• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಮನರಂಜನೆ
  • /ನಟ ಧನ್ವೀರ್‌ಗೌಡ ವಿರುದ್ಧ ಆಕ್ರೋಶ! ಕ್ಷಮೆ ಕೇಳದಿದ್ರೆ ಉಗ್ರ ಹೋರಾಟದ ಎಚ್ಚರಿಕೆ!

ನಟ ಧನ್ವೀರ್‌ಗೌಡ ವಿರುದ್ಧ ಆಕ್ರೋಶ! ಕ್ಷಮೆ ಕೇಳದಿದ್ರೆ ಉಗ್ರ ಹೋರಾಟದ ಎಚ್ಚರಿಕೆ!

ನಟ ದರ್ಶನ್ ಅವರ ಕುಟುಂಬದೊಂದಿಗೆ ಝೈದ್ ಖಾನ್ ಉತ್ತಮ ಒಡನಾಟ ಹೊಂದಿರುವುದನ್ನ ಧನ್ವೀರ್‌ಗೌಡ ಸಹಿಸುತ್ತಿಲ್ಲವೆಂದು ಅಭಿಮಾನಿಗಳ ಬಳಗ ಆರೋಪಿಸಿದೆ. ಝೈದ್ ಖಾನ್ ಮತ್ತು ದರ್ಶನ್ ಕುಟುಂಬದ ನಡುವಿನ ಉತ್ತಮ ಸಂಬಂಧವೇ ಧನ್ವೀರ್‌ಗೌಡ ಅಸಮಾಧಾನಕ್ಕೆ ಕಾರಣವಾಗಿದೆ ಎಂಬ ಆರೋಪವನ್ನ ವಿಜಯ್ ಕುಮಾರ್ ಮಾಡಿದ್ದಾರೆ.

Written ByPuttaraj K Alur
Published: Oct 26, 2026, 02:55 PM IST|Updated: Oct 26, 2026, 03:08 PM IST
joinshare
ನಟ ಧನ್ವೀರ್‌ಗೌಡ ವಿರುದ್ಧ ಆಕ್ರೋಶ! ಕ್ಷಮೆ ಕೇಳದಿದ್ರೆ ಉಗ್ರ ಹೋರಾಟದ ಎಚ್ಚರಿಕೆ!
Image Credit: Dhanveer Gowda Controversy

About the Author

Puttaraj K Alur

Puttaraj K Alur

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

Trending

  • News
  • Photos
  • Videos
Zee Studios ಕ್ರಿಯೇಟಿವ್ ಡೈರೆಕ್ಟರ್ ಆಗಿ ಕೋಮಲ್ ನಹ್ತಾ ನೇಮಕ: ಸಿನಿಮಾ ವ್ಯವಹಾರಕ್ಕೆ ಮತ್ತಷ್ಟು ಬಲ

Zee Studios ಕ್ರಿಯೇಟಿವ್ ಡೈರೆಕ್ಟರ್ ಆಗಿ ಕೋಮಲ್ ನಹ್ತಾ ನೇಮಕ: ಸಿನಿಮಾ ವ್ಯವಹಾರಕ್ಕೆ ಮತ್ತಷ್ಟು ಬಲ

2

DA, Wage Hike: 'ಸಮಾನ ಕೆಲಸಕ್ಕೆ ಸಮಾನ ವೇತನ'... 4,000 ಎಂಸಿಡಿ ಕಾರ್ಮಿಕರಿಗೆ ಭರ್ಜರಿ ಜಾಕ್‌ಪಾಟ್

3

ದೀಪಾವಳಿ ಹಬ್ಬಕ್ಕೆ ಕಾರು ಖರೀದಿಸುವವರಿಗೆ ಗುಡ್‌ನ್ಯೂಸ್‌! ಸನ್‌ರೂಫ್‌, ADAS, AI ಫೀಚರ್ಸ್‌ ಜೊತೆ ಬರ್ತಿದೆ ಹೊಸ ಕಾರು

4

ನಿಮ್ಮ ಅಂಗೈಯಲ್ಲಿದೆ ಶ್ರೀಮಂತರಾಗುವ ರಹಸ್ಯ? ಸಂಪತ್ತು ಸೂಚಿಸುವ ಈ 3 ಪ್ರಮುಖ ಬೆಟ್ಟಗಳ ಬಗ್ಗೆ ತಿಳಿಯಿರಿ!

