• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಮನರಂಜನೆ
  • /ಕನ್ನಡಿಗರ ಹೆಮ್ಮೆಯ ಸಿನಿಮಾ ‘ಕಾಂತಾರ’ಕ್ಕೆ ಇದೀಗ 4 ವರ್ಷದ ಸಂಭ್ರಮ..! ರಿಷಬ್‌ ಶೆಟ್ಟಿ ಭಾವುಕ ನುಡಿ

ಕನ್ನಡಿಗರ ಹೆಮ್ಮೆಯ ಸಿನಿಮಾ ‘ಕಾಂತಾರ’ಕ್ಕೆ ಇದೀಗ 4 ವರ್ಷದ ಸಂಭ್ರಮ..! ರಿಷಬ್‌ ಶೆಟ್ಟಿ ಭಾವುಕ ನುಡಿ

Kantara Movie completes 4 years: ರಿಷಬ್‌ ಶೆಟ್ಟಿ ಅವರ ಕನಸಿನ ಸಿನಿಮಾಕ್ಕೆ 4ವರ್ಷಗಳ ಸಂಭ್ರಮವಾಗಿದ್ದು, ರಿಷಬ್‌ ಶೆಟ್ಟಿಯವರು ಭಾವುಕ ನುಡಿಯನ್ನ ನುಡಿದಿದ್ದಾರೆ.

Written ByRamya. R. Gowda
Published: Oct 01, 2026, 01:33 PM IST|Updated: Oct 01, 2026, 02:01 PM IST
joinshare
ಕನ್ನಡಿಗರ ಹೆಮ್ಮೆಯ ಸಿನಿಮಾ ‘ಕಾಂತಾರ’ಕ್ಕೆ ಇದೀಗ 4 ವರ್ಷದ ಸಂಭ್ರಮ..! ರಿಷಬ್‌ ಶೆಟ್ಟಿ ಭಾವುಕ ನುಡಿ

About the Author

Ramya. R. Gowda

Ramya. R. Gowda

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.
Read More

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ರಿಷಬ್‌ ಶೆಟ್ಟಿ ಅವರ ಕನಸು, ದೈವಭಕ್ತಿ ಹಾಗೂ ಕರಾವಳಿಯ ಮಣ್ಣಿನ ಸಂಸ್ಕೃತಿಯನ್ನ ಬೆಳ್ಳಿತೆರೆಗೆ ತಂದ ‘ಕಾಂತಾರ’ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿತ್ತು. ಪುಟ್ಟ ಗ್ರಾಮದಲ್ಲಿ ಶುರುವಾದ ಈ ಸಿನಿಮಾ ಪಯಣ, ಪ್ರಶಸ್ತಿಗಳ ಸುರಿಮಳೆಯೊಂದಿಗೆ ವಿಶ್ವದಾದ್ಯಂತ ಹಾರಾಡಿದೆ.ನಾಲ್ಕು ವರ್ಷಗಳ ಸಂಭ್ರಮದ ಹೊತ್ತಲ್ಲಿ ರಿಷಬ್‌ ಶೆಟ್ಟಿ ಹಾಗೂ ಹೊಂಬಾಳೆ ಫಿಲ್ಮ್ಸ್‌ ಏನ್‌ ಹೇಳಿದ್ರು..? ಇಲ್ಲಿದೆ ಸಂಪೂರ್ಣ ಸ್ಟೋರಿ.

ರಿಷಬ್‌ ಶೆಟ್ಟಿ ಅವರ ಕನಸಿನ ಪ್ರಾಜೆಕ್ಟ್‌ ‘ಕಾಂತಾರ’
ಕರಾವಳಿಯ ಮಣ್ಣು, ದೈವಾರಾಧನೆ, ಅಲ್ಲಿನ ಜನಜೀವನ ಹಾಗೂ ಸಂಸ್ಕೃತಿಯನ್ನ ಜಗತ್ತಿಗೆ ಪರಿಚಯಿಸಿದ ಸಿನಿಮಾ. ನಿರ್ದೇಶನದ ಜೊತೆಗೆ ನಾಯಕನಾಗಿ ರಿಷಬ್‌ ಶೆಟ್ಟಿ ಕಾಣಿಸಿಕೊಂಡು ಚಿತ್ರಕ್ಕೆ ಮತ್ತಷ್ಟು ಜೀವ ತುಂಬಿದ್ರು.
 

2021ರ ಆಗಸ್ಟ್‌ 28ರಂದು ‘ಕಾಂತಾರ’ ಸಿನಿಮಾದ ಚಿತ್ರೀಕರಣ ಆರಂಭವಾಗಿತ್ತು. ಕುಂದಾಪುರದ ಪುಟ್ಟ ಗ್ರಾಮ ಕೆರಾಡಿಯಲ್ಲಿ ಬಹುತೇಕ ಚಿತ್ರೀಕರಣ ನಡೆದಿತ್ತು. ಬಳಿಕ 2022ರ ಸೆಪ್ಟೆಂಬರ್‌ 30ರಂದು ಸಿನಿಮಾ ತೆರೆಕಂಡು ಬಾಕ್ಸ್‌ ಆಫೀಸ್‌ನಲ್ಲಿ ಹೊಸ ದಾಖಲೆ ಬರೆಯಿತು.

