• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಮನರಂಜನೆ
  • /ಸ್ಯಾಂಡಲ್‌ವುಡ್‌ನ ಅತ್ಯಂತ ಶ್ರೀಮಂತ ನಟ ಇವರೇ ನೋಡಿ... 400 ಕೋಟಿ ಆಸ್ತಿಗೆ ಏಕೈಕ ಒಡೆಯ!

ಸ್ಯಾಂಡಲ್‌ವುಡ್‌ನ ಅತ್ಯಂತ ಶ್ರೀಮಂತ ನಟ ಇವರೇ ನೋಡಿ... 400 ಕೋಟಿ ಆಸ್ತಿಗೆ ಏಕೈಕ ಒಡೆಯ!

Richest actor in Sandalwood: ಸ್ಯಾಂಡಲ್‌ವುಡ್‌ನ ಅತ್ಯಂತ ಶ್ರೀಮಂತ ನಟ ಯಾರು? ಬರೋಬ್ಬರಿ ₹400 ಕೋಟಿ ಆಸ್ತಿಯ ಒಡೆಯನಾಗಿರುವ ಈ ನಟನ ಆಸ್ತಿ, ಆದಾಯ ಹಾಗೂ ಐಷಾರಾಮಿ ಜೀವನದ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

Reported ByChetana DevarmaniEdited ByChetana Devarmani
Published: Sep 12, 2026, 09:18 PM IST|Updated: Sep 17, 2026, 04:03 PM IST
joinshare
ಸ್ಯಾಂಡಲ್‌ವುಡ್‌ನ ಅತ್ಯಂತ ಶ್ರೀಮಂತ ನಟ ಇವರೇ ನೋಡಿ... 400 ಕೋಟಿ ಆಸ್ತಿಗೆ ಏಕೈಕ ಒಡೆಯ!
Image Credit: ಸ್ಯಾಂಡಲ್‌ವುಡ್‌ನ ಸ್ಟಾರ್‌ ನಟರಾದ ಸುದೀಪ್‌, ಯಶ್‌ ಮತ್ತು ದರ್ಶನ್‌.

About the Author

Chetana Devarmani

Chetana Devarmani

"*ಚೇತನಾ ದೇವರಮನಿ* ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್‌ʼ ವೆಬ್‌ನಲ್ಲಿ Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 8 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೀಡೆ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್‌ ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ ತಂಡ ಸೇರಿದರು. ಪ್ರಸ್ತುತ ಕಳೆದ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ ವೆಬ್‌ ಟೀಮ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಚೇತನಾ ದೇವರಮನಿ ತಮ್ಮ ಸಂಶೋಧನಾ ಕೌಶಲ್ಯ ಮತ್ತು ಬರವಣಿಗೆ ಶೈಲಿಯಿಂದ ಎಲ್ಲರ ಗಮನಸೆಳೆದಿದ್ದು, ಹೆಸರುವಾಸಿಯಾಗಿದ್ದಾರೆ. ಚೇತನಾ ದೇವರಮನಿಯವರ ಬರವಣಿಗೆಯ ಶೈಲಿ ಆಕರ್ಷಕ ಹಾಗೂ ತಿಳಿವಳಿಕೆಯಿಂದ ಕೂಡಿದ್ದು ನಿಷ್ಠಾವಂತ ಓದುಗರನ್ನು ಕಟ್ಟಿಕೊಳ್ಳಲು ಸಹಕಾರಿಯಾಗಿದೆ. ಚೇತನಾ ದೇವರಮನಿ ಅವರು ಬಿಡುವಿನ ವೇಳೆಯಲ್ಲಿ ಸಿನಿಮಾ ನೋಡುವುದು, ಪುಸ್ತಕ ಓದುವುದು, ಪ್ರವಾಸಕ್ಕೆ ಹೋಗುವುದನ್ನು ಆನಂದಿಸುತ್ತಾರೆ. ಈ ಚಟುವಟಿಕೆಗಳು ಅವರನ್ನು ರಿಫ್ರೆಶ್ ಮಾಡುತ್ತದೆ. ಇದೇ ಅವರಲ್ಲಿ ಚೈತನ್ಯ ತುಂಬುತ್ತದೆ. ಇದರಿಂದಲೇ ಅವರು ಕ್ರಿಯಾಶಿಲರಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ. ತಮ್ಮ ವಿಶ್ವಾಸಾರ್ಹ ಮಾಹಿತಿಪೂರ್ಣ ಬರಹಗಳ ಮೂಲಕ ಚೇತನಾ ದೇವರಮನಿಯವರು ಓದುಗ ವಲಯವನ್ನು ಪರಿಣಾಮಕಾರಿಯಾಗಿ ತಲುಪಲು ಶ್ರಮಿಸುತ್ತಿದ್ದಾರೆ. ಒಟ್ಟಾರೆ ಹೇಳುವುದಾದರೆ, ಚೇತನಾ ದೇವರಮನಿ ಅತ್ಯಂತ ನುರಿತ ಮತ್ತು ಅನುಭವಿ ಪತ್ರಕರ್ತರು, ಅವರು ತಮ್ಮ ಕೆಲಸದ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದಾರೆ."
Read More

