ಸುಮಾರು 475 ಕೋಟಿ ಮೌಲ್ಯದ "ಫ್ಯಾಂಟಸಿ ಬ್ರಾ" ತೊಟ್ಟು ಮಿಂಚಿದ ಕೈಲೀ ಜೆನ್ನರ್.! ಏನಿದರ ವಿಶೇಷತೆ?
'ವಿಕ್ಟರಿಯಾಸ್ ಸಿಕ್ರೇಟ್' ಫ್ಯಾಷನ್ ಶೋ 2026 ಮೂಲಕ ಮೊದಲ ಬಾರಿಗೆ ರ್ಯಾಂಪ್ ಮೇಲೆ ವಾಕ್ ಮಾಡಿದ ಕೈಲಿ ಜೆನ್ನರ್, ಅತ್ಯಂತ ದುಬಾರಿಯಾದ 50 ಮಿಲಿಯನ್ ಡಾಲರ್ ಮೌಲ್ಯದ 'ಫ್ಯಾಂಟಸಿ ಬ್ರಾ' ಧರಿಸಿ ಗಮನಸೆಳೆದರು. ಜಾಕೋಬ್ & ಕೋ ಸಹಯೋಗದಲ್ಲಿ ತಯಾರಾದ ಈ ಐಷಾರಾಮಿ ಒಳ ಉಡುಪಿನ ವಿಶೇಷತೆ.. ಅದರ ಬೆಲೆ.. ಸಂಪೂರ್ಣ ವಿವರ ಇಲ್ಲಿದೆ..
Kylie Jenner Victoria's Secret bra price : ವಿಶ್ವಖ್ಯಾತ ಫ್ಯಾಷನ್ ಬ್ರ್ಯಾಂಡ್ 'ವಿಕ್ಟರಿಯಾಸ್ ಸಿಕ್ರೇಟ್' ಶೋನಲ್ಲಿ ಅಮೆರಿಕದ ಖ್ಯಾತ ಮಾಡೆಲ್ ಹಾಗೂ ಉದ್ಯಮಿ ಕೈಲಿ ಜೆನ್ನರ್ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ತಮ್ಮ ಮೊದಲ ಪ್ರವೇಶದಲ್ಲೇ ಬರೋಬ್ಬರಿ 50 ಮಿಲಿಯನ್ ಡಾಲರ್ ಮೌಲ್ಯದ ಬ್ರಾ ಧರಿಸಿ ಇಡೀ ಜಗತ್ತಿನ ಹುಬ್ಬೇರಿಸಿದ್ದಾರೆ.. ಅಂದಹಾಗೆ ಈ ಒಳಉಡುಪಿನ ವಿಶೇಷತೆ ಏನ್ ಗೊತ್ತೆ?.. ಇಲ್ಲಿದೆ ಇಂಟ್ರಸ್ಟಿಂಗ್ ಮಾಹಿತಿ..
ವಿಶ್ವಖ್ಯಾತ ಫ್ಯಾಷನ್ ಬ್ರ್ಯಾಂಡ್ 'ವಿಕ್ಟರಿಯಾಸ್ ಸಿಕ್ರೇಟ್' (Victoria's Secret) ಶೋನಲ್ಲಿ ಅಮೆರಿಕದ ಖ್ಯಾತ ಮಾಡೆಲ್ ಹಾಗೂ ಉದ್ಯಮಿ ಕೈಲಿ ಜೆನ್ನರ್ ಮೊದಲ ಪ್ರವೇಶದಲ್ಲೇ ಭಾರಿ ಸಂಚಲನ ಮೂಡಿಸಿದ್ದಾರೆ. ಈ ಅದ್ಧೂರಿ ಕಾರ್ಯಕ್ರಮದಲ್ಲಿ ಕೈಲಿ ಧರಿಸಿದ್ದ 50 ಮಿಲಿಯನ್ ಡಾಲರ್ (ಸುಮಾರು 475 ಕೋಟಿ ರೂ) ಮೌಲ್ಯದ ವಜ್ರಖಚಿತ 'ಫ್ಯಾಂಟಸಿ ಬ್ರಾ' ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಅತ್ಯಂತ ಆಕರ್ಷಕ ನೋಟ ಮತ್ತು ಗ್ಲಾಮರಸ್ ಲುಕ್‌ನಿಂದ ಕೈಲಿ ಇಡೀ ಕಾರ್ಯಕ್ರಮದ ಸೆಂಟರ್ ಅಟ್ರ್ಯಾಕ್ಷನ್ ಆದರು.
