SOCIAL MEDIA

Newsletter

PARTNER SITES
Select Language Select State

Sandalwood Actress: ಆತ್ಮಗಳ ಜೊತೆಗೆ ಮಾತನಾಡುತ್ತಾರಂತೆ ಈ ಚಂದನವನದ ನಟಿ: ಈಕೆ ಯಾರು ಗೊತ್ತೇ?

Sandalwood Actress speaks with spirits : ಚಂದನವನದ ನಟಿಯೊಬ್ಬರು ಆತ್ಮಗಳ ಜೊತೆ ಸಂಪರ್ಕ ಕಲ್ಪಿಸುವ ವಿದ್ಯೆಯನ್ನು ಕಲಿತ್ತಿದ್ದಾರೆ. ಹಾಗೆಯೇ ಈ ನಟಿ ಕನಸುಗಳನ್ನು ಕೂಡ ಟ್ರ್ಯಾಕ್ ಮಾಡುತ್ತಾರೆ. ಹಾಗಿದ್ರೇ ಈ ನಟಿ ಯಾರು? ಇಂತಹದೊಂದು ವಿದ್ಯೆಯೊಂದನ್ನು ಕಲಿತ್ತಿದ್ದಾದರು ಏಕೆ? ಇಲ್ಲಿದೆ ಸಂಪೂರ್ಣ ವಿವರ.

Written By Chetana Devarmani
Published: Nov 15, 2026, 11:42 IST | Updated: Nov 15, 2026, 11:43 IST
Join

Neetu Shetty speaks with spirits: ನಟಿ ನೀತು ಶೆಟ್ಟಿ 'ಶಮನಿಸಂ' ಎಂಬ ವಿದ್ಯೆ ಕಲಿತಿದ್ದು, ಇದೊಂದು ಆತ್ಮಗಳ ಜೊತೆ ಸಂಪರ್ಕ ಕಲ್ಪಿಸುವ ವಿದ್ಯೆಯಾಗಿದೆ. ನಟಿ ನೀತು ಶೆಟ್ಟಿ ಯಾಕೆ ಅಂತ ನೋಡಿದಾಗ ತಂದೆಗೆ ಇನ್ನೂ ಮುಕ್ತಿ ಸಿಕ್ಕಿಲ್ಲ. ಗುರುವಾಯೂರು ದೇವಸ್ಥಾನಕ್ಕೆ ಹೋಗು ಅಂತ ಹೇಳಿದ್ದರಂತೆ. ಕನ್ನಡದ ನಟಿ ನೀತುಗೆ ಅಹಮದಾಬಾದ್‌ನಲ್ಲಿ ದಂಪತಿಯೊಬ್ಬರು ಇದನ್ನು ಕಲಿಸುತ್ತಾರೆ ಅನ್ನೋದು ಗೊತ್ತಾಗಿ, ಅವರೊಂದಿಗೆ ಸಂಪರ್ಕದಲ್ಲಿದ್ದರು.

