ಗೋಲ್ಡನ್ ಸ್ಟಾರ್ ಗಣೇಶ್ ಯಾಕಿಷ್ಟು ಚಂದ? ಅಂದ-ಆರೋಗ್ಯದ ಸೀಕ್ರೆಟ್ ಬಿಚ್ಚಿಟ್ಟ ಗಣಿ!
Golden Star Ganesh interview: ಗೋಲ್ಡನ್ ಸ್ಟಾರ್ ಗಣೇಶ್ ಅಂದ್ರೆ ಅಭಿಮಾನಿಗಳಿಗೆ ವಿಶೇಷ ಪ್ರೀತಿ.. ಕಾಮಿಡಿ, ಲವ್, ಸೆಂಟಿಮೆಂಟ್ ಮೂಲಕ ಪ್ರೇಕ್ಷಕರ ಮನಗೆದ್ದಿರೋ ಗಣಿ ಇದೀಗ ಬೃಂದಾವಿಹಾರಿ ಸಿನಿಮಾ ಮೂಲಕ ಮತ್ತೊಮ್ಮೆ ಮೋಡಿ ಮಾಡಲು ಸಜ್ಜಾಗಿದ್ದಾರೆ. ಈ ಸಿನಿಮಾದ ವಿಶೇಷತೆ ಏನು? ತಮ್ಮ ಪಾತ್ರದ ಬಗ್ಗೆ ಗಣೇಶ್ ಹೇಳಿದ್ದೇನು? ಇತ್ತೀಚೆಗೆ ಜೀ ಕನ್ನಡ ನ್ಯೂಸ್‌ನೊಂದಿಗೆ ಗಣೇಶ್ ಅವರು ಬಹುನಿರೀಕ್ಷಿತ ಸಿನಿಮಾ ಬೃಂದಾವಿಹಾರಿದ ಬಗ್ಗೆ ಮಾತುಕತೆ ನಡೆಸಿದ್ದಾರೆ.
Golden Star Ganesh interview: ಸ್ಯಾಂಡಲ್‌ವುಡ್‌ನ ಗೋಲ್ಡನ್ ಸ್ಟಾರ್ ಗಣೇಶ್ ಅಂದ್ರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಕ್ರೇಜ್.. ವಯಸ್ಸು ಹೆಚ್ಚಾದ್ರೂ ಗಣೇಶ್ ಅವರ ಲುಕ್ ಮಾತ್ರ ದಿನದಿಂದ ದಿನಕ್ಕೆ ಮತ್ತಷ್ಟು ಯಂಗ್ ಆಗ್ತಿದೆ.. ಮುಖದಲ್ಲಿನ ಆ ಕಾಂತಿ, ಫಿಟ್‌ನೆಸ್ ಮತ್ತು ಹ್ಯಾಂಡ್‌ಸಮ್ ಲುಕ್ ಹಿಂದಿನ ರಹಸ್ಯವೇನು? ತಾವು ಇಷ್ಟೊಂದು ಚಂದವಾಗಿ ಕಾಣಿಸಿಕೊಳ್ಳಲು ಏನು ಮಾಡ್ತಾರೆ ಅನ್ನೋದನ್ನ ಸ್ವತಃ ಗಣಿಯೇ ಬಿಚ್ಚಿಟ್ಟಿದ್ದಾರೆ..
ಗೋಲ್ಡನ್ ಸ್ಟಾರ್ ಗಣೇಶ್ ಅಂದ್ರೆ ಅಭಿಮಾನಿಗಳಿಗೆ ವಿಶೇಷ ಪ್ರೀತಿ.. ಕಾಮಿಡಿ, ಲವ್, ಸೆಂಟಿಮೆಂಟ್ ಮೂಲಕ ಪ್ರೇಕ್ಷಕರ ಮನಗೆದ್ದಿರೋ ಗಣಿ ಇದೀಗ ಬೃಂದಾವಿಹಾರಿ ಸಿನಿಮಾ ಮೂಲಕ ಮತ್ತೊಮ್ಮೆ ಮೋಡಿ ಮಾಡಲು ಸಜ್ಜಾಗಿದ್ದಾರೆ. ಈ ಸಿನಿಮಾದ ವಿಶೇಷತೆ ಏನು? ತಮ್ಮ ಪಾತ್ರದ ಬಗ್ಗೆ ಗಣೇಶ್ ಹೇಳಿದ್ದೇನು? ಇತ್ತೀಚೆಗೆ ಜೀ ಕನ್ನಡ ನ್ಯೂಸ್‌ನೊಂದಿಗೆ ಗಣೇಶ್ ಅವರು ಬಹುನಿರೀಕ್ಷಿತ ಸಿನಿಮಾ ಬೃಂದಾವಿಹಾರಿದ ಬಗ್ಗೆ ಮಾತುಕತೆ ನಡೆಸಿದ್ದಾರೆ.
