• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಮನರಂಜನೆ
  • /Darshan Renukaswamy case ; ಸೋಷಿಯಲ್ ಮೀಡಿಯಾಗೆ ಕೋರ್ಟ್ ವಾರ್ನಿಂಗ್

Darshan Renukaswamy case ; ಸೋಷಿಯಲ್ ಮೀಡಿಯಾಗೆ ಕೋರ್ಟ್ ವಾರ್ನಿಂಗ್

Renukaswamy case court warning : ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಇಂದೂ ಕೂಡ ಮಾಫಿ ಸಾಕ್ಷಿ ಹೇಳಿಕೆ ಮುಂದುವರೆದಿತ್ತು. ಮಾಫಿಸಾಕ್ಷಿ ಹೇಳಿದ್ದು ನಿಜವಾಗಿಯೂ ನಡೆದಿದ್ದರೆ ಆ ನಟ ಇಷ್ಟರ ಮಟ್ಟಿಗೆ ಕ್ರೂರಿಯಾ ಅಂತನಿಸಬಹುದು . ಯಸ್ ಪ್ರದೋಷ್ ಹೇಳಿಕೆಯಲ್ಲಿ ನಟನ ಕ್ರೌರ್ಯ ಬಿಂಬಿತವಾಗಿದೆ. ಅಷ್ಟಕ್ಕೂ ಇಂದು ನಡೆದ ಡೆವಲಪ್ಮೆಂಟ್ಗಳೇನು…? ಡೀಟೇಲ್ಸ್ ಇಲ್ಲಿದೆ .

Written ByChetana Devarmani
Published: Sep 29, 2026, 09:29 PM IST|Updated: Sep 29, 2026, 09:31 PM IST
joinshare
Darshan Renukaswamy case ; ಸೋಷಿಯಲ್ ಮೀಡಿಯಾಗೆ ಕೋರ್ಟ್ ವಾರ್ನಿಂಗ್

About the Author

Chetana Devarmani

Chetana Devarmani

"*ಚೇತನಾ ದೇವರಮನಿ* ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್‌ʼ ವೆಬ್‌ನಲ್ಲಿ Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 8 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೀಡೆ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್‌ ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ ತಂಡ ಸೇರಿದರು. ಪ್ರಸ್ತುತ ಕಳೆದ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ ವೆಬ್‌ ಟೀಮ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಚೇತನಾ ದೇವರಮನಿ ತಮ್ಮ ಸಂಶೋಧನಾ ಕೌಶಲ್ಯ ಮತ್ತು ಬರವಣಿಗೆ ಶೈಲಿಯಿಂದ ಎಲ್ಲರ ಗಮನಸೆಳೆದಿದ್ದು, ಹೆಸರುವಾಸಿಯಾಗಿದ್ದಾರೆ. ಚೇತನಾ ದೇವರಮನಿಯವರ ಬರವಣಿಗೆಯ ಶೈಲಿ ಆಕರ್ಷಕ ಹಾಗೂ ತಿಳಿವಳಿಕೆಯಿಂದ ಕೂಡಿದ್ದು ನಿಷ್ಠಾವಂತ ಓದುಗರನ್ನು ಕಟ್ಟಿಕೊಳ್ಳಲು ಸಹಕಾರಿಯಾಗಿದೆ. ಚೇತನಾ ದೇವರಮನಿ ಅವರು ಬಿಡುವಿನ ವೇಳೆಯಲ್ಲಿ ಸಿನಿಮಾ ನೋಡುವುದು, ಪುಸ್ತಕ ಓದುವುದು, ಪ್ರವಾಸಕ್ಕೆ ಹೋಗುವುದನ್ನು ಆನಂದಿಸುತ್ತಾರೆ. ಈ ಚಟುವಟಿಕೆಗಳು ಅವರನ್ನು ರಿಫ್ರೆಶ್ ಮಾಡುತ್ತದೆ. ಇದೇ ಅವರಲ್ಲಿ ಚೈತನ್ಯ ತುಂಬುತ್ತದೆ. ಇದರಿಂದಲೇ ಅವರು ಕ್ರಿಯಾಶಿಲರಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ. ತಮ್ಮ ವಿಶ್ವಾಸಾರ್ಹ ಮಾಹಿತಿಪೂರ್ಣ ಬರಹಗಳ ಮೂಲಕ ಚೇತನಾ ದೇವರಮನಿಯವರು ಓದುಗ ವಲಯವನ್ನು ಪರಿಣಾಮಕಾರಿಯಾಗಿ ತಲುಪಲು ಶ್ರಮಿಸುತ್ತಿದ್ದಾರೆ. ಒಟ್ಟಾರೆ ಹೇಳುವುದಾದರೆ, ಚೇತನಾ ದೇವರಮನಿ ಅತ್ಯಂತ ನುರಿತ ಮತ್ತು ಅನುಭವಿ ಪತ್ರಕರ್ತರು, ಅವರು ತಮ್ಮ ಕೆಲಸದ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದಾರೆ."
Read More

