SOCIAL MEDIA

Newsletter

PARTNER SITES
Select Language Select State

"ಚಿತ್ರರಂಗದಲ್ಲಿ ನಾನು ಮಾಡಿದ ದೊಡ್ಡ ತಪ್ಪು ಇದೇ "ಏನದು ಸ್ಟಾರ್‌ ನಟಿ ಹೇಳಿದ ಸತ್ಯ

Actress : ನಾಯಕಿಯಾಗಿ ಸ್ಯಾಂಡಲ್‌ವುಡ್‌ ಅಲ್ಲ, ತಮಿಳು ಚಿತ್ರರಂಗದಲ್ಲಿ ಗುರುತಿಸಿಕೊಂಡ ನಟಿ ಇದೀಗ ತಮ್ಮ ಸಿನಿ ಕೆರಿಯರ್‌ನ ಆರಂಭದ ದಿನಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಚಿತ್ರರಂಗದಲ್ಲಿ ತಾವು ಮಾಡಿದ ದೊಡ್ಡ ತಪ್ಪೇನು? ಅವಕಾಶಗಳು ಯಾಕೆ ತಡವಾದವು? ಈ ಬಗ್ಗೆ ನಟಿ ಹೇಳಿದ್ದೇನು? ಇಲ್ಲಿದೆ ಸಂಪೂರ್ಣ ಮಾಹಿತಿ.

Written By Ramya. R. Gowda
Published: Sep 26, 2026, 10:11 AM IST | Updated: Sep 26, 2026, 10:26 AM IST
Join

‘Bachelor’ ಸಿನಿಮಾ ಮೂಲಕ ನಾಯಕಿಯಾಗಿ ಸ್ಯಾಂಡಲ್‌ವುಡ್‌ ಅಲ್ಲ, ತಮಿಳು ಚಿತ್ರರಂಗದಲ್ಲಿ ಗುರುತಿಸಿಕೊಂಡ ನಟಿ ದಿವ್ಯ ಭಾರತಿ ಇದೀಗ ತಮ್ಮ ಸಿನಿ ಕೆರಿಯರ್‌ನ ಆರಂಭದ ದಿನಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಚಿತ್ರರಂಗದಲ್ಲಿ ತಾವು ಮಾಡಿದ ದೊಡ್ಡ ತಪ್ಪೇನು? ಅವಕಾಶಗಳು ಯಾಕೆ ತಡವಾದವು? ಈ ಬಗ್ಗೆ ನಟಿ ಹೇಳಿದ್ದೇನು? ಇಲ್ಲಿದೆ ಸಂಪೂರ್ಣ ಮಾಹಿತಿ.


ಮಾಡೆಲಿಂಗ್‌ನಿಂದ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ನಟಿ ದಿವ್ಯ ಭಾರತಿ, ಇಂದು ದಕ್ಷಿಣ ಭಾರತದ ಹಲವು ಭಾಷೆಗಳ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. 2017ರಲ್ಲಿ ಬಿಡುಗಡೆಯಾದ ‘Mupparimaanam’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಅವರು, ಆರಂಭದಲ್ಲಿ ನಾಯಕಿಯ ಸ್ನೇಹಿತೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆ ಬಳಿಕ ‘Bachelor’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಅವಕಾಶ ದಿವ್ಯ ಭಾರತಿ ಅವರಿಗೆ ಸಿಕ್ಕಿತ್ತು. ಈ ಸಿನಿಮಾ ಬಿಡುಗಡೆಯಾದ ಬಳಿಕ ಅವರಿಗೂ ಸಾಕಷ್ಟು ಜನಪ್ರಿಯತೆ ಸಿಕ್ಕಿತ್ತು. ನಂತರ ‘Maharaja’, ‘Kingston’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ತೆಲುಗು ಚಿತ್ರರಂಗದಲ್ಲೂ ಸತತವಾಗಿ ಸಿನಿಮಾಗಳನ್ನು ಮಾಡುತ್ತಿದ್ದಾರೆ.


‘ಚಿತ್ರರಂಗದಲ್ಲಿ ನಾನು ಮಾಡಿದ ದೊಡ್ಡ ತಪ್ಪು ಇದೇ!’
ಇತ್ತೀಚಿನ ಸಂದರ್ಶನವೊಂದರಲ್ಲಿ ತಮ್ಮ ಸಿನಿ ಪಯಣದ ಆರಂಭದ ದಿನಗಳನ್ನು ನೆನಪಿಸಿಕೊಂಡಿರುವ ದಿವ್ಯ ಭಾರತಿ, ಚಿತ್ರರಂಗದಲ್ಲಿ ತಾವು ಮಾಡಿದ ದೊಡ್ಡ ತಪ್ಪಿನ ಬಗ್ಗೆ ಮಾತನಾಡಿದ್ದಾರೆ. ‘Bachelor’ ಸಿನಿಮಾ ಬಿಡುಗಡೆಯಾದ ಬಳಿಕ ಅವಕಾಶಗಳು ತಾನಾಗಿಯೇ ತಮ್ಮನ್ನು ಹುಡುಕಿಕೊಂಡು ಬರುತ್ತವೆ ಎಂದು ಭಾವಿಸಿದ್ದೇ ತಮ್ಮ ದೊಡ್ಡ ತಪ್ಪು ಎಂದು ಹೇಳಿದ್ದಾರೆ.