ಕೃಷ್ಣಂ ಪ್ರಣಯ ಸಖಿ ಸಿನಿಮಾ ಬಳಿಕ ನಿರ್ದೇಶಕ ಶ್ರೀನಿವಾಸ ರಾಜು ಹಾಗೂ ಗಣೇಶ್ ಕಾಂಬಿನೇಷನ್‌ನಲ್ಲಿ ಮೂಡಿಬಂದಿರೋ ಸಿನಿಮಾ ಬೃಂದಾವಿಹಾರಿ. ಈ ಸಿನಿಮಾದಲ್ಲಿ ಗಣೇಶ್ ಮಾಧವ ಎಂಬ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 1945ರ ಕಾಲಘಟ್ಟದಲ್ಲಿ ನಡೆಯುವ ಕಥೆ ಇದಾಗಿದ್ದು, ಪ್ರೀತಿ, ಭಾವನೆ ಹಾಗೂ ಸಂಬಂಧಗಳಿಗೆ ಹೆಚ್ಚಿನ ಮಹತ್ವ ನೀಡಲಾಗಿದೆ.ಇನ್ನು ಈ ಸಿನಿಮಾದಲ್ಲಿ ಗಣೇಶ್ ಅವರ ಲುಕ್ ಕೂಡ ಸಾಕಷ್ಟು ಗಮನ ಸೆಳೆದಿದೆ. ಪಾತ್ರಕ್ಕಾಗಿ ದೈಹಿಕವಾಗಿಯೂ ವಿಭಿನ್ನ ತಯಾರಿ ಮಾಡಿಕೊಂಡಿದ್ದಾರೆ. ಹಾಸ್ಯ ಮತ್ತು ಭಾವನಾತ್ಮಕ ಸನ್ನಿವೇಶಗಳ ಮೂಲಕ ಪ್ರೇಕ್ಷಕರಿಗೆ ಹೊಸ ಅನುಭವ ನೀಡುವ ವಿಶ್ವಾಸವನ್ನು ಚಿತ್ರತಂಡ ಹೊಂದಿದೆ ಎಂದು ಗಣೇಶ ಹೇಳಿದರು
ಗೋಲ್ಡನ್ ಸ್ಟಾರ್ ಗಣೇಶ್ ಅಂದ್ರೆ ನೆನಪಾಗೋದೇ ಅವರ ಮುದ್ದಾದ ನಗು.. ಅದ್ಭುತ ಅಭಿನಯದ ಜೊತೆಗೆ ತಮ್ಮ ಸ್ಟೈಲಿಶ್ ಲುಕ್‌ನಿಂದಲೂ ಗಣಿ ಅಭಿಮಾನಿಗಳ ಮನಗೆದ್ದಿದ್ದಾರೆ.. ವಯಸ್ಸು 40 ದಾಟಿದ್ರೂ ಯಂಗ್ ಹೀರೋಗಳಿಗೂ ಪೈಪೋಟಿ ನೀಡುವಂತಹ ಲುಕ್ ಗಣೇಶ್ ಅವರದ್ದು.. ಹಾಗಾದ್ರೆ ಈ ಸೌಂದರ್ಯದ ಹಿಂದಿನ ಸೀಕ್ರೆಟ್ ಏನು?