ಸ್ಯಾಂಡಲ್‌ವುಡ್‌ನಲ್ಲಿ ಹಲವಾರು ಚಿತ್ರಗಳಲ್ಲಿ ಅಭಿನಯಿಸಿ ಗಾಳಿಪಟ ನೀತು ಎಂದು ಖ್ಯಾತಿ ಪಡೆದಿರುವ ನಟಿ ನೀತು ಶೆಟ್ಟಿ ಸದ್ಯ ಚಿತ್ರರಂಗದಿಂದ ದೂರವಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ಹೊಸ ವಿದ್ಯೆಯೊಂದನ್ನು ಕಲಿತ್ತಿದ್ದು, ಇವರು ಆತ್ಮಗಳ ಜೊತೆಗೆ ಮಾತನಾಡುತ್ತಾರೆ. ಈ ನಟಿ 'ಶಮನಿಸಂ' ಎಂಬ ವಿದ್ಯೆ ಕಲಿತಿದ್ದು, ಇದೊಂದು ಆತ್ಮಗಳ ಜೊತೆ ಸಂಪರ್ಕ ಕಲ್ಪಿಸುವ ವಿದ್ಯೆಯಾಗಿದೆ. ಹಾಗೆಯೇ ಇದರೊಂದಿಗೆ ಕನಸುಗಳನ್ನು ಕೂಡ ಟ್ರ್ಯಾಕ್ ಮಾಡುತ್ತಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ನಟಿ ನೀತು ಶೆಟ್ಟಿ,"ಡ್ರೀಮ್ ಟ್ರ್ಯಾಕಿಂಗ್ ಅಂತಲ್ಲ. ನಾನು ಶಮನಿಸಂ ಕೋರ್ಸ್ ಮಾಡಿದ್ದೇನೆ. ಅದರಲ್ಲಿ ಡ್ರೀಮ್ ಟ್ರ್ಯಾಕಿಂಗ್ ಅನ್ನೋದು ಒಂದು ಭಾಗ. ಶಮನಿಸಂ ಅಂದರೆ, ಸಿನಿಮಾದಲ್ಲಿರೋ ತರ ಓಜಾ ಬಾಕ್ಸ್ ಇಟ್ಟುಕೊಂಡು ಆತ್ಮಗಳನ್ನು ಕರೆಯೋದೆಲ್ಲ ಅಲ್ಲ. ನಾನು ಈ ಕೋರ್ಸ್ ಅನ್ನು ಬೇಕು ಅಂತ ಮಾಡಿದ್ದೇ ಅಲ್ಲ. ನಾನು ಇದನ್ನೂ ಪ್ರೊಫೆಷನ್ ಆಗಿ ತೆಗೆದುಕೊಳ್ಳುತ್ತೇನೆ ಅಂತ ಕನಸು ಮನಸ್ಸಿನಲ್ಲೂ ಅಂದುಕೊಂಡಿರಲಿಲ್ಲ."ಎಂದು ಹೇಳಿದ್ದಾರೆ.

ನಟಿ ನೀತುಗೆ ಅವರ ತಂದೆ ತೀರಿಕೊಂಡ ನಂತರ ಕೆಲವು ಸಮಸ್ಯೆಗಳು ಎದುರಾಗಿದ್ದವು. ಈ ನಟಿ ಮಲಗಲು ಹೂದಾಗ"ತುಂಬಾನೇ ಕನಸುಗಳು ಬರುವುದಕ್ಕೆ ಶುರುವಾಗಿದ್ದವು. ಕಪ್ಪಗೆ ಏನೋ ಕಾಣಿಸುತ್ತಿತ್ತು ಅನ್ನೋದು ನಿಂತಿತ್ತು. ಆದರೆ, ನಿದ್ರೆಯಲ್ಲಿ ನಮ್ಮ ತಂದೆ ಕೈ ಕಟ್ಟಿಕೊಂಡು ತಲೆ ಬಗ್ಗಿಸಿಕೊಂಡು ನಿಂತಿದ್ದು ಕಾಣಿಸಿತು. ಆದರೆ, ಇದು ಕನಸಾಗಿರಲಿಲ್ಲ. ಇದು ಕನಸು ಮತ್ತು ರಿಯಾಲಿಟಿ ಮಧ್ಯೆ ಆಗೋದು. ನನಗೆ ಮಲಗುವುದಕ್ಕೆ ಹಿಂಜರಿಕೆ ಆಗುವುದಕ್ಕೆ ಶುರುವಾಗಿತ್ತು" ಎಂದು ತಿಳಿಸಿದ್ದಾರೆ.

