• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಮನರಂಜನೆ
  • /ಸಾಯಿ ಪಲ್ಲವಿ ಕೈಯಲ್ಲಿರುವ ರುದ್ರಾಕ್ಷ ಮಾಲೆಯ ಹಿಂದಿದೆ ಇವರ ನೆನಪು!

ಸಾಯಿ ಪಲ್ಲವಿ ಕೈಯಲ್ಲಿರುವ ರುದ್ರಾಕ್ಷ ಮಾಲೆಯ ಹಿಂದಿದೆ ಇವರ ನೆನಪು!

ಸಾಯಿ ಪಲ್ಲವಿ ಸದಾ ಧರಿಸುವ ಈ ರುದ್ರಾಕ್ಷ ಮಾಲೆಯ ವಿಶೇಷತೆ ಏನು? ಇದರ ಹಿಂದೆ ಯಾರ ನೆನಪಿದೆ ಗೊತ್ತಾ?

Written ByChetana Devarmani
Published: Nov 08, 2026, 21:47 IST|Updated: Nov 08, 2026, 21:50 IST
joinshare
ಸಾಯಿ ಪಲ್ಲವಿ ಕೈಯಲ್ಲಿರುವ ರುದ್ರಾಕ್ಷ ಮಾಲೆಯ ಹಿಂದಿದೆ ಇವರ ನೆನಪು!

About the Author

Chetana Devarmani

Chetana Devarmani

"*ಚೇತನಾ ದೇವರಮನಿ* ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್‌ʼ ವೆಬ್‌ನಲ್ಲಿ Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 8 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೀಡೆ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್‌ ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ ತಂಡ ಸೇರಿದರು. ಪ್ರಸ್ತುತ ಕಳೆದ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ ವೆಬ್‌ ಟೀಮ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಚೇತನಾ ದೇವರಮನಿ ತಮ್ಮ ಸಂಶೋಧನಾ ಕೌಶಲ್ಯ ಮತ್ತು ಬರವಣಿಗೆ ಶೈಲಿಯಿಂದ ಎಲ್ಲರ ಗಮನಸೆಳೆದಿದ್ದು, ಹೆಸರುವಾಸಿಯಾಗಿದ್ದಾರೆ. ಚೇತನಾ ದೇವರಮನಿಯವರ ಬರವಣಿಗೆಯ ಶೈಲಿ ಆಕರ್ಷಕ ಹಾಗೂ ತಿಳಿವಳಿಕೆಯಿಂದ ಕೂಡಿದ್ದು ನಿಷ್ಠಾವಂತ ಓದುಗರನ್ನು ಕಟ್ಟಿಕೊಳ್ಳಲು ಸಹಕಾರಿಯಾಗಿದೆ. ಚೇತನಾ ದೇವರಮನಿ ಅವರು ಬಿಡುವಿನ ವೇಳೆಯಲ್ಲಿ ಸಿನಿಮಾ ನೋಡುವುದು, ಪುಸ್ತಕ ಓದುವುದು, ಪ್ರವಾಸಕ್ಕೆ ಹೋಗುವುದನ್ನು ಆನಂದಿಸುತ್ತಾರೆ. ಈ ಚಟುವಟಿಕೆಗಳು ಅವರನ್ನು ರಿಫ್ರೆಶ್ ಮಾಡುತ್ತದೆ. ಇದೇ ಅವರಲ್ಲಿ ಚೈತನ್ಯ ತುಂಬುತ್ತದೆ. ಇದರಿಂದಲೇ ಅವರು ಕ್ರಿಯಾಶಿಲರಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ. ತಮ್ಮ ವಿಶ್ವಾಸಾರ್ಹ ಮಾಹಿತಿಪೂರ್ಣ ಬರಹಗಳ ಮೂಲಕ ಚೇತನಾ ದೇವರಮನಿಯವರು ಓದುಗ ವಲಯವನ್ನು ಪರಿಣಾಮಕಾರಿಯಾಗಿ ತಲುಪಲು ಶ್ರಮಿಸುತ್ತಿದ್ದಾರೆ. ಒಟ್ಟಾರೆ ಹೇಳುವುದಾದರೆ, ಚೇತನಾ ದೇವರಮನಿ ಅತ್ಯಂತ ನುರಿತ ಮತ್ತು ಅನುಭವಿ ಪತ್ರಕರ್ತರು, ಅವರು ತಮ್ಮ ಕೆಲಸದ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದಾರೆ."
Read More

