SOCIAL MEDIA

Newsletter

PARTNER SITES
Select Language Select State

ಹನುಮಾನ್ ಅಂಶ್ ಸಿನಿಮಾಗೆ ಕೇವಲ 2 ಕೋಟಿ ಹಣ ಖರ್ಚು.. ಈಗ ಕಲೆಕ್ಷನ್‌ ಮಾಡಿದ್ದು ಮಾತ್ರ ಊಹೆಗೂ ಮೀರಿದ್ದು..

ಈ ಸಿನಿಮಾವು ಆಗಸ್ಟ್ 7 ರಂದು ಚಿತ್ರಮಂದಿರಗಳಿಗೆ ಬಿಡುಗಡೆ ಆಗಿದ್ದು ಇದುವರೆಗೂ ಹೊಸ ಗಳಿಕೆಯ ದಾಖಲೆಗಳನ್ನು ಸೃಷ್ಟಿಸುತ್ತಿದೆ. ಯಶ್ ಅವರ ಟಾಕ್ಸಿಕ್ ಸಿನಿಮಾ ಕೂಡ ಹನುಮಾನ್ ಅಂಶ್ ವಿರುದ್ಧ ಉಳಿಯಲು ಸಾಧ್ಯವಾಗಲಿಲ್ಲ.

Written By Bhimappa
Published: Sep 20, 2026, 01:32 PM IST | Updated: Sep 20, 2026, 01:44 PM IST
Image Credit: File Photo
Join

ಸಿನಿಮಾದಲ್ಲಿ ಯಾರೇ ಹೀರೋ ಆಗಿರಲಿ, ಕಥೆ ಚೆನ್ನಾಗಿದ್ದರೇ ಅದು ಗೆಲ್ಲೇ ಗೆಲ್ಲುತ್ತದೆ ಎಂದು ಹೇಳುವುದಕ್ಕೆ ಹನುಮಾನ್ ಅಂಶ್ ಸಿನಿಮಾವೇ ಉದಾಹರಣೆ ಎನ್ನಬಹುದು. ಸಾಮಾನ್ಯವಾದ ಕಥೆಯುಳ್ಳ ಹನುಮಾನ್ ಅಂಶ್ ಪ್ರೇಕ್ಷಕರ ಮನ ಗೆದ್ದಿದೆ. ಥಿಯೇಟರ್‌ಗಳಲ್ಲಿ ಭರ್ಜರಿ ಯಶಸ್ಸು ಗಳಿಸುತ್ತಿದ್ದು ಕಲೆಕ್ಷನ್‌ ಕೂಡ ಭರ್ಜರಿಯಾಗಿಯೇ ಮಾಡುತ್ತಿದೆ. ಬಿಡುಗಡೆಯಾದ ಮೇಲೆ ಕೆಲವೊಂದು ಅವಮಾನಕ್ಕೆ ಒಳಗಾಗಿದ್ದ ಈ ಸಿನಿಮಾ ಬಳಿಕ ಜನರ ಕಡೆಯಿಂದ ಅತ್ಯುತ್ತಮ ಪ್ರತಿಕ್ರಿಯೆ ಪಡೆದು ಥಿಯೇಟರ್‌ಗಳಲ್ಲಿ ಅಬ್ಬರಿಸುತ್ತಿದೆ. ಅಲ್ಲದೇ ಈ ಸಿನಿಮಾ ತೆಗೆದುಕೊಳ್ಳಲು ಥಿಯೇಟರ್‌ ಮಾಲೀಕರು ಮುಂದಾಗುತ್ತಿದ್ದಾರೆ. ಟಾಕ್ಸಿಕ್‌ನಂತಹ ಬಿಗ್‌ ಬಜೆಟ್‌ ಸಿನಿಮಾಗಳ ಮುಂದೆ ಹನುಮಾನ್ ಅಂಶ್ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. 