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

highest paid actor in Sandalwood : ಕನ್ನಡ ಚಿತ್ರರಂಗ ಇಂದು ದೇಶದಾದ್ಯಂತ ಮಾತ್ರವಲ್ಲದೆ ಜಾಗತಿಕ ಮಟ್ಟದಲ್ಲೂ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಸ್ಯಾಂಡಲ್‌ವುಡ್‌ನ ಸೂಪರ್‌ ಸ್ಟಾರ್‌ಗಳಾದ ಯಶ್, ಕಿಚ್ಚ ಸುದೀಪ್, ದರ್ಶನ್, ಶಿವರಾಜ್‌ಕುಮಾರ್, ಉಪೇಂದ್ರ, ರಿಷಬ್ ಶೆಟ್ಟಿ ಸೇರಿದಂತೆ ಹಲವು ನಟರು ತಮ್ಮದೇ ಆದ ಅಭಿಮಾನಿ ಬಳಗ ಮತ್ತು ಬೃಹತ್ ಮಾರುಕಟ್ಟೆ ಮೌಲ್ಯವನ್ನು ಹೊಂದಿದ್ದಾರೆ. ಕನ್ನಡದ ನಟರು ನಟಿಸಿದ ಸಿನಿಮಾಗಳು ಜಾಗತಿಕ ಮಟ್ಟದಲ್ಲಿ ಹಿಟ್‌ ಪಡೆಯುತ್ತಿವೆ.

ಸ್ಟಾರ್ ನಟರ ಸಿನಿಮಾಗಳ ಬಜೆಟ್ ಹೆಚ್ಚಾಗುತ್ತಿದ್ದಂತೆ ಅವರ ಸಂಭಾವನೆ ಕೂಡ ಕೋಟಿಗಳಲ್ಲಿ ಏರುತ್ತಿದೆ. ಸಿನಿಮಾ ಸಂಭಾವನೆಯ ಜೊತೆಗೆ ಜಾಹೀರಾತು, ಟಿವಿ ಕಾರ್ಯಕ್ರಮಗಳು, ನಿರ್ಮಾಣ, ನಿರ್ದೇಶನ, ಬ್ರ್ಯಾಂಡ್ ಅಂಬಾಸಿಡರ್‌ ಮತ್ತು ವಿವಿಧ ಹೂಡಿಕೆಗಳಿಂದಲೂ ನಟರು ಆದಾಯ ಗಳಿಸುತ್ತಿದ್ದಾರೆ. ಸಂಭಾವನೆ ಹೆಚ್ಚಿದಂತೆ ನಟರ ಆಸ್ತಿಯೂ ಏರಿಕೆಯಾಗುತ್ತದೆ. ಇದೀಗ ಸ್ಯಾಂಡಲ್‌ವುಡ್‌ನಲ್ಲಿ ಯಾವ ನಟ ಅತಿ ಹೆಚ್ಚು ಆಸ್ತಿಯನ್ನು ಹೊಂದಿದ್ದಾರೆ ಎಂಬ ಮಾಹಿತಿ ಇಲ್ಲಿದೆ...