ನೀತು ಶೆಟ್ಟಿ ಕನಸಿನಲ್ಲಿ ಅವರ ತಂದೆ ಬಂದಾಗ ದಿಢೀರನೇ ಎದ್ದು ಬಿಡುವುತ್ತಿದ್ದರಂತೆ. ಈ ನಟಿ ಯಾಕೆ ಅಂತ ನೋಡಿದಾಗ ತಂದೆಗೆ ಇನ್ನೂ ಮುಕ್ತಿ ಸಿಕ್ಕಿಲ್ಲ. ಗುರುವಾಯೂರು ದೇವಸ್ಥಾನಕ್ಕೆ ಹೋಗು ಅಂತ ಹೇಳಿದ್ದರಂತೆ. ಬಳಿಕ ನೀತು ಅಲ್ಲಿಗೆ ತಂದೆಗೆ ಮುಕ್ತಿ ಕೊಡುವಂತೆ ಬೇಡಿಕೊಂಡ ನಂತರ ಅಲ್ಲಿಂದ ಮತ್ತೆ ಈಕೆಗೆ ಆ ಸಮಸ್ಯೆ ಮತ್ತೆ ಬರಲಿಲ್ಲ ಎಂದು ಹೇಳಿಕೊಂಡಿದ್ದಾರೆ. ಆದರಿಂದ ಈ ನಟಿ ಕನಸುಗಳನ್ನು ಟ್ರ್ಯಾಕ್ ಮಾಡುವುದನ್ನು ಕಲಿಯಬೇಕು ಅಂತ ನಿರ್ಧಾರ ಮಾಡಿದರು.ಕನ್ನಡದ ನಟಿ ನೀತುಗೆ ಅಹಮದಾಬಾದ್‌ನಲ್ಲಿ ದಂಪತಿಯೊಬ್ಬರು ಇದನ್ನು ಕಲಿಸುತ್ತಾರೆ ಅನ್ನೋದು ಗೊತ್ತಾಗಿ, ಅವರೊಂದಿಗೆ ಸಂಪರ್ಕದಲ್ಲಿದ್ದರು.

ಅಲ್ಲಿಂದ 'ಶಾಮನಿಸಂ' ಅನ್ನೋ ವಿದ್ಯೆಯನ್ನು ಕಲಿಯಲು ಮುಂದಾದರು. ಈ ನಟಿ ಸಂದರ್ಶನ್ಲಿ ಮಾತನಾಡುವಾಗ,"ನಾನು ಯಾವುದೋ ಮೂಡನಂಬಿಕೆಗೆ, ಭಯಕ್ಕೆ ಬಗ್ಗೋದಿಲ್ಲ. ಆದರೂ ನನಗೂ ಭಯವಿದೆ. ಆದರೆ, ನಾನು ನಂಬಿದ್ದನ್ನು ಮೂಡನಂಬಿಕೆ ಅಂದರೆ, ಅದಕ್ಕೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಸೈನ್ಸ್‌ಗೆ ಅದರದ್ದೇ ಆದ ಜಾಗವಿದೆ. ಹಾಗೇ ಆತ್ಮಗಳ ವಿಜ್ಞಾನಕ್ಕೆ ಅದರದ್ದೇ ಜಾಗವಿದೆ." ಎಂದ್ಹೇಳಿಕೊಂಡಿದ್ದಾರೆ.

ಇಂತಹದೊಂದು ಕೇಸ್‌ ಬಗ್ಗೆ ಮಾತನಾಡುವಾಗ ನೀತು ಶೆಟ್ಟಿ,"ಒಂದು ಚಾಲೆಂಜಿಂಗ್ ಕೇಸ್ ಇತ್ತು. ಒಬ್ಬರು ಕೋಮಾದಲ್ಲಿ ಇದ್ದರು. ಆಗ ನಾನು ಇನ್ನೂ ಬಿಗಿನಿಂಗ್‌ನಲ್ಲಿದ್ದೆ. ಈ ಕೆಲಸ ಮಾಡುವಾಗ ಎಕ್ಸ್‌ಪೀರಿಯನ್ಸ್ ಕೂಡ ಬೇಕಾಗುತ್ತೆ. ಧೈರ್ಯವನ್ನೂ ಇಟ್ಟುಕೊಳ್ಳಬೇಕಾಗುತ್ತೆ. ಗಂಡ ಕೋಮಾದಲ್ಲಿದ್ದರು. ವೆಂಟಿಲೇಟರ್ ತೆಗೀಬೇಕು ಅಂತಿದ್ರು. ಆ ಸಮಯದಲ್ಲಿ ಆತ್ಮ ಬಿಡುವುದಕ್ಕೂ ರೆಡಿಯಿರಲಿಲ್ಲ. ಹಾಗಂತ ಇರುವುದಕ್ಕೂ ರೆಡಿಯಿರಲಿಲ್ಲ. ನನಗೆ ಏನೋ ಒಂದು ವಿಷನ್ ಕಾಣಿಸಿತು. ಆಗ ನನಗೆ ಭಯ ಬಂತು." ಎಂದು ಒಂದು ಘಟನೆಯನ್ನು ವಿವರಿಸಿದ್ದಾರೆ.
 

