SOCIAL MEDIA

Newsletter

PARTNER SITES
Select Language Select State

ಕಣ್ಣಿಗೆ ಹಬ್ಬ.. ಮೈ ರೋಮಾಂಚನ! ರಾಮಾಯಣದ ದೃಶ್ಯವೈಭವಕ್ಕೆ ಪ್ರೇಕ್ಷಕರು ಫಿದಾ? ಸಿನಿಮಾ ಹೇಗಿದೆ? ಕಂಪ್ಲೀಟ್ ರಿವ್ಯೂ!

Ramayana Movie Review: ಭಾರತೀಯ ಚಿತ್ರರಂಗವೇ ಕಾತರದಿಂದ ಕಾಯುತ್ತಿದ್ದ ಬಹುನಿರೀಕ್ಷಿತ ಸಿನಿಮಾ ರಾಮಾಯಣ ತೆರೆಮೇಲೆ ಅಬ್ಬರಿಸಲು ಸಜ್ಜಾಗಿದೆ. ಅದ್ದೂರಿ ಸೆಟ್‌ಗಳು, ಮೈನವಿರೇಳಿಸುವ ದೃಶ್ಯವೈಭವ, ಅದ್ಭುತ ವಿಎಫ್‌ಎಕ್ಸ್‌ ಮೂಲಕ ರಾಮಾಯಣದ ಕಥೆಯನ್ನು ಪ್ರೇಕ್ಷಕರ ಮುಂದೆ ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ. ಹಾಗಾದ್ರೆ ರಾಮನ ಕಥೆ ಪ್ರೇಕ್ಷಕರ ಮನಗೆದ್ದಿದೆಯಾ? ರಾವಣನ ಪಾತ್ರದಲ್ಲಿ ಯಶ್ ಅಬ್ಬರ ಹೇಗಿದೆ? ಸಿನಿಮಾ ನೋಡಿದ ಪ್ರೇಕ್ಷಕರ ಅಭಿಪ್ರಾಯ ಏನು? ಇಲ್ಲಿದೆ ಕಂಪ್ಲೀಟ್ ರಿವ್ಯೂ.

Written By Ramya. R. Gowda
Published: Nov 05, 2026, 01:28 AM IST | Updated: Nov 05, 2026, 01:40 AM IST
Join

ಭಾರತೀಯ ಚಿತ್ರರಂಗವೇ ಕಾತರದಿಂದ ಕಾಯುತ್ತಿದ್ದ ಬಹುನಿರೀಕ್ಷಿತ ಸಿನಿಮಾ ರಾಮಾಯಣ ತೆರೆಮೇಲೆ ಅಬ್ಬರಿಸಲು ಸಜ್ಜಾಗಿದೆ. ಅದ್ದೂರಿ ಸೆಟ್‌ಗಳು, ಮೈನವಿರೇಳಿಸುವ ದೃಶ್ಯವೈಭವ, ಅದ್ಭುತ ವಿಎಫ್‌ಎಕ್ಸ್‌ ಮೂಲಕ ರಾಮಾಯಣದ ಕಥೆಯನ್ನು ಪ್ರೇಕ್ಷಕರ ಮುಂದೆ ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ. ಹಾಗಾದ್ರೆ ರಾಮನ ಕಥೆ ಪ್ರೇಕ್ಷಕರ ಮನಗೆದ್ದಿದೆಯಾ? ರಾವಣನ ಪಾತ್ರದಲ್ಲಿ ಯಶ್ ಅಬ್ಬರ ಹೇಗಿದೆ? ಸಿನಿಮಾ ನೋಡಿದ ಪ್ರೇಕ್ಷಕರ ಅಭಿಪ್ರಾಯ ಏನು? ಇಲ್ಲಿದೆ ಕಂಪ್ಲೀಟ್ ರಿವ್ಯೂ.

