• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಮನರಂಜನೆ
  • /ನಿರೂಪ್ ಭಂಡಾರಿ ಅಭಿನಯದ ‘ಸತ್ಯ ಸನ್ ಆಫ್ ಹರಿಶ್ಚಂದ್ರ’ ಚಿತ್ರದ ‘ಗಾ ಗರಗ’ ಹಾಡು ಬಿಡುಗಡೆ:

ನಿರೂಪ್ ಭಂಡಾರಿ ಅಭಿನಯದ ‘ಸತ್ಯ ಸನ್ ಆಫ್ ಹರಿಶ್ಚಂದ್ರ’ ಚಿತ್ರದ ‘ಗಾ ಗರಗ’ ಹಾಡು ಬಿಡುಗಡೆ:

ಬೆಂಗಳೂರು: ನಟ ನಿರೂಪ್ ಭಂಡಾರಿ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಬಹುನಿರೀಕ್ಷಿತ ‘ಸತ್ಯ ಸನ್ ಆಫ್ ಹರಿಶ್ಚಂದ್ರ’ ಚಿತ್ರದ ‘ಗಾ ಗರಗ’ ಎಂಬ ಭಾವನಾತ್ಮಕ ಹಾಗೂ ಅರ್ಥಪೂರ್ಣ ಗೀತೆ ಅಧಿಕೃತವಾಗಿ ಬಿಡುಗಡೆಯಾಗಿದೆ.

Written ByRamya. R. Gowda
Published: Nov 18, 2026, 08:32 IST|Updated: Nov 18, 2026, 08:39 IST
joinshare
ನಿರೂಪ್ ಭಂಡಾರಿ ಅಭಿನಯದ ‘ಸತ್ಯ ಸನ್ ಆಫ್ ಹರಿಶ್ಚಂದ್ರ’ ಚಿತ್ರದ ‘ಗಾ ಗರಗ’ ಹಾಡು ಬಿಡುಗಡೆ:

About the Author

Ramya. R. Gowda

Ramya. R. Gowda

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.
Read More

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

2

ಭಾರತದಲ್ಲಿ ಅತಿ ಹೆಚ್ಚು ಬಳಕೆಯಾಗುವ ಪಾಸ್‌ವರ್ಡ್ ಇಲ್ಲಿದೆ ನೋಡಿ

3

ಆಸಿಯಾ ಮೇಲೆ ಸೌಂದರ್ಯಾ ಶೆಟ್ಟಿ ಹಲ್ಲೆ! ಇಂದೇ ಬಿಗ್‌ ಬಾಸ್‌ನಿಂದ ಹೊರ ಹೋಗ್ತಾರಾ?