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Darshan Renukaswamy case : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೂಷ್ ಮಾಫಿ ಸಾಕ್ಷಿ ಅನ್ನೋ ಮಹಾ ಕಂಟಕ ದರ್ಶನ್ ಬೆನ್ನೇರಿದೆ.. ಕೋರ್ಟ್ ನಲ್ಲಿ ಎರಡು ದಿನಗಳಿಂದ್ಲೂ ಪಟ್ಟಣಗೆರೆ ಶೆಡ್ ನಲ್ಲಿ ನಡೆದ ಡಿ ಗ್ಯಾಂಗ್ ಕ್ರೌರ್ಯದ ಬಗ್ಗೆ ಪ್ರದೂಷ್ ಇಂಚಿಂಚೂ ಡೀಟೆಲ್ಸ್ ಜಡ್ಜ್ ಮುಂದೆ ದಾಖಲಿಸ್ತಿದ್ದಾನೆ.. ಇತ್ತ ಮಾಫಿ ಸಾಕ್ಷಿ ವಿರುದ್ಧದ ಹೋರಾಟ ಮುಂದುವರೆಸಿರೋ ದರ್ಶನ್ ಹೈಕೋರ್ಟ್ ಆದೇಶಗಳನ್ನ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.. ಈ ಬಾರಿ ದರ್ಶನ್ ಮೇಲ್ಮನೆ ಹೋರಾಟದಲ್ಲಿ ಪತ್ನಿ ವಿಜಯಲಕ್ಷ್ಮಿ ಕೂಡ ಕೈ ಜೋಡಿಸಿದ್ದು ಅತ್ಯಾಪ್ತನ ಮಾಫಿ ಸಾಕ್ಷಿ ಕಂಟಕದ ವಿರುದ್ಧ ಸರ್ಕಸ್ ಮುಂದುವರೆದಿದೆ..