ಸ್ಯಾಂಡಲ್‌ವುಡ್‌ನ ಶ್ರೀಮಂತ ನಟ ರಾಕಿಂಗ್ ಸ್ಟಾರ್ ಯಶ್‌. ‘ಕೆಜಿಎಫ್‌ ೧’ ಮತ್ತು ‘ಕೆಜಿಎಫ್ 2’ ಸಿನಿಮಾಗಳ ನಂತರ ಯಶ್ ಸಂಭಾವನೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಯಶ್ ಈಗ ಪ್ಯಾನ್-ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡಿರುವ ಸ್ಟಾರ್‌ ನಟ.ಮಾಧ್ಯಮ ವರದಿಗಳ ಪ್ರಕಾರ ಯಶ್‌ ಆಸ್ತಿ ₹350 ರಿಂದ ₹400 ಕೋಟಿ ಎಂದು ಅಂದಾಜಿಸಲಾಗಿದೆ. ಯಶ್ ಅವರು ಒಂದು ಸಿನಿಮಾಗೆ ಸುಮಾರು ₹100 ಕೋಟಿಗೂ ಅಧಿಕ ಸಂಭಾವನೆ ಪಡೆಯುತ್ತಿದ್ದಾರೆ. ಬೆಂಗಳೂರಿನ ಪ್ರತಿಷ್ಠಿತ ಪ್ರದೇಶದಲ್ಲಿ ಸುಂದರವಾದ ಐಷಾರಾಮಿ ಮನೆ ಹಾಗೂ ಅಪಾರ್ಟ್‌ಮೆಂಟ್‌ಗಳನ್ನು ಹೊಂದಿದ್ದಾರೆ. ಯಶ್ ಮತ್ತು ರಾಧಿಕಾ ದಂಪತಿ ಮಹಾರಾಷ್ಟ್ರದ ಪ್ರಸಿದ್ಧ ಪ್ರವಾಸಿ ತಾಣವಾದ ಅಲಿಬಾಗ್‌ನಲ್ಲಿ ಸುಮಾರು ₹24 ಕೋಟಿ ಮೌಲ್ಯದ ಐಷಾರಾಮಿ ಕಡಲತೀರದ ಜಮೀನನ್ನು ಖರೀದಿಸಿದ್ದಾರೆ. ರೇಂಜ್ ರೋವರ್ ಇವೊಕ್, ಮರ್ಸಿಡಿಸ್ ಬೆಂಜ್ ಜಿಎಲ್‌ಎಸ್, ಆಡಿ ಕ್ಯೂ7 ಮತ್ತು ಬಿಎಂಡಬ್ಲ್ಯು ಮುಂತಾದ ಕೋಟ್ಯಂತರ ರೂ. ಬೆಲೆಯ ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ.

ಇತ್ತೀಚಿನ ಮಾಧ್ಯಮ ವರದಿಗಳ ಪ್ರಕಾರ, ಅಭಿನಯ ಚಕ್ರವರ್ತಿ ಸುದೀಪ್ ಅವರು ಕನ್ನಡ ಚಿತ್ರರಂಗದ ಅತ್ಯಂತ ಶ್ರೀಮಂತ ನಟರ ಪೈಕಿ ಒಬ್ಬರು ಎನ್ನಲಾಗುತ್ತಿದೆ. ಕೆಲವು ವರದಿಗಳ ಪ್ರಕಾರ, ನಟ ಸುದೀಪ್ ಒಟ್ಟು ಆಸ್ತಿ ಮೌಲ್ಯ ಸುಮಾರು ₹165 ಕೋಟಿ ಇರಬಹುದು ಎಂದು ಅಂದಾಜಿಸಲಾಗಿದೆ. ಆದರೆ ಸುದೀಪ್ ಆಸ್ತಿ ಮೌಲ್ಯವನ್ನು ಅಧಿಕೃತವಾಗಿ ದೃಢೀಕರಿಸಲಾಗಿಲ್ಲ.

