• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಮನರಂಜನೆ
  • /ತ್ರಿಕಾರಂ ಸಿನಿಮಾದ ಟ್ರೇಲರ್, ಹಾಡು ರಿಲೀಸ್‌.. ಹರ್ಷವರ್ಧನ್ ಕೇಸರಿ, ನಿಶ್ಚಿತಾ ಶೆಟ್ಟಿ ಹೇಳುವುದು ಏನು?

ತ್ರಿಕಾರಂ ಸಿನಿಮಾದ ಟ್ರೇಲರ್, ಹಾಡು ರಿಲೀಸ್‌.. ಹರ್ಷವರ್ಧನ್ ಕೇಸರಿ, ನಿಶ್ಚಿತಾ ಶೆಟ್ಟಿ ಹೇಳುವುದು ಏನು?

ಯಾವ ಕಾರಣಕ್ಕೆ ಜತೆಯಾಗ್ತದೆ ಎಂಬುದನ್ನು ತಿಳಿಯಲು ಚಿತ್ರ ನೋಡಬೇಕು. ದೈವ ಮತ್ತು ದುಷ್ಟ ನಡುವಿನ ಹೋರಾಟ. ಮುಗಿಯದ ಕರ್ಮ ಧರ್ಮದ ಲೆಕ್ಕಚಾರ.

Written ByBhimappa
Published: Sep 26, 2026, 01:37 PM IST|Updated: Sep 26, 2026, 01:59 PM IST
joinshare
ತ್ರಿಕಾರಂ ಸಿನಿಮಾದ ಟ್ರೇಲರ್, ಹಾಡು ರಿಲೀಸ್‌.. ಹರ್ಷವರ್ಧನ್ ಕೇಸರಿ, ನಿಶ್ಚಿತಾ ಶೆಟ್ಟಿ ಹೇಳುವುದು ಏನು?
Image Credit: Trikaram_movie

About the Author

Bhimappa

Bhimappa

ಭೀಮಪ್ಪ (Bhimappa) ಜೀ ಕನ್ನಡ ನ್ಯೂಸ್‌ನಲ್ಲಿ ಸದ್ಯ ಡಿಜಿಟಲ್ (ವೆಬ್‌ಸೈಟ್‌) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ, ಸ್ಫೋರ್ಟ್ಸ್‌, ಸಿನಿಮಾ, ಆರೋಗ್ಯ, ಎಂಟರ್ಟೈನ್‌ಮೆಂಟ್, ಲೈಫ್‌ಸ್ಟೈಲ್‌, ವೈರಲ್‌ ಸುದ್ದಿಗಳನ್ನು ಓದುಗರಿಗೆ ನೀಡುತ್ತಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿರುವ ಇವರು ಪ್ರಜಾವಾಣಿಯಲ್ಲಿ ಒಂದು ವರ್ಷ ಅಪ್ರೆಂಟಿಸ್‌ ಹಾಗೂ ನ್ಯೂಸ್‌ಫಸ್ಟ್‌ನಲ್ಲಿ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. 
Read More

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Trikaram movie trailer, song release: ’ತ್ರಿಕಾರಂ’ ಸಿನಿಮಾದ ಟ್ರೇಲರ್ ಮತ್ತು ಹಾಡು ಬಿಡುಗಡೆ ಕಾರ್ಯಕ್ರಮ ಕಲಾವಿದರ ಸಂಘದಲ್ಲಿ ಅದ್ಧೂರಿಯಾಗಿ ನಡೆಯಿತು. ಮಾಸ್ ಟ್ರೇಲರ್, ನವಿರಾದ ಪ್ರೇಮಗೀತೆ, ಮೊನ್ನೆಯಷ್ಟೇ ಹೊಸದುರ್ಗದಲ್ಲಿ 50 ಅಡಿ ಕಟ್‌ಔಟ್ ಅನಾವರಣ ಕಾರ್ಯಕ್ರಮ ಮತ್ತು ಸಾಹಸ ದೃಶ್ಯ ಮಾಡುವಾಗ ಬೆಂಕಿ ಅವಘಡದಿಂದ ನಾಯಕ, ನಾಯಕಿ ಪಾರಾದ ತುಣುಕುಗಳು ದೊಡ್ಡ ಪರದೆ ಮೇಲೆ ಬಿತ್ತರಗೊಂಡಿತು. ಇದು ಸ್ಮಶಾನ ಅಲ್ಲ’ ಎಂಬ ಕ್ಯಾಚಿ ಅಡಿ ಬರಹ ಇರಲಿದೆ. ರಾಜಕೀಯ ಮುಖಂಡ ರವೀಂದ್ರ ಆಗಮಿಸಿ ತಂಡಕ್ಕೆ ಶುಭ ಹಾರೈಸಿದರು.

