• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಮನರಂಜನೆ
  • /ಥಿಯೇಟರ್‌ನಲ್ಲಿ 'ರಾಮಾಯಣ' ನೋಡ್ತೀರಾ? ಈ ತಪ್ಪು ಮಾಡಿದ್ರೆ ಸಂಕಷ್ಟ ಖಚಿತ ಜೈಲು ಗ್ಯಾರಂಟಿನಾ?

ಥಿಯೇಟರ್‌ನಲ್ಲಿ 'ರಾಮಾಯಣ' ನೋಡ್ತೀರಾ? ಈ ತಪ್ಪು ಮಾಡಿದ್ರೆ ಸಂಕಷ್ಟ ಖಚಿತ ಜೈಲು ಗ್ಯಾರಂಟಿನಾ?

ದೀಪಾವಳಿ ಉಡುಗೊರೆಯಾಗಿ ತೆರೆಕಂಡ 'ರಾಮಾಯಣ' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆ ಬರೆಯುತ್ತಿದೆ. ಬಿಡುಗಡೆಯಾದ ಕೆಲವೇ ದಿನಗಳಲ್ಲಿ 500 ಕೋಟಿ ರೂಪಾಯಿ ಗಳಿಕೆ ದಾಟಿರುವ ಸಿನಿಮಾ, ಇದೀಗ 1000 ಕೋಟಿ ಕ್ಲಬ್ ಸೇರುವತ್ತ ಮುನ್ನುಗ್ಗುತ್ತಿದೆ. ಈ ವಾರಾಂತ್ಯದೊಳಗೆ ಸಾವಿರ ಕೋಟಿ ಗಡಿ ದಾಟುವ ಸಾಧ್ಯತೆಯಿದೆ ಎಂದು ಸಿನಿಮಾ ವ್ಯಾಪಾರ ತಜ್ಞರು ಅಂದಾಜಿಸಿದ್ದಾರೆ. ಮತ್ತೊಂದೆಡೆ, ಸಿನಿಮಾದ ಪೈರಸಿ ತಡೆಯಲು ಬಾಂಬೆ ಹೈಕೋರ್ಟ್ ಕೂಡ ಕಟ್ಟುನಿಟ್ಟಿನ ಆದೇಶ ನೀಡಿದೆ. ಹಾಗಾದ್ರೆ ರಾಮಾಯಣದ ಗಳಿಕೆ ಎಷ್ಟು? ಪೈರಸಿ ಮಾಡಿದ್ರೆ ಏನಾಗುತ್ತೆ? ನೋಡೋಣ ಈ ವರದಿ.

Written ByRamya. R. Gowda
Published: Nov 10, 2026, 15:42 IST|Updated: Nov 10, 2026, 15:57 IST
joinshare
ಥಿಯೇಟರ್‌ನಲ್ಲಿ 'ರಾಮಾಯಣ' ನೋಡ್ತೀರಾ? ಈ ತಪ್ಪು ಮಾಡಿದ್ರೆ ಸಂಕಷ್ಟ ಖಚಿತ ಜೈಲು ಗ್ಯಾರಂಟಿನಾ?

About the Author

Ramya. R. Gowda

Ramya. R. Gowda

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.
Read More

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

2

ಭಾರತದಲ್ಲಿ ಅತಿ ಹೆಚ್ಚು ಬಳಕೆಯಾಗುವ ಪಾಸ್‌ವರ್ಡ್ ಇಲ್ಲಿದೆ ನೋಡಿ

3

ಆಸಿಯಾ ಮೇಲೆ ಸೌಂದರ್ಯಾ ಶೆಟ್ಟಿ ಹಲ್ಲೆ! ಇಂದೇ ಬಿಗ್‌ ಬಾಸ್‌ನಿಂದ ಹೊರ ಹೋಗ್ತಾರಾ?