ಕಿಚ್ಚ ಸುದೀಪ್ ಕನ್ನಡ ಚಿತ್ರರಂಗದಲ್ಲಿ ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಸಕ್ರಿಯರಾಗಿರುವ ಬೃಹತ್‌ ಸ್ಟಾರ್‌ ಡಮ್‌ ಹೊಂದಿರುವ ನಟ. ‘ಹುಚ್ಚ’, ‘ಸ್ವಾತಿಮುತ್ತು’, ‘ಮೈ ಆಟೋಗ್ರಾಫ್’, ‘ವೀರ ಮದಕರಿ’, ‘ಕೆಂಪೇಗೌಡ’ ಸೇರಿದಂತೆ ಹಲವು ಸಿನಿಮಾಗಳ ಮೂಲಕ ಸುದೀಪ್‌ ತಮ್ಮದೇ ಆದ ಸ್ಥಾನವನ್ನು ಸಿನಿರಂಗದಲ್ಲಿ ನಿರ್ಮಿಸಿಕೊಂಡಿದ್ದಾರೆ. ಕನ್ನಡದ ಜೊತೆಗೆ ಹಿಂದಿ, ತೆಲುಗು ಮತ್ತು ತಮಿಳು ಸಿನಿಮಾಗಳಲ್ಲೂ ನಟಿಸಿರುವ ಸುದೀಪ್ ದೇಶಾದ್ಯಂತ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ನಟನೆಯ ಜೊತೆಗೆ ನಿರ್ದೇಶನ ಮತ್ತು ನಿರ್ಮಾಣದಲ್ಲೂ ಸುದೀಪ್‌ ತೊಡಗಿಸಿಕೊಂಡಿದ್ದಾರೆ. ಇದರ ಜೊತೆಗೆ ‘ಬಿಗ್ ಬಾಸ್ ಕನ್ನಡ’ ಕಾರ್ಯಕ್ರಮದ ನಿರೂಪಕರಾಗಿಯೂ ಅಪಾರ ಜನಪ್ರಿಯತೆ ಗಳಿಸಿದ್ದಾರೆ. ಹೀಗಾಗಿ ನಟ ಸುದೀಪ್‌ ಆದಾಯದ ಮೂಲ ಕೇವಲ ಸಿನಿಮಾ ಸಂಭಾವನೆಗೆ ಸೀಮಿತವಾಗಿಲ್ಲ. ಸುದೀಪ್‌ ಅವರು ಜಾಹೀರಾತುಗಳಲ್ಲೂ ಸಹ ನಟಿಸುತ್ತಾರೆ. ಅಲ್ಲದೇ ಬಿಗ್‌ ಬಾಸ್‌ ನಿಂದಲೂ ಕೋಟಿಗಟ್ಟಲೇ ಸಂಭಾವನೆ ಪಡೆಯುತ್ತಾರೆ. ಸಿನಿಮಾ ನಿರ್ಮಾಣದಿಂದಲೂ ಸುದೀಪ್‌ ಹಣ ಸಂಪಾದಿಸುತ್ತಾರೆ. ಹೋಟೆಲ್‌ ಉದ್ಯಮದಲ್ಲೂ ಸುದೀಪ್‌ ಎಂಟ್ರಿ ಕೊಟ್ಟಿದ್ದು, ತಮ್ಮದೇ ರೆಸ್ಟೋರೆಂಟ್‌ ಹೊಂದಿದ್ದಾರೆ. ಇದೂ ಕೂಡ ಸುದೀಪ್‌ ಆದಾಯದ ಒಂದು ಮೂಲವಾಗಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಕನ್ನಡ ಚಿತ್ರರಂಗದ ಅತ್ಯಂತ ಜನಪ್ರಿಯ ಹಾಗೂ ಶ್ರೀಮಂತ ನಟರಲ್ಲಿ ಒಬ್ಬರು. ‘ಕರಿಯ’, ‘ಕಲಾಸಿಪಾಳ್ಯ’, ‘ಸಾರಥಿ’, ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’, ‘ರಾಬರ್ಟ್’, ‘ಕಾಟೇರ’ ಸೇರಿದಂತೆ ಹಲವು ಸಿನಿಮಾಗಳು ದರ್ಶನ್ ಗೆ ದೊಡ್ಡ ಯಶಸ್ಸು ತಂದುಕೊಟ್ಟಿವೆ. ದರ್ಶನ್ ಅವರ ಮಾಸ್ ಇಮೇಜ್ ಮತ್ತು ರಾಜ್ಯಾದ್ಯಂತ ಇರುವ ಬೃಹತ್ ಅಭಿಮಾನಿ ಬಳಗದಿಂದಾಗಿ ಅವರ ಸಿನಿಮಾಗಳಿಗೆ ದೊಡ್ಡ ಮಟ್ಟದ ಮಾರುಕಟ್ಟೆ ಇದೆ. ಕನ್ನಡದ ಜನಪ್ರಿಯ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಒಟ್ಟು ಆಸ್ತಿಯ ಮೌಲ್ಯವು ಅಂದಾಜು 100 ಕೋಟಿ ರೂಪಾಯಿಗಳಿಗೂ ಅಧಿಕವಿದೆ ಎಂದು ಅಂದಾಜಿಸಲಾಗಿದೆ.

