SOCIAL MEDIA

Newsletter

PARTNER SITES
Select Language Select State

ಪ್ರೇಕ್ಷಕರಿಗೆ ಬಿಗ್‌ ಸರ್ಪ್ರೈಸ್‌ ನೀಡಿದ "ರಾಮಾಯಣ"..! ರಾವಣ ಮಗನಾಗಿ ಸ್ಟಾರ್‌ ನಟನ ಸಡನ್‌ ಎಂಟ್ರಿ.. ಯಾರ್‌ ಗೊತ್ತೆ?

ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ 'ರಾಮಾಯಣ' ಚಿತ್ರದಲ್ಲಿ ಯಾರೂ ಊಹಿಸದ ಯುವ ನಟರೊಬ್ಬರು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಪ್ರೇಕ್ಷಕರಿಗೆ ಅಚ್ಚರಿ ಮೂಡಿಸಿದ್ದಾರೆ. ಯಾರು ಆ ನಟ.. ಮಾಡಿದ ಪಾತ್ರದ ಹೆಸರೇನು..? ಇಂಟ್ರಸ್ಟಿಂಗ್‌ ವರದಿ ಇಲ್ಲಿದೆ..

Written By Krishna NK
Published: Nov 05, 2026, 17:31 IST | Updated: Nov 05, 2026, 17:33 IST
Image Credit: Ramayana movie
Join

Raghav Juyal in Ramayana : ಭಾರತದ ಬಹುನಿರೀಕ್ಷಿತ ಹಾಗೂ ಬಿಗ್‌ ಬಜೆಟ್‌ ಚಿತ್ರಗಳಲ್ಲಿ ಒಂದಾದ ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಸಿನಿಮಾ ಪ್ರಸ್ತುತ ಚಿತ್ರಮಂದಿರದಲ್ಲಿ ಧೂಳೆಬ್ಬಿಸುತ್ತಿದೆ. ಈ ಚಿತ್ರದಲ್ಲಿ ಸ್ಟಾರ್‌ ನಟರ ದಂಡೇ ಇದ್ದು, ಆರಂಭದಿಂದಲೂ ಸಿನಿಮಾದ ಬಗ್ಗೆ ಭಾರೀ ನಿರೀಕ್ಷೆಗಳಿದ್ದವು. ಇನ್ನು ಸಿನಿಮಾ ನೋಡಿದವರಿಗೆ ಒಂದರಂತೆ ಹಲವಾರು ಅಚ್ಚರಿಗಳು ಕಾದಿದ್ದು, ದಿಗ್ಗಜ ನಟರ ಸಡನ್‌ ಎಂಟ್ರಿ ನೋಡಿ ಪ್ರೇಕ್ಷಕರು ಶಾಕ್‌ ಆಗುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ರಾವಣನ ಮಗನ ಪಾತ್ರದಲ್ಲಿ ನಟಿಸಿರುವ ಬಾಲಿವುಡ್‌ನ ಖ್ಯಾತ ನಟ ಏಕಾಎಕಿ ತೆರೆಮೇಲೆ ಪ್ರತ್ಯಕ್ಷವಾಗುವ ಮೂಲಕ ಪ್ರೇಕ್ಷಕರನ್ನು ಮೂಕವಿಸ್ಮಿತರನ್ನಾಗಿಸಿದೆ..  

ಹೌದು.. ಚಿತ್ರ ಬಿಡುಗಡೆಯಾಗುವವರೆಗೂ ಸಿನಿಮಾದಲ್ಲಿ ಯಾವ ನಟರು ನಟಿಸಿದ್ದಾರೆಂಬ ಸುಳಿವನ್ನೇ ಚಿತ್ರತಂಡ ಬಿಟ್ಟುಕೊಟ್ಟಿರಲಿಲ್ಲ. ಪ್ರೇಕ್ಷಕರು ಥಿಯೇಟರ್‌ನಲ್ಲಿ ಸಿನಿಮಾ ನೋಡುತ್ತಿದ್ದಾಗ ಹಠಾತ್ತನೆ ಎಂಟ್ರಿ ಕೊಡುವ ಹೀರೋಗಳನ್ನು ಕಂಡು ಪ್ರೇಕ್ಷಕರ ಶಾಕ್‌ಗೆ ಒಳಗಾಗುತ್ತಿದ್ದಾರೆ.. ಇದರ ನಡುವೆ ಎಲ್ಲರ ಗಮನ ಸೆಳೆದದ್ದು ಕೊನೆಯಲ್ಲಿ ಕಾಣಿಸಿಕೊಳ್ಳುವ ಬಾಲಿವುಡ್‌ನ ಯುವ ನಟ ರಾಘವ್ ಜುಯಾಲ್.

ರಾಘವ್‌ ಈ ಸಿನಿಮಾದಲ್ಲಿ ರಾವಣನ (ಯಶ್‌) ಮಗ ಇಂದ್ರಜಿತ್ (ಮೇಘನಾದ) ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತಮ್ಮ ತಮಾಷೆಯ ಸ್ವಭಾವ ಮತ್ತು ಅದ್ಭುತ ಡ್ಯಾನ್ಸ್‌ಗೆ ಹೆಸರುವಾಸಿಯಾಗಿರುವ ರಾಘವ್, ಇಲ್ಲಿ ಸಂಪೂರ್ಣವಾಗಿ ವಿಭಿನ್ನವಾದ ಹಾಗೂ ಗಂಭೀರವಾದ ಕ್ರೂರ ಯೋಧನ ಅವತಾರದಲ್ಲಿ ಕಾಣಿಸಿಕೊಂಡು ಎಲ್ಲರ ಹುಬ್ಬೇರಿಸಿದ್ದಾರೆ.

