ಪ್ರೇಮದ ಊರಲಿ ನಟ ಶ್ರೀರಾಮ್ ಮಾತಿಗೆ ವಿವಾದ? ಪೂರ್ತಿ ವಿಡಿಯೋ ಹಂಚಿ ಕ್ಲಾರಿಟಿ ಕೊಟ್ಟ Ram!
Premada oorali movie Hero shreeram controversy latest updates: ಪ್ರೇಮದ ಊರಲಿ' ಸಿನಿಮಾ ಸಕ್ಸಸ್ ಖುಷಿಯಲ್ಲಿರುವ ನಾಯಕ ನಟ ಶ್ರೀರಾಮ್ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯಾಗಿದ್ದಾರೆ. ಕನ್ನಡ ಚಿತ್ರರಂಗದ ಬಗ್ಗೆ ಶ್ರೀರಾಮ್ ಆಡಿದ ಮಾತುಗಳು ವಿವಾದಕ್ಕೆ ಕಾರಣವಾಗಿವೆಯಾ? ಅಥವಾ ಅವರ ಮಾತುಗಳನ್ನೇ ತಪ್ಪಾಗಿ ಅರ್ಥೈಸಲಾಗಿದೆಯಾ? ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಚರ್ಚೆಗೆ ಇದೀಗ ಸ್ವತಃ ಶ್ರೀರಾಮ್ ಸ್ಪಷ್ಟನೆ ನೀಡಿದ್ದಾರೆ.
Premada oorali Movie: ಪ್ರೇಮದ ಊರಲಿ' ಸಿನಿಮಾ ಸಕ್ಸಸ್ ಖುಷಿಯಲ್ಲಿರುವ ನಾಯಕ ನಟ ಶ್ರೀರಾಮ್ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯಾಗಿದ್ದಾರೆ. ಕನ್ನಡ ಚಿತ್ರರಂಗದ ಬಗ್ಗೆ ಶ್ರೀರಾಮ್ ಆಡಿದ ಮಾತುಗಳು ವಿವಾದಕ್ಕೆ ಕಾರಣವಾಗಿವೆಯಾ? ಅಥವಾ ಅವರ ಮಾತುಗಳನ್ನೇ ತಪ್ಪಾಗಿ ಅರ್ಥೈಸಲಾಗಿದೆಯಾ? ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಚರ್ಚೆಗೆ ಇದೀಗ ಸ್ವತಃ ಶ್ರೀರಾಮ್ ಸ್ಪಷ್ಟನೆ ನೀಡಿದ್ದಾರೆ. ಅಷ್ಟಕ್ಕೂ ಶ್ರೀರಾಮ್ ಹೇಳಿದ್ದೇನು? ತಮ್ಮ ಮಾತಿಗೆ ಸ್ಪಷ್ಟನೆ ನೀಡಲು ಪೂರ್ತಿ ವಿಡಿಯೋ ಹಂಚಿಕೊಂಡಿದ್ದೇಕೆ? ಈ ಸ್ಟೋರಿ ನೋಡಿ
'ಪ್ರೇಮದ ಊರಲಿ' ಸಿನಿಮಾ ಸಕ್ಸಸ್ ಜರ್ನಿ ಮುಂದುವರಿದಿದೆ. ಪ್ರೇಕ್ಷಕರ ಮೆಚ್ಚುಗೆ ಗಳಿಸಿರುವ ಸಿನಿಮಾ ಇದೀಗ 50 ದಿನಗಳ ಸಂಭ್ರಮದತ್ತ ಹೆಜ್ಜೆ ಇಟ್ಟಿದೆ. ಈ ಖುಷಿಯ ನಡುವೆಯೇ ಚಿತ್ರದ ನಾಯಕ ನಟ ಶ್ರೀರಾಮ್ ಆಡಿದ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿವೆ.