ಡಿ ಗ್ಯಾಂಗ್ ವಿರುದ್ಧ ಕೋರ್ಟ್ ನಲ್ಲಿ ಪ್ರದೂಷ್ ಸಾಕ್ಷಿ ನುಡೀತಿದ್ದಾರೆ.... ನಿನ್ನೆ ಮೂರು ಗಂಟೆಗಳ ಕಾಲ 40 ಪ್ಯಾರಾ ಹೇಳಿಕೆ ದಾಖಲಿಸಿದ್ದ ಪ್ರದೂಷ್ ಗೆ ಇಂದೂ ಕೂಡ ಹನ್ನೊಂದು ಗಂಟೆಗೆ ಹಾಜರಾಗಿ ಹೇಳಿಕೆ ದಾಖಲಿಸಲು ಸೆಷನ್ಸ್ ಕೋರ್ಟ್ ಸೂಚಿಸಿತ್ತು.. ಬಂದೋಬಸ್ತ್ ನಲ್ಲಿ ಇವತ್ತೂ ಕೂಡ ಪ್ರದೂಷ್ ನ ಕೋರ್ಟ್ ಮುಂದೆ ಹಾಜರುಪಡಿಸಲಾಯ್ತು.. ಬೇರೆ ಪ್ರಕರಣಗಳ ವಿಚಾರಣೆ ಹಿನ್ನೆಲೆ ಕೆಲ ಹೊತ್ತಿನ ನಂತರ ಜಡ್ಜ್ ವಿಚಾರಣೆಗೆ ಕೈಗೆತ್ಕೊಂಡ್ರು.. ಆ ಗ್ಯಾಪ್ ನಲ್ಲಿ ಪ್ರದೂಷ್ ತಮ್ಮ ವಕೀಲರ ಜೊತೆ ಮಾತನಾಡಿದ್ದಾನೆ.. ಇದನ್ನ ಗಮನಿಸಿದ್ದ ದರ್ಶನ್ ಪರ ವಕೀಲ ಹಸ್ಮತ್ ಪಾಷಾ ಆಕ್ಷೇಪಿಸಿದ್ರು.. ಸದ್ಯ ಪ್ರದೂಷ್ ಮಾಫಿ ಸಾಕ್ಷಿ.. ಈ ಟೈಮಲ್ಲಿ ವಕೀಲರ ಜೊತೆ ಮಾತನಾಡೋಕೆ ಅವಕಾಶ ಇಲ್ಲ.. ಆರೋಪಿಯಾಗಿದ್ರೆ ಮಾತನಾಡಬಹುದು.. ವಕೀಲರ ಜೊತೆ ಮಾತನಾಡೋಕೆ ಅವಕಾಶ ಮಾಡಿಕೊಡ್ಬಾರ್ದು ಅಂದ್ರು.. ಇನ್ನು ಇದೇ ವೇಳೆ ನಿನ್ನೆ ನಡೆದ ಕಲಾಪವನ್ನ ಕೆಲವರು ಸ್ಕ್ರೀನ್ ರೆಕಾರ್ಡ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ರು.. ಈ ಬಗ್ಗೆ ದರ್ಶನ್ ಸೇರಿ ಬೇರೆ ಆರೋಪಿಗಳ ಪರ ವಕೀಲರು ಕೋರ್ಟ್ ಗೆ ಮಾಹಿತಿ ನೀಡಿದ್ರು.. ಕೂಡಲೇ ಸೋಷಿಯಲ್ ಮೀಡಿಯಾದಲ್ಲಿ ಕೋರ್ಟ್ ಕಲಾಪದ ಸ್ಕ್ರೀನ್ ರೆಕಾರ್ಡ್ ವಿಡಿಯೋಗಳನ್ನ ಶೇರ್ ಮಾಡುವಂತಿಲ್ಲ ಎಂದು ಜಡ್ಜ್ ಆದೇಶಿಸಿದ್ರು.. ನಂತರ ಇಂದು ಕೂಡ ದೇವರ ಹೆಸ್ರಲ್ಲಿ ಪ್ರಮಾಣ ಮಾಡಿ ಪ್ರದೂಷ್ ಮಾಫಿ ಸಾಕ್ಷಿ ಹೇಳಿಕೆ ಮುಂದುವರೆಸಿದ್ರು.. ಇಂದೂ ಕೂಡ ಮೂರು ಗಂಟೆಯಷ್ಟು ಹೊತ್ತು ಪ್ರದೂಷ್ ಹೇಳಿಕೆ ದಾಖಲಿಸಿದ್ದಾನೆ..

