SOCIAL MEDIA

Newsletter

PARTNER SITES
Select Language Select State

‌ಭಾರತ ಅಲ್ಲ, ವಿದೇಶಿ ನೆಲದಲ್ಲೂ ಹನುಮಾನ್ ಅಂಶ್ ದೈವತ್ವ.. ಕೇವಲ 12 ದಿನಗಳಲ್ಲಿ ಬಿಗ್‌ ಕಲೆಕ್ಷನ್!

ಸಿನಿಮಾದಲ್ಲಿರುವ ಭಕ್ತಿ, ನಂಬಿಕೆ ಮತ್ತು ಮಹಾರಾಜ್‌ಜಿಯ ಮೌಲ್ಯಗಳು ದೇಶದ ಗಡಿಗಳನ್ನು ಮೀರಿ ಪ್ರೇಕ್ಷಕರೊಂದಿಗೆ ಬೆಸೆದುಕೊಂಡಿವೆ. ದೇವರನ್ನು ಹುಡುಕುತ್ತ ಹೋಗುವ ಸಿನಿಮಾದಲ್ಲಿನ ನಟ..

Written By Bhimappa
Published: Sep 23, 2026, 05:42 PM IST | Updated: Sep 23, 2026, 05:48 PM IST
Image Credit: Hanuman_Ansh_box_office
Join

Hanuman Ansh is getting more screenings abroad: 2026ರ ವಿದೇಶಿ ಮಾರುಕಟ್ಟೆಯಲ್ಲಿ ಎರಡನೇ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾವಾಗಿ ಹನುಮಾನ್ ಅಂಶ್ ಸಿನಿಮಾ ಹೊರಹೊಮ್ಮಿದ್ದು ಜಾಗತಿಕ ವಿತರಣೆಯಲ್ಲಿ ಹೋಂಬಾಳೆ ಓವರ್‌ಸೀಸ್‌ಗೆ ಮತ್ತೊಂದು ದೊಡ್ಡ ಮೈಲಿಗಲ್ಲು ಆಗಿದೆ. ಭಕ್ತಿ, ನಂಬಿಕೆ ಮತ್ತು ಮಹಾರಾಜ್‌ಜಿಯ ಸಂದೇಶವನ್ನು ಹೊತ್ತು ಜಗತ್ತಿನಾದ್ಯಂತ ಪ್ರೇಕ್ಷಕರನ್ನು ತಲುಪಿರುವ ‘ಹನುಮಾನ್ ಅಂಶ್’ ಇದೀಗ ವಿದೇಶಿ ಮಾರುಕಟ್ಟೆಯಲ್ಲಿ ಹೊಸ ದಾಖಲೆ ಬರೆಯುತ್ತಿದೆ.

ಸೆಪ್ಟೆಂಬರ್ 11 ರಂದು ವಿದೇಶಗಳಲ್ಲಿ ಬಿಡುಗಡೆಯಾದ ಸಿನಿಮಾವು ಕೇವಲ 12 ದಿನಗಳಲ್ಲಿ 3.5 ಮಿಲಿಯನ್ ಡಾಲರ್‌ಗೂ ಅಧಿಕ ಗಳಿಕೆ ಮಾಡುವ ಮೂಲಕ, 2026ರಲ್ಲಿ ವಿದೇಶಿ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾಗಳ ಪೈಕಿ ಎರಡನೇ ಸ್ಥಾನ ಪಡೆದುಕೊಂಡಿದೆ. ಹೌದು ಈ ಸಿನಿಮಾವನ್ನು ನೋಡಿದ ವೀಕ್ಷಕರು ಮತ್ತೆ ಮತ್ತೆ ಹನುಮಾನ್‌ ಅಂಶ್ ಸಿನಿಮಾವನ್ನು ನೋಡುತ್ತಿದ್ದಾರೆ. ಹೀಗಾಗಿ ಸಿನಿಮಾದ ಗಳಿಕೆಯು ದಿನದಿಂದ ದಿನಕ್ಕೆ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿದೆ.