5

ಸಿದ್ದರಾಮಯ್ಯ-ಡಿಕೆಶಿ ಜೋಡಿ ಒಂದೇ ತೇರಿನ ಎರಡು ಗಾಲಿಗಳು-ಸಚಿವ ಶಿವರಾಜ ತಂಗಡಗಿ

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Dhanveer Gowda Controversy: ನಟ ಝೈದ್ ಖಾನ್ ವಿರುದ್ಧ ಅವಹೇಳನಕಾರಿ ಪದಗಳನ್ನ ಬಳಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ನಟ ಧನ್ವೀರ್‌ಗೌಡ ವಿರುದ್ಧ ಮಂಡ್ಯದಲ್ಲಿ ಅಭಿಮಾನಿಗಳ ಆಕ್ರೋಶ ವ್ಯಕ್ತವಾಗಿದೆ. ಝೈದ್ ಖಾನ್ ಅವರನ್ನ ಅವಾಚ್ಯ ಶಬ್ದಗಳಿಂದ ನಿಂದಿಸಿರುವುದು ಖಂಡನೀಯವೆಂದು ಆರೋಪಿಸಿರುವ ಅಭಿಮಾನಿಗಳು, ಧನ್ವೀರ್‌ಗೌಡ ಕೂಡಲೇ ಬಹಿರಂಗ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದ್ದಾರೆ.

ಮಂಡ್ಯ ಜಿಲ್ಲಾ ಝೈದ್ ಖಾನ್ ಅಭಿಮಾನಿಗಳ ಬಳಗದ ಅಧ್ಯಕ್ಷ ಹೆಚ್.ಬಿ.ವಿಜಯ್ ಕುಮಾರ್ ಅವರು ಧನ್ವೀರ್‌ಗೌಡ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ನಾಳೆಯೊಳಗೆ ತಮ್ಮ ಹೇಳಿಕೆಯನ್ನ ಹಿಂಪಡೆದು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದ್ದಾರೆ. ಇಲ್ಲದಿದ್ದರೆ ಕಾನೂನು ಹೋರಾಟದ ಜೊತೆಗೆ ಬೀದಿಗಿಳಿದು ತೀವ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಝೈದ್ ಖಾನ್ ವಿರುದ್ಧ ಅವಹೇಳನಕಾರಿ ಪದ ಬಳಕೆ ಆರೋಪ

ನಟ ಝೈದ್ ಖಾನ್ ಅವರನ್ನ ಗುರಿಯಾಗಿಸಿಕೊಂಡು ಧನ್ವೀರ್‌ಗೌಡ ಅತ್ಯಂತ ಕೀಳುಮಟ್ಟದ ಭಾಷೆ ಹಾಗೂ ಅವಾಚ್ಯ ಶಬ್ದಗಳನ್ನ ಬಳಸಿದ್ದಾರೆ. ಒಬ್ಬ ನಟನ ಬಗ್ಗೆ ಈ ರೀತಿಯಾಗಿ ಮಾತನಾಡುವುದು ಸರಿಯಲ್ಲ. ಇತರ ಕಲಾವಿದರ ಕುರಿತು ಗೌರವಯುತವಾಗಿ ನಡೆದುಕೊಳ್ಳಬೇಕೆಂದು ಅಭಿಮಾನಿಗಳ ಬಳಗ ಆಗ್ರಹಿಸಿದೆ. ಝೈದ್ ಖಾನ್ ವಿರುದ್ಧ ಧನ್ವೀರ್‌ಗೌಡ ಬಳಸಿದ್ದಾರೆ ಎನ್ನಲಾದ ಪದಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ವಿಜಯ್ ಕುಮಾರ್, ಇಂತಹ ಹೇಳಿಕೆಗಳನ್ನ ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳಲು ಸಾಧ್ಯವಿಲ್ಲವೆಂದು ತಿಳಿಸಿದ್ದಾರೆ.

