ಸ್ಯಾಂಡಲ್‌ವುಡ್‌ನ ಅತ್ಯಂತ ಶ್ರೀಮಂತ ನಟ ಇವರೇ ನೋಡಿ... 400 ಕೋಟಿ ಆಸ್ತಿಗೆ ಏಕೈಕ ಒಡೆಯ!
Richest actor in Sandalwood: ಸ್ಯಾಂಡಲ್‌ವುಡ್‌ನ ಅತ್ಯಂತ ಶ್ರೀಮಂತ ನಟ ಯಾರು? ಬರೋಬ್ಬರಿ ₹400 ಕೋಟಿ ಆಸ್ತಿಯ ಒಡೆಯನಾಗಿರುವ ಈ ನಟನ ಆಸ್ತಿ, ಆದಾಯ ಹಾಗೂ ಐಷಾರಾಮಿ ಜೀವನದ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
highest paid actor in Sandalwood : ಕನ್ನಡ ಚಿತ್ರರಂಗ ಇಂದು ದೇಶದಾದ್ಯಂತ ಮಾತ್ರವಲ್ಲದೆ ಜಾಗತಿಕ ಮಟ್ಟದಲ್ಲೂ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಸ್ಯಾಂಡಲ್‌ವುಡ್‌ನ ಸೂಪರ್ ಸ್ಟಾರ್‌ಗಳಾದ ಯಶ್, ಕಿಚ್ಚ ಸುದೀಪ್, ದರ್ಶನ್, ಶಿವರಾಜ್‌ಕುಮಾರ್, ಉಪೇಂದ್ರ, ರಿಷಬ್ ಶೆಟ್ಟಿ ಸೇರಿದಂತೆ ಹಲವು ನಟರು ತಮ್ಮದೇ ಆದ ಅಭಿಮಾನಿ ಬಳಗ ಮತ್ತು ಬೃಹತ್ ಮಾರುಕಟ್ಟೆ ಮೌಲ್ಯವನ್ನು ಹೊಂದಿದ್ದಾರೆ. ಕನ್ನಡದ ನಟರು ನಟಿಸಿದ ಸಿನಿಮಾಗಳು ಜಾಗತಿಕ ಮಟ್ಟದಲ್ಲಿ ಹಿಟ್ ಪಡೆಯುತ್ತಿವೆ.
ಸ್ಟಾರ್ ನಟರ ಸಿನಿಮಾಗಳ ಬಜೆಟ್ ಹೆಚ್ಚಾಗುತ್ತಿದ್ದಂತೆ ಅವರ ಸಂಭಾವನೆ ಕೂಡ ಕೋಟಿಗಳಲ್ಲಿ ಏರುತ್ತಿದೆ. ಸಿನಿಮಾ ಸಂಭಾವನೆಯ ಜೊತೆಗೆ ಜಾಹೀರಾತು, ಟಿವಿ ಕಾರ್ಯಕ್ರಮಗಳು, ನಿರ್ಮಾಣ, ನಿರ್ದೇಶನ, ಬ್ರ್ಯಾಂಡ್ ಅಂಬಾಸಿಡರ್ ಮತ್ತು ವಿವಿಧ ಹೂಡಿಕೆಗಳಿಂದಲೂ ನಟರು ಆದಾಯ ಗಳಿಸುತ್ತಿದ್ದಾರೆ. ಸಂಭಾವನೆ ಹೆಚ್ಚಿದಂತೆ ನಟರ ಆಸ್ತಿಯೂ ಏರಿಕೆಯಾಗುತ್ತದೆ. ಇದೀಗ ಸ್ಯಾಂಡಲ್‌ವುಡ್‌ನಲ್ಲಿ ಯಾವ ನಟ ಅತಿ ಹೆಚ್ಚು ಆಸ್ತಿಯನ್ನು ಹೊಂದಿದ್ದಾರೆ ಎಂಬ ಮಾಹಿತಿ ಇಲ್ಲಿದೆ...