ಬಿಡುಗಡೆಯಾದ ದಿನದಿಂದಲೇ ವಿದೇಶಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿರುವ ಹನುಮಾನ್ ಅಂಶ್ ದಿನದಿಂದ ದಿನಕ್ಕೆ ತನ್ನ ಗಳಿಕೆಯನ್ನು ಹೆಚ್ಚಿಸಿಕೊಳ್ಳುತ್ತಾ ಬಂದಿದೆ. ಸಿನಿಮಾದಲ್ಲಿರುವ ಭಕ್ತಿ, ನಂಬಿಕೆ ಮತ್ತು ಮಹಾರಾಜ್‌ಜಿಯ ಮೌಲ್ಯಗಳು ದೇಶದ ಗಡಿಗಳನ್ನು ಮೀರಿ ಪ್ರೇಕ್ಷಕರೊಂದಿಗೆ ಬೆಸೆದುಕೊಂಡಿವೆ. ದೇವರನ್ನು ಹುಡುಕುತ್ತ ಹೋಗುವ ಸಿನಿಮಾದಲ್ಲಿನ ನಟ ಏನೇನು ಮಾಡುತ್ತ ಸಾಗುತ್ತಾನೆ ಎಂಬುದು ಸಿನಿಮಾದ ತಿರುಳಾಗಿದೆ.

ಈ ಅಭೂತಪೂರ್ವ ಯಶಸ್ಸು ಹೋಂಬಾಳೆ ಓವರ್‌ಸೀಸ್‌ನ ಜಾಗತಿಕ ವಿತರಣಾ ಪಯಣಕ್ಕೂ ಮಹತ್ವದ ಮೈಲಿಗಲ್ಲಾಗಿದೆ. ಭಾರತೀಯ ಕಥೆಗಳು ಮತ್ತು ನಮ್ಮ ನೆಲದ ಸಂಸ್ಕೃತಿ, ನಂಬಿಕೆ ಹಾಗೂ ಮೌಲ್ಯಗಳನ್ನು ವಿಶ್ವದ ವಿವಿಧ ಭಾಗಗಳ ಪ್ರೇಕ್ಷಕರಿಗೆ ತಲುಪಿಸುವ ನಿಟ್ಟಿನಲ್ಲಿ ಹೋಂಬಾಳೆ ಓವರ್‌ಸೀಸ್ ತನ್ನ ವಿತರಣಾ ಜಾಲವನ್ನು ಮತ್ತಷ್ಟು ವಿಸ್ತರಿಸುತ್ತಿದೆ. ಹನುಮಾನ್ ಅಂಶ್’ನಂತಹ ಕಥೆಯನ್ನು ಅಂತರರಾಷ್ಟ್ರೀಯ ಪ್ರೇಕ್ಷಕರ ಮುಂದೆ ತಲುಪಿಸುವ ಮೂಲಕ ಈ ಪ್ರಯತ್ನಕ್ಕೆ ಮತ್ತಷ್ಟು ವೇಗ ದೊರೆತಿದೆ.

ಹನುಮಾನ್ ಅಂಶ್‌ನ ಯಶಸ್ಸು ಹಲವು ಕಾರಣಗಳಿಂದ ವಿಶೇಷವಾಗಿದೆ. ಭಾರತೀಯ ಸಂಸ್ಕೃತಿ ಮತ್ತು ಭಕ್ತಿಯ ನೆಲೆಯಿಂದ ಹುಟ್ಟಿದ ಕಥೆಯೊಂದು ವಿದೇಶಿ ಪ್ರೇಕ್ಷಕರಲ್ಲೂ ಇಷ್ಟೊಂದು ದೊಡ್ಡ ಸ್ವೀಕಾರ ಪಡೆಯುತ್ತಿರುವುದು ಚಿತ್ರದ ಮೇಲಿನ ಪ್ರೇಕ್ಷಕರ ನಂಬಿಕೆಯನ್ನು ತೋರಿಸುತ್ತದೆ. ಕೇವಲ 12 ದಿನಗಳಲ್ಲಿ 3.5 ಮಿಲಿಯನ್ ಡಾಲರ್‌ಗೂ ಅಧಿಕ ಗಳಿಸಿರುವುದು ಈ ಚಿತ್ರಕ್ಕೆ ದೊರೆತಿರುವ ಅಸಾಧಾರಣ ಪ್ರತಿಕ್ರಿಯೆಗೆ ಸಾಕ್ಷಿಯಾಗಿದೆ.