ನಿರ್ದೇಶಕ ನಿತೇಶ್ ತಿವಾರಿ ಅವರು ಭಾರತೀಯ ಮಹಾಕಾವ್ಯ ರಾಮಾಯಣವನ್ನು ಅದ್ಧೂರಿಯಾಗಿ ಬೆಳ್ಳಿತೆರೆಗೆ ತಂದಿದ್ದಾರೆ. ಯಶ್, ರಣಬೀರ್ ಕಪೂರ್, ಸಾಯಿ ಪಲ್ಲವಿ ಸೇರಿದಂತೆ ಬಹುತಾರಾಗಣ ಹೊಂದಿರುವ ಈ ಸಿನಿಮಾ ಭಾರೀ ಬಜೆಟ್‌ನಲ್ಲಿ ನಿರ್ಮಾಣವಾಗಿದೆ. ನವೆಂಬರ್ 5ರಂದು ವಿಶ್ವಾದ್ಯಂತ ತೆರೆಕಾಣುತ್ತಿರುವ ‘ರಾಮಾಯಣ’ ಚಿತ್ರದ ಪ್ರೀಮಿಯರ್ ಪ್ರದರ್ಶನಗಳು ನವೆಂಬರ್ 4ರ ಸಂಜೆಯಿಂದಲೇ ಆರಂಭವಾಗಿವೆ. ಮೀಡಿಯಾ ಸಹದ್ಯೋಗಿಗಳು ಸಿನಿಮಾವನ್ನು ಕಂಡು ಕಣ್ಮುಂಬಿಸಿಕೊಂಡಿದ್ದಾರೆ.

ರಾಮಾಯಣ ಅಂದ್ರೆ ಕೇವಲ ಒಂದು ಕಥೆಯಲ್ಲ.. ಕೋಟ್ಯಂತರ ಭಾರತೀಯರ ಭಾವನೆ. ಈ ಮಹಾಕಾವ್ಯವನ್ನು ಬೆಳ್ಳಿತೆರೆಗೆ ತರುವ ಸಾಹಸಕ್ಕೆ ಚಿತ್ರತಂಡ ಕೈಹಾಕಿದೆ. ಪ್ರತಿಯೊಂದು ಪಾತ್ರ, ಪ್ರತಿಯೊಂದು ಸನ್ನಿವೇಶದಲ್ಲೂ ಅದ್ದೂರಿತನಕ್ಕೆ ಒತ್ತು ನೀಡಲಾಗಿದೆ.

ದೃಶ್ಯವೈಭವ, ಗ್ರಾಫಿಕ್ಸ್, ಹಿನ್ನೆಲೆ ಸಂಗೀತ ಹಾಗೂ ಅದ್ದೂರಿ ಮೇಕಿಂಗ್ ಮೂಲಕ ಪ್ರೇಕ್ಷಕರನ್ನು ಪೌರಾಣಿಕ ಲೋಕಕ್ಕೆ ಕರೆದೊಯ್ಯುತ್ತದೆ ಪ್ರೇಕ್ಷಕರು ಕಂಪ್ಲೀಟ್‌ ಆಗಿ ಬೇರೆ ಲೋಕದಲ್ಲಿ ಕಳೆಯುತ್ತಾರೆರಾಮನ ಪಾತ್ರದ ಗಾಂಭೀರ್ಯದಿಂದ ಹಿಡಿದು ರಾವಣನ ಅಬ್ಬರದವರೆಗೆ ಪ್ರತಿಯೊಂದು ದೃಶ್ಯವೂ ಕುತೂಹಲ ಮೂಡಿಸುವಂತಿದೆ.


