• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಮನರಂಜನೆ
  • /ಒಂಬತ್ತು ರಸಗಳು, ಒಂದು ಕಥೆ.. ನವರಸ ತುಂಬಿರೋ ರೌಶಾಬಿ ಟೈಟಲ್‌ ಹೇಗೆ ಬಂತು, ಡೈರೆಕ್ಟರ್‌ ಹೇಳಿದ ಸತ್ಯ

ಒಂಬತ್ತು ರಸಗಳು, ಒಂದು ಕಥೆ.. ನವರಸ ತುಂಬಿರೋ ರೌಶಾಬಿ ಟೈಟಲ್‌ ಹೇಗೆ ಬಂತು, ಡೈರೆಕ್ಟರ್‌ ಹೇಳಿದ ಸತ್ಯ

ಮೈಸೂರು, ನೆಲಮಂಗಲ ರೆಸಾರ್ಟ್‌ವೊಂದರಲ್ಲಿ ಇಪ್ಪತ್ತು ದಿನಗಳ ಕಾಲ ಒಂದೇ ಹಂತದಲ್ಲಿ ಚಿತ್ರೀಕರಣ ಮುಗಿಸಲಾಗಿದೆ. ಕಲಾವಿದರು, ತಂತ್ರಜ್ಞರು ಸಹಕಾರ ನೀಡಿದ್ದರಿಂದಲೇ, ಕಳೆದ ವರ್ಷ ಶುರು ಮಾಡಿ ಇದೇ ತಿಂಗಳಲ್ಲಿ ಜನರಿಗೆ ತೋರಿಸಲಾಗುತ್ತಿದೆ.

Written ByBhimappa
Published: Sep 20, 2026, 07:56 AM IST|Updated: Sep 20, 2026, 08:15 AM IST
joinshare
ಒಂಬತ್ತು ರಸಗಳು, ಒಂದು ಕಥೆ.. ನವರಸ ತುಂಬಿರೋ ರೌಶಾಬಿ ಟೈಟಲ್‌ ಹೇಗೆ ಬಂತು, ಡೈರೆಕ್ಟರ್‌ ಹೇಳಿದ ಸತ್ಯ
Image Credit: File Photo

About the Author

Bhimappa

Bhimappa

ಭೀಮಪ್ಪ (Bhimappa) ಜೀ ಕನ್ನಡ ನ್ಯೂಸ್‌ನಲ್ಲಿ ಸದ್ಯ ಡಿಜಿಟಲ್ (ವೆಬ್‌ಸೈಟ್‌) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ, ಸ್ಫೋರ್ಟ್ಸ್‌, ಸಿನಿಮಾ, ಆರೋಗ್ಯ, ಎಂಟರ್ಟೈನ್‌ಮೆಂಟ್, ಲೈಫ್‌ಸ್ಟೈಲ್‌, ವೈರಲ್‌ ಸುದ್ದಿಗಳನ್ನು ಓದುಗರಿಗೆ ನೀಡುತ್ತಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿರುವ ಇವರು ಪ್ರಜಾವಾಣಿಯಲ್ಲಿ ಒಂದು ವರ್ಷ ಅಪ್ರೆಂಟಿಸ್‌ ಹಾಗೂ ನ್ಯೂಸ್‌ಫಸ್ಟ್‌ನಲ್ಲಿ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. 
Read More

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Kannada movie Raushabi: ಚಂದನವನದಲ್ಲಿ ಮೊದಲು ಎನ್ನುವಂತೆ ಒಂಬತ್ತು ರಸಗಳು, ಒಂದು ಕಥೆ ಮತ್ತು ಅಂತ್ಯ ಇರುವ ರೌಶಾಬಿ ಸಿನಿಮಾದಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆ. ಸ್ಪೂರ್ತಿ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಹಾವೇರಿ ಮೂಲದ ಉದ್ಯಮಿ ಶರಣಪ್ಪ ಅಂಗಡಿ ನಿರ್ಮಾಣ ಮಾಡಿದ್ದಾರೆ. ನಟ ಎಸ್.ಆರ್ ಪ್ರಮೋದ್ ಆಕ್ಷನ್ ಕಟ್ ಹೇಳಿರುವ ಆರನೇ ಸಿನಿಮಾ ಇದಾಗಿದೆ. ಪ್ರಚಾರದ ಕೊನೆ ಹಂತವಾಗಿ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಶ್ರೀ ರೇಣುಕಾಂಬ ಸ್ಡುಡಿಯೋದಲ್ಲಿ ಅದ್ದೂರಿಯಾಗಿ ನಡೆಯಿತು. ಕರ್ನಾಟಕ ನಿರ್ದೇಶಕರ ಸಂಘದ ಅಧ್ಯಕ್ಷ ಎನ್ನಾರ‍್ಕೆ ವಿಶ್ವನಾಥ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ತಂಡಕ್ಕೆ ಶುಭ ಹಾರೈಸಿದರು.