ನಾಟಕ ಪ್ರೇಮಿ ಜಿ.ಗಣೇಶ್ ಮೂರ್ತಿ ಅವರು ಸದ್ಗುರು ಸಿನಿ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣ ಮಾಡುವುದರ ಜತೆಗೆ ಖತರ್‌ನಾಕ್ ಖಳನಾಯಕನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಹಲವು ನಿರ್ದೇಶಕರ ಬಳಿ ಕೆಲಸ ಕಲಿತಿರುವ ಅಜ್ಜಂಪುರದ ದಿಲೀಪ್ ಕುಮಾರ್ ಜೆ.ಆರ್ ಬಡ್ತಿ ಎನ್ನುವಂತೆ ರಚಿಸಿ, ಆಕ್ಷನ್ ಕಟ್ ಹೇಳಿದ್ದಾರೆ.

ಹರ್ಷವರ್ಧನ್ ಕೇಸರಿ ನಾಯಕ. ನಿಶ್ಚಿತ ಶೆಟ್ಟಿ (Nischitha Shetty) ನಾಯಕಿ. ಉಳಿದಂತೆ ನಾಗೇಂದ್ರ ಅರಸು, ಬಲರಾಜವಾಡಿ, ಮಂಜುಪಾವಗಡ ಮುಂತಾದವರು ಅಭಿನಯಿಸಿದ್ದಾರೆ. ಛಾಯಾಗ್ರಹಣ ಹೊನ್ನಾಳಿ ಯಾಸಿನ್, ಸಂಕಲನ ಸತೀಶ್ ಚಂದ್ರಯ್ಯ, ಸಾಹಸ ಚಂದ್ರು ಬಂಡೆ, ನ್ಯೃತ್ಯ ಹೈಟ್‌ ಮಂಜು- ಕಂಬಿರಾಜ್, ಡಾ.ವಿ ನಾಗೇಂದ್ರ ಪ್ರಸಾದ್- ಭರ್ಜರಿ ಚೇತನ್‌ ಕುಮಾರ್- ಪ್ರಮೋದ್ ಮರವಂತೆ- ಕೇಶವ-ಹರ್ಷವರ್ಧನ್ ಸಾಹಿತ್ಯ, ಡಿಜಿಟಲ್ ಪ್ರಚಾರ್ ಪವನ್‌ ಕುಮಾರ್ ಅವರದಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕರು, ನಾಯಕ, ನಾಯಕಿ ಹಾಗೂ ವಿಲನ್ ಮೂರು ಪಾತ್ರಗಳ ಸುತ್ತ ಕಥೆ ಸಾಗುವುದರಿಂದ ಇದೇ ಶೀರ್ಷಿಕೆ ಇಡಲಾಗಿದೆ. ಇವು ಯಾವ ಕಾರಣಕ್ಕೆ ಜತೆಯಾಗ್ತದೆ ಎಂಬುದನ್ನು ತಿಳಿಯಲು ಚಿತ್ರ ನೋಡಬೇಕು. ದೈವ ಮತ್ತು ದುಷ್ಟ ನಡುವಿನ ಹೋರಾಟ. ಮುಗಿಯದ ಕರ್ಮ ಧರ್ಮದ ಲೆಕ್ಕಚಾರ. ಇವೆಲ್ಲಾ ಸನ್ನಿವೇಶಗಳು ಸೆಸ್ಪೆನ್ಸ್ ಥ್ರಿಲ್ಲರ್ ಮಾದರಿಯಲ್ಲಿ ಸಾಗುತ್ತದೆ. ಸಂಪೂರ್ಣ ಚಿತ್ರೀಕರಣವನ್ನು ಹೊಸದುರ್ಗ, ಮಾರಿಕಣಿವೆಯಲ್ಲಿ ದೊಡ್ಡ ದೊಡ್ಡ ಸೆಟ್ ಹಾಕಿ ನಡೆಸಲಾಗಿದೆ. ಎಲ್ಲರ ಪ್ರೋತ್ಸಾಹ ಬೇಕೆಂದು ದಿಲೀಪ್ ಕುಮಾರ್ ಜೆ.ಆರ್ ಮನವಿ ಮಾಡಿದರು. 

