• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಮನರಂಜನೆ
  • /ಭಾರತೀಯ ಚಿತ್ರರಂಗದಲ್ಲಿ ಕನ್ನಡತಿಯರದ್ದೇ ಹವಾ..! ಸಿನಿಮಾ ಜಗತ್ತನ್ನೇ ಆಳುತ್ತಿದ್ದಾರೆ ಈ 7 ನಟಿಯರು

ಭಾರತೀಯ ಚಿತ್ರರಂಗದಲ್ಲಿ ಕನ್ನಡತಿಯರದ್ದೇ ಹವಾ..! ಸಿನಿಮಾ ಜಗತ್ತನ್ನೇ ಆಳುತ್ತಿದ್ದಾರೆ ಈ 7 ನಟಿಯರು

ಪ್ರಸ್ತುತ ಪ್ಯಾನ್-ಇಂಡಿಯಾ ಸಿನಿಮಾ ಟ್ರೇಂಡ್‌ ನಡೆಯುತ್ತಿದೆ. ಇದರಿಂದಾಗಿ ಕನ್ನಡದ ನಟಿಯರೂ ಸಹ ತಮ್ಮ ಅದ್ಭುತ ಅಭಿನಯದ ಮೂಲಕ ಭಾರತೀಯ ಸಿನಿರಸಿಕರ ಗಮನ ಸೆಳೆಯುತ್ತಿದ್ದಾರೆ. ಪ್ರಸ್ತುತ ಕರುನಾಡಿನ ನಟಿಮಣಿಯರು ಇಂಡಿಯನ್‌ ಸಿನಿ ಇಂಡ್ರಸ್ಟ್ರೀಯಲ್ಲಿ ಬಹುಬೇಡಿಕೆ ಹೊಂದಿದ್ದಾರೆ... ಆ ಹೀರೋಯಿನ್ಸ್‌ ಯಾರು.. ಅವರ ಹಿನ್ನಲೆ ಏನು..? ಬನ್ನಿ ತಿಳಿಯೋಣ..

Reported ByKrishna NKEdited ByKrishna NK
Published: Sep 13, 2026, 07:40 PM IST|Updated: Sep 17, 2026, 03:47 PM IST
joinshare
ಭಾರತೀಯ ಚಿತ್ರರಂಗದಲ್ಲಿ ಕನ್ನಡತಿಯರದ್ದೇ ಹವಾ..! ಸಿನಿಮಾ ಜಗತ್ತನ್ನೇ ಆಳುತ್ತಿದ್ದಾರೆ ಈ 7 ನಟಿಯರು
Image Credit: Kannada Actress in Indian Cinema

About the Author

Krishna NK

Krishna NK

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಕನ್ನಡ ಮಣ್ಣು ಅಪಾರ ಕಲಾ ಪ್ರತಿಭೆಗಳ ತವರು. ಸ್ಯಾಂಡಲ್‌ವುಡ್‌ನಿಂದ ಪಯಣ ಆರಂಭಿಸಿ ಅಥವಾ ಕರ್ನಾಟಕದ ಮೂಲ ಹೊಂದಿದ್ದು, ಇಂದು ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರರಂಗಗಳಲ್ಲಿ ಸಕ್ರಿಯರಾಗಿರುವ ನಟಿಯರು ಭಾರತೀಯ ಸಿನಿಮಾರಂಗದ ಚಿತ್ರಣವನ್ನೇ ಬದಲಾಯಿಸುತ್ತಿದ್ದಾರೆ. ಬಹುಭಾಷಾ ಚಿತ್ರಗಳಲ್ಲಿ ಅತ್ಯಂತ ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಾ ಪ್ಯಾನ್-ಇಂಡಿಯಾ ಮಟ್ಟದಲ್ಲಿ ಯಶಸ್ಸಿನ ಶಿಖರವೇರಿದ್ದಾರೆ... ಈ ಕುರಿತ ವಿಶೇಷ ವರದಿ ಇಲ್ಲಿದೆ..