ಹಿರಿಯ ಸಾಹಿತಿ ಯಂಡಮೂರಿ ವೀರೇಂದ್ರನಾಥ್ ಶಿಷ್ಯ ಕನ್ನಡಿಗ ಆಯೂರು ಸಿನಿಮಾಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ಸಂಕಲನ ಜತೆಗೆ ನಾಯಕನಾಗಿ ಅಭಿನಯಿಸಿದ್ದಾರೆ. ಮಂಜುಪ್ರೀತಿ, ರೇಖಾರಮೇಶ್ ನಾಯಕಿಯರು. ಎಸ್.ಆರ್ ಪ್ರಮೋದ್ ಮುಂತಾದವರು ಬಣ್ಣ ಹಚ್ಚಿದ್ದಾರೆ. ಛಾಯಾಗ್ರಹಣ ಮೈಸೂರು ಸೋಮು, ಹಿನ್ನಲೆ ಸಂಗೀತ ಕೆವಿನ್, ಡಿಐ ಕಿಶೋರ್ ಕುಮಾರ್ ಅಕ್ಕನ, ಸ್ಟುಡಿಯೋ ಅನಿಲ್.ಸಿ.ಆರ್ ಅವರದಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ಮತ್ತು ನಟ ಎಸ್.ಆರ್ ಪ್ರಮೋದ್ ಅವರು, ಕಥೆಯಲ್ಲಿ ಒಂಬತ್ತು ರಸಗಳು ಇರುವುದರಿಂದ, ಪ್ರತಿಯೊಂದರಿಂದ ಒಂದು ಅಕ್ಷರ ತೆಗೆದುಕೊಂಡು ಶೀರ್ಷಿಕೆ ಇಡಲು ಚಿಂತನೆ ನಡೆಸಲಾಗಿತ್ತು. ಆದರೆ ಮಾರುದ್ದ ಬರುವ ಕಾರಣ ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಮೂರು ಪ್ರಮುಖ ಪಾತ್ರಗಳ ಮೊದಲ ಅಕ್ಷರವನ್ನು ಬಳಸಿಕೊಂಡು ಟೈಟಲ್ ಇಡಲಾಗಿದೆ. ಸಿನಿಮಾ ತುಂಬಾ ಅದ್ಭುತವಾಗಿ ಮೂಡಿ ಬಂದಿದೆ. ಪ್ರೇಕ್ಷಕರು ತುಂಬಾ ಇಷ್ಟ ಪಡುವಂತಹ ಸಿನಿಮಾ ಇದಾಗಲಿದೆ. ಸಿನಿಮಾದಲ್ಲಿ ಪ್ರತಿಯೊಂದು ಪಾತ್ರಕ್ಕೂ ಹೊತ್ತು ನೀಡಲಾಗಿದೆ. ಸಿನಿಮಾದಲ್ಲಿ ಪ್ರತಿಯೊಬ್ಬರು ತಮ್ಮ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನೆರವೇರಿಸಿದ್ದಾರೆ ಎಂದು ಹೇಳಿದ್ದಾರೆ.  