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

2

ಭಾರತದಲ್ಲಿ ಅತಿ ಹೆಚ್ಚು ಬಳಕೆಯಾಗುವ ಪಾಸ್‌ವರ್ಡ್ ಇಲ್ಲಿದೆ ನೋಡಿ

3

ಆಸಿಯಾ ಮೇಲೆ ಸೌಂದರ್ಯಾ ಶೆಟ್ಟಿ ಹಲ್ಲೆ! ಇಂದೇ ಬಿಗ್‌ ಬಾಸ್‌ನಿಂದ ಹೊರ ಹೋಗ್ತಾರಾ?

4

'ಜೀ ನ್ಯೂಸ್' ಬಿಗ್‌ ಇಂಪ್ಯಾಕ್ಟ್: ದೆಹಲಿ ಫ್ಲಾಟ್ ಹರಾಜು ವಿವಾದದಲ್ಲಿ ತಪ್ಪೊಪ್ಪಿಕೊಂಡ NBCC

5

ಮುದ್ದು ಮಗಳ ಸಾವಿನ ನಂತರ ಬರಿಗಾಲಲ್ಲೇ ನಡೆಯುತ್ತಾರೆ ಈ ನಟ... ಕೋಟಿ ಕೋಟಿ ಒಡೆಯನಾದರೂ ಇದೆಂಥ ಸ್ಥಿತಿ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Sai Pallavi Rudraksha Mala: ರಾಮಾಯಣ ಸಿನಿಮಾದಲ್ಲಿ ಸೀತೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ನಟಿ ಸಾಯಿ ಪಲ್ಲವಿ ಇದೀಗ ಸಾಕಷ್ಟು ಸುದ್ದಿಯಲ್ಲಿದ್ದಾರೆ. ತಮ್ಮ ಸಹಜ ಅಭಿನಯ, ಸರಳ ವ್ಯಕ್ತಿತ್ವ ಮತ್ತು ಸಾಂಪ್ರದಾಯಿಕ ನೋಟದಿಂದಲೇ ಅಭಿಮಾನಿಗಳ ಮನಗೆದ್ದಿರುವ ಈ ನಟಿಯ ಬಗ್ಗೆ ದಿನಕ್ಕೊಂದು ವಿಚಾರ ಚರ್ಚೆಯಾಗುತ್ತಿದೆ. ಆದರೆ ಇತ್ತೀಚೆಗೆ ಅಭಿಮಾನಿಗಳ ಗಮನ ಸೆಳೆದಿರುವುದು ಅವರ ಕೈಯಲ್ಲಿರುವ ರುದ್ರಾಕ್ಷ ಜಪಮಾಲೆ. ಸಿನಿಮಾ ಕಾರ್ಯಕ್ರಮಗಳಿರಲಿ, ಸಂದರ್ಶನಗಳಿರಲಿ ಅಥವಾ ಸಾಮಾನ್ಯ ಸಂದರ್ಭಗಳಿರಲಿ, ಸಾಯಿ ಪಲ್ಲವಿ ಕೈಯಲ್ಲಿ ಈ ಮಾಲೆ ಕಾಣಿಸಿಕೊಳ್ಳುತ್ತದೆ. ಹಾಗಾದರೆ ಅವರು ಸದಾ ಧರಿಸುವ ಈ ರುದ್ರಾಕ್ಷ ಮಾಲೆಯ ವಿಶೇಷತೆ ಏನು? ಇದರ ಹಿಂದೆ ಯಾರ ನೆನಪಿದೆ ಗೊತ್ತಾ?