ರಾಮಾಯಣ.. ಭಾರತೀಯರ ಭಾವನೆಗಳಿಗೆ ಬೆಸೆದುಕೊಂಡಿರುವ ಮಹಾಕಾವ್ಯ.. ಇದೇ ಕಥೆಯನ್ನು ಬೆಳ್ಳಿತೆರೆ ಮೇಲೆ ಅದ್ಧೂರಿಯಾಗಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ನಿತೇಶ್ ತಿವಾರಿ.. ರಾಮನ ಪಾತ್ರದಲ್ಲಿ ರಣಬೀರ್ ಕಪೂರ್ ಶಾಂತ, ಗಂಭೀರ ಹಾಗೂ ಭಕ್ತಿಭಾವದ ಅಭಿನಯದೊಂದಿಗೆ ಗಮನ ಸೆಳೆದರೆ, ಸೀತೆಯಾಗಿ ಸಾಯಿ ಪಲ್ಲವಿ ಭಾವನಾತ್ಮಕ ನಟನೆ ಮೂಲಕ ಪಾತ್ರಕ್ಕೆ ಜೀವ ತುಂಬಿದ್ದಾರೆ.. ಇನ್ನು ರಾವಣನ ಪಾತ್ರದಲ್ಲಿ ಯಶ್ ಅವರ ಶಕ್ತಿಶಾಲಿ ಲುಕ್ ಹಾಗೂ ಆರ್ಭಟ ಚಿತ್ರದ ಮತ್ತೊಂದು ಪ್ರಮುಖ ಆಕರ್ಷಣೆ..


ರಾವಣನಾಗಿ ಅಬ್ಬರಿಸಿದ ರಾಕಿಂಗ್‌ ಸ್ಟಾರ್‌
ಹೌದು ನಮ್ಮ ಕನ್ನಡದ ಹೆಮ್ಮೆಯ ರಾಕಿಂಗ್‌ ಸ್ಟಾರ್‌ ಯಶ್‌ ಅವರು ರಾಮಾಯಾಣ ಸಿನಿಮಾದಲ್ಲಿ ಬಹಳ ಅದ್ಭುತವಾಗಿ ಅಭಿನಯಿಸಿದ್ದಾರೆ.. ಈ ಭಾರಿ ಯಶ್‌ ಅವರ ನಟನೆ ಬಗ್ಗೆ ತುಟಿಕ್‌ ಪಿಟಿಕ್‌ ಅನ್ನೋವ ಹಾಗೇ ಇಲ್ಲ ಅಷ್ಟು ಅಚ್ಚುಕಟ್ಟಾಗಿ ನಿಭಾಯಿಸಿದಲ್ಲದೇ. ರಾವಣನಾಗಿ  ಶಕ್ತಿಶಾಲಿ ಮತ್ತು ತೀವ್ರತೆಯುಳ್ಳ ಖಳನಾಯಕನ ಪಾತ್ರದಲ್ಲಿ ಅಬ್ಬರಿಸಿ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದುಕೊಂಡಿದ್ದಾರೆ. ರಾಮಾಯಾಣ ಸಿನಿಮಾ ಆರಂಭದಲ್ಲೇರಾಮನಿಗಿಂತ ಮೊದಲೇ ರಾವಣನ ಪಾತ್ರವನ್ನು ಪರಿಚಯಿಸಲಾಗಿದೆ. ಯಶ್ ಅವರ ಅಭಿಮಾನಿಗಳ ಪಾಲಿಗೆ ಇದು ಸಖತ್ ಸ್ಪೆಷಲ್ ಆಗಿದೆ. ರಾವಣನಾಗಿ ಯಶ್‌ ಕಾಣಿಸಿಕೊಳ್ಳುತ್ತಿದ್ದಂತೆ ಪ್ರೇಕ್ಷಕರ ಸಿಳ್ಳೆ ಚಪ್ಪಾಳೆ ಜೈಕಾರ ಹಾಕಿ ಸಂತಸ ವ್ಯಕ್ತಪಡಿಸಿದರು.