ನೀಮ್ ಕರೋಲಿ ಬಾಬಾ ಅವರ ಜೀವನವನ್ನು ಆಧರಿಸಿದ ಹನುಮಾನ್ ಅಂಶ್ ಸಿನಿಮಾವು ಪ್ರೇಕ್ಷಕರಿಂದ ಬಹಳ ಮೆಚ್ಚುಗೆ ಪಡೆಯುತ್ತಿದೆ. ಈ ಸಿನಿಮಾವು ಆಗಸ್ಟ್ 7 ರಂದು ಚಿತ್ರಮಂದಿರಗಳಿಗೆ ಬಿಡುಗಡೆ ಆಗಿದ್ದು ಇದುವರೆಗೂ ಹೊಸ ಗಳಿಕೆಯ ದಾಖಲೆಗಳನ್ನು ಸೃಷ್ಟಿಸುತ್ತಿದೆ. ಯಶ್ ಅವರ ಟಾಕ್ಸಿಕ್ ಸಿನಿಮಾ ಕೂಡ ಹನುಮಾನ್ ಅಂಶ್ ವಿರುದ್ಧ ಉಳಿಯಲು ಸಾಧ್ಯವಾಗಲಿಲ್ಲ. ಬಿಡುಗಡೆಯಾದ 44ನೇ ದಿನದಂದು, ಹನುಮಾನ್ ಅಂಶ್ ಮಹಾವತಾರ ನರಸಿಂಹ ದಾಖಲೆಯನ್ನು ಕೂಡ ಮುರಿದಿದೆ. ಹನುಮಾನ್ ಅಂಶ್ ಅತಿ ಹೆಚ್ಚು ಗಳಿಕೆ ಮಾಡಿದ ಧಾರ್ಮಿಕ ಸಿನಿಮಾವಾಗಿದೆ ಎನ್ನುವುದು ವಿಶೇಷ.

ಹನುಮಾನ್ ಅಂಶ್ ಸಿನಿಮಾದ ಬಾಕ್ಸ್ ಆಫೀಸ್ ಕಲೆಕ್ಷನ್ ಅಂಕಿಅಂಶಗಳ ಪ್ರಕಾರ, ಸಿನಿಮಾ ಬಿಡುಗಡೆಯಾಗಿ ಇಲ್ಲಿಗೆ 44 ದಿನಗಳು ಕಳೆದಿವೆ. 9.75 ಕೋಟಿ ರೂ. ಆಗಿದೆ. ಶನಿವಾರದ ಗಳಿಕೆಯೊಂದಿಗೆ, ಭಾರತದಲ್ಲಿ ಹನುಮಾನ್ ಅಂಶ್ ಚಿತ್ರದ ನಿವ್ವಳ ಸಂಗ್ರಹ 258 ಕೋಟಿ ರೂಪಾಯಿಗಳಿಗೂ ಅಧಿಕವಾಗಿದೆ. ಆದರೆ ಚಿತ್ರದ ಒಟ್ಟು ಗಳಿಕೆ 300 ಕೋಟಿ ರೂಪಾಯಿಗಳಿಗೂ ಹೆಚ್ಚು ಆಗಿದೆ. ಹನುಮಾನ್ ಅಂಶ್ ಸಿನಿಮಾದ ವಿಶ್ವ ಸಂಗ್ರಹ 329 ಕೋಟಿಗಳಿಗೂ ಅಧಿಕ ಹಣ ಗಳಿಸಿದೆ ಎಂದು ಅಂದಾಜಿಸಲಾಗಿದೆ.

ಹನುಮಾನ್ ಅಂಶ್ 'ಮಹಾವತಾರ ನರಸಿಂಹ' ದಾಖಲೆಯನ್ನು ಕೂಡ ಮುರಿದಿದೆ. 'ಮಹಾವತಾರ ನರಸಿಂಹ' ಚಿತ್ರವನ್ನು 20 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಿಸಲಾಗಿದ್ದು, ಇದರ ನಿವ್ವಳ ಗಳಿಕೆ 247.96 ಕೋಟಿ ರೂಪಾಯಿಗಳಾಗಿದ್ದರೆ, ಈ ಚಿತ್ರದ ಜೀವಮಾನದ ಗಳಿಕೆ 300 ರಿಂದ 325 ಕೋಟಿ ರೂಪಾಯಿಗಳಷ್ಟಿತ್ತು. ಹನುಮಾನ್ ಅಂಶ್ ಬಿಡುಗಡೆಯಾದ 44 ನೇ ದಿನದಂದು ಈ ಅಂಕಿಅಂಶವನ್ನು ದಾಟಿದೆ.

ಮಹಾವತಾರ ನರಸಿಂಹ ಸಿನಿಮಾವು 2024ರಲ್ಲಿ ಬಿಡುಗಡೆಯಾದ ಅನಿಮೇಟೆಡ್ ಆಕ್ಷನ್ ಭಕ್ತಿಪ್ರಧಾನ ಸಿನಿಮಾವಾಗಿತ್ತು. ಈ ಸಿನಿಮಾವನ್ನು 20 ಕೋಟಿ ರೂಪಾಯಿಗಳ ಬಜೆಟ್‌ನಲ್ಲಿ ನಿರ್ಮಿಸಲಾಗಿದೆ. ಹನುಮಾನ್ ಸಿನಿಮಾವು ನೀಮ್ ಕರೋಲಿ ಬಾಬಾ ಅವರ ಜೀವನವನ್ನು ಆಧರಿಸಿದೆ ಮತ್ತು ಚಿತ್ರದ ಬಜೆಟ್ ಎರಡು ಕೋಟಿ ರೂಪಾಯಿಗಳು.

