Darshan back pain: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್‌ಗೆ ಮತ್ತೆ ಬೆನ್ನು ನೋವು ಕಾಣಿಸಿಕೊಂಡಿದೆ. ಹೀಗಾಗಿ ನ್ಯಾಯಾಲಯದ ಸೂಚನೆ ಮೇರೆಗೆ ಜೈಲಿನಲ್ಲೇ ಫಿಸಿಯೋಥೆರಪಿ ಚಿಕಿತ್ಸೆ ಆರಂಭಿಸಲಾಗಿದೆ. ಇತ್ತ ಪತಿಯ ಆರೋಗ್ಯ ವಿಚಾರಿಸಲು ಜೈಲಿಗೆ ಬಂದಿದ್ದ ಪತ್ನಿ ವಿಜಯಲಕ್ಷ್ಮಿ, ದರ್ಶನ್‌ಗೆ ಹಣ್ಣುಹಂಪಲು ಹಾಗೂ ಗಾಳಿ ಆಂಜನೇಯ ಸ್ವಾಮಿ ಪ್ರಸಾದ ನೀಡಿದ್ದಾರೆ. ವಿಶೇಷ ಅಂದ್ರೆ, ಪತ್ನಿಯ ಬರ್ತ್‌ಡೇಗೆ ದರ್ಶನ್ ಚಾಕ್ಲೆಟ್ ಗಿಫ್ಟ್ ನೀಡಿದ್ದಾರೆ. ಹಾಗಾದ್ರೆ ಜೈಲಿನೊಳಗೆ ನಡೆದಿದ್ದೇನು? ಈ ಸ್ಟೋರಿ ನೋಡಿ..
ನಟ ದರ್ಶನ್‌ಗೆ ಮತ್ತೆ ಬೆನ್ನು ನೋವಿನ ಸಮಸ್ಯೆ ಉಲ್ಬಣವಾಗಿದೆ ನೋವು ತೀವ್ರಗೊಂಡ ಹಿನ್ನೆಲೆ ನ್ಯಾಯಾಲಯದ ಸೂಚನೆಯಂತೆ ಜೈಲಿನಲ್ಲೇ ಫಿಸಿಯೋಥೆರಪಿ ಚಿಕಿತ್ಸೆ ನೀಡಲಾಗಿದೆ.. ಸಂಜಯ್ ಗಾಂಧಿ ಆಸ್ಪತ್ರೆಯ ತಜ್ಞ ವೈದ್ಯರ ತಂಡ ಜೈಲಿಗೆ ಭೇಟಿ ನೀಡಿ ದರ್ಶನ್‌ಗೆ ಚಿಕಿತ್ಸೆ ನೀಡಿದೆ ಅಗತ್ಯ ವೈದ್ಯಕೀಯ ಉಪಕರಣಗಳೊಂದಿಗೆ ಬಂದಿದ್ದ ವೈದ್ಯರು ಬರೋಬ್ಬರಿ ಒಂದೂವರೆ ಗಂಟೆಗಳ ಕಾಲ ಫಿಸಿಯೋಥೆರಪಿ ನಡೆಸಿದ್ದಾರೆ..
ಈ ಹಿಂದೆ ಕೂಡ ದರ್ಶನ್‌ಗೆ ಇದೇ ಆಸ್ಪತ್ರೆಯ ವೈದ್ಯರು ಚಿಕಿತ್ಸೆ ನೀಡಿದ್ದರು.ಆಗ ಬೆನ್ನು ನೋವು ಗಣನೀಯವಾಗಿ ಕಡಿಮೆಯಾಗಿತ್ತು.. ಇದೀಗ ಮತ್ತೆ ನೋವು ಕಾಣಿಸಿಕೊಂಡಿರುವ ಹಿನ್ನೆಲೆ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ.ನೋವು ಕಡಿಮೆಯಾಗುವವರೆಗೂ ಎರಡ್ಮೂರು ದಿನಕ್ಕೊಮ್ಮೆ ಫಿಸಿಯೋಥೆರಪಿ ಮುಂದುವರಿಯಲಿದೆ.. ಸದ್ಯ ಚಿಕಿತ್ಸೆಯಿಂದ ದರ್ಶನ್‌ಗೆ ಕೊಂಚ ನಿರಾಳತೆ ಸಿಕ್ಕಿದೆ ಎನ್ನಲಾಗಿದೆ.
