SOCIAL MEDIA

Newsletter

PARTNER SITES
Select Language Select State

'ದಿ ಪ್ಯಾರಡೈಸ್'ನಲ್ಲಿ ನಾನಿಗೆ 2 ಜಡೆ ಏಕಿದೆ ಗೊತ್ತೆ? ಬಾಯಿ ತಪ್ಪಿ ಸಿನಿಮಾ ಸಿಕ್ರೇಟ್‌ ಬಿಚ್ಚಿಟ್ಟ ಡೈರೆಕ್ಟರ್‌

ನ್ಯಾಚುರಲ್ ಸ್ಟಾರ್ ನಾನಿ ಮತ್ತು ನಿರ್ದೇಶಕ ಶ್ರೀಕಾಂತ್ ಒಡೆಲಾ ಅವರ ಕಾಂಬಿನೇಷನ್‌ನ ಪ್ಯಾನ್-ಇಂಡಿಯಾ ಚಿತ್ರ 'ದಿ ಪ್ಯಾರಡೈಸ್' ಸೆಪ್ಟೆಂಬರ್ 24, 2026 ರಂದು ಬಹುಭಾಷೆಯಲ್ಲಿ ತೆರೆ ಕಾಣಲಿದೆ. ಇದರ ನಡುವೆ ಸಿನಿಮಾದಲ್ಲಿ ನಾನಿಗೆ ಎರಡು ಜಡೆ ಇರುವ ಬಗ್ಗೆ ಡೈಕರೆಕ್ಟರ್‌ ಮಾತನಾಡಿದ್ದು, ಅದರ ಹಿಂದಿರುವ ರಹಸ್ಯ ಬಿಚ್ಚಿಟ್ಟಿದ್ದಾರೆ...

Reported By Krishna NK Written By Krishna NK
Published: Sep 20, 2026, 03:52 PM IST | Updated: Sep 20, 2026, 03:56 PM IST
Image Credit: Actor Nani
Join

Srikanth Odela on Nani Look : ನ್ಯಾಚುರಲ್ ಸ್ಟಾರ್ ನಾನಿ ಹಾಗೂ ನಿರ್ದೇಶಕ ಶ್ರೀಕಾಂತ್ ಒಡೆಲಾ ಕಾಂಬಿನೇಷನ್‌ನ 'ದಿ ಪ್ಯಾರಡೈಸ್' ಚಿತ್ರವು ಸೆಪ್ಟೆಂಬರ್ 24, 2026 ರಂದು ತೆಲುಗು, ಕನ್ನಡ, ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ. ಎಸ್‌ಎಲ್‌ವಿ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಸುಧಾಕರ್ ಚೆರುಕುರಿ ನಿರ್ಮಿಸಿರುವ ಈ ಚಿತ್ರದಲ್ಲಿ ಕಾಯಧು ಲೋಹರ್, ಮೋಹನ್ ಬಾಬು, ರಾಘವ್ ಜುಯಾಲ್ ಹಾಗೂ ಸಂಪೂರ್ಣೇಶ್ ಬಾಬು ಮುಖ್ಯ ಪಾತ್ರಗಳಲ್ಲಿದ್ದಾರೆ.

ಕಥೆಗೆ ಸ್ಫೂರ್ತಿ ಮತ್ತು ಬಾಲ್ಯದ ನೆನಪುಗಳು
ರಿಯಲ್ ಲೈಫ್ ಘಟನೆಗಳು, ನೈಜ ಪಾತ್ರಗಳು ಹಾಗೂ ಕಲ್ಪಿತ ಕಥೆಯ ಸಮ್ಮಿಶ್ರಣವೇ ಈ ಸಿನಿಮಾ. ನಿರ್ದೇಶಕ ಶ್ರೀಕಾಂತ್ ತಮ್ಮ ಬಾಲ್ಯದ ಗೋದಾವರಿಖನಿ, ಆದಿಲಾಬಾದ್ ಪ್ರದೇಶದ ಘಟನೆಗಳು ಹಾಗೂ ಸಿಕಂದರಾಬಾದ್ ಕೊಳೆಗೇರಿಯ ವಾತಾವರಣದಿಂದ ಪ್ರೇರಣೆಗೊಂಡು ಈ ಸ್ಕ್ರಿಪ್ಟ್ ಸಿದ್ಧಪಡಿಸಿದ್ದಾರೆ.

ನಾನಿ ಜಡೆ ಹಿಂದಿದೆ ಭಾವುಕ ಕಥೆ
ನನಗೆ ಹೆಣ್ಣು ಮಗುವಾದರೆ ಚೆನ್ನಾಗಿರುತ್ತದೆ ಎಂದು ನನ್ನ ತಾಯಿ ಭಾವಿಸಿದ್ದರು. ಆದರೆ ನಾನು ಹುಟ್ಟಿದೆ. ಅದಕ್ಕೆ ಅಮ್ಮ ನನಗೆ ಜಡೆ ಹೆಣೆದು ಗೌನ್‌ ಹಾಕಿ ಸಂತೋಷ ಪಡುತ್ತಿದ್ದರು. ಎರಡನೇ ತರಗತಿಯವರೆಗೆ ನನಗೆ ಜಡೆ ಇತ್ತು. ನಾನು ಜಡೆ ಐಡಿಯಾವನ್ನು ನನ್ನ ಅಮ್ಮನಿಂದಲೇ ಪಡೆದುಕೊಂಡೆ. ಇದರ ಹಿಂದೆಯೂ ಸಾಕಷ್ಟು ಭಾವನೆ ಇದೆ ಅಂತ ಶ್ರೀಕಾಂತ್‌ ವಿವರಿಸಿದರು.

