SOCIAL MEDIA

Newsletter

PARTNER SITES
Select Language Select State

ರಾಮಾಯಣ ಸಿನಿಮಾ ನೋಡಿ ಕಣ್ಣೀರು ಹಾಕಿದ್ದ ಯಶ್ ಮಗ ಯಥರ್ವ್

yashs son yathav crying : ರಾಮಾಯಣ ಸಿನಿಮಾ ನೋಡಿ ಯಶ್ ಮಗ ಯಥರ್ವ್ ಕಣ್ಣೀರು ಹಾಕಿದ್ದಾನೆ ಅಷ್ಟಕ್ಕೂ ಯಥರ್ವ ಹೇಳಿದ್ದೇನು? ಇಲ್ಲಿದೆ ಇಂಟ್ರೆಸ್ಟಿಂಗ್ ಸ್ಟೋರಿ.

Written By Ramya. R. Gowda
Published: Nov 02, 2026, 06:18 PM IST | Updated: Nov 02, 2026, 06:25 PM IST
Join

yashs son yathav crying : ರಾಕಿಂಗ್ ಸ್ಟಾರ್ ಯಶ್ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಬಹುನಿರೀಕ್ಷಿತ ಸಿನಿಮಾ ರಾಮಾಯಣ. ಈ ಸಿನಿಮಾದಲ್ಲಿ ರಾವಣ ಜಟಾಯುವನ್ನು ಕೊಲ್ಲುವ ದೃಶ್ಯವೊಂದನ್ನು ನೋಡಿದ ಯಶ್ ಪುತ್ರ ಯಥರ್ವ ಕಣ್ಣೀರು ಹಾಕಿದ್ದಾನಂತೆ. ಅಷ್ಟೇ ಅಲ್ಲ, ಸ್ವಂತ ತಂದೆಯನ್ನೇ ಪ್ರಶ್ನೆ ಮಾಡಿದ್ದಾನಂತೆ. ಈ ಮುದ್ದಾದ ಘಟನೆಯನ್ನು ನಟಿ ಸಾಯಿ ಪಲ್ಲವಿ ಬಹಿರಂಗಪಡಿಸಿದ್ದಾರೆ. ಅಷ್ಟಕ್ಕೂ ಯಥರ್ವ ಹೇಳಿದ್ದೇನು? ಇಲ್ಲಿದೆ ಇಂಟ್ರೆಸ್ಟಿಂಗ್ ಸ್ಟೋರಿ.


ಬಾಲಿವುಡ್‌ನ ಬಹುನಿರೀಕ್ಷಿತ ಸಿನಿಮಾ ರಾಮಾಯಣ.. ಸಿನಿಮಾ ಬಿಡುಗಡೆಗೂ ಮುನ್ನವೇ ಭಾರೀ ಸದ್ದು ಮಾಡ್ತಿದೆ. ರಣಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಹಾಗೂ ರಾಕಿಂಗ್ ಸ್ಟಾರ್ ಯಶ್ ರಾವಣನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಚಿತ್ರದ ಟೀಸರ್ ಹಾಗೂ ಪಾತ್ರಗಳ ಬಗ್ಗೆ ಸಿನಿಪ್ರಿಯರಲ್ಲಿ ಭಾರೀ ಕುತೂಹಲ ಮನೆಮಾಡಿದೆ.ಇತ್ತೀಚೆಗೆ ಲಾಸ್ ಏಂಜಲೀಸ್‌ನ ಅಕಾಡೆಮಿ ಮ್ಯೂಸಿಯಂನಲ್ಲಿ ನಡೆದ ರಾಮಾಯಣ ಚಿತ್ರದ ವಿಶ್ವ ಪ್ರೀಮಿಯರ್‌ನಲ್ಲಿ ಯಶ್ ಅವರ ಮಕ್ಕಳಾದ ಐರಾ ಮತ್ತು ಯಥರ್ವ ಕೂಡ ಸಿನಿಮಾ ವೀಕ್ಷಿಸಿದ್ದಾರೆ. ಸಿನಿಮಾ ನೋಡಿದ ಬಳಿಕ ಮಕ್ಕಳಲ್ಲಿ ಸಾಕಷ್ಟು ಪ್ರಶ್ನೆಗಳು ಮೂಡಿದ್ದವಂತೆ. ಅದರಲ್ಲೂ ಮಗ ಯಥರ್ವನ ಪ್ರತಿಕ್ರಿಯೆ ಕಂಡು ಯಶ್ ಕೂಡ ಅಚ್ಚರಿಗೊಂಡಿದ್ದಾರಂತೆ.

