• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಮನರಂಜನೆ
  • /39 ವರ್ಷಗಳ ಸಿನಿ ಪಯಣ, ಇನ್ನೂ ಸಾಧಿಸಬೇಕಾಗಿರುವುದು ತುಂಬಾ ಇದೆ : ನಟ ಶಶಿಕುಮಾರ್‌

39 ವರ್ಷಗಳ ಸಿನಿ ಪಯಣ, ಇನ್ನೂ ಸಾಧಿಸಬೇಕಾಗಿರುವುದು ತುಂಬಾ ಇದೆ : ನಟ ಶಶಿಕುಮಾರ್‌

ಕನ್ನಡ ಚಿತ್ರರಂಗದ ಜನಪ್ರಿಯ ನಟ, 'ಸುಪ್ರೀಂ ಹೀರೋ' ಶಶಿಕುಮಾರ್ ಅವರಿಗೆ 'ಜೀ ಕನ್ನಡ ನ್ಯೂಸ್‌ ವೀರ ಕನ್ನಡಿಗ ಪ್ರಶಸ್ತಿ' ಸಮಾರಂಭದಲ್ಲಿ 'ಜೀವಮಾನ ಸಾಧನೆ ಪ್ರಶಸ್ತಿ' ನೀಡಿ ಗೌರವಿಸಿತು. ಈ ವಿಶೇಷ ಸಂದರ್ಭದಲ್ಲಿ ಮಾತನಾಡಿದ ಅವರು, ತಮ್ಮ 39 ವರ್ಷಗಳ ಸುದೀರ್ಘ ಕಲಾ ಪಯಣವನ್ನು ಸ್ಮರಿಸಿ ಭಾವುಕರಾದರು. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ..

Written ByKrishna NK
Published: Nov 18, 2026, 18:05 IST|Updated: Nov 18, 2026, 18:09 IST
joinshare
39 ವರ್ಷಗಳ ಸಿನಿ ಪಯಣ, ಇನ್ನೂ ಸಾಧಿಸಬೇಕಾಗಿರುವುದು ತುಂಬಾ ಇದೆ : ನಟ ಶಶಿಕುಮಾರ್‌
Image Credit: Actor Shashikumar

About the Author

Krishna NK

Krishna NK

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

2

ಭಾರತದಲ್ಲಿ ಅತಿ ಹೆಚ್ಚು ಬಳಕೆಯಾಗುವ ಪಾಸ್‌ವರ್ಡ್ ಇಲ್ಲಿದೆ ನೋಡಿ

3

ಆಸಿಯಾ ಮೇಲೆ ಸೌಂದರ್ಯಾ ಶೆಟ್ಟಿ ಹಲ್ಲೆ! ಇಂದೇ ಬಿಗ್‌ ಬಾಸ್‌ನಿಂದ ಹೊರ ಹೋಗ್ತಾರಾ?