ದಕ್ಷಿಣ ಭಾರತದ ಚಿತ್ರರಂಗದಲ್ಲಿ ಸಾಯಿ ಪಲ್ಲವಿ ತಮ್ಮದೇ ಆದ ವಿಶಿಷ್ಟ ಸ್ಥಾನವನ್ನು ಹೊಂದಿದ್ದಾರೆ. ಗ್ಲಾಮರ್‌ಗಿಂತ ಸಹಜ ಸೌಂದರ್ಯಕ್ಕೆ ಆದ್ಯತೆ ನೀಡುವ ಅವರು, ಪಾತ್ರಗಳ ಆಯ್ಕೆಯಲ್ಲಿಯೂ ವಿಭಿನ್ನತೆ ಕಾಯ್ದುಕೊಂಡಿದ್ದಾರೆ. ‘ಪ್ರೇಮಂ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪರಿಚಯವಾದ ಅವರು, ಬಳಿಕ ತೆಲುಗು, ತಮಿಳು ಮತ್ತು ಮಲಯಾಳಂ ಸಿನಿಮಾಗಳಲ್ಲಿ ಅಭಿನಯಿಸಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಇದೀಗ ‘ರಾಮಾಯಣ’ ಸಿನಿಮಾದಲ್ಲಿ ಸೀತೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಅವರ ಅಭಿಮಾನಿಗಳಲ್ಲಿ ಮತ್ತಷ್ಟು ಕುತೂಹಲ ಮೂಡಿಸಿದೆ.

ಸಾಮಾನ್ಯವಾಗಿ ಸಿನಿಮಾ ನಟ-ನಟಿಯರು ವಿಭಿನ್ನ ಆಭರಣಗಳನ್ನು ಧರಿಸುವುದು ಸಹಜ. ಆದರೆ ಸಾಯಿ ಪಲ್ಲವಿ ಕೈಯಲ್ಲಿರುವ ರುದ್ರಾಕ್ಷ ಮಾಲೆ ಅವರ ಪಾಲಿಗೆ ಕೇವಲ ಅಲಂಕಾರದ ವಸ್ತುವಲ್ಲ. ಅದರ ಹಿಂದೆ ಕುಟುಂಬದೊಂದಿಗಿನ ಭಾವನಾತ್ಮಕ ಸಂಬಂಧವಿದೆ. ಈ ಮಾಲೆಯನ್ನು ಅವರು ತಮ್ಮ ಜೀವನದ ಅತ್ಯಂತ ಅಮೂಲ್ಯ ನೆನಪುಗಳಲ್ಲಿ ಒಂದಾಗಿ ನೋಡುತ್ತಾರೆ.

ಇತ್ತೀಚೆಗೆ ‘ರಾಮಾಯಣ’ ಚಿತ್ರದ ಪ್ರಚಾರದ ಸಂದರ್ಭದಲ್ಲಿಯೂ ಸಾಯಿ ಪಲ್ಲವಿ ಕೈಯಲ್ಲಿ ರುದ್ರಾಕ್ಷ ಮಾಲೆ ಕಾಣಿಸಿಕೊಂಡಿತ್ತು. ಇದನ್ನು ಗಮನಿಸಿದ ಅಭಿಮಾನಿಗಳು ಮಾಲೆಯ ವಿಶೇಷತೆಯ ಬಗ್ಗೆ ಕುತೂಹಲ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಅವರು ಈ ಹಿಂದೆ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದ ವಿಚಾರ ಮತ್ತೆ ಚರ್ಚೆಗೆ ಬಂದಿದೆ.

ಅಜ್ಜ ನೀಡಿದ ಉಡುಗೊರೆ; ಸದಾ ಜೊತೆಯಲ್ಲಿರುವ ನೆನಪು!

ಸಾಯಿ ಪಲ್ಲವಿ ಕೈಯಲ್ಲಿರುವ ರುದ್ರಾಕ್ಷ ಜಪಮಾಲೆಯನ್ನು ಅವರ ಅಜ್ಜ ಉಡುಗೊರೆಯಾಗಿ ನೀಡಿದ್ದರಂತೆ. ಹೀಗಾಗಿ ಅದನ್ನು ಅವರು ಯಾವಾಗಲೂ ತಮ್ಮ ಕೈಯಲ್ಲಿ ಇಟ್ಟುಕೊಳ್ಳುತ್ತಾರೆ. ಈ ಬಗ್ಗೆ ಮಾತನಾಡಿದ್ದ ನಟಿ, ರುದ್ರಾಕ್ಷ ಮಾಲೆ ತಮಗೆ ಕೇವಲ ಧಾರ್ಮಿಕ ವಸ್ತುವಲ್ಲ, ಅಜ್ಜನ ಪ್ರೀತಿ ಮತ್ತು ಬಾಂಧವ್ಯವನ್ನು ನೆನಪಿಸುವ ಅಮೂಲ್ಯ ಉಡುಗೊರೆ ಎಂದು ಹೇಳಿಕೊಂಡಿದ್ದರು.

