SOCIAL MEDIA

Newsletter

PARTNER SITES
Select Language Select State

ಪ್ರಮೋದ್‌ ಅಭಿನಯದ "ಹಲ್ಕಾ ಡಾನ್" ಚಿತ್ರದ ಮಾಸ್‌ ಫಸ್ಟ್‌ ಕಟ್‌ ಟೀಸರ್‌ ಬಿಡುಗಡೆ

Halka Dawn mass first cut teaser released: ಪ್ರಮೋದ್ ಅಭಿನಯದ ಬಹುನಿರೀಕ್ಷಿತ ‘ಹಲ್ಕಾ ಡಾನ್’ ಚಿತ್ರದ ಮಾಸ್ ಫಸ್ಟ್ ಕಟ್ ಟೀಸರ್ ಬಿಡುಗಡೆಯಾಗಿದ್ದು, ಕನ್ನಡ, ತುಳು ಮತ್ತು ತೆಲುಗಿನಲ್ಲಿ ಅಬ್ಬರಿಸಲು ಇಡೀ ಚಿತ್ರತಂಡ ಸಜ್ಜಾಗಿದೆ.

Written By Ramya. R. Gowda
Published: Nov 12, 2026, 14:25 IST | Updated: Nov 12, 2026, 14:42 IST
Join

Halka Dawn mass first cut teaser released: ಪ್ರಮೋದ್ ಅಭಿನಯದ ಬಹುನಿರೀಕ್ಷಿತ ‘ಹಲ್ಕಾ ಡಾನ್’ ಚಿತ್ರದ ಮಾಸ್ ಫಸ್ಟ್ ಕಟ್ ಟೀಸರ್ ಬಿಡುಗಡೆಯಾಗಿದ್ದು,  ಕನ್ನಡ, ತುಳು ಮತ್ತು ತೆಲುಗಿನಲ್ಲಿ ಅಬ್ಬರಿಸಲು ಇಡೀ ಚಿತ್ರತಂಡ ಸಜ್ಜಾಗಿದೆ.

ಕನ್ನಡ ಚಿತ್ರರಂಗದ ಪ್ರತಿಭಾವಂತ ನಟ ಪ್ರಮೋದ್ ಅಭಿನಯದ ಬಹುನಿರೀಕ್ಷಿತ 'ಹಲ್ಕಾ ಡಾನ್' ಸಿನಿಮಾದ 'ಫಸ್ಟ್ ಕಟ್ ಟೀಸರ್' ಅಧಿಕೃತವಾಗಿ ಬಿಡುಗಡೆಯಾಗಿದ್ದು, ಸಿನಿರಸಿಕರಲ್ಲಿ ಭಾರೀ ಕುತೂಹಲ ಮೂಡಿಸಿದೆ. ಈಗಾಗಲೇ ಪರಭಾಷೆಗಳಲ್ಲೂ ಗುರುತಿಸಿಕೊಂಡು ತೆಲುಗು ಪ್ರೇಕ್ಷಕರಿಗೂ ಚಿರಪರಿಚಿತರಾಗಿರುವ ಪ್ರಮೋದ್ ಅವರಿಗೆ ಆಂಧ್ರ ಮತ್ತು ತೆಲಂಗಾಣದಲ್ಲೂ ದೊಡ್ಡ ಅಭಿಮಾನಿ ಬಳಗವಿದೆ. ಈ ಹಿನ್ನೆಲೆಯಲ್ಲಿ ‘ಹಲ್ಕಾ ಡಾನ್’ ಸಿನಿಮಾದ ಮೇಲೆ ಕನ್ನಡದ ಜೊತೆಗೆ ತೆಲುಗು ಚಿತ್ರರಂಗದಲ್ಲೂ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಕೊಂಡಿದೆ.

