• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಮನರಂಜನೆ
  • /ಕತ್ರಿನಾ ಕೈಫ್‌ ಲಕ್ಷಾಂತರ ಮಹಿಳೆಯರಿಗೆ ಸ್ಫೂರ್ತಿ.. ಸಿನಿಮಾ ಬಿಟ್ಟರೂ ಉದ್ಯಮಿ, ಈಗಲೂ ನಟಿ ಆಸ್ತಿ ಎಷ್ಟಿದೆ ಅಂದ್ರೆ..

ಕತ್ರಿನಾ ಕೈಫ್‌ ಲಕ್ಷಾಂತರ ಮಹಿಳೆಯರಿಗೆ ಸ್ಫೂರ್ತಿ.. ಸಿನಿಮಾ ಬಿಟ್ಟರೂ ಉದ್ಯಮಿ, ಈಗಲೂ ನಟಿ ಆಸ್ತಿ ಎಷ್ಟಿದೆ ಅಂದ್ರೆ..

ಕತ್ರಿನಾ ಕೈಫ್ ಸುಮಾರು 20 ವರ್ಷಗಳಿಂದ ಬಾಲಿವುಡ್ ಚಲನಚಿತ್ರೋದ್ಯಮದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದರು. ಆದರೆ ಈಗ ಅವರ ಫೋಟೋಗಳನ್ನ ನೋಡಿ ಕಾಮೆಟ್‌ ಮಾಡುವರೇ ಹೆಚ್ಚಾಗಿದ್ದಾರೆ.

Reported ByBhimappaEdited ByBhimappa
Published: Sep 18, 2026, 08:26 AM IST|Updated: Sep 18, 2026, 08:43 AM IST
joinshare
ಕತ್ರಿನಾ ಕೈಫ್‌ ಲಕ್ಷಾಂತರ ಮಹಿಳೆಯರಿಗೆ ಸ್ಫೂರ್ತಿ.. ಸಿನಿಮಾ ಬಿಟ್ಟರೂ ಉದ್ಯಮಿ, ಈಗಲೂ ನಟಿ ಆಸ್ತಿ ಎಷ್ಟಿದೆ ಅಂದ್ರೆ..
Image Credit: File Photo

About the Author

Bhimappa

Bhimappa

ಭೀಮಪ್ಪ (Bhimappa) ಜೀ ಕನ್ನಡ ನ್ಯೂಸ್‌ನಲ್ಲಿ ಸದ್ಯ ಡಿಜಿಟಲ್ (ವೆಬ್‌ಸೈಟ್‌) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ, ಸ್ಫೋರ್ಟ್ಸ್‌, ಸಿನಿಮಾ, ಆರೋಗ್ಯ, ಎಂಟರ್ಟೈನ್‌ಮೆಂಟ್, ಲೈಫ್‌ಸ್ಟೈಲ್‌, ವೈರಲ್‌ ಸುದ್ದಿಗಳನ್ನು ಓದುಗರಿಗೆ ನೀಡುತ್ತಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿರುವ ಇವರು ಪ್ರಜಾವಾಣಿಯಲ್ಲಿ ಒಂದು ವರ್ಷ ಅಪ್ರೆಂಟಿಸ್‌ ಹಾಗೂ ನ್ಯೂಸ್‌ಫಸ್ಟ್‌ನಲ್ಲಿ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. 
Read More

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Katrina Kaif faces body-shaming comments: ಬಾಲಿವುಡ್‌ ಬ್ಯೂಟಿ, ಒಂದು ಸಮಯದಲ್ಲಿ ತನ್ನ ಡ್ಯಾನ್ಸ್‌ನಿಂದ ಇಡೀ ಚಿತ್ರರಂಗದಲ್ಲೇ ಖ್ಯಾತಿ ಪಡೆದಿದ್ದ ಕತ್ರಿನಾ ಕೈಫ್‌ ಈಗ ಫುಲ್‌ ಟೈಮ್‌ ಫ್ಯಾಮಿಲಿ ವುಮೆನ್‌ ಆಗಿಬಿಟ್ಟಿದ್ದಾರೆ. ಸಿನಿಮಾ ಶೂಟಿಂಗ್‌ಗಳಿಗೆ ಗುಡ್‌ಬೈ ಹೇಳಿರುವ ಸ್ಟಾರ್‌ ನಟಿ ಗಂಡ, ಮಗು, ಕುಟುಂಬ ಅಂತ ಬ್ಯೂಟಿಫುಲ್‌ ಟೈಮ್‌ ಸ್ಪೆಂಡ್‌ ಮಾಡುತ್ತಿದ್ದಾರೆ. ಮಗುವಿಗೆ ಜನ್ಮ ನೀಡಿದ ಬಳಿಕ ಇತ್ತೀಚೆಗೆ ಸಮಾರಂಭವೊಂದರಲ್ಲಿ ಸಾರ್ವಜನಿಕವಾಗಿ ಕತ್ರಿನಾ ಕೈಫ್‌ ಅವರು ಕಾಣಿಸಿಕೊಂಡಿದ್ದರು. ಇದರ ಬೆನ್ನಲ್ಲೇ ಅವರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್‌ ಆಗಿ ಪರ-ವಿರೋಧಗಳು ನಡೆದಿದ್ದವು.  

