SOCIAL MEDIA

Newsletter

PARTNER SITES
Select Language Select State

ಯಶ್‌ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌... ರಾಕಿ ಭಾಯ್‌ ಹೊಸ ಸಿನಿಮಾ ಬಗ್ಗೆ ಹೊರ ಬಿತ್ತು ಬಿಗ್‌ ನ್ಯೂಸ್‌..!

'ಟಾಕ್ಸಿಕ್' ಸಿನಿಮಾ ನಂತರ ನಿತೇಶ್ ತಿವಾರಿ ಅವರ ಬಹುನಿರೀಕ್ಷಿತ 'ರಾಮಾಯಣ' ಚಿತ್ರಗಳಲ್ಲಿ ಬ್ಯುಸಿಯಾಗಿರುವ ಯಶ್, ಇದೀಗ ಟಾಲಿವುಡ್‌ನ ಹೊಸ ನಿರ್ದೇಶಕರೊಬ್ಬರ ಜೊತೆ ಕೈಜೋಡಿಸಲಿದ್ದಾರೆ ಎಂಬ ಹೊಸ ಸುದ್ದಿ ಸಿನಿಮಾ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

Written By Krishna NK
Published: Oct 10, 2026, 08:05 PM IST | Updated: Oct 10, 2026, 08:10 PM IST
Image Credit: Yash next movie updates
Join

Yash next movie : ಗೀತು ಮೋಹನ್ ದಾಸ್ ನಿರ್ದೇಶನದ 'ಟಾಕ್ಸಿಕ್' ಚಿತ್ರದ ಬಳಿಕ, ಯಶ್ ಯಾವ ನಿರ್ದೇಶಕರೊಂದಿಗೆ ಹೊಸ ಚಿತ್ರ ಮಾಡಲಿದ್ದಾರೆ ಎಂಬ ಬಗ್ಗೆ ಅವರ ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದಾರೆ.. ಅಲ್ಲದೆ, ಈ ಕುರಿತ ಹೊಸ ಹೊಸ ಸುದ್ದಿಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ. ಇದರ ಬೆನ್ನಲ್ಲೇ, ಟಾಲಿವುಡ್‌ನ ಯುವ ನಿರ್ದೇಶಕರೊಬ್ಬರ ಜೊತೆ ಯಶ್ ಮುಂದಿನ ಸಿನಿಮಾ ಇರಲಿದೆ ಎಂಬ ವರದಿಗಳು ಸಿನಿವಲಯದಲ್ಲಿ ಕಾಡ್ಗಿಚ್ಚಿನಂತೆ ಹರಡಿವೆ.. ಹೆಚ್ಚಿನ ಮಾಹಿತಿ ಇಲ್ಲಿದೆ..

ಹನುಮ ರೆಡ್ಡಿ ಯಕ್ಕಂಡಿ ಜೊತೆ ಹೊಸ ಪ್ರಾಜೆಕ್ಟ್?
ಇತ್ತೀಚಿನ ವರದಿಗಳ ಪ್ರಕಾರ, ಮಂಜು ಮನೋಜ್ ನಟನೆಯ 'ಡೇವಿಡ್ ರೆಡ್ಡಿ' ಚಿತ್ರದ ನಿರ್ದೇಶಕ ಹನುಮ ರೆಡ್ಡಿ ಯಕ್ಕಂಡಿ ಇತ್ತೀಚೆಗೆ ನಟ ಯಶ್ ಅವರಿಗೆ ಒಂದು ಕಥೆ ಹೇಳಿದ್ದಾರೆ ಎನ್ನಲಾಗಿದೆ. ರಾಕಿ ಭಾಯ್‌ಗೆ ಈ ಕಥೆ ಬಹಳ ಇಷ್ಟವಾಗಿದ್ದು, ಇವರಿಬ್ಬರ ಕಾಂಬಿನೇಷನ್‌ನಲ್ಲಿ ಹೊಸ ಪ್ಯಾನ್-ಇಂಡಿಯಾ ಸಿನಿಮಾ ಸೆಟ್ಟೇರಲಿದೆ ಎಂದು ಸಿನಿರಂಗದಲ್ಲಿ ಚರ್ಚೆ ಜೋರಾಗಿದೆ. ಆದರೆ, ಈ ಬಗ್ಗೆ ಯಶ್ ಅಥವಾ ನಿರ್ದೇಶಕರ ಕಡೆಯಿಂದ ಯಾವುದೇ ಅಧಿಕೃತ ಘೋಷಣೆ ಹೊರಬಂದಿಲ್ಲ.

‘ಡೇವಿಡ್ ರೆಡ್ಡಿ’ ಚಿತ್ರದ ವಿಶೇಷತೆಗಳು
ಹನುಮ ರೆಡ್ಡಿ ಯಕ್ಕಂಡಿ ನಿರ್ದೇಶಿಸುತ್ತಿರುವ ಚೊಚ್ಚಲ ಚಿತ್ರ ‘ಡೇವಿಡ್ ರೆಡ್ಡಿ’ ದೊಡ್ಡ ತಾರಾಬಳಗವನ್ನೇ ಹೊಂದಿದೆ. ಈ ಚಿತ್ರದಲ್ಲಿ ಮಂಜು ಮನೋಜ್ ಜೊತೆಗೆ ಹಿರಿಯ ನಟರಾದ ಸಮುತಿರಕಣಿ ಮತ್ತು ರಮ್ಯಾ ಕೃಷ್ಣನ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ವಿಶೇಷವೆಂದರೆ, 'ಕೆಜಿಎಫ್' ಖ್ಯಾತಿಯ ರವಿ ಬಸ್ರೂರ್ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುತ್ತಿದ್ದು, ಆಚಾರ್ಯ ವೇಣು ಛಾಯಾಗ್ರಹಣ ಹಾಗೂ ಸುಪ್ರೀಂ ಸುಂದರ್ ಸಾಹಸ ನಿರ್ದೇಶನವಿದೆ.

ಸದ್ಯ ಯಶ್ ಅವರು ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ 'ರಾಮಾಯಣ' ಚಿತ್ರದಲ್ಲಿ ರಾವಣನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ನಿರ್ಮಾಣದಲ್ಲೂ ಯಶ್ ಪಾಲುದಾರರಾಗಿದ್ದಾರೆ. ಒಂದೆಡೆ ಬಿಗ್ ಬಜೆಟ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಯಶ್, ಟಾಲಿವುಡ್‌ನ ಈ ಹೊಸ ನಿರ್ದೇಶಕ ಹನುಮ ರೆಡ್ಡಿ ಅವರೊಂದಿಗೆ ನಿಜಕ್ಕೂ ಕೈಜೋಡಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.. ಈ ಕುರಿತು ಚಿತ್ರತಂಡದಿಂದ ಅಧಿಕೃತ ಮಾಹಿತಿ ಬರುವವರೆಗೆ ಇದು ಕೇವಲ ವದಂತಿಯಷ್ಟೇ..

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ZEENEWS TRENDING STORIES