SOCIAL MEDIA

Newsletter

PARTNER SITES
Select Language Select State

ರಶ್ಮಿಕಾ ಮಂದಣ್ಣ ಔಟ್ ಅಂಡ್ ಔಟ್ ಆಕ್ಷನ್.. ವೀರನಾರಿಯಂತೆ ಅಬ್ಬರ, ಮೈಸಾ ಟೀಸರ್‌ ಹೇಗಿದೆ?

ಬೈಕ್ ರೈಡಿಂಗ್‌ನಿಂದ ಹಿಡಿದು ಸಾಹಸಮಯ ಅಂಡರ್‌ ವಾಟರ್ ಆ್ಯಕ್ಷನ್ ಸೀಕ್ವೆನ್ಸ್‌ಗಳವರೆಗೆ ರಶ್ಮಿಕಾ ಮಂದಣ್ಣ ಅವರು ತಮ್ಮನ್ನು ಸಂಪೂರ್ಣವಾಗಿ ಪಾತ್ರಕ್ಕೆ ಸಮರ್ಪಿಸಿಕೊಂಡಿದ್ದಾರೆ.

Written By Bhimappa
Published: Sep 23, 2026, 01:20 PM IST | Updated: Sep 23, 2026, 01:29 PM IST
Image Credit: rashmika_mandanna
Join

Rashmika Mandanna Mysaa movie teaser out: ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ತಮ್ಮ ವೃತ್ತಿಜೀವನದ ಅತ್ಯಂತ ಸವಾಲಿನ ಪಾತ್ರಗಳಲ್ಲಿ ಒಂದಕ್ಕೆ ಈಗಾಗಲೇ ಸಜ್ಜಾಗಿದ್ದಾರೆ. ಚೊಚ್ಚಲ ನಿರ್ದೇಶಕ ರವೀಂದ್ರ ಪುಳ್ಳೆ ನಿರ್ದೇಶನದ ಹಾಗೂ Unformula Films ನಿರ್ಮಾಣದ ಪ್ಯಾನ್ ಇಂಡಿಯಾ ಆ್ಯಕ್ಷನ್ ಡ್ರಾಮಾ ಮೈಸಾ ಸಿನಿಮಾದ ಟೀಸರ್ ಇಂದು ಬಿಡುಗಡೆ ಆಗಿದೆ. ಟೀಸರ್‌ನಲ್ಲಿ ರಶ್ಮಿಕಾ ಮಂದಣ್ಣ ಅಬ್ಬರಿಸಿದ್ದು ಒಂದೊಂದು ದೃಶ್ಯ ಕೂಡ ಅಮೋಗವಾಗಿ ಮೂಡಿ ಬಂದಿದೆ. ಬ್ಯಾಗ್ರೌಂಡ್‌ ಮ್ಯೂಸಿಕ್‌ ಕೂಡ ಮನಸೆಳೆಯುತ್ತಿದೆ. ಟೀಸರ್‌ ನೋಡಿದ ಅಭಿಮಾನಿಗಳಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ದೊಡ್ಡ ಮಟ್ಟದ ಆ್ಯಕ್ಷನ್ ದೃಶ್ಯಗಳು ಹಾಗೂ ತಾಂತ್ರಿಕವಾಗಿಯೂ ತುಂಬಾ ಶ್ರಮ ವಹಿಸಿ ಮೈಸಾ ಸಿನಿಮಾವನ್ನು ಅದ್ಧೂರಿಯಾಗಿ ನಿರ್ಮಿಸಲಾಗುತ್ತಿದೆ. ಟೀಸರ್ ಆರಂಭವಾಗುವುದು ಮೈಸಾ ಪಾತ್ರದ ಧ್ವನಿಯೊಂದಿಗೆ. ನಾನು ಸುಸ್ತಾಗಿದ್ದೇನೆ, ನಾನು ನಿಂತು ಬಿಟ್ಟಿದ್ದೇನೆ, ನಾನು ಸೋತಿದ್ದೇನೆ ಎಂಬ ಮಾತುಗಳ ಮೂಲಕ ಮೈಸಾಳ ತೀವ್ರ ಹೋರಾಟದ ಜಗತ್ತಿನ ಪರಿಚಯವಾಗುತ್ತದೆ.