4

'ಜೀ ನ್ಯೂಸ್' ಬಿಗ್‌ ಇಂಪ್ಯಾಕ್ಟ್: ದೆಹಲಿ ಫ್ಲಾಟ್ ಹರಾಜು ವಿವಾದದಲ್ಲಿ ತಪ್ಪೊಪ್ಪಿಕೊಂಡ NBCC

5

ಮುದ್ದು ಮಗಳ ಸಾವಿನ ನಂತರ ಬರಿಗಾಲಲ್ಲೇ ನಡೆಯುತ್ತಾರೆ ಈ ನಟ... ಕೋಟಿ ಕೋಟಿ ಒಡೆಯನಾದರೂ ಇದೆಂಥ ಸ್ಥಿತಿ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಬೆಂಗಳೂರು: ನಟ ನಿರೂಪ್ ಭಂಡಾರಿ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಬಹುನಿರೀಕ್ಷಿತ ‘ಸತ್ಯ ಸನ್ ಆಫ್ ಹರಿಶ್ಚಂದ್ರ’ ಚಿತ್ರದ ‘ಗಾ ಗರಗ’ ಎಂಬ ಭಾವನಾತ್ಮಕ ಹಾಗೂ ಅರ್ಥಪೂರ್ಣ ಗೀತೆ ಅಧಿಕೃತವಾಗಿ ಬಿಡುಗಡೆಯಾಗಿದೆ. ಖ್ಯಾತ ಸಂಗೀತ ನಿರ್ದೇಶಕ ಸಚಿನ್ ಬಸ್ರೂರ್ ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ಈ ಹಾಡಿಗೆ ಬಾಲಿವುಡ್‌ನ ಜನಪ್ರಿಯ ಗಾಯಕ ಕೈಲಾಶ್ ಖೇರ್ ತಮ್ಮ ವಿಶಿಷ್ಟ ಕಂಠದ ಮೂಲಕ ಜೀವ ತುಂಬಿದ್ದಾರೆ. ಖ್ಯಾತ ಗೀತರಚನೆಕಾರ ಪ್ರಮೋದ್ ಮರವಂತೆ ಅವರು ಬರೆದಿರುವ ಈ ಗೀತೆಯು ಕೇಳುಗರ ಮನಸ್ಸನ್ನು ತಟ್ಟುವಂತಿದೆ. "ಬಂಗಾರದಂತ ಊರೋ ಸಿವ, ಊರೇ ಊರು ಸೂರು ಕೊಟ್ಟ ಊರು.., ಸತ್ಯಾನೇ ನಾವು ನಂಬೋ ದೈವ, ಊರೇ ಊರು ಬಾಳು ಕೊಟ್ಟ ಊರು.." ಎಂಬ ಪಲ್ಲವಿಯೊಂದಿಗೆ ಶುರುವಾಗುವ ಈ ಹಾಡು, ಹುಟ್ಟೂರು ಹಾಗೂ ಸತ್ಯದ ಹಾದಿಯ ಮಹತ್ವವನ್ನು ಸಾರುವಂತಿದೆ. ಕೈಲಾಶ್ ಖೇರ್ ಅವರ ಗಾಯನ ಮತ್ತು ಸಚಿನ್ ಬಸ್ರೂರ್ ಅವರ ಸಂಗೀತ ಹಾಡಿಗೆ ವಿಶೇಷ ತೂಕ ತಂದುಕೊಟ್ಟಿದ್ದು, ಬಿಡುಗಡೆಯಾದ ಬೆನ್ನಲ್ಲೇ ಸಂಗೀತ ಪ್ರಿಯರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸಚಿನ್ ವಾಲಿ ಕಥೆ ಬರೆದು ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ ನಾಯಕ ನಟ ನಿರೂಪ್ ಭಂಡಾರಿ ಹಾಗೂ ನಿರ್ದೇಶಕ ಸಚಿನ್ ವಾಲಿ ಜಂಟಿಯಾಗಿ ಸ್ಕ್ರಿಪ್ಟ್ ಜವಾಬ್ದಾರಿ ಹೊತ್ತಿದ್ದಾರೆ. ಅಂಕಿತ್ ಸೋನಿಗಾರ ಈ ಚಿತ್ರವನ್ನು ನಿರ್ಮಿಸಿದ್ದು, ಪ್ರಶಾಂತ್ ಮುಲಗೆ ಸಹ ನಿರ್ಮಾಪಕರಾಗಿ ಮತ್ತು ಯಶ್ ಸೋನಿಗಾರ ಕಾರ್ಯಕಾರಿ ನಿರ್ಮಾಪಕರಾಗಿ ಚಿತ್ರತಂಡಕ್ಕೆ ಸಾಥ್ ನೀಡಿದ್ದಾರೆ. ‘ಸತ್ಯ ಸನ್ ಆಫ್ ಹರಿಶ್ಚಂದ್ರ’ ಚಿತ್ರವು ಬೃಹತ್ ತಾರಾಗಣವನ್ನು ಹೊಂದಿರುವುದು ವಿಶೇಷವಾಗಿದೆ. ನಿರೂಪ್ ಭಂಡಾರಿ ಅವರಿಗೆ ನಾಯಕಿಯರಾಗಿ ಬೃಂದಾ ಆಚಾರ್ಯ ಹಾಗೂ ಅಂಕಿತಾ ಅಮರ್ ಅಭಿನಯಿಸಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ, ಕರುನಾಡ ಚಕ್ರವರ್ತಿ ಡಾ. ಶಿವರಾಜಕುಮಾರ್ ಅವರು ಈ ಚಿತ್ರದಲ್ಲಿ ವಿಶೇಷ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಸಿನಿಮಾದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟುಗೊಳಿಸಿದೆ. ಉಳಿದಂತೆ ಹಿರಿಯ ನಟ ಸಾಯಿ ಕುಮಾರ್, ಮಧುಸೂಧನ್ ರಾವ್, ಸ್ವಾತಿ ಗುರುದತ್, ಅಶ್ವಿನ್ ಹಾಸನ್, ಅಭಿಷೇಕ್ ಶ್ರೀಕಾಂತ್, ಶೌರ್ಯ, ಮಠ ಕೊಪ್ಪಳ, ಪ್ರಶಾಂತ್ ಮುಳಗೆ, ಚೇತನ್ ದುರ್ಗಾ ಮತ್ತು ಗೌರವ್ ಶೆಟ್ಟಿ ಸೇರಿದಂತೆ ಹಲವು ಪ್ರತಿಭಾವಂತ ಕಲಾವಿದರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ.