ಹನುಮಾನ್ ಅಂಶ್ ಬಿಡುಗಡೆ ಆದಾಗಿನಿಂದ ಈ ಸಿನಿಮಾವು 329.30 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ. ಲಾಭದ ವಿಷಯದಲ್ಲಿ, ಹನುಮಾನ್ ಅಂಶ್ ಅತಿ ಹೆಚ್ಚು ಗಳಿಕೆ ಮಾಡಿದ ಭಕ್ತಿ ಸಿನಿಮಾವಾಗಿದೆ. ಇದರೊಂದಿಗೆ, ಹನುಮಾನ್ ಅಂಶ್ 2026ರ ಮೂರನೇ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾವಾಗಿದೆ.

ಹನುಮಾನ್‌ ಅಂಶ್‌ ಸಿನಿಮಾ ಥಿಯೇಟರ್‌ಗಳಲ್ಲಿ ಅಬ್ಬರಿಸುತ್ತಿದ್ದು ಬಾಕ್ಸ್‌ ಆಫೀಸ್‌ನಲ್ಲಿ ಭರ್ಜರಿ ಗಳಿಕೆ ಮಾಡುತ್ತಿದೆ. 300 ಕೋಟಿ ರೂಪಾಯಿಗಳಿಗೂ ಅಧಿಕ ಗಳಿಸಿರುವ ನೀಮ್‌ ಕರೋಲಿ ಬಾಬಾ ಜೀವನಾಧರಿತ ಸಿನಿಮಾ ಗಳಿಕೆಯಲ್ಲಿ ಮುನ್ನುಗ್ಗುತ್ತಿದೆ. ಕೇವಲ ಎರಡು ಕೋಟಿ ರೂಪಾಯಿಗಳ ಬಜೆಟ್‌ನಲ್ಲಿ ಈ ಸಿನಿಮಾವನ್ನು ನಿರ್ಮಾಣ ಮಾಡಲಾಗಿತ್ತು. ಬಳಿಕ ಕಳೆದ ಆಗಸ್ಟ್‌ 07 ರಂದು ಸಿನಿಮಾ ಥಿಯೇಟರ್‌ಗಳಿಗೆ ಅಪ್ಪಳಿಸಿತ್ತು. ವಿಶಾಲ್‌ ಚತುರ್ವೇದಿ ಅವರು ಹನುಮಾನ್‌ ಅಂಶ್‌ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಕಥೆ ಎಂದರೆ ತಾಯಿತ ಮರಣದ ನಂತರ ದೇವರ ಹುಡುಕಾಟದಲ್ಲಿ ಆಧ್ಯಾತ್ಮಿಕ ಪ್ರಯಾಣವನ್ನು ಕೈಗೋಳ್ಳುವ ಲಕ್ಷ್ಮಿನಾರಾಯಣ ಎನ್ನುವ ಶೋಕತಪ್ತ ವ್ಯಕ್ತಿಯ ಕಥೆ ಆಗಿದೆ. 
 

Add Zee News as a Preferred Source
TAGS:

About the Author

ಭೀಮಪ್ಪ (Bhimappa) ಜೀ ಕನ್ನಡ ನ್ಯೂಸ್‌ನಲ್ಲಿ ಸದ್ಯ ಡಿಜಿಟಲ್ (ವೆಬ್‌ಸೈಟ್‌) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ, ಸ್ಫೋರ್ಟ್ಸ್‌, ಸಿನಿಮಾ, ಆರೋಗ್ಯ, ಎಂಟರ್ಟೈನ್‌ಮೆಂಟ್, ಲೈಫ್‌ಸ್ಟೈಲ್‌, ವೈರಲ್‌ ಸುದ್ದಿಗಳನ್ನು ಓದುಗರಿಗೆ ನೀಡುತ್ತಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿರುವ ಇವರು ಪ್ರಜಾವಾಣಿಯಲ್ಲಿ ಒಂದು ವರ್ಷ ಅಪ್ರೆಂಟಿಸ್‌ ಹಾಗೂ ನ್ಯೂಸ್‌ಫಸ್ಟ್‌ನಲ್ಲಿ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. 

ZEENEWS TRENDING STORIES