ರಶ್ಮಿಕಾ ಮಂದಣ್ಣ ಅವರು ಮೈಸಾ ಸಿನಿಮಾದಲ್ಲಿ ಒಬ್ಬ ಧೈರ್ಯಶಾಲಿ, ಅಂಜದ ವೀರನಾರಿಯಾಗಿ ಕಾಣಿಸಿಕೊಳ್ಳುತ್ತಾರೆ. ತನ್ನ ಮುಂದೆ ಬರುವ ಸವಾಲುಗಳು ಮತ್ತು ಸಮಾಜದ ಅಡೆತಡೆಗಳಿಗೆ ಹೆದರದೆ, ಒಂಟಿಯಾಗಿ ಹೋರಾಡುವ ಪಾತ್ರ ರಶ್ಮಿಕಾ ಮಂದಣ್ಣ ಅವರದ್ದು ಆಗಿದೆ. ಪ್ರತಿಯೊಂದು ಅಡೆತಡೆಯನ್ನೂ ಎದುರಿಸಲು ಸಿದ್ಧಳಾಗಿರುವ ಮೈಸಾ, ಕೇವಲ ಯುದ್ಧ ಮಾಡುವವಳಲ್ಲ, ಯುದ್ಧದ ದಿಕ್ಕನ್ನೇ ನಿರ್ಧರಿಸುವ ಅಸ್ತ್ರವಾಗಿದ್ದಾಳೆ.

ಸಿನಿಮಾದಲ್ಲಿ ರಶ್ಮಿಕಾ ಗೋಂಡ್ ಬುಡಕಟ್ಟು ಮಹಿಳೆಯ ಪಾತ್ರ ನಿರ್ವಹಿಸಿದ್ದಾರೆ. ಈ ಪಾತ್ರಕ್ಕಾಗಿ ಅವರು ಕಠಿಣ ದೈಹಿಕ ತರಬೇತಿ ಪಡೆದಿದ್ದು, ಹಲವು ಸವಾಲಿನ ಆ್ಯಕ್ಷನ್ ದೃಶ್ಯಗಳನ್ನು ಮಾಡಿದ್ದಾರೆ. ಶೂಟಿಂಗ್‌ ಸಮಯದಲ್ಲಿ ಸಾಕಷ್ಟು ಬೆವರು ಸುರಿಸಿರುವುದ ಇದರಿಂದ ಗೊತ್ತಾಗುತ್ತದೆ. ಗೋಂಡ್ ಬುಡಕಟ್ಟು ಮಹಿಳೆಯ ಪಾತ್ರ ಎಂದರೆ ಸಾಕಷ್ಟು ಧೈರ್ಯಶಾಲಿಯಾಗಿ ಇರುವಂತಹದ್ದು ಜೊತೆಗೆ ಶೂಟಿಂಗ್‌ನಲ್ಲಿ ಕೆಲವೊಂದು ಕಠಿಣ ಸನ್ನಿವೇಶಗಳನ್ನು ನಿರ್ವಹಿಸಿದ್ದಾರೆ.

ಬೈಕ್ ರೈಡಿಂಗ್‌ನಿಂದ ಹಿಡಿದು ಸಾಹಸಮಯ ಅಂಡರ್‌ ವಾಟರ್ ಆ್ಯಕ್ಷನ್ ಸೀಕ್ವೆನ್ಸ್‌ಗಳವರೆಗೆ ರಶ್ಮಿಕಾ ಮಂದಣ್ಣ ಅವರು ತಮ್ಮನ್ನು ಸಂಪೂರ್ಣವಾಗಿ ಪಾತ್ರಕ್ಕೆ ಸಮರ್ಪಿಸಿಕೊಂಡಿದ್ದಾರೆ. ರಶ್ಮಿಕಾ ಮಂದಣ್ಣ ಅವರು ಸಿನಿಮಾಗಾಗಿ ಎಷ್ಟೊಂದು ಕಷ್ಟ ಪಟ್ಟಿದ್ದಾರೆ ಎನ್ನುಬುದು ಟೀಸರ್‌ನಲ್ಲಿ ಎದ್ದು ಕಾಣುತ್ತದೆ. ಅಲ್ಲದೇ ಟೀಸರ್‌ ಕೂಡ ಅದ್ಭುತವಾಗಿ ಮೂಡಿ ಬಂದಿದೆ. ಈಶ್ವರಿ ರಾವ್, ಗುರು ಸೋಮಸುಂದರಂ, ರಾವ್ ರಮೇಶ್, ರಾಹುಲ್ ರವೀಂದ್ರನ್, ಸಮುದ್ರಕನಿ ಸೇರಿದಂತೆ ಹಲವು ಪ್ರಮುಖ ಕಲಾವಿದರು ಈ ಸಿನಿಮಾದಲ್ಲಿ ಅಭಿನಯ ಮಾಡಿದ್ದಾರೆ.