4

'ಜೀ ನ್ಯೂಸ್' ಬಿಗ್‌ ಇಂಪ್ಯಾಕ್ಟ್: ದೆಹಲಿ ಫ್ಲಾಟ್ ಹರಾಜು ವಿವಾದದಲ್ಲಿ ತಪ್ಪೊಪ್ಪಿಕೊಂಡ NBCC

5

ಮುದ್ದು ಮಗಳ ಸಾವಿನ ನಂತರ ಬರಿಗಾಲಲ್ಲೇ ನಡೆಯುತ್ತಾರೆ ಈ ನಟ... ಕೋಟಿ ಕೋಟಿ ಒಡೆಯನಾದರೂ ಇದೆಂಥ ಸ್ಥಿತಿ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ದೀಪಾವಳಿ ಉಡುಗೊರೆಯಾಗಿ ತೆರೆಕಂಡ 'ರಾಮಾಯಣ' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆ ಬರೆಯುತ್ತಿದೆ. ಬಿಡುಗಡೆಯಾದ ಕೆಲವೇ ದಿನಗಳಲ್ಲಿ 500 ಕೋಟಿ ರೂಪಾಯಿ ಗಳಿಕೆ ದಾಟಿರುವ ಸಿನಿಮಾ, ಇದೀಗ 1000 ಕೋಟಿ ಕ್ಲಬ್ ಸೇರುವತ್ತ ಮುನ್ನುಗ್ಗುತ್ತಿದೆ. ಈ ವಾರಾಂತ್ಯದೊಳಗೆ ಸಾವಿರ ಕೋಟಿ ಗಡಿ ದಾಟುವ ಸಾಧ್ಯತೆಯಿದೆ ಎಂದು ಸಿನಿಮಾ ವ್ಯಾಪಾರ ತಜ್ಞರು ಅಂದಾಜಿಸಿದ್ದಾರೆ. ಮತ್ತೊಂದೆಡೆ, ಸಿನಿಮಾದ ಪೈರಸಿ ತಡೆಯಲು ಬಾಂಬೆ ಹೈಕೋರ್ಟ್ ಕೂಡ ಕಟ್ಟುನಿಟ್ಟಿನ ಆದೇಶ ನೀಡಿದೆ. ಹಾಗಾದ್ರೆ ರಾಮಾಯಣದ ಗಳಿಕೆ ಎಷ್ಟು? ಪೈರಸಿ ಮಾಡಿದ್ರೆ ಏನಾಗುತ್ತೆ? ನೋಡೋಣ ಈ ವರದಿ.

ಬಾಕ್ಸ್ ಆಫೀಸ್‌ನಲ್ಲಿ ರಾಮಾಯಣದ್ದೇ ಅಬ್ಬರ..!
ದೀಪಾವಳಿ ಹಬ್ಬದ ಸಂಭ್ರಮಕ್ಕೆ ತೆರೆಕಂಡ ರಣಬೀರ್ ಕಪೂರ್ ಹಾಗೂ ಸಾಯಿ ಪಲ್ಲವಿ ಅಭಿನಯದ ರಾಮಾಯಣ ಸಿನಿಮಾ ಭರ್ಜರಿ ಸದ್ದು ಮಾಡ್ತಿದೆ. ನವೆಂಬರ್ 5ರಂದು ಬಿಡುಗಡೆಯಾದ ಈ ಸಿನಿಮಾ ಮೊದಲ ದಿನದಿಂದಲೇ ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ. ಹಿಂದಿ, ತೆಲುಗು ಮಾತ್ರವಲ್ಲದೆ, ಇತರ ಭಾಷೆಗಳಲ್ಲೂ ಸಿನಿಮಾ ಉತ್ತಮ ಗಳಿಕೆ ಮಾಡ್ತಿದೆ. ವಿದೇಶಗಳಲ್ಲೂ ಟಿಕೆಟ್ ಬುಕಿಂಗ್ ಜೋರಾಗಿದ್ದು, ಈಗಾಗಲೇ ವಿಶ್ವಾದ್ಯಂತ 500 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎನ್ನಲಾಗಿದೆ.

ಸಾವಿರ ಕೋಟಿ ಕ್ಲಬ್ ಮೇಲೆ ರಾಮಾಯಣ ಕಣ್ಣು..!
500 ಕೋಟಿ ಗಡಿ ದಾಟಿರುವ ರಾಮಾಯಣ ಸಿನಿಮಾ ಇದೀಗ 1000 ಕೋಟಿ ರೂಪಾಯಿ ಗಳಿಕೆಯತ್ತ ಹೆಜ್ಜೆ ಹಾಕ್ತಿದೆ. ಈ ವಾರಾಂತ್ಯದ ವೇಳೆಗೆ ಸಿನಿಮಾ ಸಾವಿರ ಕೋಟಿ ಕ್ಲಬ್ ಸೇರಬಹುದು ಎಂಬ ಲೆಕ್ಕಾಚಾರವನ್ನು ಸಿನಿಮಾ ವ್ಯಾಪಾರ ತಜ್ಞರು ಮುಂದಿಟ್ಟಿದ್ದಾರೆ. ಒಂದು ವೇಳೆ ಈ ಗುರಿ ತಲುಪಿದರೆ, ರಾಮಾಯಣದ ಬಾಕ್ಸ್ ಆಫೀಸ್ ದಾಖಲೆ ಮತ್ತಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡಲಿದೆ.

