ರೆಬೆಲ್ ಸ್ಟಾರ್ ದಿವಂಗತ ಅಂಬರೀಶ್ ಅವರಿಗೆ ಮರಣೋತ್ತರ ‘ಕರ್ನಾಟಕ ರತ್ನ’ ಪ್ರಶಸ್ತಿ ಘೋಷಿಸುವಂತೆ ಮನವಿ
Karnataka Ratna award Actor Ambareesh: ರೆಬೆಲ್ ಸ್ಟಾರ್ ದಿವಂಗತ ಅಂಬರೀಶ್ ಅವರಿಗೆ ಮರಣೋತ್ತರ ‘ಕರ್ನಾಟಕ ರತ್ನ’ ಪ್ರಶಸ್ತಿ ಘೋಷಿಸುವಂತೆ ರಾಜ್ಯಾದ್ಯಂತ ಅಭಿಮಾನಿಗಳು ಹಾಗೂ ಗಣ್ಯರಿಂದ ತೀವ್ರ ಒತ್ತಾಯ ಕೇಳಿಬರುತ್ತಿದೆ.
Karnataka Ratna award Actor Ambareesh:ರೆಬಲ್ ಸ್ಟಾರ್ ದಿವಂಗತ ಅಂಬರೀಶ್‌ಗೆ ಮರಣೋತ್ತರ ಕರ್ನಾಟ ರತ್ನ ಪ್ರಶಸ್ತಿ ನೀಡುವಂತೆ ಹಿರಿಯ ಸಚಿವ ರಾಮಲಿಂಗಾರೆಡ್ಡಿ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಕನ್ನಡ ಚಿತ್ರರಂಗದ ದೈತ್ಯ ಪ್ರತಿಭೆ, ಜನಪ್ರಿಯ ನಟ ಹಾಗೂ ಮಾಜಿ ಕೇಂದ್ರ ರಾಜ್ಯ ಸಚಿವರಾಗಿದ್ದ ದಿವಂಗತ ಶ್ರೀ ಎಂ. ಹೆಚ್. ಅಂಬರೀಶ್ (ಮಂಡ್ಯದ ಗಂಡು) ಅವರು ನಾಡಿನ ಕಲೆ, ಸಾಹಿತ್ಯ ಹಾಗೂ ರಾಜಕೀಯ ರಂಗಕ್ಕೆ ನೀಡಿದ ನಿಸ್ಸಾರ ಸೇವೆ ಅಪಾರವಾದದ್ದು.ಅಂಬರೀಶ್ ಅವರು 200ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ, ತಮ್ಮ ವಿಶಿಷ್ಟ ಅಭಿನಯ ಶೈಲಿಯಿಂದ 'ರೆಬೆಲ್ ಸ್ಟಾರ್' ಆಗಿ ಕೋಟ್ಯಂತರ ಕನ್ನಡಿಗರ ಹೃದಯ ಗೆದ್ದಿದ್ದಾರೆ.
ಚಿತ್ರರಂಗದ ಸಂಕಷ್ಟಗಳಿಗೆ ಸ್ಪಂದಿಸುವಲ್ಲಿ ಮತ್ತು ಕಲಾವಿದರ ಹಿತ ಕಾಯುವಲ್ಲ ಅವರು ಯಾವಾಗಲೂ ಮುಂಚೂಣಿಯಲ್ಲಿದ್ದರು. ರಾಜಕೀಯ ರಂಗದಲ್ಲೂ ಶಾಸಕರಾಗಿ, ಸಂಸದರಾಗಿ, ರಾಜ್ಯ ಹಾಗೂ ಕೇಂದ್ರ ಸಚಿವರಾಗಿ ನಾಡಿನ ಅಭಿವೃದ್ಧಿಗೆ, ವಿಶೇಷವಾಗಿ ಮಂಡ್ಯ ಹಾಗೂ ಕಾವೇರಿ ಕೊಳ್ಳದ ರೈತರ ಹಿತರಕ್ಷಣೆಗೆ ಸದಾ ಶ್ರಮಿಸಿದ್ದಾರೆ.
ಅವರ ಕೊಡುಗೆ, ಜನಪ್ರಿಯತೆ ಹಾಗೂ ನಾಡಿನ ಮೇಲಿನ ಪ್ರೀತಿಯನ್ನು ಗೌರವಿಸಿ, ಅವರಿಗೆ ಕರ್ನಾಟಕ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ 'ಕರ್ನಾಟಕ ರತ್ನ'ವನ್ನು (ಮರಣೋತ್ತರವಾಗಿ) ನೀಡಿ ಗೌರವಿಸುವುದು ಅತ್ಯಂತ ಸೂಕ್ತವಾಗಿದೆ ಎಂಬುದು ನನ್ನ ಹಾಗೂ ನಾಡಿನ ಸಮಸ್ತ ಜನತೆಯ ತೀವ್ರ ಆಶಯವಾಗಿದೆ ಎಂದು ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಸರ್ಕಾರಕ್ಕೆ ಪತ್ರ ಈ ವಿಷಯವಾಗಿ ಅಖಿಲ ಕರ್ನಾಟಕ ನ್ಯಾಯ ನೀತಿ ಧರ್ಮ ಡಾ: ಅಂಬರೀಶ್ ಅಭಿಮಾನಿಗಳ ಸಂಘದವರು ನನಗೆ ಸಲ್ಲಿಸಿರುವ ಸ್ವಯಂವೇದ್ಯ ಮನವಿಯನ್ನು ಇದರೊಂದಿಗೆ ಲಗತ್ತಿಸಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.