ದಸರಾ ನಿರಾಶೆಗೆ ವಾಣಿಜ್ಯಿಕ ಉತ್ತರ
'ದಸರಾ' ಸಂಪೂರ್ಣ ಡ್ರಾಮಾ ಆಗಿದ್ದರಿಂದ ಮಾಸ್ ಆಕ್ಷನ್ ನಿರೀಕ್ಷಿಸಿದ್ದ ಪ್ರೇಕ್ಷಕರಿಗೆ ಸಂಪೂರ್ಣ ತೃಪ್ತಿ ಸಿಕ್ಕಿರಲಿಲ್ಲ. ಆ ಕೊರತೆಯನ್ನು ನೀಗಿಸಲು ಪ್ರೇಕ್ಷಕರು ಬಯಸುವ ರೀತಿಯಲ್ಲಿಯೇ 'ದಿ ಪ್ಯಾರಡೈಸ್' ಕಥೆಯನ್ನು ಆಕ್ಷನ್ ಹಾಗೂ ತಾಯಿ-ಮಗನ ಬಲವಾದ ಭಾವನೆಗಳೊಂದಿಗೆ ನಾನಿ ಅವರ ಮುಖಾಂತರ ತರಲಾಗುತ್ತಿದೆ.

ಟ್ರೇಲರ್ ಬಿಡುಗಡೆ ಮಾಡದಿರಲು ಕಾರಣ
ಟ್ರೇಲರ್ ಕಟ್ ಮಾಡಲು ಹೆಚ್ಚಿನ ಸಮಯ ಬೇಕಾಗುವುದರಿಂದ ಹಾಗೂ ಪ್ರೇಕ್ಷಕರು ಯಾವುದೇ ಮುನ್ಸೂಚನೆ ಇಲ್ಲದೆ ನೇರವಾಗಿ ಚಿತ್ರಮಂದಿರಕ್ಕೆ ಬಂದು ಆಶ್ಚರ್ಯಪಡಲಿ ಎಂಬ ಉದ್ದೇಶದಿಂದ ಟ್ರೇಲರ್ ಬಿಡುಗಡೆ ಮಾಡಿಲ್ಲ.

40 ದಿನಗಳ ಕಠಿಣ ಪರಿಶ್ರಮ ಮತ್ತು ಶೂಟಿಂಗ್ ವಿಳಂಬ
ಪರ್ಫೆಕ್ಟ್ ಶೂಟ್‌ಗಾಗಿ ತಂಡದೊಂದಿಗೆ ಕಳೆದ 40 ದಿನಗಳಿಂದ ಮನೆಗೂ ಹೋಗದೆ ಕೆಲಸ ಮಾಡಲಾಗಿದೆ. ಶೂಟಿಂಗ್ ಆರಂಭಿಕ ಯೋಜನೆಯಂತೆ 160 ದಿನಗಳ ಬದಲು 170 ದಿನಗಳನ್ನು ತೆಗೆದುಕೊಂಡಿದೆಯೇ ಹೊರತು ಯಾವುದೇ ರೀಶೂಟ್‌ಗಳನ್ನು ಮಾಡಲಾಗಿಲ್ಲ.

ತಾರಾಗಣ ಮತ್ತು ಅನಿರುದ್ಧ್ ಸಂಗೀತ
ನಾನಿ ಅವರೊಂದಿಗಿನ ಸಹೋದರತ್ವದ ಬಾಂಧವ್ಯ, ಮೋಹನ್ ಬಾಬು ಅವರ ಪ್ರಮುಖ ಪಾತ್ರ ಹಾಗೂ ಸಂಪೂರ್ಣೇಶ್ ಬಾಬು ಅವರ ವಿಭಿನ್ನ ಅಭಿನಯ ಚಿತ್ರದ ಪ್ಲಸ್ ಪಾಯಿಂಟ್. ಅನಿರುದ್ಧ್ ರವಿಚಂದರ್ ಅವರ ಸಂಗೀತದಲ್ಲಿ ಬಿಟ್ ಹಾಡುಗಳು ಸೇರಿ ಒಟ್ಟು 6 ಹಾಡುಗಳಿದ್ದು, ಬಾಲ್ಯದಲ್ಲಿ ಕೇಳುತ್ತಿದ್ದ ಜಾನಪದ ಶೈಲಿಯ 'ಈಶಾ ನಗುಲಾ' ಹಾಡನ್ನು ಇದರಲ್ಲಿ ಬಳಸಿಕೊಳ್ಳಲಾಗಿದೆ.

ಮುಂದಿನ ಯೋಜನೆ ಹಾಗೂ ಚಿರಂಜೀವಿ ಸಿನಿಮಾ
ಈ ಚಿತ್ರಕ್ಕೆ ಯಾವುದೇ ಸೀಕ್ವೆಲ್ ಅಥವಾ ಪ್ರೀಕ್ವೆಲ್ ಇರುವುದಿಲ್ಲ. ಸಿನಿಮಾ ಬಿಡುಗಡೆಯ ನಂತರ ಕೆಲ ತಿಂಗಳುಗಳ ಕಾಲ ವಿಶ್ರಾಂತಿ ಪಡೆಯಲಿದ್ದು, ಅದರ ನಂತರ ಮೆಗಾಸ್ಟಾರ್ ಚಿರಂಜೀವಿ ಅವರೊಂದಿಗಿನ ಸಿನಿಮಾ 100% ಸೆಟ್ ಏರಲಿದೆ.

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ZEENEWS TRENDING STORIES