ಇನ್ನು ಪತಿಯ ಆರೋಗ್ಯ ವಿಚಾರಿಸಲು ಜೈಲಿಗೆ ಬಂದಿದ್ದ ಪತ್ನಿ ವಿಜಯಲಕ್ಷ್ಮಿ, ದರ್ಶನ್ ಭೇಟಿಯಾಗಿ ವಾಪಸ್ ಆಗಿದ್ದಾರೆ. ವಿಜಯಲಕ್ಷ್ಮಿ ಅವರ ಬರ್ತ್‌ಡೇ ಹಿನ್ನೆಲೆ ಇಂದು ಜೈಲಿಗೆ ಭೇಟಿ ನೀಡಿದ್ದರು.. ಪತಿಗೆ ಹಣ್ಣುಹಂಪಲು ನೀಡಿದ್ದಲ್ಲದೆ, ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನದ ಪ್ರಸಾದವನ್ನೂ ನೀಡಿದ್ದಾರೆ.. ದರ್ಶನ್ ಆರೋಗ್ಯದ ಬಗ್ಗೆಯೂ ವಿಚಾರಿಸಿದ್ದಾರೆ..
ಪತ್ನಿಯ ಬರ್ತ್‌ಡೇಗೆ ದರ್ಶನ್ ಕಡೆಯಿಂದ ವಿಶೇಷ ಉಡುಗೊರೆ ಸಿಕ್ಕಿದೆ.. ವಿಜಯಲಕ್ಷ್ಮಿ ಅವರಿಗೆ ದರ್ಶನ್ ಚಾಕ್ಲೆಟ್ ಬಾಕ್ಸ್ ನೀಡಿದ್ದಾರೆ ಈ ಹಿಂದೆ ಮಗನ ಬರ್ತ್‌ಡೇಗೂ ದರ್ಶನ್ ಚಾಕ್ಲೆಟ್ ಗಿಫ್ಟ್ ನೀಡಿದ್ದರು.. ಇದೀಗ ಪತ್ನಿಗೂ ಚಾಕ್ಲೆಟ್ ಉಡುಗೊರೆ ನೀಡಿದ್ದಾರೆ.. ಪತಿಯನ್ನು ಭೇಟಿಯಾಗಿ, ಚಾಕ್ಲೆಟ್ ಬಾಕ್ಸ್‌ನೊಂದಿಗೆ ವಿಜಯಲಕ್ಷ್ಮಿ ಜೈಲಿನಿಂದ ಹೊರಬಂದಿದ್ದಾರೆ..
ರೇಣುಕಾಸ್ವಾಮಿ ಕೊಲೆ ಪ್ರಕರಣ ಹೇಗೆ ನಡೆಯುತ್ತಿದೆ?
ನಟ ದರ್ಶನ್‌ಗೆ ಚಿಕಿತ್ಸೆಗೆ ಅನುಮತಿ: ಬೆನ್ನುನೋವಿನ ಸಮಸ್ಯೆಯಿಂದ ಬಳಲುತ್ತಿರುವ ನಟ ದರ್ಶನ್‌ಗೆ ಜೈಲಿನಲ್ಲಿಯೇ ಫಿಸಿಯೋಥೆರಪಿ ಮತ್ತು ಅಗತ್ಯ ವೈದ್ಯಕೀಯ ಚಿಕಿತ್ಸೆ ನೀಡುವಂತೆ ಬೆಂಗಳೂರಿನ 59ನೇ ಸಿಸಿಎಚ್ ನ್ಯಾಯಾಲಯವು ಆದೇಶಿಸಿದೆ. ಪ್ರತ್ಯಕ್ಷಸಾಕ್ಷಿ ಉಲ್ಟಾ (Hostile): ಪ್ರಕರಣದ ವಿಚಾರಣೆ ವೇಳೆ ಪಟ್ಟಣಗೆರೆ ಶೆಡ್‌ನಲ್ಲಿದ್ದ ಪ್ರತ್ಯಕ್ಷಸಾಕ್ಷಿ ಪುನೀತ್ ಅವರು ನ್ಯಾಯಾಲಯದಲ್ಲಿ "ನಾನು ಆರೋಪಿಗಳನ್ನು ನೋಡಿಲ್ಲ" ಎಂದು ಹೇಳಿಕೆ ನೀಡಿದ್ದರಿಂದ ಅವರನ್ನು 'ಹಾಸ್ಟೈಲ್ ಸಾಕ್ಷಿ' ಎಂದು ಪರಿಗಣಿಸಲಾಗಿದೆ.