ಅತ್ಯಾಕರ್ಷಕ ಶಿಯರ್ ಮಿನಿ ಸ್ಕರ್ಟ್, ಟ್ರಾನ್ಸ್‌ಪರೆಂಟ್ ಹಿಲ್ಸ್ ಮತ್ತು ದೊಡ್ಡದಾದ ಬಿಳಿ ರೆಕ್ಕೆಗಳನ್ನು (feathered wings) ಧರಿಸಿ ಕೈಲಿ ರ್ಯಾಂಪ್ ಮೇಲೆ ಹೆಜ್ಜೆ ಹಾಕಿದರು. ಆದರೆ ಇಡೀ ಪ್ರದರ್ಶನದಲ್ಲಿ ಎಲ್ಲರ ಗಮನ ಸೆಳೆದದ್ದು ಮಾತ್ರ ಆ ಕೋಟಿ ಮೌಲ್ಯದ 'ಫ್ಯಾಂಟಸಿ ಬ್ರಾ'. ವರದಿಗಳ ಪ್ರಕಾರ, ಈ ಫ್ಯಾಂಟಸಿ ಬ್ರಾ ಇತಿಹಾಸದಲ್ಲೇ ಅತ್ಯಂತ ದುಬಾರಿ, ಅಷ್ಟೇ ಅಲ್ಲ ಇದರ ಹಿಂದಿನ ಆವೃತ್ತಿಗಳಿಗಿಂತ 35 ಮಿಲಿಯನ್ ಡಾಲರ್ ಹೆಚ್ಚು ಮೌಲ್ಯದ್ದಾಗಿದೆ ಎನ್ನಲಾಗಿದೆ.
ಬ್ರಾನ ವಿಶೇಷತೆ
ವಿಶೇಷ ಅಂದ್ರೆ, ಪ್ರಸಿದ್ಧ ಆಭರಣ ವಿನ್ಯಾಸಕ ಜಾಕೋಬ್ ಅರಾಬೋ ಅವರ 'ಜಾಕೋಬ್ & ಕೋ' (Jacob & Co.) ಸಹಯೋಗದೊಂದಿಗೆ ಈ ಐಷಾರಾಮಿ ಬ್ರಾ ಅನ್ನು ಸಿದ್ಧಪಡಿಸಲಾಗಿದೆ. ಇದರಲ್ಲಿ ಬರಾಬರಿ 4,410 ನೈಸರ್ಗಿಕ ವಜ್ರಗಳು ಹಾಗೂ ಮಧ್ಯಭಾಗದಲ್ಲಿ 75.54 ಕ್ಯಾರೆಟ್‌ನ ರೋಚಕ ಹಳದಿ ವಜ್ರವನ್ನು (vivid yellow diamond) ಅಳವಡಿಸಲಾಗಿದೆ. ಇದರ ಒಟ್ಟು ತೂಕ ಸುಮಾರು 1.8 ಕೆಜಿ ಇದ್ದು, 15 ನುರಿತ ಕುಶಲಕರ್ಮಿಗಳು ಇದನ್ನು ತಯಾರಿಸಲು 1,000 ಗಂಟೆಗಳಿಗೂ ಹೆಚ್ಚು ಶ್ರಮ ವಹಿಸಿದ್ದಾರೆ.
ಯಾರು ಈ ಕೈಲಿ ಜೆನ್ನರ್..?