ಇನ್ನೊಂದೆಡೆ, ರಾಮಾಯಣ ಸಿನಿಮಾದ ಪೈರಸಿಗೆ ಕಡಿವಾಣ ಹಾಕಲು ಚಿತ್ರತಂಡ ಕಠಿಣ ಕ್ರಮಕ್ಕೆ ಮುಂದಾಗಿದೆ. ಬಾಂಬೆ ಹೈಕೋರ್ಟ್ ನವೆಂಬರ್ 2 ಮತ್ತು 6ರಂದು ನೀಡಿರುವ ಆದೇಶಗಳಲ್ಲಿ ಅನುಮತಿಯಿಲ್ಲದೆ ಸಿನಿಮಾವನ್ನು ರೆಕಾರ್ಡ್ ಮಾಡುವುದು, ಅಪ್‌ಲೋಡ್ ಮಾಡುವುದು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದನ್ನು ನಿಷೇಧಿಸಿದೆ. ಚಿತ್ರಮಂದಿರದಲ್ಲಿ ಸಿನಿಮಾ ರೆಕಾರ್ಡ್ ಮಾಡಿ ಹಂಚಿಕೊಂಡರೆ ಹಕ್ಕುಸ್ವಾಮ್ಯ ಉಲ್ಲಂಘನೆಯಾಗಲಿದೆ. ಅಷ್ಟೇ ಅಲ್ಲ, ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ನೀಡಲಾಗಿದೆ.

ವಿಡಿಯೋ ಡಿಲೀಟ್ ಮಾಡಿ.. ಚಿತ್ರತಂಡ ಮನವಿ..!
ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ರಾಮಾಯಣ ಚಿತ್ರದ ದೃಶ್ಯಗಳನ್ನು ಹಂಚಿಕೊಂಡಿರುವವರು ತಕ್ಷಣವೇ ಅವುಗಳನ್ನು ಡಿಲೀಟ್ ಮಾಡುವಂತೆ ನಿರ್ಮಾಪಕರು ಮನವಿ ಮಾಡಿದ್ದಾರೆ. ಪೈರಸಿ ವಿಡಿಯೋಗಳನ್ನು ಅಪ್‌ಲೋಡ್ ಮಾಡುವವರ ವಿರುದ್ಧ ಕಾನೂನು ನೋಟಿಸ್ ಜಾರಿ ಮಾಡುವುದಾಗಿಯೂ ಎಚ್ಚರಿಸಿದ್ದಾರೆ.


ದಿಗ್ಗಜರ ದಂಡೇ ಇರೋ ರಾಮಾಯಣ..!
ದಂಗಲ್ ಖ್ಯಾತಿಯ ನಿತೇಶ್ ತಿವಾರಿ ನಿರ್ದೇಶನದ ಈ ಪೌರಾಣಿಕ ಸಿನಿಮಾದಲ್ಲಿ ರಣಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ನಟಿಸಿದ್ದಾರೆ. ಕನ್ನಡದ ನಟ ಯಶ್ ರಾವಣನ ಪಾತ್ರದಲ್ಲಿ ಅಬ್ಬರಿಸಿದ್ದಾರೆ. ಸನ್ನಿ ಡಿಯೋಲ್, ಶೋಭನಾ, ಕಾಜಲ್ ಅಗರ್ವಾಲ್, ವಿವೇಕ್ ಒಬೆರಾಯ್, ಅನುಪಮ್ ಖೇರ್ ಸೇರಿದಂತೆ ಹಲವು ದಿಗ್ಗಜ ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ನಮಿತ್ ಮಲ್ಹೋತ್ರಾ ಅವರ ಪ್ರೈಮ್ ಫೋಕಸ್ ಸ್ಟುಡಿಯೋಸ್ ಹಾಗೂ ಯಶ್ ಅವರ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಸೇರಿದಂತೆ ನಿರ್ಮಾಣ ಸಂಸ್ಥೆಗಳು ಚಿತ್ರಕ್ಕೆ ಬಂಡವಾಳ ಹೂಡಿವೆ.