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಕೂಡ ಸ್ಯಾಂಡಲ್‌ವುಡ್‌ನ ಅತ್ಯಂತ ಶ್ರೀಮಂತ ನಟರಲ್ಲಿ ಒಬ್ಬರು. 1980ರ ದಶಕದಿಂದಲೂ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಶಿವರಾಜ್‌ಕುಮಾರ್ ಹಲವು ದಶಕಗಳ ವೃತ್ತಿಜೀವನದಲ್ಲಿ ನೂರಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಓಂ’, ‘ಜನುಮದ ಜೋಡಿ’, ‘ಜೋಗಿ’, ‘ಟಗರು’ ಸೇರಿದಂತೆ ಅನೇಕ ಸಿನಿಮಾಗಳು ಪ್ರಮುಖ ಚಿತ್ರಗಳಾಗಿವೆ. ಇತ್ತೀಚಿನ ವರ್ಷಗಳಲ್ಲಿ ಶಿವರಾಜ್‌ಕುಮಾರ್ ಕನ್ನಡದ ಜೊತೆಗೆ ಇತರ ಭಾಷೆಗಳ ಸಿನಿಮಾಗಳಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ನಟ ಶಿವರಾಜ್‌ಕುಮಾರ್ ಅವರ ಹೆಸರಿನಲ್ಲಿ ಸುಮಾರು 18 ರಿಂದ 49 ಕೋಟಿ ರೂಪಾಯಿಗಳವರೆಗೂ ಆಸ್ತಿ ಎಂದು ಅಂದಾಜಿಸಲಾಗಿದೆ.

ಕನ್ನಡ ಚಿತ್ರರಂಗದ ಖ್ಯಾತ ನಟ, ನಿರ್ದೇಶಕ ಮತ್ತು ನಿರೂಪಕರಾದ ರಮೇಶ್ ಅರವಿಂದ್ ಅವರ ಒಟ್ಟು ಆಸ್ತಿಯ ಮೌಲ್ಯದ ಕುರಿತು ಅಧಿಕೃತವಾಗಿ ಯಾವುದೇ ನಿಖರವಾದ ಮಾಹಿತಿ ಲಭ್ಯವಿಲ್ಲ. ಆದಾಗ್ಯೂ, ವಿವಿಧ ಮಾಧ್ಯಮಗಳ ಮತ್ತು ವೆಬ್‌ಸೈಟ್‌ಗಳ ಅಂದಾಜಿನ ಪ್ರಕಾರ ಅವರ ನಿವ್ವಳ ಆಸ್ತಿ ಮೌಲ್ಯ ಸರಿಸುಮಾರು ₹40 ಕೋಟಿಯಿಂದ ₹60 ಕೋಟಿ ರೂ. ಇರಬಹುದು ಎಂದು ಅಂದಾಜಿಸಲಾಗಿದೆ.  

Add Zee News as a Preferred Source
TAGS:
Cinema