ಐಶ್ವರ್ಯಾ ರೈ ಬಚ್ಚನ್ : ದಕ್ಷಿಣ ಕನ್ನಡದ ಮಂಗಳೂರಿನಲ್ಲಿ ಜನಿಸಿದ ಐಶ್ವರ್ಯಾ ರೈ, 1994ರ ಮಿಸ್ ವರ್ಲ್ಡ್ ಕಿರೀಟ ತೊಡುವ ಮೂಲಕ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದರು. ಬಾಲಿವುಡ್‌ನ ಪ್ರಮುಖ ಸೂಪರ್ ಹಿಟ್ ಸಿನಿಮಾಗಳಾದ 'ದೇವದಾಸ್', 'ಹಮ್ ದಿಲ್ ದೇ ಚುಕೇ ಸನಮ್' ಮತ್ತು 'ಜೋಧಾ ಅಕ್ಬರ್' ಚಿತ್ರಗಳಲ್ಲಿ ತಮ್ಮ ನಟನಾ ಸಾಮರ್ಥ್ಯ ತೋರಿಸಿದ ಇವರು, ಹಾಲಿವುಡ್ ಯೋಜನೆಗಳಲ್ಲೂ ಅಭಿನಯಿಸಿದ್ದಾರೆ. ಇತ್ತೀಚೆಗೆ 'ಪೊನ್ನಿಯಿನ್ ಸೆಲ್ವನ್' ಸರಣಿಯ ನಂದಿನಿ ಪಾತ್ರದ ಮೂಲಕ ತಮ್ಮ ರಾಜಸಿಕ ಅಭಿನಯದಿಂದ ಕನ್ನಡಿಗರ ಹೆಮ್ಮೆಯನ್ನು ಹೆಚ್ಚಿಸಿದ್ದಾರೆ. ಇಂದಿಗೂ ಸಹ ಹೊಸ ಮುಖಗಳ ಆಗಮನದ ನಡುವೆಯೂ ಐಶು ಕ್ರೇಜ್‌ ಕೊಂಚವೂ ಕಡಿಮೆ ಆಗಿಲ್ಲ. ಇತ್ತೀಚಿಗೆ ಕೌಟುಂಬಿ ವಿಚಾರವಾಗಿ ನಟಿ ಸುದ್ದಿಯಲ್ಲಿದ್ದರು. ಪತಿ ಅಭಿಷೇಕ್‌ ಬಚ್ಚನ್‌ ಅವರಿಗೆ ವಿಚ್ಛೇದನ ನೀಡಲಿದ್ದಾರೆ ಎನ್ನುವ ವದಂತಿ ಹಬ್ಬಿತ್ತು. ಆದ್ರೆ ಅದೆಲ್ಲವೂ ಶುದ್ಧ ಸುಳ್ಳು.

ದೀಪಿಕಾ ಪಡುಕೋಣೆ: ಬೆಂಗಳೂರಿನಲ್ಲಿ ಬೆಳೆದು ವಿದ್ಯಾಭ್ಯಾಸ ಪೂರೈಸಿದ ದೀಪಿಕಾ ಪಡುಕೋಣೆ, ಕನ್ನಡದ 'ಐಶ್ವರ್ಯ' ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ನಂತರ ಹಿಂದಿ ಚಿತ್ರರಂಗ ಪ್ರವೇಶಿಸಿದ ಇವರು ಇಂದು ಭಾರತದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ಮುಂಚೂಣಿ ನಟಿಯರಲ್ಲಿ ಒಬ್ಬರಾಗಿದ್ದಾರೆ. 'ಪದ್ಮಾವತಿ', 'ಚೆನ್ನೈ ಎಕ್ಸ್‌ಪ್ರೆಸ್', 'ಪಠಾನ್', 'ಜವಾನ್' ಹಾಗೂ ಬಹುಭಾಷಾ ಯೋಜನೆಯಾದ 'ಕಲ್ಕಿ' ಸಿನಿಮಾಗಳ ಯಶಸ್ಸಿನೊಂದಿಗೆ ಭಾರತೀಯ ಸಿನಿಮಾರಂಗದಲ್ಲಿ ತಮ್ಮದೇ ಆದ ಬ್ರ್ಯಾಂಡ್ ಸೃಷ್ಟಿಸಿದ್ದಾರೆ.