ಸಾಮಾನ್ಯವಾಗಿ ಮಹಿಳೆಯರು ಮದುವೆಯ ನಂತರ ಮತ್ತು ಮಗು ಹೆತ್ತ ನಂತರ ತೂಕ ಹೆಚ್ಚಾಗುತ್ತಾರೆ. ಇತ್ತೀಚೆಗೆ ಮಗುವಿಗೆ ಜನ್ಮ ನೀಡಿದ ನಂತರ ಕತ್ರಿನಾ ಕೈಫ್ ಅವರ ತೂಕ ಹೆಚ್ಚಾಗಿದೆ. ಅವರು ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಸಮಯದಲ್ಲಿ ಅನೇಕ ಜನರು ಕತ್ರಿನಾ ಕೈಫ್ ಅವರನ್ನು ಬಾಡಿ ಶೇಮ್ ಮಾಡಿದರು. ಕತ್ರಿನಾ ಕೈಫ್ ಸುಮಾರು 20 ವರ್ಷಗಳಿಂದ ಬಾಲಿವುಡ್ ಚಲನಚಿತ್ರೋದ್ಯಮದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದರು. ಆದರೆ ಈಗ ಅವರ ಫೋಟೋಗಳನ್ನ ನೋಡಿ ಕಾಮೆಟ್‌ ಮಾಡುವರೇ ಹೆಚ್ಚಾಗಿದ್ದಾರೆ.

ಕತ್ರಿನಾ ಮತ್ತು ವಿಕ್ಕಿ ಕೌಶಲ್ 2021ರಲ್ಲಿ ವಿವಾಹವಾದರು. ಕಳೆದ ವರ್ಷ ನವೆಂಬರ್‌ನಲ್ಲಿ ಅವರಿಗೆ ಗಂಡು ಮಗು ಜನಿಸಿದೆ. ಮಗುವಿಗೆ ವಿಹಾನ್ ಕೌಶಲ್ ಎಂದು ನಾಮಕರಣ ಮಾಡಲಾಗಿದೆ. ಆದರೆ ಮೊನ್ನೆ ಮೊನ್ನೆ ಕತ್ರಿನಾ ಕೈಫ್ ಅವರು ಗಂಡ ವಿಕ್ಕಿ ಕೌಶಲ್‌ ಜೊತೆಗೆ ಗಣೇಶ ಚತುರ್ಥಿ ಉತ್ಸವಕ್ಕೆ ಹಾಜರಾಗಿದ್ದರು. ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆದ ನಂತರ, ಅನೇಕ ಜನರು ಅವರ ಹಿಂದಿನ ಮತ್ತು ಈಗಿನ ನೋಟವನ್ನು ಹೋಲಿಸಿ ಅಸಹ್ಯಕರ ಕಾಮೆಂಟ್‌ಗಳನ್ನು ಪೋಸ್ಟ್ ಮಾಡುತ್ತಿದ್ದಾರೆ. ಕೆಲವರು ಮದುವೆಗೂ ಮೊದಲು ಕತ್ರಿನಾ ಹೇಗಿದ್ದರು? ಎಂದು ಕೇಳುತ್ತಿದ್ದಾರೆ. ಇನ್ನು ಕೆಲವರು ಅವರ ತೂಕ ಹೆಚ್ಚಾಗಿರುವುದರಿಂದ ಅವರ ಚಲನಚಿತ್ರ ವೃತ್ತಿಜೀವನ ಮುಗಿದಿದೆ ಎಂದು ಹೇಳುತ್ತಿದ್ದಾರೆ.

ಕತ್ರಿನಾ ಕೈಫ್ ಅವರ ದೇಹವನ್ನು ಈ ರೀತಿ ಅಪಹಾಸ್ಯ ಮಾಡಿದ್ದಕ್ಕಾಗಿ ಕಾಮೆಂಟ್‌ ಮತ್ತು ಟೀಕೆ ಮಾಡುವವರಿಗೆ ಅನೇಕ ಮಹಿಳಾ ಪ್ರಭಾವಿಗಳು, ಸೆಲೆಬ್ರಿಟಿಗಳು ತಿರುಗೇಟು ಕೊಡುತ್ತಿದ್ದಾರೆ. ತಾಯಿ ಆಗುವುದು ಮತ್ತು ಅವರ ದೇಹವನ್ನು ಪ್ರೀತಿಸುವುದು ಎಂದು ಟೀಕಿಸುವ ಹಕ್ಕು ಯಾರಿಗೂ ಇಲ್ಲ ಎಂದು ಹೇಳಿದ್ದಾರೆ. ಟೀಕೆ ಮಾಡುವವರಿಗೆ ಏನು ಕೆಲಸ ಇರಲ್ಲ. ಆರೋಗ್ಯಕರ ತಾಯ್ತನವನ್ನು ಸ್ವೀಕರಿಸುವ ಮೂಲಕ ಮತ್ತು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಮೂಲಕ ಕತ್ರಿನಾ ಲಕ್ಷಾಂತರ ಮಹಿಳೆಯರಿಗೆ ಸ್ಫೂರ್ತಿ ಆಗಿದ್ದಾರೆ ಎಂದು ಕತ್ರಿನಾ ಕೈಫ್ ಪರ ಬ್ಯಾಟ್‌ ಬೀಸಿದ್ದಾರೆ.  