ಪ್ರದೋಷ್ ಮಾಫಿ ಸಾಕ್ಷಿ ಅರ್ಜಿ: ಈ ಪ್ರಕರಣದ 14ನೇ ಆರೋಪಿ ಪ್ರದೋಷ್ ಅವರು ಮಾಫಿ ಸಾಕ್ಷಿಯಾಗಲು (ಅಪ್ರೂವರ್) ಅರ್ಜಿ ಸಲ್ಲಿಸಿದ್ದು, ಇದು ದರ್ಶನ್ ಪರ ವಕೀಲರಿಗೆ ಹೊಸ ಸಂಕಷ್ಟ ತಂದೊಡ್ಡಿದೆ.ಜೈಲಿನಲ್ಲಿ ನಿಯಮ ಉಲ್ಲಂಘನೆ ದೂರು ಆರೋಪಿ ಪ್ರದೋಷ್ ಅವರು ತನ್ನ ಹೆಂಡತಿಯ ಮೊಬೈಲ್ ಸಂಖ್ಯೆಯನ್ನು ವಕೀಲರ ಹೆಸರಿನಲ್ಲಿ ನೋಂದಾಯಿಸಿ ಜೈಲಿನಿಂದ ಅಕ್ರಮವಾಗಿ ಮಾತನಾಡಿದ ಆರೋಪದ ಮೇಲೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಇತ್ತ ಪವಿತ್ರಾ ಗೌಡ ಜಾಮೀನು ತಿರಸ್ಕಾರವಾಗಿದೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಪವಿತ್ರಾ ಗೌಡ ಅವರ ಜಾಮೀನು ಅರ್ಜಿಯನ್ನು ನ್ಯಾಯಾಲಯವು ಮುಂಚಿತವಾಗಿ ತಳ್ಳಿಹಾಕಿದೆ
ಒಟ್ಟಾರೆಯಾಗಿ ರೇಣುಕಾಸ್ವಾಮಿ ಕೊಲೆ ಪ್ರಕರಣದ ದರ್ಶನ್‌ಗೆ ಮತ್ತೆ ಬೆನ್ನು ನೋವಿನ ಸಮಸ್ಯೆ ತೀವ್ರಗೊಂಡ ಹಿನ್ನೆಲೆ ನ್ಯಾಯಾಲಯದ ಸೂಚನೆಯಂತೆ ಜೈಲಿನಲ್ಲೇ ಫಿಸಿಯೋಥೆರಪಿ ಚಿಕಿತ್ಸೆ ನೀಡಲಾಗಿದೆ.. ಸಂಜಯ್ ಗಾಂಧಿ ಆಸ್ಪತ್ರೆಯ ತಜ್ಞ ವೈದ್ಯರ ತಂಡ ಜೈಲಿಗೆ ಭೇಟಿ ನೀಡಿ ದರ್ಶನ್‌ಗೆ ಚಿಕಿತ್ಸೆ ನೀಡಿದೆ ಅಗತ್ಯ ವೈದ್ಯಕೀಯ ಉಪಕರಣಗಳೊಂದಿಗೆ ವೈದ್ಯರು ಬರೋಬ್ಬರಿ ಒಂದೂವರೆ ಗಂಟೆಗಳ ಕಾಲ ಫಿಸಿಯೋಥೆರಪಿ ನಡೆಸಿದ್ದಾರೆ..