ಸ್ಯಾಂಡಲ್‌ವುಡ್‌ನ ಶ್ರೀಮಂತ ನಟ ರಾಕಿಂಗ್ ಸ್ಟಾರ್ ಯಶ್. ‘ಕೆಜಿಎಫ್ ೧’ ಮತ್ತು ‘ಕೆಜಿಎಫ್ 2’ ಸಿನಿಮಾಗಳ ನಂತರ ಯಶ್ ಸಂಭಾವನೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಯಶ್ ಈಗ ಪ್ಯಾನ್-ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡಿರುವ ಸ್ಟಾರ್ ನಟ.ಮಾಧ್ಯಮ ವರದಿಗಳ ಪ್ರಕಾರ ಯಶ್ ಆಸ್ತಿ ₹350 ರಿಂದ ₹400 ಕೋಟಿ ಎಂದು ಅಂದಾಜಿಸಲಾಗಿದೆ. ಯಶ್ ಅವರು ಒಂದು ಸಿನಿಮಾಗೆ ಸುಮಾರು ₹100 ಕೋಟಿಗೂ ಅಧಿಕ ಸಂಭಾವನೆ ಪಡೆಯುತ್ತಿದ್ದಾರೆ. ಬೆಂಗಳೂರಿನ ಪ್ರತಿಷ್ಠಿತ ಪ್ರದೇಶದಲ್ಲಿ ಸುಂದರವಾದ ಐಷಾರಾಮಿ ಮನೆ ಹಾಗೂ ಅಪಾರ್ಟ್‌ಮೆಂಟ್‌ಗಳನ್ನು ಹೊಂದಿದ್ದಾರೆ. ಯಶ್ ಮತ್ತು ರಾಧಿಕಾ ದಂಪತಿ ಮಹಾರಾಷ್ಟ್ರದ ಪ್ರಸಿದ್ಧ ಪ್ರವಾಸಿ ತಾಣವಾದ ಅಲಿಬಾಗ್‌ನಲ್ಲಿ ಸುಮಾರು ₹24 ಕೋಟಿ ಮೌಲ್ಯದ ಐಷಾರಾಮಿ ಕಡಲತೀರದ ಜಮೀನನ್ನು ಖರೀದಿಸಿದ್ದಾರೆ. ರೇಂಜ್ ರೋವರ್ ಇವೊಕ್, ಮರ್ಸಿಡಿಸ್ ಬೆಂಜ್ ಜಿಎಲ್‌ಎಸ್, ಆಡಿ ಕ್ಯೂ7 ಮತ್ತು ಬಿಎಂಡಬ್ಲ್ಯು ಮುಂತಾದ ಕೋಟ್ಯಂತರ ರೂ. ಬೆಲೆಯ ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ.
ಇತ್ತೀಚಿನ ಮಾಧ್ಯಮ ವರದಿಗಳ ಪ್ರಕಾರ, ಅಭಿನಯ ಚಕ್ರವರ್ತಿ ಸುದೀಪ್ ಅವರು ಕನ್ನಡ ಚಿತ್ರರಂಗದ ಅತ್ಯಂತ ಶ್ರೀಮಂತ ನಟರ ಪೈಕಿ ಒಬ್ಬರು ಎನ್ನಲಾಗುತ್ತಿದೆ. ಕೆಲವು ವರದಿಗಳ ಪ್ರಕಾರ, ನಟ ಸುದೀಪ್ ಒಟ್ಟು ಆಸ್ತಿ ಮೌಲ್ಯ ಸುಮಾರು ₹165 ಕೋಟಿ ಇರಬಹುದು ಎಂದು ಅಂದಾಜಿಸಲಾಗಿದೆ. ಆದರೆ ಸುದೀಪ್ ಆಸ್ತಿ ಮೌಲ್ಯವನ್ನು ಅಧಿಕೃತವಾಗಿ ದೃಢೀಕರಿಸಲಾಗಿಲ್ಲ.