ರೌಡಿ ಪಾತ್ರಕ್ಕೆ ರೌದ್ರ ಅಂತಲೂ, ಶಾಲಿನಿ ಹೆಸರನ್ನು ಶಾಂತ ಎಂದು, ಹಾಗಯೇ ಬಿಂದು ಅವಳನ್ನು  ಭೀಬತ್ಸ್ಸ. ಹೀಗೆ ಮೂರು ಸೇರಿಸಿದರೆ ರೌಶಾಬಿ ಹೆಸರು ಬರುತ್ತದೆ. ಇದಕ್ಕೆ ಬೇರೆ ಅರ್ಥ ಏನಿಲ್ಲ. ಹೆಚ್ಚಿನ ವಿವರಕ್ಕೆ ಸಿನಿಮಾ ನೋಡಿದರೆ ತಿಳಿಯುತ್ತದೆ. ಮೈಸೂರು, ನೆಲಮಂಗಲ ರೆಸಾರ್ಟ್‌ವೊಂದರಲ್ಲಿ ಇಪ್ಪತ್ತು ದಿನಗಳ ಕಾಲ ಒಂದೇ ಹಂತದಲ್ಲಿ ಚಿತ್ರೀಕರಣ ಮುಗಿಸಲಾಗಿದೆ. ಕಲಾವಿದರು, ತಂತ್ರಜ್ಞರು ಸಹಕಾರ ನೀಡಿದ್ದರಿಂದಲೇ, ಕಳೆದ ವರ್ಷ ಶುರು ಮಾಡಿ ಇದೇ ತಿಂಗಳಲ್ಲಿ ಜನರಿಗೆ ತೋರಿಸಲಾಗುತ್ತಿದೆ. ಸಿನಿಮಾವೇ ನಮ್ಮ ಜೀವನ. ಇದಕ್ಕಾಗಿ ಎಲ್ಲರೂ ಶ್ರಮ ವಹಿಸಿದ್ದೇವೆ. ನೂರಕ್ಕೆ ನೂರರಷ್ಟು ಶ್ರಮ ಹಾಕಿದ್ದೇವೆ ಎಂದು ಎಸ್.ಆರ್ ಪ್ರಮೋದ್ ಅವರು ಹೇಳಿದ್ದಾರೆ.

ನಂತರ ಮಾತನಾಡಿದ ಅಧ್ಯಕ್ಷರು, ಪ್ರಮೋದ್ ನಟನಾಗಲು ಬಂದವರು ನಿರ್ದೇಶಕರಾಗಿದ್ದಾರೆ. ತುಣುಕುಗಳು ಚೆನ್ನಾಗಿ ಮೂಡಿಬಂದಿದೆ. ಸರ್ಕಾರವು 2022 ರಿಂದ ಸಹಾಯಧನ ಬಿಡುಗಡೆಯಾಗಿಲ್ಲ. ಹೊಸ ಕಮಿಟಿ ರಚನೆಯಾಗಿಲ್ಲ. ನಿರ್ಮಾಪಕರಿಂದ ಜಿಎಸ್‌ಟಿ ವಸೂಲು ಮಾಡುತ್ತಿದ್ದಾರೆ. ಆದರೆ ಅವರ ಚಿತ್ರಗಳಿಗೆ ಸಹಾಯಧನ ನೀಡುತ್ತಿಲ್ಲ. ಅಲ್ಲದೆ ಹೊಸ ಕಾನೂನು ತಂದಿದ್ದಾರೆ. ಇದರಿಂದ ನಿರ್ಮಾಪಕರಿಗೆ ಮತ್ತಷ್ಟು ಹೊರೆಯಾಗಿದೆ. ಇದರ ಕುರಿತಂತೆ ಈಗಾಗಲೇ ಕೇಂದ್ರ ವಾರ್ತಾ ಸಚಿವರಿಗೆ ಪತ್ರ ಬರೆಯಲಾಗಿದೆ. ಅಲ್ಲಿಂದ ಉತ್ತರ ಬರಬೇಕಾಗಿದೆ ಎಂದು ಎನ್ನಾರ‍್ಕೆ ವಿಶ್ವನಾಥ್ ಹೇಳಿದ್ದಾರೆ.