ತಮಗೆ ದೇವರ ಮೇಲೆ ಅಪಾರ ಭಕ್ತಿ ಇದೆ ಎಂದು ಹೇಳಿಕೊಂಡಿರುವ ಸಾಯಿ ಪಲ್ಲವಿ, ಅಜ್ಜ ನೀಡಿದ ಈ ಮಾಲೆಯೊಂದಿಗೆ ವಿಶೇಷವಾದ ಭಾವನಾತ್ಮಕ ನಂಟು ಹೊಂದಿದ್ದಾರೆ. ಜೀವನದಲ್ಲಿ ಕೆಲವು ವಸ್ತುಗಳು ಬೆಲೆಬಾಳುವ ಆಭರಣಗಳಿಗಿಂತಲೂ ಹೆಚ್ಚು ಮಹತ್ವ ಹೊಂದಿರುತ್ತವೆ. ಅವುಗಳ ಹಿಂದೆ ಪ್ರೀತಿ, ನೆನಪು ಮತ್ತು ಸಂಬಂಧಗಳಿರುತ್ತವೆ. ಈ ರುದ್ರಾಕ್ಷ ಮಾಲೆಯೂ ತಮ್ಮ ಪಾಲಿಗೆ ಅಂತಹದ್ದೇ ಅಮೂಲ್ಯ ವಸ್ತು ಎಂದು ಅವರು ವಿವರಿಸಿದ್ದರು.

ಸಾಯಿ ಪಲ್ಲವಿ ಹಂಚಿಕೊಂಡಿರುವ ಮತ್ತೊಂದು ಆಸಕ್ತಿದಾಯಕ ವಿಚಾರವೆಂದರೆ, ಈ ರುದ್ರಾಕ್ಷ ಮಾಲೆಯನ್ನು ಧರಿಸಿದ ನಂತರ ತಮ್ಮಲ್ಲಿ ಪ್ರಾರ್ಥನೆ ಮಾಡುವ ಆಸಕ್ತಿ ಹೆಚ್ಚಾಯಿತು ಎಂಬುದು. ಮನಸ್ಸನ್ನು ಶಾಂತವಾಗಿಟ್ಟುಕೊಳ್ಳಲು ಅವರು ಧ್ಯಾನಕ್ಕೂ ಹೆಚ್ಚಿನ ಮಹತ್ವ ನೀಡುತ್ತಾರೆ. ಧ್ಯಾನ ಮತ್ತು ಪ್ರಾರ್ಥನೆಯ ಸಂದರ್ಭದಲ್ಲಿ ಈ ಮಾಲೆ ತಮ್ಮೊಂದಿಗೆ ಇರುವುದು ವಿಶೇಷ ಅನುಭವ ನೀಡುತ್ತದೆ ಎಂಬುದು ಅವರ ನಂಬಿಕೆ.

ಕೆಲವೊಮ್ಮೆ ಅನಗತ್ಯ ಆಲೋಚನೆಗಳು ಮತ್ತು ಅತಿಯಾದ ಚಿಂತನೆಗಳಿಂದ ಮನಸ್ಸು ಅಶಾಂತವಾಗಬಹುದು. ಇಂತಹ ಸಂದರ್ಭಗಳಲ್ಲಿ ಧ್ಯಾನವು ಮನಸ್ಸನ್ನು ಕೇಂದ್ರೀಕರಿಸಲು ಸಹಾಯ ಮಾಡುತ್ತದೆ. ಸಾಯಿ ಪಲ್ಲವಿ ಕೂಡ ತಮ್ಮ ವೈಯಕ್ತಿಕ ಜೀವನದಲ್ಲಿ ಧ್ಯಾನ ಮತ್ತು ಪ್ರಾರ್ಥನೆಗೆ ಆದ್ಯತೆ ನೀಡುತ್ತಾರೆ.
 

Add Zee News as a Preferred Source
TAGS:
Cinema