ಸಿಎಂ ಡಿಕೆಶಿ ಕುರಿತು ಹೇಳಿಕೆಗೂ ಆಕ್ರೋಶ

ಝೈದ್ ಖಾನ್ ವಿರುದ್ಧದ ಅವಹೇಳನ ಆರೋಪದ ಜೊತೆಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹಗುರವಾಗಿ ಮಾತನಾಡಿದ್ದಾರೆಂಬ ಆರೋಪವನ್ನೂ ಅಭಿಮಾನಿಗಳ ಬಳಗ ಮಾಡಿದೆ. ಮುಖ್ಯಮಂತ್ರಿ ಕುರಿತು ಈ ರೀತಿಯ ಹೇಳಿಕೆ ನೀಡಿರುವುದು ಅತ್ಯಂತ ಖಂಡನೀಯವೆಂದು ವಿಜಯ್ ಕುಮಾರ್ ಹೇಳಿದ್ದಾರೆ. ಧನ್ವೀರ್‌ಗೌಡ ತಮ್ಮ ಹೇಳಿಕೆಗಳನ್ನ ಹಿಂಪಡೆಯಬೇಕು. ಝೈದ್ ಖಾನ್ ಹಾಗೂ ಮುಖ್ಯಮಂತ್ರಿ ಕುರಿತು ಮಾತನಾಡಿದ್ದಾರೆ ಎನ್ನಲಾದ ವಿಚಾರಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದ್ದಾರೆ.

ನಾಳೆಯೊಳಗೆ ಕ್ಷಮೆ ಕೇಳದಿದ್ದರೆ ಹೋರಾಟದ ಎಚ್ಚರಿಕೆ

ಧನ್ವೀರ್‌ಗೌಡಗೆ ನಾಳೆಯವರೆಗೆ ಗಡುವು ನೀಡಿರುವ ಅಭಿಮಾನಿಗಳ ಬಳಗ, ಅಷ್ಟರೊಳಗೆ ಬಹಿರಂಗ ಕ್ಷಮೆಯಾಚಿಸದಿದ್ದರೆ ಮುಂದಿನ ಹೋರಾಟ ಆರಂಭಿಸುವುದಾಗಿ ಎಚ್ಚರಿಸಿದೆ. ಕ್ಷಮೆಯಾಚನೆಗೆ ಮುಂದಾಗದಿದ್ದರೆ ಕಾನೂನು ಹೋರಾಟ ನಡೆಸಲಾಗುವುದು. ಇದರ ಜೊತೆಗೆ ಮಂಡ್ಯದಲ್ಲಿ ಬೀದಿಗಿಳಿದು ತೀವ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಹೆಚ್.ಬಿ.ವಿಜಯ್ ಕುಮಾರ್ ತಿಳಿಸಿದ್ದಾರೆ. ಅಲ್ಲದೆ ಈ ಎಚ್ಚರಿಕೆಯನ್ನೂ ಮೀರಿ ಧನ್ವೀರ್‌ಗೌಡ ಮಂಡ್ಯ ಜಿಲ್ಲೆಗೆ ಬಂದರೆ ಅದರ ಪರಿಣಾಮ ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.