ರಶ್ಮಿಕಾ ಮಂದಣ್ಣ: ಕೊಡಗಿನ ವಿರಾಜಪೇಟೆಯವರಾದ ರಶ್ಮಿಕಾ ಮಂದಣ್ಣ ಕನ್ನಡದ ಬ್ಲಾಕ್‌ಬಸ್ಟರ್ 'ಕಿರಿಕ್ ಪಾರ್ಟಿ' ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದವರು. ಕಡಿಮೆ ಅವಧಿಯಲ್ಲಿ ತೆಲುಗು, ತಮಿಳು ಮತ್ತು ಹಿಂದಿ ಚಿತ್ರರಂಗಗಳಲ್ಲಿ ದೊಡ್ಡ ಮಟ್ಟದ ಯಶಸ್ಸು ಕಂಡರು. ಇವರಿಗೆ ಪ್ರೇಕ್ಷಕರು "ನ್ಯಾಷನಲ್ ಕ್ರಷ್" ಅಂತ ಪ್ರೀತಿಯಿಂದ ಕರೆಯುತ್ತಾರೆ. ಅಲ್ಲು ಅರ್ಜುನ್‌ ನಟನೆಯ ಪುಷ್ಪ ಭಾಗ 1 ಮತ್ತು 2 ಹಾಗೂ ರಣಬೀರ್ ಕಪೂರ್ ಅಭಿನಯದ 'ಅನಿಮಲ್' ಚಿತ್ರಗಳ ಮೂಲಕ ಪ್ರಸ್ತುತ ಬಾಕ್ಸ್ ಆಫೀಸ್‌ನಲ್ಲಿ ಭಾರತದ ಅತ್ಯಂತ ಬೇಡಿಕೆಯ ನಟಿಯಾಗಿ ಹೊರಹೊಮ್ಮಿದ್ದಾರೆ. ಪ್ರಸ್ತುತ ಟಾಲಿವುಡ್‌ ಸೂಪರ್‌ ಸ್ಟಾರ್‌ ನಟ ವಿಜಯ್‌ ದೇವರಕೊಂಡ ಜೊತೆ ರಣಬಾಲಿ ಸಿನಿಮಾದ ಮೂಲಕ ಕುತೂಹಲ ಹೆಚ್ಚಿಸಿದ್ದಾರೆ. ಇತ್ತೀಚಿಗೆ ಬಿಡುಗಡೆಯಾದ ಟ್ರೇಲರ್‌ ಪ್ರೇಕ್ಷರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಅನುಷ್ಕಾ ಶೆಟ್ಟಿ: ಮಂಗಳೂರು ಮೂಲದ ಅನುಷ್ಕಾ ಶೆಟ್ಟಿ ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ದಶಕಕ್ಕೂ ಹೆಚ್ಚು ಕಾಲ ನಾಯಕಿ ಪ್ರಧಾನ ಸಿನಿಮಾಗಳನ್ನು ಮುನ್ನಡೆಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 'ಅರುಂಧತಿ' ಹಾಗೂ 'ರುದ್ರಮದೇವಿ'ಯಂತಹ ಕಥಾನಾಯಕಿ ಕೇಂದ್ರಿತ ಚಿತ್ರಗಳಲ್ಲಿ ತಮ್ಮ ಅಭಿನಯದ ಛಾಪು ಮೂಡಿಸಿದ ಇವರು, ಜಾಗತಿಕ ಮಟ್ಟದಲ್ಲಿ ಖ್ಯಾತಿ ಗಳಿಸಿದ 'ಬಾಹುಬಲಿ' ಸರಣಿಯಲ್ಲಿ ದೇವಸೇನಾ ಪಾತ್ರದ ಮೂಲಕ ಇಡೀ ದೇಶದ ಪ್ರೇಕ್ಷಕರ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ.