ಇನ್ನು ಚಿತ್ರದ ಬಗ್ಗೆ ಹೇಳುವುದಾದರೆ, ಬಾಲಿವುಡ್‌ನ ಚಾಕೊಲೇಟ್ ಬಾಯ್ ರಣಬೀರ್ ಕಪೂರ್ ಅವರು ಮರ್ಯಾದಾ ಪುರುಷೋತ್ತಮ ಶ್ರೀರಾಮನ ಪಾತ್ರಕ್ಕೆ ಜೀವ ತುಂಬಿದ್ದಾರೆ. ಅವರ ಗಾಂಭೀರ್ಯ ಹಾಗೂ ಹಾವಭಾವಗಳು ರಾಮನ ಪಾತ್ರಕ್ಕೆ ನೂರಕ್ಕೆ ನೂರು ನ್ಯಾಯ ಒದಗಿಸಿವೆ. ಇನ್ನು ದಕ್ಷಿಣ ಭಾರತದ ಹೆಮ್ಮೆಯ ನಟಿ ಸಾಯಿ ಪಲ್ಲವಿ ಅವರು ತಾಯಿ ಸೀತೆಯ ಪಾತ್ರದಲ್ಲಿ ಅತ್ಯಂತ ಲಾವಣ್ಯ ಹಾಗೂ ಮುಗ್ಧತೆಯಿಂದ ನಟಿಸಿದ್ದು, ಪ್ರೇಕ್ಷಕರ ಮನ ಗೆದ್ದಿದ್ದಾರೆ.

ಇನ್ನು ಈ ಚಿತ್ರದ ಮತ್ತೊಂದು ಮುಖ್ಯಕೇಂದ್ರ ಬಿಂದು ಅಂದರೆ ಅದು 'ರಾಕಿಂಗ್ ಸ್ಟಾರ್' ಯಶ್... ಕನ್ನಡ ಚಿತ್ರರಂಗದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್‌ ಆಗಿ ಬೆಳೆದಿರುವ ಯಶ್, ಈ ಸಿನಿಮಾದಲ್ಲಿ ದಶಕಂಠ ರಾವಣನಾಗಿ ಬಣ್ಣ ಹಚ್ಚಿದ್ದಾರೆ. ಯಶ್ ಎಂಟ್ರಿ, ಸ್ಕ್ರೀನ್ ಪ್ರೆಸೆನ್ಸ್ ಸಿನಿಮಾದ ಹೈಲೈಟ್ ಆಗಿದೆ. ರಾಕಿಭಾಯ್‌ ನಟನೆ ಮತ್ತು ಅವರ ದೈತ್ಯ ನೋಟ ರಾಮಾಯಣ ಸಿನಿಮಾದ ಮೌಲ್ಯವನ್ನು ಮತ್ತಷ್ಟು ಹೆಚ್ಚಿಸಿದೆ ಅಂದ್ರೆ ತಪ್ಪಾಗಲ್ಲ.

ರಾಮ-ಲಕ್ಷ್ಮಣರೊಂದಿಗೆ ಇಂದ್ರಜೀತುವಿನ ಹೋರಾಟ
ಚಿತ್ರದ ಕೊನೆಯ ಭಾಗದಲ್ಲಿ ಎಂಟ್ರಿ ಕೊಡುವ ರಾಘವ್ ಜುಯಾಲ್ ರಾವಣ ಮತ್ತು ಮಂಡೋದರಿ ಪುತ್ರ ಇಂದ್ರಜೀತುವಾಗಿ ಕಾಣಿಸಿಕೊಂಡು ಸಿನಿಮಾಗೆ ಹೊಸ ತಿರುವು ನೀಡುತ್ತಾರೆ. ಅಂದಹಾಗೆ, ಮಾಯಾ ಯುದ್ಧ ಪ್ರವೀಣ ಮತ್ತು ಅದೃಶ್ಯನಾಗಿ ಹೋರಾಡುವ ಶಕ್ತಿ ಹೊಂದಿರುವ ಮೇಘನಾದನು ರಾಮ-ಲಕ್ಷ್ಮಣರೊಂದಿಗೆ ಮೊದಲು ಯುದ್ಧದಲ್ಲಿ ಎದುರಾಗುತ್ತಾನೆ. ರಾಮಾಯಣ ಭಾಗ 1ರಲ್ಲಿ ರಾಘವ್ ಅವರ ಪಾತ್ರದ ಅವಧಿ ಕಡಿಮೆಯಿದ್ದರೂ, ಎರಡನೇ ಭಾಗದಲ್ಲಿ ಪ್ರಮುಖ ಪಾತ್ರವಾಗಿ ಹೊರಹೊಮ್ಮುತ್ತಾರೆ. ಹನುಮನ ಎಡೆಮುರಿ ಕಟ್ಟಿ ತಂದೆ ರಾವಣನ ಮುಂದೆ ತಂದು ನಿಲ್ಲಿಸುವುದೂ ಸಹ ಇಂದ್ರಜೀತು ಅನ್ನೋದು ಗಮನಾರ್ಹ.. ಒಟ್ಟಾರೆಯಾಗಿ ಈ ಮೂಲಕ 'ರಾಮಾಯಣ' ಸಿನಿಮಾವು ಭಾರತೀಯ ಸಿನಿಮಾದಲ್ಲಿ ಹೊಸ ಇತಿಹಾಸ ಬರೆಯುವುದಂತೂ ಖಂಡಿತ.

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

ZEENEWS TRENDING STORIES