ತಮ್ಮ ಲುಕ್ ಬಗ್ಗೆ ಅಭಿಮಾನಿಗಳಲ್ಲಿ ಮೂಡಿರುವ ಕುತೂಹಲಕ್ಕೆ ಗಣೇಶ್ ಇದೀಗ ಉತ್ತರ ನೀಡಿದ್ದಾರೆ.. ತಾವು ಫಿಟ್ ಆಗಿರಲು, ಆರೋಗ್ಯ ಕಾಪಾಡಿಕೊಳ್ಳಲು ಮತ್ತು ಸದಾ ಫ್ರೆಶ್ ಆಗಿ ಕಾಣಿಸಿಕೊಳ್ಳಲು ಅನುಸರಿಸುವ ಅಭ್ಯಾಸಗಳ ಬಗ್ಗೆ ಮಾತನಾಡಿದ್ದಾರೆ.. ಆಹಾರ ಪದ್ಧತಿ, ವ್ಯಾಯಾಮ ಹಾಗೂ ಜೀವನಶೈಲಿಯೇ ತಮ್ಮ ಫಿಟ್‌ನೆಸ್‌ನ ಹಿಂದಿನ ಪ್ರಮುಖ ಕಾರಣ ಎಂಬುದನ್ನು ಹಂಚಿಕೊಂಡಿದ್ದಾರೆ.. ಸಿನಿಮಾ ಕೆಲಸಗಳ ನಡುವೆ ಎಷ್ಟೇ ಬ್ಯುಸಿಯಾಗಿದ್ರೂ ಆರೋಗ್ಯದ ಕಡೆ ಗಣೇಶ್ ವಿಶೇಷ ಗಮನ ಕೊಡ್ತಾರೆ.. ನಿಯಮಿತ ವ್ಯಾಯಾಮ, ಶಿಸ್ತುಬದ್ಧ ಜೀವನಶೈಲಿ ಮತ್ತು ದೇಹದ ಆರೈಕೆಗೆ ಆದ್ಯತೆ ನೀಡ್ತಾರೆ.. ಇದೇ ಕಾರಣಕ್ಕೆ ಗಣೇಶ್ ಅವರ ಲುಕ್ ಇಂದಿಗೂ ಅಭಿಮಾನಿಗಳಿಗೆ ಅಚ್ಚರಿ ಮೂಡಿಸುತ್ತಿದೆ..
ಒಟ್ಟಿನಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅವರ ಹ್ಯಾಂಡ್‌ಸಮ್ ಲುಕ್ ಹಿಂದಿನ ಮಂತ್ರವೇ ಶಿಸ್ತು ಮತ್ತು ಆರೋಗ್ಯದ ಕಾಳಜಿ ಅನ್ನೋದು ಗೊತ್ತಾಗಿದೆ.. ಗಣಿ ಅವರ ಈ ಫಿಟ್‌ನೆಸ್ ಸೀಕ್ರೆಟ್ ಅಭಿಮಾನಿಗಳಿಗೂ ಸ್ಫೂರ್ತಿಯಾಗೋದ್ರಲ್ಲಿ ಅನುಮಾನವೇ ಇಲ್ಲ.. ಇತ್ತ ಒಟ್ಟಿನಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅಭಿಮಾನಿಗಳಿಗೆ ಬೃಂದಾವಿಹಾರಿ ಮೇಲೆ ಸಾಕಷ್ಟು ನಿರೀಕ್ಷೆಯಿದೆ. ಕುಟುಂಬ ಸಮೇತ ನೋಡಬಹುದಾದ ಮನರಂಜನಾತ್ಮಕ ಸಿನಿಮಾ ನೀಡುವ ಭರವಸೆಯನ್ನು ಗಣೇಶ್ ನೀಡಿದ್ದಾರೆ. ಬೃಂದಾವಿಹಾರಿ ಮೂಲಕ ಗಣಿ ಮತ್ತೊಮ್ಮೆ ಬಾಕ್ಸ್ ಆಫೀಸ್‌ನಲ್ಲಿ ಮಿಂಚುತ್ತಾರಾ? ಅಭಿಮಾನಿಗಳ ಕುತೂಹಲಕ್ಕೆ ಉತ್ತರ ಸಿಗಬೇಕಿದೆ.