವರು ರಾಮಲಿಂಗ ರೆಡ್ಡಿ ಅವರು ಅಪ್ಪಾಜಿಯಂತೆ ಎಲ್ಲರಿಗೂ ಸದಾ ಬೆಂಬಲವಾಗಿ ನಿಲ್ಲುತ್ತಾರೆ. ಇನ್ನು ಕನ್ನಡ ನಾಡಿನ ಹೆಮ್ಮೆಯ ನಟಿ ಉಮಾಶ್ರೀ ಅಮ್ಮ ಹಾಗೂ ನಿರ್ದೇಶಕ ನಾಗತ್ತಿಹಳ್ಳಿ ಚಂದ್ರಶೇಖರ್ ಸರ್ ನಮ್ಮೆಲ್ಲರಿಗೂ ಸದಾ ಸ್ಫೂರ್ತಿ ಮತ್ತು ಪ್ರೋತ್ಸಾಹ ನೀಡುತ್ತಿದ್ದಾರೆ” ಎಂದು ಕೃತಜ್ಞತೆ ಸಲ್ಲಿಸಿದರು.

ಕಾರ್ಯಕ್ರಮದ ಕೊನೆಯಲ್ಲಿ ತಮ್ಮ ಮುಂಬರುವ ಚಿತ್ರದ ಬಗ್ಗೆ ಮಾಹಿತಿ ನೀಡಿದ ಅವರು, ‘ಕಿತ್ತೂರು ರಾಣಿ ಚೆನ್ನಮ್ಮ’ ಸಿನಿಮಾವು ಬರುವ ಡಿಸೆಂಬರ್ ತಿಂಗಳಲ್ಲಿ ತೆರೆಕಾಣಲಿದೆ ಎಂದು ಘೋಷಿಸಿದರು. ಸಿನಿಮಾದಲ್ಲಿ ಬರುವ ತಂದೆ-ಮಗಳ ಬಾಂಧವ್ಯದ ಕುರಿತಾದ ಹಾಡು ಪ್ರತಿಯೊಬ್ಬರ ಮನಸ್ಸನ್ನು ಮುಟ್ಟಲಿದೆ ಎಂದ ಅವರು, ಹೆಣ್ಣುಮಕ್ಕಳು ಮತ್ತು ತಂದೆಯ ನಡುವಿನ ಭಾವನಾತ್ಮಕ ಬಂಧವನ್ನು ಸಾರುವ ಈ ಹಾಡು ಜೀವಮಾನದವರೆಗೆ ಎಲ್ಲರ ನೆನಪಿನಲ್ಲಿ ಉಳಿಯುತ್ತದೆ ಎಂದು ತಿಳಿಸಿದರು. ಅಲ್ಲದೆ, ಕನ್ನಡಿಗರೆಲ್ಲರೂ ಈ ಪ್ರಯತ್ನಕ್ಕೆ ಕೈಜೋಡಿಸಿ, ಸಿನಿಮಾ ವೀಕ್ಷಿಸಿ ಪ್ರೋತ್ಸಾಹಿಸುವಂತೆ ಅವರು ವಿನಂತಿಸಿಕೊಂಡರು.

Add Zee News as a Preferred Source
TAGS:
Cinema