ನಿರ್ದೇಶಕ ರವೀಂದ್ರ ಪುಳ್ಳೆ ಅವರ ಕಲ್ಪನೆ ಮತ್ತು ಅದ್ಧೂರಿ ದೃಷ್ಟಿಕೋನ ಟೀಸರ್‌ನಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ. ವಿಶೇಷವಾಗಿ ನೀರಿನೊಳಗಿನ ದೃಶ್ಯಗಳು ಗಮನ ಸೆಳೆಯುತ್ತವೆ. ಅಭಿಮಾನಿಗಳನ್ನು ಸೆಳೆಯುವುದು ಈ ದೃಶ್ಯಗಳು ಎಂದು ಹೇಳಬಹುದು. ಛಾಯಾಗ್ರಾಹಕ ಶ್ರೇಯಾಸ್ ಕೆ. ಕೃಷ್ಣ ನಿರ್ದೇಶಕರ ದೃಷ್ಟಿಕೋನವನ್ನು ಅದ್ಭುತ ದೃಶ್ಯಗಳಾಗಿ ಕಟ್ಟಿಕೊಟ್ಟಿದ್ದಾರೆ. ಜೇಕ್ಸ್ ಬಿಜಾಯ್ ಅವರ ಹಿನ್ನೆಲೆ ಸಂಗೀತ ಚಿತ್ರಕ್ಕ್ಕಿದೆ. ಅಂತರರಾಷ್ಟ್ರೀಯ ಆ್ಯಕ್ಷನ್ ಕೊರಿಯೋಗ್ರಾಫರ್ ಕೆಚಾ ಅವರ ಆ್ಯಕ್ಷನ್ ವಿನ್ಯಾಸವೂ ಗಮನ ಸೆಳೆಯುತ್ತದೆ. ‘ಮೈಸಾ’ ಚಿತ್ರವು ತೆಲುಗು, ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ 2026ರ ನವೆಂಬರ್ 27 ರಂದು ಏಕಕಾಲದಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ರಶ್ಮಿಕಾ ಮಂದಣ್ಣ ಅವರು ವಿಜಯ್‌ ದೇವರಕೊಂಡ ಅವರನ್ನು ಮದುವೆಯಾದ ಮೇಲೆ ಮೊದಲ ಸಿನಿಮಾದಲ್ಲಿ ನಟನೆ ಮಾಡುತ್ತಿದ್ದಾರೆ. ಮೇನ್‌ ರೋಲ್‌ನಲ್ಲಿ ಮೈಸಾ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಅವರು ಕಾಣಿಸಿಕೊಳ್ಳುತ್ತಿದ್ದರಿಂದ ಚಿತ್ರತಂಡ ಹೆಚ್ಚಿನ  ನಿರೀಕ್ಷೆಗಳನ್ನು ಇಟ್ಟುಕೊಳ್ಳಲಾಗಿದೆ. ಇನ್ನು ರಶ್ಮಿಕಾ ಮಂದಣ್ಣ ನಟನೆ ಮಾಡಿದ ಸಿನಿಮಾಗಳು ಎಲ್ಲ ಬಾಕ್ಸ್‌ ಆಫೀಸ್‌ನಲ್ಲಿ ಬಿಗ್‌ ಸಕ್ಸಸ್‌ ಕಂಡಿದ್ದು ಅದರಂತೆ ಈ ಸಿನಿಮಾ ಕೂಡ ದೊಡ್ಡ ಮಟ್ಟದಲ್ಲಿಯೇ ಕಲೆಕ್ಷನ್‌ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇದು ಅಲ್ಲದೇ ರಶ್ಮಿಕಾ ಮಂದಣ್ಣ ಮತ್ತು ಗಂಡ ವಿಜಯ್‌ ದೇವರಕೊಂಡ ಇಬ್ಬರು ಮದುವೆಯಾದ ಬಳಿಕ ರಣಬಲಿ ಎನ್ನುವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದರಿಂದ ಈ ಸಿನಿಮಾ ಬಗ್ಗೆ ಕೂಡ ಹೆಚ್ಚು ನಿರೀಕ್ಷೆಗಳು ಇವೆ. ಸಿನಿಮಾ ಯಾವಾಗ ರಿಲೀಸ್‌ ಎನ್ನುವ ಮಾಹಿತಿಯನ್ನು ಚಿತ್ರತಂಡವೇ ಅಧಿಕೃತವಾಗಿ ನೀಡಲಿದೆ.
 

Add Zee News as a Preferred Source
TAGS:

About the Author

ಭೀಮಪ್ಪ (Bhimappa) ಜೀ ಕನ್ನಡ ನ್ಯೂಸ್‌ನಲ್ಲಿ ಸದ್ಯ ಡಿಜಿಟಲ್ (ವೆಬ್‌ಸೈಟ್‌) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ, ಸ್ಫೋರ್ಟ್ಸ್‌, ಸಿನಿಮಾ, ಆರೋಗ್ಯ, ಎಂಟರ್ಟೈನ್‌ಮೆಂಟ್, ಲೈಫ್‌ಸ್ಟೈಲ್‌, ವೈರಲ್‌ ಸುದ್ದಿಗಳನ್ನು ಓದುಗರಿಗೆ ನೀಡುತ್ತಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿರುವ ಇವರು ಪ್ರಜಾವಾಣಿಯಲ್ಲಿ ಒಂದು ವರ್ಷ ಅಪ್ರೆಂಟಿಸ್‌ ಹಾಗೂ ನ್ಯೂಸ್‌ಫಸ್ಟ್‌ನಲ್ಲಿ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. 

ZEENEWS TRENDING STORIES