ಕತ್ರಿನಾ ಕೈಫ್‌ ಅವರು ಮದುವೆಯಾದರೂ ಅವರ ಬ್ಯುಸಿನೆಸ್‌ಗೆ ಏನು ಏಟು ಬಿದ್ದಿಲ್ಲ. ಈಗಲೂ ಅತ್ಯುತ್ತಮ ಮಟ್ಟದಲ್ಲಿ ಸಂಪಾದನೆ ಮಾಡುತ್ತಿದ್ದು ಮಹಿಳಾ ಉದ್ಯಮಿ ಆಗಿದ್ದಾರೆ. ಕತ್ರಿನಾ ಕೈಫ್ ಅವರ ಕಂಪನಿ ಕೇ ಬ್ಯೂಟಿ ಬ್ರ್ಯಾಂಡ್‌ ಈಗ ಸಾಕಷ್ಟು ಡೆವಲಪ್‌ ಆಗಿದ್ದು ಹಣ ಗಳಿಕೆಯಲ್ಲೂ ಮುಂದಿದೆ. 2025ರ ಆರ್ಥಿಕ ವರ್ಷದಲ್ಲಿ 240 ಕೋಟಿ ರೂಪಾಯಿಗಳಿಂದ 2026ರಲ್ಲಿ 350 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ ಎಂದು ಅದು ಅಂದಾಜಿಸಲಾಗಿದೆ. ಕೇ ಬ್ಯೂಟಿ ಬ್ರ್ಯಾಂಡ್‌ ಸುಮಾರು ಶೇಕಡಾ 46 ರಷ್ಟು ಹೆಚ್ಚಳವಾಗಿದೆ. ಕೇ ಬ್ಯೂಟಿ ಎಂದರೆ ಇದೊಂದು ಕತ್ರಿನಾ ಕೈಫ್‌ ಸಹಭಾಗಿತ್ವದಲ್ಲಿ ಪ್ರಸಿದ್ಧ ಭಾರತೀಯ ಸೌಂದರ್ಯ ಮತ್ತು ಮೇಕ್‌ ಅಪ್‌ ಬ್ರ್ಯಾಂಡ್‌ ಆಗಿದೆ. 2019 ರಲ್ಲಿ ಇದು ಪ್ರಾರಂಭವಾಗಿದೆ.  

ಅವರ ಕಂಪನಿ ಭಾರತದಾದ್ಯಂತ ಮಾತ್ರವಲ್ಲದೆ, ಈಗ ಯುಕೆ ಮತ್ತು ಮಧ್ಯಪ್ರಾಚ್ಯದಲ್ಲಿಯೂ ವಿಸ್ತರಿಸಿದೆ. ಕತ್ರಿನಾ ಕೈಫ್ ಕೇವಲ ಬ್ರಾಂಡ್ ರಾಯಭಾರಿಯಲ್ಲ. ಅವರು ಅದರ ಉತ್ಪನ್ನಗಳ ಗುಣಮಟ್ಟ ಮತ್ತು ಸೃಷ್ಟಿಗೆ ನೇರವಾಗಿಯೇ ಕೊಡುಗೆ ನೀಡುತ್ತಿದ್ದಾರೆ. ಯಾವುದೇ ಮಹಿಳೆ ಆಗಲಿ ಮಗುವನ್ನು ಪಡೆಯುವುದು ದೊಡ್ಡ ಆಸೆ ಆಗಿರುತ್ತದೆ. ಅದರಲ್ಲಿನ ಖುಷಿ ತಾಯಿ ಆದವರಿಗೆ ಗೊತ್ತಿರುತ್ತದೆ. ಕಾಲ ಬಂದಾಗೆ ಮದುವೆ, ಮಕ್ಕಳು, ಕುಟುಂಬ ಎಲ್ಲವನ್ನು ಪಡೆಯುತ್ತಲೇ ಹೋಗಬೇಕು. ಜೀವನ ಪೂರ್ತಿ ಸುಂದರ ನಟಿ ಆಗಿರೋದಕ್ಕೆ ಆಗುವುದಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಕೇವಲ ದೇಹ ನೋಡಿ ಕಾಮೆಂಟ್‌ ಮಾಡುವವರಿಗೆ ಏನು ಹೇಳುವುದು?. ಇನ್ನೊಂದು ವಿಷ್ಯ ಕತ್ರಿನಾ ಕೈಫ್‌ ಅವರು ಈಗ 250 ಕೋಟಿ ರೂಪಾಯಿಗಳಿಗೂ ಅಧಿಕ ಆಸ್ತಿಯ ಒಡತಿ ಆಗಿದ್ದಾರೆ.

Add Zee News as a Preferred Source
TAGS:
Cinema