ಸಿನಿಮಾದ ವಿದೇಶಿ ಯಶಸ್ಸಿನ ಕುರಿತು ‘ಹನುಮಾನ್ ಅಂಶ್’ ಚಿತ್ರದ ನಿರ್ಮಾಪಕರು ಮಾತನಾಡಿ, ಹನುಮಾನ್‌ಜಿಯ ದೂತರಂತೆ ಹೋಂಬಾಳೆ ಓವರ್‌ಸೀಸ್ ನಮ್ಮ ಜೊತೆ ನಿಂತಿದೆ. ಅವರ ಮೂಲಕ ಸಿನಿಮಾ ಎಂಬ ವಿಶಾಲ ಜಗತ್ತಿನ ಬಾಗಿಲು ನಮಗೆ ತೆರೆದಿದೆ. ಮಹಾರಾಜ್‌ಜಿಯ ಮೌಲ್ಯಗಳನ್ನು ವಿಶ್ವದಾದ್ಯಂತ ತಲುಪಿಸಲು ಅವರು ನೀಡಿದ ಅವಕಾಶಕ್ಕೆ ನಮ್ಮ ಕೃತಜ್ಞತೆ. ‘ವಿಶ್ವ ಆಯ್ಗಾ’ ಎಂದು ಮಹಾರಾಜ್‌ಜಿ ಹೇಳಿದ್ದರು. ಇಂದು ಅದೇ ಮಾತು ನಿಜವಾಗುತ್ತಿರುವುದನ್ನು ನೋಡುತ್ತಿದ್ದೇವೆ. ‘ಹನುಮಾನ್ ಅಂಶ್’ ತಂಡ ಹಾಗೂ ಪ್ರೇಕ್ಷಕರ ಪರವಾಗಿ ಹೋಂಬಾಳೆ ಓವರ್‌ಸೀಸ್‌ಗೆ ಅನಂತ ಧನ್ಯವಾದಗಳು.

3.5 ಮಿಲಿಯನ್ ಡಾಲರ್‌ಗೂ ಅಧಿಕ ವಿದೇಶಿ ಗಳಿಕೆ ‘ಹನುಮಾನ್ ಅಂಶ್’ನ ಯಶಸ್ಸಿಗೆ ಮತ್ತೊಂದು ಗರಿ ಮೂಡಿಸಿದೆ. ಇದೇ ವೇಳೆ, ಭಾರತೀಯ ಕಥೆಗಳನ್ನು ಜಾಗತಿಕ ಪ್ರೇಕ್ಷಕರಿಗೆ ತಲುಪಿಸುವ ಹೋಂಬಾಳೆ ಓವರ್‌ಸೀಸ್‌ನ ಪ್ರಯತ್ನಕ್ಕೂ ಈ ಗೆಲುವು ಮತ್ತಷ್ಟು ಬಲ ನೀಡಿದೆ. ಕೇವಲ 12 ದಿನಗಳ ಈ ಪಯಣ, ನಂಬಿಕೆ ಮತ್ತು ಭಕ್ತಿಯಿಂದ ಹುಟ್ಟಿದ ಒಂದು ಕಥೆ ಭಾಷೆ ಹಾಗೂ ಗಡಿಗಳನ್ನು ಮೀರಿ ವಿಶ್ವದ ಪ್ರೇಕ್ಷಕರನ್ನು ತಲುಪಬಲ್ಲದು ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. 
 

Add Zee News as a Preferred Source
TAGS:

About the Author

ಭೀಮಪ್ಪ (Bhimappa) ಜೀ ಕನ್ನಡ ನ್ಯೂಸ್‌ನಲ್ಲಿ ಸದ್ಯ ಡಿಜಿಟಲ್ (ವೆಬ್‌ಸೈಟ್‌) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ, ಸ್ಫೋರ್ಟ್ಸ್‌, ಸಿನಿಮಾ, ಆರೋಗ್ಯ, ಎಂಟರ್ಟೈನ್‌ಮೆಂಟ್, ಲೈಫ್‌ಸ್ಟೈಲ್‌, ವೈರಲ್‌ ಸುದ್ದಿಗಳನ್ನು ಓದುಗರಿಗೆ ನೀಡುತ್ತಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿರುವ ಇವರು ಪ್ರಜಾವಾಣಿಯಲ್ಲಿ ಒಂದು ವರ್ಷ ಅಪ್ರೆಂಟಿಸ್‌ ಹಾಗೂ ನ್ಯೂಸ್‌ಫಸ್ಟ್‌ನಲ್ಲಿ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. 

ZEENEWS TRENDING STORIES