ಸದ್ಯ ಬಿಡುಗಡೆಯಾಗಿರುವ ಟೀಸರ್ ಸಂಪೂರ್ಣ ಮಾಸ್ ಅಂಶಗಳಿಂದ ಕೂಡಿದ್ದು, ಪ್ರೇಕ್ಷಕರಿಗೆ ಭರ್ಜರಿ ಆಕ್ಷನ್ ಮನರಂಜನೆಯ ಭರವಸೆ ನೀಡುತ್ತಿದೆ. ಟೀಸರ್‌ನಲ್ಲಿ ನಟ ಪ್ರಮೋದ್ ಅವರ ಲುಕ್, ಬಾಡಿ ಲ್ಯಾಂಗ್ವೇಜ್ ಮತ್ತು ಮ್ಯಾನರಿಸಂ ಹಿಂದೆಂದಿಗಿಂತಲೂ ಸಖತ್ ಡಿಫರೆಂಟ್ ಆಗಿ ಮೂಡಿಬಂದಿದೆ. ಈ ಟೀಸರ್ ಪ್ರಮೋದ್ ಅವರನ್ನು ಹೊಸದೊಂದು ಮಾಸ್ ಅವತಾರದಲ್ಲಿ ಪ್ರೇಕ್ಷಕರ ಮುಂದೆ ಪರಿಚಯಿಸಿದೆ. ಕೇವಲ ಸೀಮಿತ ಪ್ರೇಕ್ಷಕರಿಗೆ ಮಾತ್ರವಲ್ಲದೆ, ಬಹುಭಾಷಾ ಪ್ರೇಕ್ಷಕರನ್ನು ಸೆಳೆಯುವ ನಿಟ್ಟಿನಲ್ಲಿ ಈ ಚಿತ್ರವನ್ನು ಏಕಕಾಲಕ್ಕೆ ಕನ್ನಡ, ತುಳು ಮತ್ತು ತೆಲುಗು ಭಾಷೆಗಳಲ್ಲಿ ತೆರೆಗೆ ತರಲು ಚಿತ್ರತಂಡ ಸಿದ್ಧತೆ ನಡೆಸಿದೆ.

ಚಲಾ ಅವರ ಕಥೆ ಮತ್ತು ನಿರ್ದೇಶನದಲ್ಲಿ ಮೂಡಿಬಂದಿರುವ ಈ ಆಕ್ಷನ್ ಎಂಟರ್‌ಟೈನರ್ ಚಿತ್ರಕ್ಕೆ ‘ವೀನಸ್ ಎಂಟರ್‌ಟೈನರ್ಸ್’ ಬ್ಯಾನರ್ ಅಡಿಯಲ್ಲಿ ಶ್ರೀಕಾಂತ್ ಕೆ.ಪಿ. ಬಂಡವಾಳ ಹೂಡಿದ್ದಾರೆ. ಇವರಿಗೆ ಮಾಧವ್ ಸಿರಾನ್ ಹಾಗೂ ಮ್ಯಾಸಿಸ್ ಪ್ರೊಡಕ್ಷನ್ಸ್ (Madhaw Ciran & Macis Productions) ಸಂಸ್ಥೆಗಳು ನಿರ್ಮಾಣದಲ್ಲಿ ಸಾಥ್ ನೀಡಿವೆ.

ಚಿತ್ರದಲ್ಲಿ ಪ್ರಮೋದ್ ಅವರಿಗೆ ನಾಯಕಿಯಾಗಿ ಸ್ಯಾಂಡಲ್‌ವುಡ್‌ನ ಜನಪ್ರಿಯ ನಟಿ ಅಮೃತಾ ಅಯ್ಯಂಗಾರ್ ಕಾಣಿಸಿಕೊಂಡಿದ್ದು, ಕರಾವಳಿಯ ಪ್ರತಿಭಾನ್ವಿತ ನಟ ರೂಪೇಶ್ ಶೆಟ್ಟಿ, ಮಲಯಾಳಂ ನಟಿ ದಿವ್ಯಾ ಪಿಳ್ಳೈ ಕೂಡ ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಪ್ರತಿಷ್ಠಿತ ‘ಡಿ ಬೀಟ್ಸ್’ (D Beats) ಆಡಿಯೋ ಸಂಸ್ಥೆಯ ಮೂಲಕ ಬಿಡುಗಡೆಯಾಗಿರುವ ‘ಹಲ್ಕಾ ಡಾನ್’ ಟೀಸರ್‌ಗೆ ಸಾಮಾಜಿಕ ಜಾಲತಾಣಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಭರ್ಜರಿ ಆಕ್ಷನ್, ಮಾಸ್ ಸಂಭಾಷಣೆ ಮತ್ತು ತಾರಾಗಣದ ಮೂಲಕ ಗಮನಸೆಳೆಯುತ್ತಿರುವ ಈ ಸಿನಿಮಾ ಸದ್ಯದಲ್ಲೇ ಬೆಳ್ಳಿತೆರೆಯ ಮೇಲೆ ಅಬ್ಬರಿಸಲು ಸಜ್ಜಾಗಿದೆ.
 

Add Zee News as a Preferred Source
TAGS:

About the Author

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.
Read More

ZEENEWS TRENDING STORIES