ಶ್ರೀನಿಧಿ ಶೆಟ್ಟಿ: ಮಂಗಳೂರಿನ ಕಿನ್ನಿಗೋಳಿಯವರಾದ ಶ್ರೀನಿಧಿ ಶೆಟ್ಟಿ, 'ಮಿಸ್ ಸೂಪರ್ ನ್ಯಾಷನಲ್ 2016' ಪಟ್ಟ ಗೆದ್ದ ನಂತರ ನಟನಾ ಕ್ಷೇತ್ರಕ್ಕೆ ಕಾಲಿಟ್ಟರು. ಕನ್ನಡದ ಹೆಮ್ಮೆಯ ಸೃಷ್ಟಿಯಾದ 'ಕೆ.ಜಿ.ಎಫ್: ಚಾಪ್ಟರ್ 1' ಮತ್ತು 'ಕೆ.ಜಿ.ಎಫ್: ಚಾಪ್ಟರ್ 2' ಚಿತ್ರಗಳಲ್ಲಿ ನಾಯಕಿಯಾಗಿ ಅಭಿನಯಿಸಿ ಇಡೀ ದೇಶಾದ್ಯಂತ ಅಪಾರ ಜನಪ್ರಿಯತೆ ಗಳಿಸಿದರು. ಈ ಬೃಹತ್ ಪ್ಯಾನ್-ಇಂಡಿಯಾ ಸಿನಿಮಾಗಳ ಯಶಸ್ಸು ಇವರನ್ನು ತಮಿಳಿನ 'ಕೋಬ್ರಾ' ಸೇರಿದಂತೆ ಹಲವು ಪ್ರಮುಖ ಯೋಜನೆಗಳಿಗೆ ಕರೆದೊಯ್ಯಿತು.

ರುಕ್ಮಿಣಿ ವಸಂತ್: ಬೆಂಗಳೂರು ಮೂಲದ ರುಕ್ಮಿಣಿ ವಸಂತ್ ಪ್ರಸ್ತುತ ಭಾರತೀಯ ಚಿತ್ರರಂಗದಲ್ಲಿ ಭರವಸೆಯ ಯುವ ನಟಿಯಾಗಿ ಬೆಳೆಯುತ್ತಿದ್ದಾರೆ. 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾದ ಪ್ರಿಯಾ ಪಾತ್ರದಲ್ಲಿ ತಮ್ಮ ನೈಜ ಮತ್ತು ಭಾವನಾತ್ಮಕ ಅಭಿನಯದ ಮೂಲಕ ದೇಶಾದ್ಯಂತ ಸಿನಿರಸಿಕರ ಗಮನ ಸೆಳೆದರು. ಈ ಯಶಸ್ಸಿನ ನಂತರ ತಮಿಳು, ತೆಲುಗು ಮತ್ತು ಕನ್ನಡದ ಪ್ರಮುಖ ನಿರ್ದೇಶಕರ ಚಿತ್ರಗಳಲ್ಲಿ ಅವಕಾಶ ಗಿಟ್ಟಿಸಿಕೊಳ್ಳುತ್ತಿರುವ ಚೆಲುವೆ, ಹೊಸ ಸಂಚಲನ ಮೂಡಿಸುತ್ತಿದ್ದಾರೆ.

ಆಶಿಕಾ ರಂಗನಾಥ್ : ಹಾಸನ ಮೂಲದ ಇವರು 'ಕ್ರೇಜಿ ಬಾಯ್' ಮೂಲಕ ಪಾದಾರ್ಪಣೆ ಮಾಡಿ, ಕನ್ನಡದ ಜೊತೆಗೆ ತೆಲುಗಿನ 'ಅಮಿಕೋಸ್' ಹಾಗೂ 'ನಾ ಸಾಮಿ ರಂಗ' ಸಿನಿಮಾಗಳ ಯಶಸ್ಸಿನ ಮೂಲಕ ದಕ್ಷಿಣ ಭಾರತದಾದ್ಯಂತ ಜನಪ್ರಿಯತೆ ಗಳಿಸುತ್ತಿದ್ದಾರೆ. ಇತ್ತೀಚಿಗೆ ನಟ ಕಾರ್ತಿ ಅಭಿನಯದ ಸರ್ದಾರ್‌ 2 ಚಿತ್ರದ ಮೂಲಕ ತೆರೆ ಮೇಲೆ ಕಾಣಿಸಿಕೊಂಡಿದ್ದರು.. ಚಿತ್ರ ಉತ್ತಮ ಪ್ರದರ್ಶನ ಕಾಣುತ್ತಿದೆ.