ರಾಮಯಾಣ ಅಲ್ಲ ಅದ್ಭುತ ದೃಶ್ಯ ವೈಭವ!
ರಾಮಾಯಣದ ಮತ್ತೊಂದು ಹೈಲೈಟ್ ಅಂದ್ರೆ ಅದರ ದೃಶ್ಯ ವೈಭವ.. ಅಂತರರಾಷ್ಟ್ರೀಯ ಮಟ್ಟದ VFX ತಂತ್ರಜ್ಞಾನವನ್ನು ಬಳಸಿಕೊಂಡು ಪೌರಾಣಿಕ ಲೋಕವನ್ನೇ ತೆರೆಮೇಲೆ ಸೃಷ್ಟಿಸಲಾಗಿದೆ.. ವಿಶೇಷವಾಗಿ ಜಟಾಯು ಮತ್ತು ರಾವಣನ ನಡುವಿನ ಯುದ್ಧದ ದೃಶ್ಯಗಳು ನೋಡುಗರಲ್ಲಿ ರೋಮಾಂಚನ ಮೂಡಿಸುವಂತಿವೆ.. ಪ್ರತಿಯೊಂದು ಫ್ರೇಮ್‌ನಲ್ಲೂ ಅದ್ಧೂರಿತನ ಎದ್ದು ಕಾಣುತ್ತದೆ ಈ ಜಾಟಯೂ ಹಾಗೂ ರಾಮನ ನಡುವೆ ವಿಶೇಷವಾದ ಬಂಧವಿರುತ್ತದೆ.. ಸೀತೆಯನ್ನ ರಾವಣ ಅಪಹರಿಸಿದ್ದಾ ಜಟಾಯೂ ಸೀತೆಯ ಸಹಾಯಕ್ಕೆ ಬಂದಾಗ ರಾವಣ ಹಾಗೂ ಜಟಾಯೂ ನಡುವೆ ದೊಡ್ಡ ರಣರಂಗವೇ ನಡೆಯುವ ದೃಶ್ಯದಲ್ಲಿ ಪ್ರೇಕ್ಷಕರ ಮೈ ನಡುಕ ಬರುವುದಂತು ನಿಜ.. ಕಡೆಗೆ ರಾವಣನಿಂದ ಜಟಾಯೂ ಬಲಿಯಾಗಿದ್ದು, ಜಟಾಯೂ ಹಾಗೂ ರಾಮನ ಮಾತುಕತೆ ಪ್ರೇಕ್ಷಕರ ಕಣ್ಣಂಚಿನಲ್ಲಿ ಕಣ್ಣೀರು ತರಿಸುವಂತೆ...

ಇನ್ನು, ಪ್ರತಿಯೊಂದು ಸನ್ನಿವೇಶದಲ್ಲಿ ಸಿನಿಮಾದ ಸಂಗೀತದ ಬಗ್ಗೆ ಮಾತಡೋ ಹಾಗೇ ಇಲ್ಲ ಹಿನ್ನೆಲೆ ಸಂಗೀತ ಕಥೆಯ ಗಾಂಭೀರ್ಯವನ್ನು ಹೆಚ್ಚಿಸುವುದರ ಜೊತೆಗೆ ಭಾವನಾತ್ಮಕ ಸನ್ನಿವೇಶಗಳಿಗೆ ಮತ್ತಷ್ಟು ಶಕ್ತಿ ತುಂಬುತ್ತದೆ.. ಯುದ್ಧದ ದೃಶ್ಯಗಳಿರಲಿ, ಭಕ್ತಿಯ ಕ್ಷಣಗಳಿರಲಿ ಸಂಗೀತದ ಮೋಡಿ ಪ್ರೇಕ್ಷಕರನ್ನು ಕಥೆಯೊಳಗೆ ಕರೆದೊಯ್ಯುತ್ತದೆ..ಕೇವಲ ದೃಶ್ಯ ವೈಭವವಷ್ಟೇ ಅಲ್ಲ.. ರಾಮಾಯಣದ ಭಾವನಾತ್ಮಕ ಸನ್ನಿವೇಶಗಳೂ ಪ್ರಮುಖ ಆಕರ್ಷಣೆ.. ರಾಮನ ಧರ್ಮ ಆದರ್ಶ, ಸೀತೆಯ ತ್ಯಾಗ, ಲಕ್ಷ್ಮಣನ ನಿಷ್ಠೆ ಹಾಗೂ ರಾವಣನ ವ್ಯಕ್ತಿತ್ವವನ್ನು ವಿಭಿನ್ನ ಆಯಾಮಗಳಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ.. ಕೆಲವು ದೃಶ್ಯಗಳು ನೋಡುಗರ ಕಣ್ಣಂಚಲ್ಲಿ ನೀರು ತರಿಸುತ್ತವೆ.