ಇದು ತಮ್ಮ ಪ್ರತಿಭೆಯ ಮೇಲಿನ ಅತಿಯಾದ ಆತ್ಮವಿಶ್ವಾಸದಿಂದ ಬಂದ ಆಲೋಚನೆಯಲ್ಲ. ಚಿತ್ರರಂಗವೇ ಹೀಗೆ ಕೆಲಸ ಮಾಡುತ್ತದೆ ಎಂದು ನಿಜವಾಗಿಯೂ ನಂಬಿದ್ದೆ ಎಂದು ದಿವ್ಯ ಭಾರತಿ ಹೇಳಿದ್ದಾರೆ. ಚಿತ್ರರಂಗದ ಹಿನ್ನೆಲೆ ಇಲ್ಲದ ಕಾರಣ, ಅವಕಾಶಗಳಿಗಾಗಿ ತಾವೇ ಮುಂದೆ ಬಂದು ಜನರನ್ನು ಭೇಟಿಯಾಗಬೇಕು, ಸಂಪರ್ಕಗಳನ್ನು ಬೆಳೆಸಿಕೊಳ್ಳಬೇಕು ಎಂಬುದನ್ನು ಆರಂಭದಲ್ಲಿ ಅರ್ಥಮಾಡಿಕೊಳ್ಳಲಿಲ್ಲ ಎಂದಿದ್ದಾರೆ.


ಉತ್ತಮ ಅವಕಾಶಗಳು ಸಿಗುವವರೆಗೆ ತಾವು ಕಾಯುತ್ತಲೇ ಇದ್ದೆ. ಆದರೆ ಈಗ ಹಿಂದಿರುಗಿ ನೋಡಿದಾಗ, ತುಂಬಾ ಸಮಯ ಕಾಯುತ್ತಿದ್ದೆ ಎನಿಸುತ್ತದೆ. ಇದರಿಂದ ತಮ್ಮ ಸಿನಿ ಪಯಣವೂ ತಡವಾಯಿತು ಎಂದು ದಿವ್ಯ ಭಾರತಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ.


ಪ್ರತಿಭೆ ಮಾತ್ರ ಸಾಲದು... ಸಂಪರ್ಕವೂ ಮುಖ್ಯ!
ಚಿತ್ರರಂಗದಲ್ಲಿ ಪ್ರತಿಭೆಯ ಜೊತೆಗೆ ಸರಿಯಾದ ಸಂಪರ್ಕಗಳನ್ನು ಬೆಳೆಸಿಕೊಳ್ಳುವುದು ಮತ್ತು ಅವಕಾಶಗಳಿಗಾಗಿ ಸ್ವತಃ ಪ್ರಯತ್ನಿಸುವುದೂ ಅಷ್ಟೇ ಮುಖ್ಯ ಎಂಬುದನ್ನು ತಡವಾಗಿ ಅರಿತುಕೊಂಡಿದ್ದೇನೆ ಎಂಬುದು ದಿವ್ಯ ಭಾರತಿ ಮಾತಿನ ಸಾರ. ತಮ್ಮ ಆರಂಭದ ದಿನಗಳ ಅನುಭವವನ್ನು ಮುಕ್ತವಾಗಿ ಹಂಚಿಕೊಂಡಿರುವ ನಟಿಯ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆಯುತ್ತಿದೆ.

ನಾನು ಹೀಗೆ ಉತ್ತಮ ಅವಕಾಶಗಳು ಸಿಗುವವರೆಗೆ ನಾನು ಕಾಯುತ್ತಲ್ಲೇ ಇದ್ದೆ. ಈಗ ಹಿಂದಿರುಗಿ ನೋಡಿದ್ದಾಗ ನಾನು ತುಂಬಾ ಸಮಯ ಕಾಯುತ್ತಿದೆ ಎಂದು ಅನಿಸುತ್ತದೆ ಅದರಿಂದ ನನ್ನ ಸಿನಿ ಪಯಣವೂ ತಡವಾಯಿತು ಎಂದು ಅವರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಇತ್ತ ಚಿತ್ರರಂಗದಲ್ಲಿ ಪ್ರತಿಭೆಯ ಜೊತೆಗೆ ಸರಿಯಾದ ಸಂಪರ್ಕಗಳು ಮತ್ತು ಅವಕಾಶಗಳಿಗಾಗಿ ಸ್ವತಃ ಪ್ರಯತ್ನಿಸುವುದು ಕೂಡ ಮುಖ್ಯ ಎಂಬುದನ್ನು ತಡವಾಗಿ ಅರಿತುಕೊಂಡಿರುವುದಾಗಿ ದಿವ್ಯ ಭಾರತಿ ಅವರ ಈ ಮಾತುಗಳು ಸೂಚಿಸುತ್ತವೆ.

ಈ ಸ್ಟಾರ್‌ ನಟಿ ದಿವ್ಯ ಭಾರತಿ ಆರಂಭದಲ್ಲಿ ಮಾಡೆಲಿಂಗ್‌ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದರು. ಬಳಿಕ 2017ರಲ್ಲಿ ಬಿಡುಗಡೆಯಾದ Mupparimaanam ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ಈ ಸಿನಿಮಾದಲ್ಲಿ ನಾಯಕಿಯ ಸ್ನೇಹಿತೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಅವರು, ನಂತರದ ಸಿನಿಮಾದಲ್ಲೇ ನಾಯಕಿಯಾಗಿ ನಟಿಸುವ ಅವಕಾಶ ಪಡೆದುಕೊಂಡರು.
 

ಹೀಗೆ ತಮ್ಮ ಸಿನಿ ಕೆರಿಯರ್‌ನ ಆರಂಭದ ದಿನಗಳಲ್ಲಿ ಮಾಡಿದ ತಪ್ಪು ಮತ್ತು ಅದರಿಂದ ಕಲಿತ ಪಾಠವನ್ನು ದಿವ್ಯ ಭಾರತಿ ಹಂಚಿಕೊಂಡಿದ್ದಾರೆ.

 

 

 

 

 

 

Add Zee News as a Preferred Source
TAGS:

About the Author

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.

ZEENEWS TRENDING STORIES