ಇಂದು ಕನ್ನಡತಿಯರು ಎಲ್ಲಾ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾರೆ. ಅಲ್ಲದೆ, ತಮ್ಮ ಮಹತ್ತರ ಕೆಲಸಗಳಿಂದ ಗುರುತು ಪಡೆಯುತ್ತಿದ್ದಾರೆ. ನಟನಾ ಕ್ಷೇತ್ರದಲ್ಲಿಯೂ ಗಡಿ ದಾಟಿ ಬೆಳೆದು ಪ್ರಸ್ತುತ ಭಾರತೀಯ ಸಿನಿರಂಗದಲ್ಲಿ ಲೆಡಿ ಸೂಪರ್‌ ಸ್ಟಾರ್‌ ಗಳಾಗಿ ಮಿಂಚುತ್ತಿದ್ದಾರೆ. ಸಂಭಾವನೆ ವಿಚಾರದಲ್ಲಿಯೂ ಸಹ ಸ್ಟಾರ್‌ ನಟರಿಗಿಂತ ಕಡಿಮೆಯಿಲ್ಲ. ಕೋಟಿಗಟ್ಟಲೇ ಸಂಭಾವನೆ ಪಡೆಯುವ ಮೂಲಕ ತಮ್ಮ ಪ್ರಭಾವ ಬೀರುತ್ತಿದ್ದಾರೆ.

ಈ 7 ನಟಿಯರ ಜೊತೆಗೆ ಇನ್ನೂ ಹಲವಾರು ನಟಿಯರು ಪರ ಭಾಷೆಯ ಕಿರುತೆರೆ ಲೋಕದಲ್ಲಿ ಪ್ರಸ್ತುತ ಹಿಡಿತ ಸಾಧಿಸಿದ್ದು,  ಅಲ್ಲಿ ಅಭಿಮಾನಿ ಬಳಗವನ್ನೇ ಕಟ್ಟಿಕೊಂಡಿದ್ದಾರೆ. ಜೊತೆಗೆ ತವರಿನ ಧಾರಾವಾಹಿಗಳಲ್ಲಿಯೂ ನಟಿಸುವ ಮೂಲಕ ಕನ್ನಡಿಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಒಟ್ಟಾರೆಯಾಗಿ ಇತ್ತೀಚಿನ ಪ್ಯಾನ್-ಇಂಡಿಯಾ ಸಿನಿಮಾ ಸಂಸ್ಕೃತಿಯಲ್ಲಿ ಭಾರತೀಯ ಚಿತ್ರರಂಗದಲ್ಲಿ ಯಾವುದೇ ಪಾತ್ರವನ್ನು ನಿಭಾಯಿಸುವ ಕೌಶಲ್ಯ ಹೊಂದಿರುವ ಕರುನಾಟ ನಟಿಯರೇ ಹೆಚ್ಚು ಕಾಣಿಸಿಕೊಳ್ಳುತ್ತಿರುವುದು ಕನ್ನಡಿಗರಿಗೆ ಹೆಮ್ಮೆ ವಿಚಾರ. ಮುಂಬರುವ ದಿನಗಳಲ್ಲಿಯೂ ಭಾರತೀಯ ಚಿತ್ರರಂಗದಲ್ಲಿ ಇದೇ ರೀತಿ ಈ ಎಲ್ಲಾ ನಟಿಯರು ಮುಂಚೂಣಿಯಲ್ಲಿ ಇರಲಿ ಎನ್ನುವುದೇ ನಮ್ಮ ಆಶಯ.

 

Add Zee News as a Preferred Source
TAGS:
Cinema