ಜಾಗತಿಕ ಮಟ್ಟದಲ್ಲಿ ಅತ್ಯಂತ ಪ್ರಭಾವಿ ಸೆಲೆಬ್ರಿಟಿಗಳಲ್ಲಿ ಒಬ್ಬರಾದ ಕೈಲಿ ಜೆನ್ನರ್, ವಿಶ್ವವಿಖ್ಯಾತ 'ಕರ್ದಾಶಿಯನ್-ಜೆನ್ನರ್' ಕುಟುಂಬದಿಂದ ಬಂದವರು. 'ಕೀಪಿಂಗ್ ಅಪ್ ವಿತ್ ದಿ ಕರ್ದಾಶಿಯನ್ಸ್' ರಿಯಾಲಿಟಿ ಶೋ ಮೂಲಕ ಬಾಲ್ಯದಿಂದಲೇ ಜಗತ್ತಿನಾದ್ಯಂತ ಭಾರಿ ಜನಪ್ರಿಯತೆ ಗಳಿಸಿದ ಇವರು, ಬಳಿಕ ಸ್ವಂತ ಉದ್ಯಮ ಪ್ರಾರಂಭಿಸಿ ಅಪೂರ್ವ ಯಶಸ್ಸು ಸಾಧಿಸಿದರು. ತಮ್ಮದೇ ಆದ 'ಕೈಲಿ ಕಾಸ್ಮೆಟಿಕ್ಸ್' (Kylie Cosmetics) ಬ್ರ್ಯಾಂಡ್ ಮೂಲಕ ಕೇವಲ ಕೆಲವೇ ವರ್ಷಗಳಲ್ಲಿ ಶತಕೋಟಿ ಡಾಲರ್ ಸಾಮ್ರಾಜ್ಯವನ್ನು ಕಟ್ಟಿ ಬೆಳೆಸಿ ಯುವ ಬಿಲಿಯನೇರ್ ಆಗಿ ಹೊರಹೊಮ್ಮಿದರು. ಸದ್ಯ 'ಖೈ' (Khy) ಸೇರಿದಂತೆ ಹಲವು ನವೀನ ಫ್ಯಾಷನ್ ಬ್ರ್ಯಾಂಡ್‌ಗಳನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಇನ್‌ಸ್ಟಾಗ್ರಾಂ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ನೂರಾರು ಮಿಲಿಯನ್ ಫಾಲೋವರ್‌ಗಳನ್ನು ಹೊಂದಿರುವ ಇವರು ಜಾಗತಿಕ ಯುವಜನರ ಶೈಲಿಯ ಐಕಾನ್ ಆಗಿದ್ದಾರೆ.
ದಿಗ್ಗಜ ಮಾಡೆಲ್‌ಗಳ ಉಪಸ್ಥಿತಿ
ಈ ಬಾರಿಯ ವಿಕ್ಟರಿಯಾಸ್ ಸಿಕ್ರೇಟ್ ಫ್ಯಾಷನ್ ಶೋನಲ್ಲಿ ಕೈಲಿ ಜೆನ್ನರ್ ಜೊತೆಗೆ ಜಗತ್ತಿನ ಸ್ಟಾರ್ ಹಿರಿಯ ಮಾಡೆಲ್‌ಗಳು ಹಾಗೂ ಹೊಸ ತಲೆಮಾರಿನ ಸೂಪರ್ ಮಾಡೆಲ್‌ಗಳು ಹೆಜ್ಜೆ ಹಾಕಿದರು. ಅಡ್ರಿಯಾನಾ ಲಿಮಾ, ಅಲೆಸ್ಸಾಂಡ್ರಾ ಅಂಬ್ರೋಸಿಯೊ, ಕ್ಯಾಂಡಿಸ್ ಸ್ವಾನ್‌ಪೋಲ್, ಬೇಹಾಟಿ ಪ್ರಿನ್ಸ್‌ಲೂ, ಬಾರ್ಬರಾ ಪಾಲ್ವಿನ್, ಡೌಟ್ಜೆನ್ ಕ್ರೋಸ್ ಮತ್ತು ಎಲ್ಸಾ ಹೋಸ್ಕ್ ಮುಂತಾದ ಅನುಭವಿ 'ಏಂಜಲ್ಸ್' ಜೊತೆಗೆ ಗಿಗಿ ಹಡಿಡ್, ಬೆಲ್ಲಾ ಹಡಿಡ್, ಜೋನ್ ಸ್ಮಾಲ್ಸ್, ಇರಿನಾ ಶೇಕ್, ಅನೋಕ್ ಯಾಯಿ ಹಾಗೂ ಪ್ಯಾಲೋಮಾ ಎಲ್ಸೆಸರ್ ವಾಕ್ ಇಡೀ ರ್ಯಾಂಪ್ ಕಳೆಗಟ್ಟುವಂತೆ ಮಾಡಿದರು.