ಇನ್ನು ಅತ್ತ ಮಾಫಿ ಸಾಕ್ಷಿ ವಿರುದ್ಧ ಹೋರಾಟ ಮುಂದುವರಸಿರೋ ದರ್ಶನ್ ಹಾಗೂ ಪತ್ನಿ ವಿಜಯಲಕ್ಷ್ಮಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.. ಮಾಫಿ ಸಾಕ್ಷಿ ಆದೇಶಕ್ಕೂ ಮುನ್ನ ನಮ್ಮ ವಾದವನ್ನೂ ಕೇಳಿ ಅಂತಾ ಸೆಷನ್ಸ್ ಕೋರ್ಟ್ ಆದೇಶ ಪ್ರಶ್ನಿಸಿ ದರ್ಶನ್ ಹೈ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ರು.. ಆದ್ರೆ ಮಾಫಿ ಸಾಕ್ಷಿ ಆದೇಶಕ್ಕೂ ಮುನ್ನ ಸಹ ಆರೋಪಿಯ ವಾದ ಕೇಳುವ ಅವಶ್ಯಕತೆ ಇಲ್ಲಾ ಅಂತಾ ಹೈಕೋರ್ಟ್ ಅರ್ಜಿ ರಿಜೆಕ್ಟ್ ಮಾಡಿತ್ತು.. ನಂತರ ಸೆಷನ್ಸ್ ಕೋರ್ಟ್ ನ ಮಾಫಿ ಸಾಕ್ಷಿ ಆದೇಶದ ಪ್ರಕ್ರಿಯೆ ಪ್ರಶ್ನಿಸಿ ಮತ್ತೆ ಹೈಕೋರ್ಟ್ ಮೆಟ್ಟಿಲೇರಿದ್ದ ದರ್ಶನ್ ಗೆ ಮತ್ತೆ ಶಾಕ್ ಕೊಟ್ಟಿದ್ದ ಹೈಕೋರ್ಟ್ ಮಾಫಿ ಸಾಕ್ಷಿ ಆದೇಶವನ್ನು ಮರುಪರಿಶೀಲನೆ ಮಾಡಿ ಆದೇಶಿಸಿ ಅಂತಾ ಸೆಷನ್ಸ್ ಕೋರ್ಟ್ ಗೆ ನಾಗಪ್ರಸನ್ನ ಅವರ ಪೀಠ ಆದೇಶ ನೀಡಿತ್ತು.. ಮಾಫಿ ಸಾಕ್ಷಿ ಸಂಬಂಧ ಸೆಷನ್ಸ್ ಕೋರ್ಟ್ ನ ಮರು ಆದೇಶ ಪ್ರಶ್ನಿಸಿ ಮತ್ತೆ ವಿಜಯಲಕ್ಷ್ಮಿ ಮತ್ತೆ ದರ್ಶನ್ ಪರವಾಗಿ ಹೈಕೋರ್ಟ್ ಮೆಟ್ಟಿಲೇರಿದ್ರು..  ಪ್ರದೂಷ್ ಮಾಫಿ ಸಾಕ್ಷಿ ಹಿಂದೆ ಕಾನ್ಸಿಪರೆನ್ಸಿ ಇದೆ, ಒತ್ತಡ ಇದೆ ಅಂದಿದ್ರು.. ಪೂರಕ ಕಾರಣಗಳಿಲ್ಲದ ಕಾರಣ ವಿಜಯಲಕ್ಷ್ಮಿ ಅರ್ಜಿಯನ್ನೂ ಹೈ ಕೋರ್ಟ್ ರಿಜೆಕ್ಟ್ ಮಾಡಿತ್ತು.. ಈ ಮೂರು ಹೈಕೋರ್ಟ್ ಆದೇಶಗಳನ್ನ ಪ್ರಶ್ನಿಸಿ ದರ್ಶನ್ ಹಾಗೂ ವಿಜಯಲಕ್ಷ್ಮಿ ಈಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.. ಇದೇ ವಾರ ಸುಪ್ರೀಂ ಕೋರ್ಟ್ ವಿಚಾರಣೆಗೆ ಕೈಗೆತ್ತುಕೊಳ್ಳೋ ಸಾಧ್ಯತೆ ಇದೆ..

ಒಟ್ಟಾರೆ ಮಾಫಿ ಸಾಕ್ಷಿಯಾಗಿ ಪ್ರದೂಷ್ ಡಿ ಗ್ಯಾಂಗ್ ಗೆ ಢವ ಢವ ಹೆಚ್ಚು ಮಾಡ್ತಿದ್ದಾನೆ.. ಜಡ್ಜ್ ಮುಂದೆ ಹೇಳೋ ಪ್ರತೀ ಹೇಳಿಕೆಗಳು ದರ್ಶನ್ & ಟೀಂಗೆ ಶಿಕ್ಷೆ ಕೊಡಿಸೋದು ಫಿಕ್ಸ್ ಅಂತಾ ವಿಶ್ಲೇಷಣೆ ಮಾಡಲಾಗ್ತಿದೆ.. ಇದ್ರ ನಡುವೆ ಮಾಫಿ ಸಾಕ್ಷಿಗೆ ಸ್ಟೇ ತರಲು ದರ್ಶನ್ ದಂಪತಿಯ ಸರ್ಕಸ್ ಮುಂದುವರೆದಿದೆ.. ಸುಪ್ರೀಂ ಕೋರ್ಟ್ ನಲ್ಲಾದ್ರೂ ದರ್ಶನ್ ಗೆ ರಿಲೀಫ್ ಸಿಕ್ಕುತ್ತಾ ಕಾದು ನೋಡಬೇಕು..
 

Add Zee News as a Preferred Source
TAGS:
Kannada News