ನಟ ದರ್ಶನ್ ಕುಟುಂಬಕ್ಕೆ ಮಾನಸಿಕ ಕಿರುಕುಳ ಆರೋಪ

ನಟ ದರ್ಶನ್ ಅವರ ಕುಟುಂಬದೊಂದಿಗೆ ಝೈದ್ ಖಾನ್ ಉತ್ತಮ ಒಡನಾಟ ಹೊಂದಿರುವುದನ್ನ ಧನ್ವೀರ್‌ಗೌಡ ಸಹಿಸುತ್ತಿಲ್ಲವೆಂದು ಅಭಿಮಾನಿಗಳ ಬಳಗ ಆರೋಪಿಸಿದೆ. ಝೈದ್ ಖಾನ್ ಮತ್ತು ದರ್ಶನ್ ಕುಟುಂಬದ ನಡುವಿನ ಉತ್ತಮ ಸಂಬಂಧವೇ ಧನ್ವೀರ್‌ಗೌಡ ಅಸಮಾಧಾನಕ್ಕೆ ಕಾರಣವಾಗಿದೆ ಎಂಬ ಆರೋಪವನ್ನ ವಿಜಯ್ ಕುಮಾರ್ ಮಾಡಿದ್ದಾರೆ. ಇದೇ ವಿಚಾರವಾಗಿ ಧನ್ವೀರ್‌ಗೌಡ ದರ್ಶನ್ ಕುಟುಂಬದ ಸದಸ್ಯರಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದೂ ಆರೋಪಿಸಿದ್ದಾರೆ. ಈ ರೀತಿಯ ಘಟನೆಗಳು ಮತ್ತೆ ನಡೆಯದಂತೆ ತಡೆಯಲು ಧನ್ವೀರ್‌ಗೌಡನನ್ನ ಕೂಡಲೇ ಬಂಧಿಸಬೇಕೆಂದು ಅಭಿಮಾನಿಗಳ ಬಳಗ ಒತ್ತಾಯಿಸಿದೆ.

ನಟ ಧನ್ವೀರ್‌ಗೌಡ ಬಂಧನಕ್ಕೆ ಆಗ್ರಹ

ಧನ್ವೀರ್‌ಗೌಡ ವರ್ತನೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ವಿಜಯ್ ಕುಮಾರ್, ಹಣ ಮತ್ತು ಆಸ್ತಿಯ ದುರಹಂಕಾರದಿಂದ ಇತರರ ಬಗ್ಗೆ ಲಘುವಾಗಿ ಮಾತನಾಡುತ್ತಿದ್ದಾರೆಂದು ಆರೋಪಿಸಿದ್ದಾರೆ. ಒಂದೆರಡು ಪ್ಲಾಪ್ ಸಿನಿಮಾಗಳನ್ನ ಮಾಡಿರುವ ಧನ್ವೀರ್‌ಗೌಡ ಇತರ ಕಲಾವಿದರನ್ನ ಅವಮಾನಿಸುವ ರೀತಿಯಲ್ಲಿ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ಕಲಾವಿದರ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನ ನೀಡುವುದನ್ನ ನಿಲ್ಲಿಸಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಒಟ್ನಲ್ಲಿ ನಟ ಝೈದ್ ಖಾನ್ ವಿರುದ್ಧ ಅವಹೇಳನಕಾರಿ ಭಾಷೆ ಬಳಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಧನ್ವೀರ್‌ಗೌಡ ವಿರುದ್ಧ ಮಂಡ್ಯದಲ್ಲಿ ಅಭಿಮಾನಿಗಳ ಅಸಮಾಧಾನ ವ್ಯಕ್ತವಾಗಿದೆ. ಬಹಿರಂಗ ಕ್ಷಮೆಯಾಚನೆ, ಹೇಳಿಕೆ ಹಿಂಪಡೆಯುವುದು ಹಾಗೂ ಬಂಧನಕ್ಕೆ ಆಗ್ರಹಿಸಿರುವ ಅಭಿಮಾನಿಗಳ ಬಳಗ, ಬೇಡಿಕೆ ಈಡೇರದಿದ್ದರೆ ಕಾನೂನು ಹೋರಾಟ ಮತ್ತು ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದೆ.

Add Zee News as a Preferred Source
TAGS:
Cinema
Kannada News