ಕನ್ನಡ ಚಿತ್ರರಂಗವನ್ನ ನಾವು ಬೆಳೆಸಿದ್ದೇವೆ, ನಮ್ಮ ಸಿನಿಮಾದಿಂದ ಇಂಡಸ್ಟ್ರಿ ಮೇಲೆ ಬಂದಿದೆ ಅನ್ನೋ ರೀತಿಯ ಮಾತುಗಳನ್ನ ಶ್ರೀರಾಮ್ ಆಡಿಲ್ಲ. ಬದಲಿಗೆ, ನಮ್ಮ ಚಿತ್ರದಿಂದ ಕನ್ನಡ ಚಿತ್ರರಂಗಕ್ಕೆ ಅಳಿಲು ಸೇವೆ ಮಾಡಿದ್ದೇವೆ. ಅಣ್ಣಾವ್ರ ಕಾಲದಿಂದಲೂ ಕನ್ನಡ ಚಿತ್ರರಂಗ ತನ್ನದೇ ಆದ ಸ್ಥಾನದಲ್ಲಿದೆ. ನಾವೇ ಚಿತ್ರರಂಗವನ್ನ ಮೇಲೆತ್ತಿದ್ದೇವೆ ಅನ್ನೋದು ಸರಿಯಲ್ಲ ಎಂಬ ಅರ್ಥದಲ್ಲಿ ಮಾತನಾಡಿದ್ದಾರೆ.ಆದರೆ, ಶ್ರೀರಾಮ್ ಮಾತಿನ ಕೆಲವು ತುಣುಕುಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಇದರಿಂದ ಅವರ ಹೇಳಿಕೆಗೆ ಬೇರೆ ಅರ್ಥ ಕಲ್ಪಿಸಲಾಗುತ್ತಿದೆ ಎಂಬ ಚರ್ಚೆ ಶುರುವಾಗಿದೆ. ಕೆಲವರು ಶ್ರೀರಾಮ್ ಮಾತುಗಳನ್ನ ಟೀಕಿಸಿದ್ರೆ, ಇನ್ನು ಕೆಲವರು ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಇದೀಗ ಈ ಚರ್ಚೆಗೆ ಸ್ವತಃ ಶ್ರೀರಾಮ್ ಪ್ರತಿಕ್ರಿಯಿಸಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಪೂರ್ಣ ವಿಡಿಯೋವನ್ನೇ ಹಂಚಿಕೊಂಡಿದ್ದಾರೆ. ನಮ್ಮ ಸಿನಿಮಾವನ್ನ ಗೆಲ್ಲಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ನೀವು ನಮ್ಮ ಸಿನಿಮಾವನ್ನ ಕೈ ಹಿಡಿದಿದ್ದಲ್ಲ, ಭುಜದ ಮೇಲೆ ಹೊತ್ತು ಮೆರೆಸಿದ್ದೀರಿ. ನಾವು ಬಂದು ಚಿತ್ರರಂಗವನ್ನ ಮೇಲೆತ್ತಿದ್ದೇವೆ ಅನ್ನೋ ಭ್ರಮೆ ನಮಗಿಲ್ಲ ಎಂದು ತಮ್ಮ ಮಾತಿನ ಅರ್ಥವನ್ನ ಸ್ಪಷ್ಟಪಡಿಸಿದ್ದಾರೆ.
ಅಷ್ಟೇ ಅಲ್ಲ, ತಮ್ಮ ಮಾತುಗಳನ್ನ ತುಣುಕುಗಳಾಗಿ ನೋಡದೆ ಸಂಪೂರ್ಣ ವಿಡಿಯೋ ನೋಡಿ ಎಂದು ಶ್ರೀರಾಮ್ ಮನವಿ ಮಾಡಿದ್ದಾರೆ. @shreeram.official8 ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಒಟ್ಟಿನಲ್ಲಿ, ಶ್ರೀರಾಮ್ ಮಾತುಗಳ ಸುತ್ತ ಶುರುವಾಗಿದ್ದ ಸೋಷಿಯಲ್ ಮೀಡಿಯಾ ಚರ್ಚೆಗೆ ಇದೀಗ ಅವರೇ ಸ್ಪಷ್ಟನೆ ನೀಡಿದ್ದು, ಪೂರ್ಣ ವಿಡಿಯೋ ನೋಡಿದ ಬಳಿಕವೇ ಅಭಿಪ್ರಾಯ ರೂಪಿಸಿಕೊಳ್ಳಬೇಕಿದೆ.ಒಂದು ಮಾತು ನೂರು ಚರ್ಚೆ ಶ್ರೀರಾಮ್ ಹೇಳಿದ್ದರ ಹಿಂದಿನ ಅರ್ಥವೇ ಬೇರೆ, ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಚರ್ಚೆಯೇ ಬೇರೆನಾ? ಅನ್ನೋ ಪ್ರಶ್ನೆ ಇದೀಗ ಮೂಡಿದೆ.