ಮುಗ್ದ ಹಾಗೂ ರುದ್ರನಾಗಿ ಎರಡು ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದೇನೆ. ನಾವುಗಳು ನೋವು ಅನುಭವಿಸಿ ಖುಷಿಯಿಂದ ನಟಿಸಿದ್ದೇವೆ. ಸಹ ನಿರ್ದೇಶಕನಾಗಲು ಬಂದದವನಿಗೆ ಹೀರೋ ಅವಕಾಶ ನೀಡಿದರು. ಅದಕ್ಕಾಗಿ ನಿರ್ದೇಶಕರು ಮತ್ತು ನಿರ್ಮಾಪಕರಿಗೆ ಚಿರಋಣಿ ಆಗಿದ್ದೇನೆ ಎಂದು ಹರ್ಷವರ್ಧನ್ ಕೇಸರಿ ಭಾವುಕರಾಗಿ ಹೇಳಿದರು.

ಜಂಬದಹುಡುಗಿ, ಮೃದು ಸ್ವಭಾವದವಳಾಗಿ ಇರುತ್ತೇನೆ. ಹಗಲು ಹೊತ್ತು ಆತನೊಂದಿಗೆ ಜಗಳವಾಡುತ್ತಾ, ಕತ್ತಲಾದರೆ ಅವನ ಹಿಂದೆ ಓಡಾಡುತಿರುತ್ತೇನೆ. ಅದು ಯಾಕೆ ಎಂಬುದಕ್ಕೆ ಫಿಲಂ ನೋಡಿ ಎಂಬುದು ನಾಯಕಿ ನಿಶ್ಚಿತಾ ಶೆಟ್ಟಿ (Nischita Shetty) ಅವರು ಹೇಳಿದ್ದಾರೆ. ಚಿಕ್ಕವಯಸ್ಸಿನಿಂದಲೂ ಸಿನಿಮಾ ಮಾಡುವ ಆಸೆ ಇದರಿಂದ ನೆರವೇರಿದೆ. ಖಳನಾಗಿ ಅಬ್ಬರಿಸಿದ್ದೇನೆ. ಅದು ಹೇಗಿರುತ್ತದೆಂದು ನೀವುಗಳು ಹೇಳಬೇಕು ಅಂತಾರೆ ನಿರ್ಮಾಪಕ ಜಿ.ಗಣೇಶ್ ಮೂರ್ತಿ. ಅಂದ ಹಾಗೆ ಚಿತ್ರವು ಅಕ್ಟೋಬರ್ ತಿಂಗಳಲ್ಲಿ ಚಿತ್ರಮಂದಿರಕ್ಕೆ ಲಗ್ಗೆ ಇಡಲಿದೆ.

ತ್ರಿಕಾರಂ ಸಿನಿಮಾದ ಟ್ರೇಲರ್ ಮತ್ತು ಹಾಡು ಅದ್ಧೂರಿಯಾಗಿದ್ದು ಅಭಿಮಾನಿಗಳಿಂದ ಮೆಚ್ಚುಗೆ ಪಡೆಯುತ್ತಿದೆ. ಟ್ರೇಲರ್‌ ಮನಮೋಹಕವಾಗಿ ಮೂಡಿ ಬಂದಿದ್ದು ಸಸ್ಪೆನ್ಸ್‌ ಮತ್ತು ಸೆಂಟಿಮೆಂಟ್‌ಗಳಿಂದ ಕೂಡಿದೆ. ಎಲ್ಲರಿಗೂ ಇಷ್ಟವಾಗುವಂತಹ ಟ್ರೇಲರ್‌ ಮುಂದಿನ ದಿನಗಳಲ್ಲಿ ಸಿನಿಮಾ ಕೂಡ ಎಲ್ಲರಿಗೂ ಇಷ್ಟ ಆಗುವುದು ಖಚಿತ. ಏಕೆಂದರೆ ಟ್ರೇಲರ್‌ ಚೆನ್ನಾಗಿ ಇದ್ರೆ ಸಿನಿಮಾ ಇನ್ನಷ್ಟು ಚೆನ್ನಾಗಿ ಇದ್ದೇ ಇರುತ್ತದೆ. ಹಾಡು ಕೂಡ ಚೆನ್ನಾಗಿದ್ದು ಎಲ್ಲರೂ ಇಷ್ಟ ಪಡುತ್ತಿದ್ದಾರೆ. ಸಿನಿಮಾ ಸದ್ಯದಲ್ಲಿ ರಿಲೀಸ್‌ ಆಗಲಿದ್ದು ಚಿತ್ರತಂಡ ಕೂಡ ಕಾತುರದಿಂದ ಇದೆ. ಎಲ್ಲ ಕೆಲಸ, ಕಾರ್ಯಗಳು ಸುಗಮವಾಗಿ ಪೂರ್ಣಗೊಂಡರೆ ಚಿತ್ರತಂಡ ಗೆದ್ದಂತೆ. 

Add Zee News as a Preferred Source
TAGS:
Kannada News