Add Zee News as a Preferred Source
TAGS:

About the Author

"*ಚೇತನಾ ದೇವರಮನಿ* ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್‌ʼ ವೆಬ್‌ನಲ್ಲಿ Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 8 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೀಡೆ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್‌ ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ ತಂಡ ಸೇರಿದರು. ಪ್ರಸ್ತುತ ಕಳೆದ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ ವೆಬ್‌ ಟೀಮ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಚೇತನಾ ದೇವರಮನಿ ತಮ್ಮ ಸಂಶೋಧನಾ ಕೌಶಲ್ಯ ಮತ್ತು ಬರವಣಿಗೆ ಶೈಲಿಯಿಂದ ಎಲ್ಲರ ಗಮನಸೆಳೆದಿದ್ದು, ಹೆಸರುವಾಸಿಯಾಗಿದ್ದಾರೆ. ಚೇತನಾ ದೇವರಮನಿಯವರ ಬರವಣಿಗೆಯ ಶೈಲಿ ಆಕರ್ಷಕ ಹಾಗೂ ತಿಳಿವಳಿಕೆಯಿಂದ ಕೂಡಿದ್ದು ನಿಷ್ಠಾವಂತ ಓದುಗರನ್ನು ಕಟ್ಟಿಕೊಳ್ಳಲು ಸಹಕಾರಿಯಾಗಿದೆ. ಚೇತನಾ ದೇವರಮನಿ ಅವರು ಬಿಡುವಿನ ವೇಳೆಯಲ್ಲಿ ಸಿನಿಮಾ ನೋಡುವುದು, ಪುಸ್ತಕ ಓದುವುದು, ಪ್ರವಾಸಕ್ಕೆ ಹೋಗುವುದನ್ನು ಆನಂದಿಸುತ್ತಾರೆ. ಈ ಚಟುವಟಿಕೆಗಳು ಅವರನ್ನು ರಿಫ್ರೆಶ್ ಮಾಡುತ್ತದೆ. ಇದೇ ಅವರಲ್ಲಿ ಚೈತನ್ಯ ತುಂಬುತ್ತದೆ. ಇದರಿಂದಲೇ ಅವರು ಕ್ರಿಯಾಶಿಲರಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ. ತಮ್ಮ ವಿಶ್ವಾಸಾರ್ಹ ಮಾಹಿತಿಪೂರ್ಣ ಬರಹಗಳ ಮೂಲಕ ಚೇತನಾ ದೇವರಮನಿಯವರು ಓದುಗ ವಲಯವನ್ನು ಪರಿಣಾಮಕಾರಿಯಾಗಿ ತಲುಪಲು ಶ್ರಮಿಸುತ್ತಿದ್ದಾರೆ. ಒಟ್ಟಾರೆ ಹೇಳುವುದಾದರೆ, ಚೇತನಾ ದೇವರಮನಿ ಅತ್ಯಂತ ನುರಿತ ಮತ್ತು ಅನುಭವಿ ಪತ್ರಕರ್ತರು, ಅವರು ತಮ್ಮ ಕೆಲಸದ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದಾರೆ."
Read More

ZEENEWS TRENDING STORIES