ಪ್ರಮುಖ ತಾರಾಗಣ ಮತ್ತು ಪಾತ್ರಗಳು
• ರಾಮ: ರಣಬೀರ್ ಕಪೂರ್ 
• ಸೀತೆ : ಸಾಯಿ ಪಲ್ಲವಿ 
• ರಾವಣ: ರಾಕಿಂಗ್‌ ಸ್ಟಾರ್‌ ಯಶ್ 
• ಲಕ್ಷ್ಮಣ: ರವಿ ದುಬೆ
• ಇತರರು: ಅರುಣ್ ಗೋವಿಲ್, ಲಾರಾ ದತ್ತ, ರಕುಲ್ ಪ್ರೀತ್ ಸಿಂಗ್, ವಿವೇಕ್ ಒಬೆರಾಯ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿದ್ದಾರೆ.

ಟೀಕೆಗಳಿಗೆ ಸೆಡ್ಡುಹೊಡೆಯುವಂತೆ ಅಭಿನಯಿಸಿದ ಬಾಲಿವುಡ್‌ ನಟ ರಣಬೀರ್ ಕಪೂರ್.. ಹೌದು ರಾಮಾಯಣದಲ್ಲಿ ರಾಮ ಪಾತ್ರದಲ್ಲಿ  ರಣಬೀರ್ ಕಪೂರ್ ನಟಿಸುತ್ತಿದ್ದಾರೆ ಅನ್ನೊ ಮಾಹಿತಿ ತಿಳಿಯುತ್ತಿದ್ದಂತೆ ಹಲವಾರು ಟೀಕೆಗಳು ಬಂದವು... ಆದರೆ ಸಿನಿಮಾ ನೋಡಿದರೆ ರಾಮನ ಪಾತ್ರಕ್ಕೆ ರಣಬೀರ್ ಕಪೂರ್ ಜೀವ ತುಂಬಿದ್ದು, ಪೈಸಾ ವಸೂಲ್‌ ಅನ್ನೋ ಹಾಗೆ ಶಾಂತ, ಗಂಭೀರ ಹಾಗೂ ಭಕ್ತಿಪೂರ್ಣವಾಗಿ ಅಭಿನಯಿಸಿ ಪ್ರೇಕ್ಷಕರ ಗಮನ ಸೆಳೆದಿದ್ದಾರೆ.. ಇನ್ನು ಲಕ್ಷ್ಮಣನಾಗಿ ರವಿ ದುಬೆ ಅವರು ಬಹಳ ಅದ್ಭುತವಾಗಿ ನಟಿಸಿದ್ದು, ಇವರು ಸಹ ಪ್ರೇಕ್ಷಕರ ಸೆಂಟರ್‌ ಆಫ್‌ ಅಟ್ರಾಕ್ಷನ್‌ ಆಗುತ್ತಾರೆ.. ಸೀತೆಯಾಗಿ ಸಾಯಿ ಪಲ್ಲವಿ ಕೂಡ ಪಾತ್ರಕ್ಕೆ ಜೀವ ತುಂಬುವಂತಹ ಭಾವನಾತ್ಮಕ ನಟನೆ ಮಾಡಿದ್ದಾರೆ.


ಒಟ್ಟಾರೆಯಾಗಿ ರಾಮಾಯಣ ಕೇವಲ ಒಂದು ಸಿನಿಮಾ ಮಾತ್ರವಲ್ಲ.. ಭಾರತೀಯರ ಭಾವನೆ, ನಂಬಿಕೆ ಹಾಗೂ ಮಹಾಕಾವ್ಯದ ವೈಭವವನ್ನು ಜಾಗತಿಕ ಮಟ್ಟದಲ್ಲಿ ತೋರಿಸುವ ಮಹತ್ವಾಕಾಂಕ್ಷೆಯ ಪ್ರಯತ್ನವಾಗಿದೆ. 

 

Add Zee News as a Preferred Source
TAGS:

About the Author

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.

ZEENEWS TRENDING STORIES