ಕಿಚ್ಚ ಸುದೀಪ್ ಕನ್ನಡ ಚಿತ್ರರಂಗದಲ್ಲಿ ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಸಕ್ರಿಯರಾಗಿರುವ ಬೃಹತ್ ಸ್ಟಾರ್ ಡಮ್ ಹೊಂದಿರುವ ನಟ. ‘ಹುಚ್ಚ’, ‘ಸ್ವಾತಿಮುತ್ತು’, ‘ಮೈ ಆಟೋಗ್ರಾಫ್’, ‘ವೀರ ಮದಕರಿ’, ‘ಕೆಂಪೇಗೌಡ’ ಸೇರಿದಂತೆ ಹಲವು ಸಿನಿಮಾಗಳ ಮೂಲಕ ಸುದೀಪ್ ತಮ್ಮದೇ ಆದ ಸ್ಥಾನವನ್ನು ಸಿನಿರಂಗದಲ್ಲಿ ನಿರ್ಮಿಸಿಕೊಂಡಿದ್ದಾರೆ. ಕನ್ನಡದ ಜೊತೆಗೆ ಹಿಂದಿ, ತೆಲುಗು ಮತ್ತು ತಮಿಳು ಸಿನಿಮಾಗಳಲ್ಲೂ ನಟಿಸಿರುವ ಸುದೀಪ್ ದೇಶಾದ್ಯಂತ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ನಟನೆಯ ಜೊತೆಗೆ ನಿರ್ದೇಶನ ಮತ್ತು ನಿರ್ಮಾಣದಲ್ಲೂ ಸುದೀಪ್ ತೊಡಗಿಸಿಕೊಂಡಿದ್ದಾರೆ. ಇದರ ಜೊತೆಗೆ ‘ಬಿಗ್ ಬಾಸ್ ಕನ್ನಡ’ ಕಾರ್ಯಕ್ರಮದ ನಿರೂಪಕರಾಗಿಯೂ ಅಪಾರ ಜನಪ್ರಿಯತೆ ಗಳಿಸಿದ್ದಾರೆ. ಹೀಗಾಗಿ ನಟ ಸುದೀಪ್ ಆದಾಯದ ಮೂಲ ಕೇವಲ ಸಿನಿಮಾ ಸಂಭಾವನೆಗೆ ಸೀಮಿತವಾಗಿಲ್ಲ. ಸುದೀಪ್ ಅವರು ಜಾಹೀರಾತುಗಳಲ್ಲೂ ಸಹ ನಟಿಸುತ್ತಾರೆ. ಅಲ್ಲದೇ ಬಿಗ್ ಬಾಸ್ ನಿಂದಲೂ ಕೋಟಿಗಟ್ಟಲೇ ಸಂಭಾವನೆ ಪಡೆಯುತ್ತಾರೆ. ಸಿನಿಮಾ ನಿರ್ಮಾಣದಿಂದಲೂ ಸುದೀಪ್ ಹಣ ಸಂಪಾದಿಸುತ್ತಾರೆ. ಹೋಟೆಲ್ ಉದ್ಯಮದಲ್ಲೂ ಸುದೀಪ್ ಎಂಟ್ರಿ ಕೊಟ್ಟಿದ್ದು, ತಮ್ಮದೇ ರೆಸ್ಟೋರೆಂಟ್ ಹೊಂದಿದ್ದಾರೆ. ಇದೂ ಕೂಡ ಸುದೀಪ್ ಆದಾಯದ ಒಂದು ಮೂಲವಾಗಿದೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಕನ್ನಡ ಚಿತ್ರರಂಗದ ಅತ್ಯಂತ ಜನಪ್ರಿಯ ಹಾಗೂ ಶ್ರೀಮಂತ ನಟರಲ್ಲಿ ಒಬ್ಬರು. ‘ಕರಿಯ’, ‘ಕಲಾಸಿಪಾಳ್ಯ’, ‘ಸಾರಥಿ’, ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’, ‘ರಾಬರ್ಟ್’, ‘ಕಾಟೇರ’ ಸೇರಿದಂತೆ ಹಲವು ಸಿನಿಮಾಗಳು ದರ್ಶನ್ ಗೆ ದೊಡ್ಡ ಯಶಸ್ಸು ತಂದುಕೊಟ್ಟಿವೆ. ದರ್ಶನ್ ಅವರ ಮಾಸ್ ಇಮೇಜ್ ಮತ್ತು ರಾಜ್ಯಾದ್ಯಂತ ಇರುವ ಬೃಹತ್ ಅಭಿಮಾನಿ ಬಳಗದಿಂದಾಗಿ ಅವರ ಸಿನಿಮಾಗಳಿಗೆ ದೊಡ್ಡ ಮಟ್ಟದ ಮಾರುಕಟ್ಟೆ ಇದೆ. ಕನ್ನಡದ ಜನಪ್ರಿಯ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಒಟ್ಟು ಆಸ್ತಿಯ ಮೌಲ್ಯವು ಅಂದಾಜು 100 ಕೋಟಿ ರೂಪಾಯಿಗಳಿಗೂ ಅಧಿಕವಿದೆ ಎಂದು ಅಂದಾಜಿಸಲಾಗಿದೆ.
ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಕೂಡ ಸ್ಯಾಂಡಲ್‌ವುಡ್‌ನ ಅತ್ಯಂತ ಶ್ರೀಮಂತ ನಟರಲ್ಲಿ ಒಬ್ಬರು. 1980ರ ದಶಕದಿಂದಲೂ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಶಿವರಾಜ್‌ಕುಮಾರ್ ಹಲವು ದಶಕಗಳ ವೃತ್ತಿಜೀವನದಲ್ಲಿ ನೂರಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಓಂ’, ‘ಜನುಮದ ಜೋಡಿ’, ‘ಜೋಗಿ’, ‘ಟಗರು’ ಸೇರಿದಂತೆ ಅನೇಕ ಸಿನಿಮಾಗಳು ಪ್ರಮುಖ ಚಿತ್ರಗಳಾಗಿವೆ. ಇತ್ತೀಚಿನ ವರ್ಷಗಳಲ್ಲಿ ಶಿವರಾಜ್‌ಕುಮಾರ್ ಕನ್ನಡದ ಜೊತೆಗೆ ಇತರ ಭಾಷೆಗಳ ಸಿನಿಮಾಗಳಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ನಟ ಶಿವರಾಜ್‌ಕುಮಾರ್ ಅವರ ಹೆಸರಿನಲ್ಲಿ ಸುಮಾರು 18 ರಿಂದ 49 ಕೋಟಿ ರೂಪಾಯಿಗಳವರೆಗೂ ಆಸ್ತಿ ಎಂದು ಅಂದಾಜಿಸಲಾಗಿದೆ.
ಕನ್ನಡ ಚಿತ್ರರಂಗದ ಖ್ಯಾತ ನಟ, ನಿರ್ದೇಶಕ ಮತ್ತು ನಿರೂಪಕರಾದ ರಮೇಶ್ ಅರವಿಂದ್ ಅವರ ಒಟ್ಟು ಆಸ್ತಿಯ ಮೌಲ್ಯದ ಕುರಿತು ಅಧಿಕೃತವಾಗಿ ಯಾವುದೇ ನಿಖರವಾದ ಮಾಹಿತಿ ಲಭ್ಯವಿಲ್ಲ. ಆದಾಗ್ಯೂ, ವಿವಿಧ ಮಾಧ್ಯಮಗಳ ಮತ್ತು ವೆಬ್‌ಸೈಟ್‌ಗಳ ಅಂದಾಜಿನ ಪ್ರಕಾರ ಅವರ ನಿವ್ವಳ ಆಸ್ತಿ ಮೌಲ್ಯ ಸರಿಸುಮಾರು ₹40 ಕೋಟಿಯಿಂದ ₹60 ಕೋಟಿ ರೂ. ಇರಬಹುದು ಎಂದು ಅಂದಾಜಿಸಲಾಗಿದೆ.