ರೌಶಾಬಿ ಸಿನಿಮಾದ ಟೀಸರ್‌ ಮತ್ತು ಟ್ರೈಲರ್‌ ಈಗಾಗಲೇ ರಿಲೀಸ್‌ ಆಗಿದ್ದು ಜನ ಮಚ್ಚಿದ್ದಾರೆ. ಟ್ರೈಲರ್‌ ಎಲ್ಲರ ಗಮನ ಸೆಳೆದಿದ್ದು ಸಿನಿಮಾ ಮೇಲೆ ಮತ್ತಷ್ಟು ನಿರೀಕ್ಷೆಗಳನ್ನು ಹೆಚ್ಚು ಮಾಡಿದೆ. ಈ ಸಸ್ಪೆನ್ಸ್‌ ಸಿನಿಮಾವಾಗಿದ್ದರಿಂದ ಪ್ರೇಕ್ಷಕರಿಗೆ ಇಷ್ಟ ಆಗೋದು ಮಾತ್ರ ಪಕ್ಕಾ. ಇನ್ನು ಈ ಸಿನಿಮಾವನ್ನು ಎಸ್‌.ಆರ್‌ ಪ್ರಮೋದ್‌ ಅವರು ನಿರ್ದೇಶನ ಮಾಡಿದ್ದು ಶರಣಪ್ಪ ಅಂಗಡಿ ಸ್ಪೂರ್ತಿ ಸಿನಿಮಾಸ್‌ ಬ್ಯಾನರ್‌ ಅಡಿ ಬಂಡವಾಳ ಹಾಕಲಾಗಿದೆ. ಸಿನಿಮಾಗೆ ಯುಎ ಪ್ರಮಾಣ ಪತ್ರ ದೊರೆತಿದೆ. ಆಯುರ್‌ ಸ್ವಾಮಿ,‌ ಮಂಜು ಪ್ರೀತಿ ಮತ್ತು ರೇಖಾ ರಮೇಶ್ ಸೇರಿ ಇತರರು ಇದ್ದಾರೆ. ಅಂದ ಹಾಗೆ ಸಿನಿಮಾವು ಇದೇ ತಿಂಗಳು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. 

ಈ ರೌಶಾಬಿ ಸಿನಿಮಾವು ಒಂಬತ್ತು ರಸಗಳನ್ನು ಒಳಗೊಂಡಿದೆ. ಆ ನವರಸಗಳು ಯಾವುವು ಎನ್ನುವ ಮಾಹಿತಿ ಇಲ್ಲಿದೆ. ಸಿನಿಮಾದಲ್ಲಿ ಪ್ರತಿಯೊಂದು ರಸವು ಇದ್ದರೇ ಆ ಸಿನಿಮಾ ಅತ್ಯುತ್ತಮ ಮಟ್ಟದಲ್ಲಿರುತ್ತದೆ. ಹಾಗಾದರೆ ಆ ನವರಸಗಳು ಎಂದರೆ
ಶೃಂಗಾರ- ಪ್ರೀತಿ, ಪ್ರಣಯ ಮತ್ತು ಸೌಂದರ್ಯದ ಭಾವನೆ
ಹಾಸ್ಯ- ನಗು, ವಿನೋದ ಮತ್ತು ಹಾಸ್ಯದ ಭಾವನೆ
ರೌದ್ರ- ಕೋಪ ಮತ್ತು ಉಗ್ರತೆಯ ಭಾವನೆ
ಕಾರುಣ್ಯ- ರಕುಣೆ, ಶೋಕ ಮತ್ತು ದಯೆಯ ಭಾವನೆ 
ವೀರ- ಧೈರ್ಯ, ಪರಾಕ್ರಮ ಮತ್ತು ವೀರತ್ವದ ಭಾವನೆ 
ಭಯಾನಕ- ಭಯ ಮತ್ತು ಆತಂಕದ ಭಾವನೆ
ಬೀಭತ್ಸ- ಅಸಹ್ಯ ಮತ್ತು ಜಿಗುಪ್ಸೆಯ ಭಾವನೆ 
ಅದ್ಭುತ- ಆಶ್ಚರ್ಯ ಮತ್ತು ವಿಸ್ಮಯದ ಭಾವನೆ 
ಶಾಂತ- ಶಾಂತಿ, ನೆಮ್ಮದಿ ಮತ್ತು ಆಧ್ಯಾತ್ಮಿಕ
 

Add Zee News as a Preferred Source
TAGS:
Cinema