4 ವರ್ಷಗಳ ನಂತರವೂ ಕಾಂತಾರ ಹವಾ
ಬೆಳ್ಳಿತೆರೆಯ ಮೇಲೆ ‘ಕಾಂತಾರ’ ಮೂಡಿಬಂದು ಇದೀಗ ನಾಲ್ಕು ವರ್ಷಗಳು ಕಳೆದಿವೆ. ಸಿನಿಮಾ ಬಿಡುಗಡೆಯಾದ ಬಳಿಕ ದೇಶ-ವಿದೇಶಗಳಲ್ಲಿ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಪ್ರಶಸ್ತಿಗಳು, ಸನ್ಮಾನಗಳು, ಮೆಚ್ಚುಗೆಗಳ ಮಹಾಪೂರವೇ ಹರಿದುಬಂತು.ಆದ್ರೆ ಈ ಎಲ್ಲಾ ಯಶಸ್ಸಿಗಿಂತಲೂ, ಪ್ರೇಕ್ಷಕರು ‘ಕಾಂತಾರ’ ಮೇಲೆ ತೋರಿದ ಪ್ರೀತಿ ರಿಷಬ್‌ ಶೆಟ್ಟಿ ಅವರಿಗೆ ವಿಶೇಷವಾಗಿದೆ.

ರಿಷಬ್‌ ಶೆಟ್ಟಿ ಮನದಾಳದ ಮಾತು
ತಮ್ಮ ಸೋಷಿಯಲ್‌ ಮೀಡಿಯಾ ಪೋಸ್ಟ್‌ನಲ್ಲಿ ರಿಷಬ್‌ ಶೆಟ್ಟಿ ಭಾವನಾತ್ಮಕವಾಗಿ ಮಾತನಾಡಿದ್ದಾರೆ. ಮನದಾಳದ ಕಥೆಯನ್ನ ಪರದೆ ಮೇಲೆ ತರಲು ತಮ್ಮೊಂದಿಗೆ ಹೆಜ್ಜೆ ಹಾಕಿದ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸಿದ್ದಾರೆ. ತಂಡದ ಪರಿಶ್ರಮ, ನಂಬಿಕೆ ಹಾಗೂ ಪ್ರೀತಿಯೇ ‘ಕಾಂತಾರ’ವನ್ನ ತಮ್ಮಗಿಂತ ದೊಡ್ಡದಾಗಿಸಿತು ಎಂದಿದ್ದಾರೆ. ಅಷ್ಟೇ ಅಲ್ಲ, ತಮ್ಮ ಪ್ರಯತ್ನವನ್ನ ಕೊಂಡಾಡಿ, ಗಡಿದಾಟಿಸಿ, ಕನ್ನಡದ ಹೆಮ್ಮೆಯ ಸಿನಿಮಾವನ್ನಾಗಿ ಜಗತ್ತಿಗೆ ತಲುಪಿಸಿದ ಪ್ರತಿಯೊಬ್ಬ ಪ್ರೇಕ್ಷಕನಿಗೂ ತಾವು ಎಂದೆಂದಿಗೂ ಚಿರಋಣಿ ಎಂದು ಹೇಳಿದ್ದಾರೆ.‘ಕಾಂತಾರ’ ಕೇವಲ ತಾವು ನಿರ್ದೇಶಿಸಿದ ಸಿನಿಮಾ ಅಲ್ಲ. ಅದು ತಾವು ಬದುಕಿದ ಜಗತ್ತು, ತಮ್ಮೊಳಗೆ ಹೊತ್ತುಕೊಂಡಿದ್ದ ಕಥೆ ಹಾಗೂ ತಮ್ಮ ವ್ಯಕ್ತಿತ್ವವನ್ನ ರೂಪಿಸಿದ ನಂಬಿಕೆ ಎಂದು ರಿಷಬ್‌ ಶೆಟ್ಟಿ ಭಾವುಕರಾಗಿದ್ದಾರೆ.