 

ಹೌದು.. ಸಿನಿಮಾದಲ್ಲಿ ರಾವಣ ಜಟಾಯುವನ್ನು ಕೊಲ್ಲುವ ದೃಶ್ಯವನ್ನು ನೋಡಿದ ಯಥರ್ವ ಕಣ್ಣೀರು ಹಾಕಲು ಶುರು ಮಾಡಿದ್ದಾನಂತೆ. ಅಷ್ಟೇ ಅಲ್ಲ, ತಂದೆ ಯಶ್ ಬಳಿಯೇ ಹೋಗಿ, 'ನೀನು ಆ ಪಕ್ಷಿಯನ್ನು ಕೊಲ್ಲುವುದು ನನಗೆ ಇಷ್ಟವಾಗಲಿಲ್ಲ. ಸಿನಿಮಾದಲ್ಲೂ ನೀವು ಪಕ್ಷಿಯನ್ನು ಕೊಲ್ಲಬಾರದಿತ್ತು' ಎಂದು ಹೇಳಿದ್ದಾನಂತೆ.ಈ ಘಟನೆಯನ್ನು ನಟಿ ಸಾಯಿ ಪಲ್ಲವಿ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ. ಯಥರ್ವನಿಗೆ ಅದು ತನ್ನ ತಂದೆಯ ಪಾತ್ರ ಎಂಬ ಅರಿವಿದ್ದರೂ, ಪಕ್ಷಿಯನ್ನು ಕೊಂದ ದೃಶ್ಯವನ್ನು ಒಪ್ಪಿಕೊಳ್ಳಲು ಸಾಧ್ಯವಾಗಲಿಲ್ಲ. ಆತನ ಮುಗ್ಧ ಪ್ರತಿಕ್ರಿಯೆ ಎಲ್ಲರ ಮನಸ್ಸನ್ನೂ ಗೆದ್ದಿದೆ. ತಂದೆ ರಾವಣನ ಪಾತ್ರದಲ್ಲಿ ನಟಿಸಿದರೂ, ಮಗನಿಗೆ ಮಾತ್ರ ಜಟಾಯುವಿನ ನೋವೇ ಹೆಚ್ಚಾಗಿತ್ತು.

ಯಶ್ ನ ರಾವಣ ಜಟಾಯುವನ್ನು ಕೊಲ್ಲುವ ದೃಶ್ಯವನ್ನು ನೋಡುತ್ತಾ ಯಶ್ ನ ಮಗ ಯಥರ್ವ ಅಳಲು ಪ್ರಾರಂಭಿಸಿದ ರೀತಿಯನ್ನು ಸಾಯಿ ಪಲ್ಲವಿ ನೆನಪಿಸಿಕೊಂಡರು ಮತ್ತು "ಅವನು ಯಶ್ ಗೆ 'ನೀನು ಆ ಪಕ್ಷಿಯನ್ನು ಕೊಲ್ಲುವುದು ನನಗೆ ಇಷ್ಟವಾಗಲಿಲ್ಲ' ಎಂದು ಹೇಳಿದನು" ಎಂದು ಬಹಿರಂಗಪಡಿಸಿದರು. ಅದು ಅವನ ತಂದೆ ಎಂದು ಅವನಿಗೆ ತಿಳಿದಿದೆ, ಅವನು ಮೊದಲು ಚಲನಚಿತ್ರಗಳನ್ನು ಮಾಡಿದ್ದಾನೆ ಮತ್ತು ಬಹುಶಃ ಅವು ನಟಿಸುತ್ತಿರಬಹುದು. ಆದರೆ ಅವನು, 'ಇಲ್ಲ, ಅದು ಒಳ್ಳೆಯದಲ್ಲ. ಚಲನಚಿತ್ರದಲ್ಲಿಯೂ ನೀವು ಪಕ್ಷಿಯನ್ನು ಕೊಲ್ಲುವುದು ಒಳ್ಳೆಯದಲ್ಲ. ನೀವು ಹಾಗೆ ಮಾಡಬಾರದಿತ್ತು ಎಂದು ನಾನು ಭಾವಿಸುತ್ತೇನೆ.' ಅದು ತುಂಬಾ ಸುಂದರವಾದ ಕ್ಷಣವಾಗಿತ್ತು," ಎಂದು ಸಾಯಿ ಹೇಳಿದರು. ಪಕ್ಷಿಯನ್ನು ಕೊಂದ ದೃಶ್ಯವನ್ನು ಒಪ್ಪಿಕೊಳ್ಳಲು ಸಾಧ್ಯವಾಗಲಿಲ್ಲ. ಆತನ ಮುಗ್ಧ ಪ್ರತಿಕ್ರಿಯೆ ಎಲ್ಲರ ಮನಸ್ಸನ್ನೂ ಗೆದ್ದಿದೆ. ತಂದೆ ರಾವಣನ ಪಾತ್ರದಲ್ಲಿ ನಟಿಸಿದರೂ, ಮಗನಿಗೆ ಮಾತ್ರ ಜಟಾಯುವಿನ ನೋವೇ ಹೆಚ್ಚಾಗಿತ್ತು.
 