 ರಾಮಾಯಣ ಚಿತ್ರವು ಈಗಾಗಲೇ 500 ಕೋಟಿ ರೂ. ಕ್ಲಬ್‌ಗೆ ಸೇರಿದೆ. ಈ ವಾರಾಂತ್ಯದ ವೇಳೆಗೆ ಅದು 1000 ಕೋಟಿ ರೂ. ಕ್ಲಬ್‌ಗೆ ಸೇರುವ ಸಾಧ್ಯತೆಯಿದೆ ಎಂದು ವ್ಯಾಪಾರ ತಜ್ಞರು ಹೇಳುತ್ತಾರೆ. ಮತ್ತೊಂದೆಡೆ, ಬಾಂಬೆ ಹೈಕೋರ್ಟ್ ಚಿತ್ರದ ಮೇಲೆ ಕಟ್ಟುನಿಟ್ಟಿನ ಆದೇಶಗಳನ್ನು ನೀಡಿದೆ. ಚಿತ್ರಮಂದಿರದಲ್ಲಿ ರಾಮಾಯಣ ಚಿತ್ರವನ್ನು ಅಕ್ರಮವಾಗಿ ರೆಕಾರ್ಡ್ ಮಾಡಿ ಸಾಮಾಜಿಕ ಮಾಧ್ಯಮ ಅಥವಾ ಸಂದೇಶ ವೇದಿಕೆಗಳಲ್ಲಿ ಹಂಚಿಕೊಳ್ಳುವವರಿಗೆ ಕಾನೂನು ನೋಟಿಸ್ ನೀಡಲಾಗುವುದು ಎಂದು ಚಿತ್ರತಂಡ ಎಚ್ಚರಿಸಿದೆ. ಬಾಂಬೆ ಹೈಕೋರ್ಟ್, ನವೆಂಬರ್ 2, 2026 ಮತ್ತು ನವೆಂಬರ್ 6, 2026 ರ ತನ್ನ ಆದೇಶಗಳ ಮೂಲಕ, ಅನುಮತಿಯಿಲ್ಲದೆ ಇತರ ಮಾಧ್ಯಮಗಳ ಮೂಲಕ ಚಲನಚಿತ್ರ ಅಥವಾ ಅದರ ಯಾವುದೇ ಭಾಗವನ್ನು ರೆಕಾರ್ಡ್ ಮಾಡುವುದು, ಅಪ್‌ಲೋಡ್ ಮಾಡುವುದು, ಹಂಚಿಕೊಳ್ಳುವುದು ಮತ್ತು ಪ್ರಸಾರ ಮಾಡುವುದನ್ನು ನಿಷೇಧಿಸಿದೆ. ಇದರ ಪ್ರಕಾರ, ಚಲನಚಿತ್ರವನ್ನು ರೆಕಾರ್ಡ್ ಮಾಡುವುದು ಅಥವಾ ಅನುಮತಿಯಿಲ್ಲದೆ ಆನ್‌ಲೈನ್‌ನಲ್ಲಿ ಹಂಚಿಕೊಳ್ಳುವುದು ಹಕ್ಕುಸ್ವಾಮ್ಯದ ಉಲ್ಲಂಘನೆಯಾಗಿದೆ. ಹಾಗೆ ಮಾಡುವವರ ವಿರುದ್ಧ ಹಕ್ಕುಸ್ವಾಮ್ಯ ಕಾಯ್ದೆ 1957, ಸಿನಿಮಾಟೋಗ್ರಾಫ್ ಕಾಯ್ದೆ 1952, ಭಾರತೀಯ ದಂಡ ಸಂಹಿತೆ (ಐಪಿಸಿ) 2023 ಮತ್ತು ಐಟಿ ಕಾಯ್ದೆ 2000 ರ ಅಡಿಯಲ್ಲಿ ಮೊಕದ್ದಮೆ ಹೂಡಬಹುದು. ಇದಲ್ಲದೆ, ಇದನ್ನು ನ್ಯಾಯಾಲಯದ ತಿರಸ್ಕಾರವೆಂದು ಸಹ ಪರಿಗಣಿಸಬಹುದು.
 

ಒಂದೆಡೆ ಬಾಕ್ಸ್ ಆಫೀಸ್‌ನಲ್ಲಿ ಸಾವಿರ ಕೋಟಿ ಗಳಿಕೆಯ ನಿರೀಕ್ಷೆ.. ಮತ್ತೊಂದೆಡೆ ಪೈರಸಿ ವಿರುದ್ಧ ಕಾನೂನು ಸಮರ ಒಟ್ಟಿನಲ್ಲಿ ರಾಮಾಯಣ ಸಿನಿಮಾ ಸದ್ಯ ಭಾರತೀಯ ಚಿತ್ರರಂಗದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

 

 

 

Add Zee News as a Preferred Source
TAGS:
Sandalwood