ಕನ್ನಡದ ನಟ ನಿರೂಪ್ ಭಂಡಾರಿ ಅಭಿನಯಿಸಿರುವ ಪ್ರಮುಖ ಚಲನಚಿತ್ರಗಳ ಪಟ್ಟಿ ಇಲ್ಲಿದೆ:
• ರಂಗಿತರಂಗ (2015) - ಗೌತಮ್ ಸುವರ್ಣ ಪಾತ್ರ
• ರಾಜರಥ (2018) - ಅಭಿ ಪಾತ್ರ
• ಆದಿಲಕ್ಷ್ಮಿ ಪುರಾಣ (2019) - ಆದಿ ಪಾತ್ರ
• ವಿಂಡೋ ಸೀಟ್ (2022) - ರಘು ಪಾತ್ರ
• ವಿಕ್ರಾಂತ್ ರೋಣ (2022) - ಸಂಜೀವ್ ಗಂಭೀರ (ಸಂಜು) ಪಾತ್ರ
• ಎಡಗೈಯೇ ಅಪಘಾತಕ್ಕೆ ಕಾರಣ (2025) - ರಾಘವ್ ಪಾತ್ರ
• ಅತಿಕಾಯ (ಮುಂಬರುವ ಚಿತ್ರ)
• ಸತ್ಯ ಸನ್ ಆಫ್ ಹರಿಶ್ಚಂದ್ರ (2026) - ಸಚಿನ್ ವಾಲಿ ಪಾತ್ರ
• ಅಮೆರಿಕ ಅಮೆರಿಕ 2 (2026)
 

ಸದ್ಯ ‘ಸತ್ಯ ಸನ್ ಆಫ್ ಹರಿಶ್ಚಂದ್ರ’ ಚಿತ್ರವು ಬೃಹತ್ ತಾರಾಗಣವನ್ನು ಹೊಂದಿರುವುದು ವಿಶೇಷವಾಗಿದೆ. ನಿರೂಪ್ ಭಂಡಾರಿ ಅವರಿಗೆ ನಾಯಕಿಯರಾಗಿ ಬೃಂದಾ ಆಚಾರ್ಯ ಹಾಗೂ ಅಂಕಿತಾ ಅಮರ್ ಅಭಿನಯಿಸಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ, ಕರುನಾಡ ಚಕ್ರವರ್ತಿ ಡಾ. ಶಿವರಾಜಕುಮಾರ್ ಅವರು ಈ ಚಿತ್ರದಲ್ಲಿ ವಿಶೇಷ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಸಿನಿಮಾದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟುಗೊಳಿಸಿದೆ. ಉಳಿದಂತೆ ಹಿರಿಯ ನಟ ಸಾಯಿ ಕುಮಾರ್, ಮಧುಸೂಧನ್ ರಾವ್, ಸ್ವಾತಿ ಗುರುದತ್, ಅಶ್ವಿನ್ ಹಾಸನ್, ಅಭಿಷೇಕ್ ಶ್ರೀಕಾಂತ್, ಶೌರ್ಯ, ಮಠ ಕೊಪ್ಪಳ, ಪ್ರಶಾಂತ್ ಮುಳಗೆ, ಚೇತನ್ ದುರ್ಗಾ ಮತ್ತು ಗೌರವ್ ಶೆಟ್ಟಿ ಸೇರಿದಂತೆ ಹಲವು ಪ್ರತಿಭಾವಂತ ಕಲಾವಿದರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ.

Add Zee News as a Preferred Source
TAGS:
Sandalwood