4

'ಜೀ ನ್ಯೂಸ್' ಬಿಗ್‌ ಇಂಪ್ಯಾಕ್ಟ್: ದೆಹಲಿ ಫ್ಲಾಟ್ ಹರಾಜು ವಿವಾದದಲ್ಲಿ ತಪ್ಪೊಪ್ಪಿಕೊಂಡ NBCC

5

ಮುದ್ದು ಮಗಳ ಸಾವಿನ ನಂತರ ಬರಿಗಾಲಲ್ಲೇ ನಡೆಯುತ್ತಾರೆ ಈ ನಟ... ಕೋಟಿ ಕೋಟಿ ಒಡೆಯನಾದರೂ ಇದೆಂಥ ಸ್ಥಿತಿ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಬೆಂಗಳೂರು: ಪ್ರತಿಷ್ಠಿತ 'ಜೀ ಕನ್ನಡ ನ್ಯೂಸ್‌' ವತಿಯಿಂದ ನಗರದ ಲಲಿತ್ ಅಶೋಕ್ ಹೋಟೆಲ್‌ನಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ಅದ್ಧೂರಿ ‘ಜೀ ಕನ್ನಡ ನ್ಯೂಸ್‌ ವೀರ ಕನ್ನಡಿಗ ಪ್ರಶಸ್ತಿ’ ಪ್ರದಾನ ಸಮಾರಂಭವು ಅತ್ಯಂತ ಯಶಸ್ವಿಯಾಗಿ ನೆರವೇರಿತು. ಈ ವಿಶೇಷ ವೇದಿಕೆಯಲ್ಲಿ ಕನ್ನಡ ಚಿತ್ರರಂಗದ ನೆಚ್ಚಿನ ನಟ, 'ಸುಪ್ರೀಂ ಹೀರೋ' ಎಂದೇ ಖ್ಯಾತರಾದ ಶಶಿಕುಮಾರ್ ಅವರಿಗೆ ಅವರ ಕಲಾ ಸೇವೆಯನ್ನು ಗುರುತಿಸಿ 'ಜೀವಮಾನ ಸಾಧನೆ ಪ್ರಶಸ್ತಿ' ನೀಡಿ ಗೌರವಿಸಲಾಯಿತು.

ಗೌರವ ಸ್ವೀಕರಿಸಿ ಮಾತನಾಡಿದ ಅವರು, ವೇದಿಕೆಯಲ್ಲಿ ಆಸೀನರಾಗಿದ್ದ ಹಿರಿಯ ನಟಿ ಹಾಗೂ ರಾಜ್ಯ ವಿಧಾನ ಪರಿಷತ್ ಉಪಸಭಾಪತಿಯಾದ ಶ್ರೀಮತಿ ಉಮಾಶ್ರೀ, ಸಚಿವರಾದ ರಾಮಲಿಂಗ ರೆಡ್ಡಿ, ಈಶ್ವರ್ ಖಂಡ್ರೆ ಸೇರಿದಂತೆ ಅನೇಕ ಗಣ್ಯರನ್ನು ಸ್ಮರಿಸಿ, ಜೀ ಕನ್ನಡ ವಾಹಿನಿಯ ಈ ಸತ್ಕಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಕುರಿತು ಮಾತನಾಡುತ್ತ.. "ಜೀ ಕನ್ನಡ ವಾಹಿನಿಯ ರವಿ ಅವರು ಕಳೆದ 15-20 ದಿನಗಳಿಂದ ನನ್ನ ಬೆನ್ನೇರಿದ್ದರು. ಆದರೆ ನಾನು ಅವರಿಗೆ ಸಿಗೋದೇ ಕಷ್ಟವಾಗಿತ್ತು. ಕೊನೆಗೆ ನಮ್ಮ ಮನೆ ಗಣಪತಿ ಪೂಜೆ ದಿನ ಬಂದು ಕೇಳಿದಾಗ, 'ಆಯ್ತು ನಾನು ಬರ್ತೀನಿ' ಎಂದು ಮಾತು ಕೊಟ್ಟೆ. ಪೂಜೆ ಮುಗಿದ ಬಳಿಕ ಊಟ ಮಾಡಿಕೊಂಡು ಹೋಗುವಂತೆ ಹೇಳಿದೆ," ಎಂದು ಹಳೆಯ ನೆನಪನ್ನು ಮೆಲಕು ಹಾಕಿದರು.

ನಾನು ಇನ್ನೂ ಸಾಧಿಸಬೇಕಾಗಿರುವುದು ತುಂಬಾ ಇದೆ
ನಾನು ಇನ್ನೂ ದೊಡ್ಡ ಸಾಧನೆ ಏನೂ ಮಾಡಿಲ್ಲ, ಸಾಧಿಸಬೇಕಾದ್ದು ತುಂಬಾ ಇದೆ. ಆದರೆ ನನ್ನನ್ನು ಗುರುತಿಸಿ ಈ ಪ್ರಶಸ್ತಿ ನೀಡಿರುವುದು ನನ್ನ ಜೀವನದಲ್ಲಿ ಎಂದಿಗೂ ಮರೆಯಲಾಗದ ಕ್ಷಣ. ನನಗಿಂತ ಹಿರಿಯರಾದ ಉಮಾಶ್ರೀ ಅವರಂತಹ ಮಹಾನ್ ಕಲಾವಿದರು ನಮ್ಮ ಜೊತೆಗಿದ್ದಾರೆ. ಅವರ ಅನುಭವ ಅಪಾರ ಎಂದು ಹಿರಿಯ ನಟಿಯವರನ್ನು ಮುಕ್ತಕಂಠದಿಂದ ಶ್ಲಾಘಿಸಿದರು.