ಹೊಂಬಾಳೆ ಫಿಲ್ಮ್ಸ್‌ ಸಂಭ್ರಮ
ಇನ್ನು ‘ಕಾಂತಾರ’ದ ನಾಲ್ಕನೇ ವರ್ಷದ ಸಂಭ್ರಮವನ್ನ ಹೊಂಬಾಳೆ ಫಿಲ್ಮ್ಸ್‌ ಕೂಡ ವಿಶೇಷವಾಗಿ ಆಚರಿಸಿದೆ.ಅದ್ಭುತ ಹಾಗೂ ದೈವಿಕ ಬ್ಲಾಕ್‌ಬಸ್ಟರ್‌ ‘ಕಾಂತಾರ’ಕ್ಕೆ 4 ವರ್ಷಗಳ ಸಂಭ್ರಮ ಎಂದು ನಿರ್ಮಾಣ ಸಂಸ್ಥೆ ಪೋಸ್ಟ್‌ ಮಾಡಿದೆ.ತಮ್ಮ ಹೃದಯದಲ್ಲಿ ವಿಶೇಷ ಸ್ಥಾನ ಪಡೆದಿರುವ ಅತ್ಯಂತ ವಿಶಿಷ್ಟ ಹಾಗೂ ಸ್ಮರಣೀಯ ಚಲನಚಿತ್ರ ‘ಕಾಂತಾರ’ ಎಂದು ಹೊಂಬಾಳೆ ಫಿಲ್ಮ್ಸ್‌ ಹೇಳಿದೆ. ಪ್ರೇಕ್ಷಕರ ಪ್ರೀತಿ ಮತ್ತು ಬೆಂಬಲವೇ ‘ಕಾಂತಾರ’ವನ್ನ ದೈವಿಕ ವಿದ್ಯಮಾನವಾಗಿ ಹಾಗೂ ಮರೆಯಲಾಗದ ಚಲನಚಿತ್ರ ಅನುಭವವಾಗಿ ಪರಿವರ್ತಿಸಿದೆ. ಇದಕ್ಕಾಗಿ ಪ್ರತಿಯೊಬ್ಬ ಪ್ರೇಕ್ಷಕರಿಗೂ ಹೃದಯಪೂರ್ವಕ ಧನ್ಯವಾದಗಳು ಎಂದು ನಿರ್ಮಾಣ ಸಂಸ್ಥೆ ತಿಳಿಸಿದೆ.

ಕಾಂತಾರ ಪಯಣ ಮುಂದುವರಿಕೆ
ಒಂದು ಪುಟ್ಟ ಗ್ರಾಮದ ಕಥೆ, ಕರಾವಳಿಯ ಮಣ್ಣಿನ ಸೊಗಡು, ದೈವಾರಾಧನೆಯ ನಂಬಿಕೆ... ಇವೆಲ್ಲವನ್ನ ಜಗತ್ತಿನ ಪ್ರೇಕ್ಷಕರ ಮುಂದೆ ತಂದ ‘ಕಾಂತಾರ’ ಇದೀಗ ಕನ್ನಡ ಚಿತ್ರರಂಗದ ಪ್ರಮುಖ ಮೈಲುಗಲ್ಲುಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ.

ಮೊದಲ ಭಾಗದ ಅಭೂತಪೂರ್ವ ಯಶಸ್ಸಿನ ಬಳಿಕ ‘ಕಾಂತಾರ’ ಕಥೆ ಮುಂದುವರಿದಿದ್ದು, ಎರಡು ಭಾಗಗಳ ಮೂಲಕ ಪ್ರೇಕ್ಷಕರನ್ನ ರಂಜಿಸಿದೆ.ನಾಲ್ಕು ವರ್ಷಗಳ ಬಳಿಕವೂ ‘ಕಾಂತಾರ’ದ ಮೇಲಿನ ಕ್ರೇಜ್‌ ಮಾತ್ರ ಕಡಿಮೆಯಾಗಿಲ್ಲ. ಬದಲಾಗಿ ಪ್ರಶಸ್ತಿ, ಮೆಚ್ಚುಗೆ ಹಾಗೂ ಪ್ರೇಕ್ಷಕರ ಪ್ರೀತಿಯೊಂದಿಗೆ ಈ ದೈವಿಕ ಪಯಣ ಮುಂದುವರಿಯುತ್ತಲೇ ಇದೆ.

ಸದ್ಯ ಹೊಂಬಾಳೆ ಫಿಲ್ಮ್ಸ್‌ಸೋಶಿಯಲ್ ಮೀಡಿಯಾದಲ್ಲಿ ತಮ್ಮ 4ವರುಷಗಳ ಹರ್ಷವನ್ನು ಹಂಚಿಕೊಂಡಿದೆ..ಇತ್ತ ರಿಷಬ್‌ ಶೆಟ್ಟಿ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿರುವ ಪೋಸ್ಟ್‌ನಲ್ಲಿ  ಹೊಂಬಾಳೆ ಫಿಲ್ಮ್ಸ್‌ಲೋಗೋ ಆಗಲಿ ಅದರಲ್ಲಿ ಹೊಂಬಾಳೆ ಹೆಸರನ್ನ ಉಲ್ಲೇಖಿಸದೆ ಇರುವುದು ಕಂಡುಬಂದಿದೆ. 
 

 

Add Zee News as a Preferred Source
TAGS:
Cinema