ಇನ್ನು ರಾಮಾಯಣ ಸಿನಿಮಾ ಎರಡು ಭಾಗಗಳಲ್ಲಿ ನಿರ್ಮಾಣವಾಗುತ್ತಿದೆ. ನಮಿತ್ ಮಲ್ಹೋತ್ರಾ ಅವರ ಪ್ರೈಮ್ ಫೋಕಸ್ ಸ್ಟುಡಿಯೋಸ್, ಡಿಎನ್‌ಇಜಿ ಹಾಗೂ ಯಶ್ ಅವರ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಈ ಚಿತ್ರವನ್ನು ನಿರ್ಮಿಸುತ್ತಿವೆ. ರಣಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ, ಯಶ್ ರಾವಣನಾಗಿ, ರವಿ ದುಬೆ ಲಕ್ಷ್ಮಣನಾಗಿ ಹಾಗೂ ಸನ್ನಿ ಡಿಯೋಲ್ ಹನುಮಂತನಾಗಿ ನಟಿಸುತ್ತಿದ್ದಾರೆ.ಮೊದಲ ಭಾಗ 2026ರ ನವೆಂಬರ್ 5ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ಇನ್ನು ಎರಡನೇ ಭಾಗ 2027ರ ದೀಪಾವಳಿ ವೇಳೆಗೆ ತೆರೆಗೆ ಬರಲಿದೆ ಎನ್ನಲಾಗಿದೆ. ಬಿಡುಗಡೆಗೂ ಮುನ್ನವೇ ಚಿತ್ರದ ಮುಂಗಡ ಬುಕಿಂಗ್ ಮತ್ತು ವಿದೇಶಿ ಮಾರುಕಟ್ಟೆಯ ಪ್ರತಿಕ್ರಿಯೆ ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ.

ಒಟ್ಟಿನಲ್ಲಿ, ತೆರೆ ಮೇಲೆ ರಾವಣನಾಗಿ ಅಬ್ಬರಿಸಲು ಸಜ್ಜಾಗಿರುವ ಯಶ್‌ಗೆ ಮನೆಯಲ್ಲೇ ಮಗನಿಂದ ಕ್ಲಾಸ್ ಸಿಕ್ಕಿದೆ. ಆದರೆ ಯಥರ್ವನ ಈ ಮುಗ್ಧ ಪ್ರತಿಕ್ರಿಯೆ ಮಾತ್ರ ಅಭಿಮಾನಿಗಳ ಮನ ಗೆದ್ದಿದೆ. ತಂದೆಯ ಪಾತ್ರಕ್ಕಿಂತಲೂ ಪಕ್ಷಿಯ ಜೀವ ಮುಖ್ಯ ಎಂದು ಹೇಳಿದ ಪುಟ್ಟ ಬಾಲಕನ ಮಾತು ಈಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.
 

Add Zee News as a Preferred Source
TAGS:

About the Author

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.

ZEENEWS TRENDING STORIES