39 ವರ್ಷಗಳ ಸುದೀರ್ಘ ಕಲಾ ಪಯಣ
ಕನ್ನಡ ಚಿತ್ರರಂಗದಲ್ಲಿ ತಮ್ಮ 39 ವರ್ಷಗಳ ಸುದೀರ್ಘ ಪಯಣವನ್ನು ನೆನಪಿಸಿಕೊಂಡ ಶಶಿಕುಮಾರ್, ಇಲ್ಲಿವರೆಗೆ ಅಂದಾಜು 150ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದೇನೆ ಎಂದರು. ಇಂದಿಗೂ ತಾವು ನಟನೆಯಲ್ಲಿ ಸಕ್ರಿಯವಾಗಿರುವುದಾಗಿ ತಿಳಿಸಿದರು. ಸಿನಿಮಾಗಳ ಶೂಟಿಂಗ್ ಸೆಟ್‌ನಲ್ಲಿ ಕಲಾವಿದರು, ತಂತ್ರಜ್ಞರು ಹಾಗೂ ನಿರ್ದೇಶಕರ ಜೊತೆ ಕಳೆಯುವ ದಿನಗಳು ಮತ್ತು ಅಲ್ಲಿನ ತಮಾಷೆಯ ಕ್ಷಣಗಳನ್ನು ನೆನಪಿಸಿಕೊಂಡು ಭಾವುಕರಾದರು. ಚಿತ್ರರಂಗವೇ ನಮ್ಮದೊಂದು ಬೇರೆ ಪ್ರಪಂಚ ಎಂದು ಬಣ್ಣಿಸಿದರು.

ಕೊನೆಯಲ್ಲಿ, ಇಂತಹ ಅದ್ಭುತ ವೇದಿಕೆಯಲ್ಲಿ ನನ್ನ ಎಲ್ಲಾ ಆತ್ಮೀಯರನ್ನು ಭೇಟಿಯಾಗಲು ಅವಕಾಶ ಮಾಡಿಕೊಟ್ಟ 'ಜೀ ಕನ್ನಡ' ವಾಹಿನಿಗೆ, ರವಿ ಅವರಿಗೆ ಹಾಗೂ ಸಂಬಂಧಪಟ್ಟ ಎಲ್ಲರಿಗೂ ತಮ್ಮ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸಿ ಮಾತು ಮುಗಿಸಿದರು. ಒಟ್ಟಾರೆಯಾಗಿ ನಟ ಶಶಿಕುಮಾರ್‌ ಅವರ ಮಾತುಗಳು ಅಲ್ಲಿದ್ದ ಜನರ ಮನ ಗೆದ್ದವು.

ಇನ್ನು ಕಾರ್ಯಕ್ರಮದಲ್ಲಿ ರಾಜ್ಯ ವಿಧಾನ ಪರಿಷತ್ ಉಪಸಭಾಪತಿಯಾದ ಶ್ರೀಮತಿ ಉಮಾಶ್ರೀ, ಸಚಿವರಾದ ರಾಮಲಿಂಗ ರೆಡ್ಡಿ, ಈಶ್ವರ್ ಖಂಡ್ರೆ ಹಾಗೂ ಚಲನಚಿತ್ರ ನಿರ್ಮಾಪಕಿ, ನಟಿ ಪ್ರಿಯಾ ಹಾಸನ್‌, ಲತಾ ಜಯಪ್ರಕಾಶ್‌ ಸೇರಿದಂತೆ ಮತ್ತಿತ್ತರು ಉಪಸ್ಥಿತರಿದ್ದರು.

Add Zee News as a Preferred Source
TAGS:
Cinema