SOCIAL MEDIA

Newsletter

PARTNER SITES
Select Language Select State

Vijay: ನುಡಿದಂತೆ ನಡೆದುಕೊಂಡ ದಳಪತಿ ವಿಜಯ್!.. ಕೊಟ್ಟ ಮಾತಿಗೆ ತಪ್ಪದ ‘Thalapathi

Gold ring scheme for newborns: ತಮಿಳುನಾಡು ಸಿಎಂ ದಳಪತಿ ವಿಜಯ್‌ ನುಡಿದಂತೆ ನಡೆದುಕೊಂಡಿದ್ದಾರೆ.

Written By Ramya. R. Gowda
Published: Sep 28, 2026, 05:36 PM IST | Updated: Sep 28, 2026, 05:49 PM IST
Join

Gold ring scheme for newborns: ತಮಿಳುನಾಡಿನಲ್ಲಿ ನವಜಾತ ಶಿಶುಗಳಿಗಾಗಿ ಸರ್ಕಾರ ಮಹತ್ವದ ಯೋಜನೆಯೊಂದಕ್ಕೆ ಚಾಲನೆ ನೀಡಿದೆ. ಮಗು ಜನಿಸಿದ ಖುಷಿಯಲ್ಲಿ ಇನ್ಮುಂದೆ 22 ಕ್ಯಾರೆಟ್ ಚಿನ್ನದ ಉಂಗುರವೂ ಸಿಗಲಿದೆ. ಅದು ಕೂಡ ಬರೋಬ್ಬರಿ ಒಂದು ಗ್ರಾಂ ಚಿನ್ನ ಮುಖ್ಯಮಂತ್ರಿ ವಿಜಯ್ ಮಧುರೈನಿಂದಲೇ ಈ ಯೋಜನೆಗೆ ಚಾಲನೆ ನೀಡಿದ್ದಾರೆ. ಅಷ್ಟಕ್ಕೂ ಈ ಯೋಜನೆಯ ಉದ್ದೇಶವೇನು? ಯಾರೆಲ್ಲಾ ಫಲಾನುಭವಿಗಳು? ಇಲ್ಲಿದೆ ಸಂಪೂರ್ಣ ಮಾಹಿತಿ.

ಮಗು ಹುಟ್ಟಿದ ಖುಷಿಗೆ ಉಡುಗೊರೆಯೇ ಚಿನ್ನದ ಉಂಗುರ ತಾಯಿಯ ಸಹೋದರನ ಪ್ರೀತಿಯ ಸಂಕೇತವಾಗಿ ನವಜಾತ ಶಿಶುವಿನ ಬಂಪರ್‌ ಆಫರ್‌ ನೀಡಲಾಗಿದೆ.

ತಮಿಳುನಾಡು ಸರ್ಕಾರದ 'ತಾಯಿಮಾಮನ್ ಥಂಗ ಮೊತಿರಂ ಯೋಜನೆಗೆ ಸೋಮವಾರ ಅಧಿಕೃತ ಚಾಲನೆ ದೊರೆತಿದೆ. ಮಧುರೈನ ರಾಜಾಜಿ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ವಿಜಯ್ ಸ್ವತಃ ನವಜಾತ ಶಿಶುಗಳನ್ನು ಕೈಗೆತ್ತಿಕೊಂಡು ಚಿನ್ನದ ಉಂಗುರಗಳನ್ನು ವಿತರಿಸಿದರು. ಈ ಯೋಜನೆಯಡಿ ಅರ್ಹ ನವಜಾತ ಶಿಶುಗಳಿಗೆ 22 ಕ್ಯಾರೆಟ್‌ನ ಒಂದು ಗ್ರಾಂ ಚಿನ್ನದ ಉಂಗುರ ನೀಡಲಾಗುತ್ತದೆ.
 

ತಾಯಿಯ ಸಹೋದರ ಹಾಗೂ ಮಗುವಿನ ನಡುವಿನ ವಿಶೇಷ ಬಾಂಧವ್ಯವನ್ನು ಗೌರವಿಸುವ ಉದ್ದೇಶದಿಂದ ಈ ಯೋಜನೆಯನ್ನು ರೂಪಿಸಲಾಗಿದೆ. ಮಗು ಜನಿಸಿದ ಸಂದರ್ಭದಲ್ಲಿ ತಾಯಿಯ ಸಹೋದರ ಕುಟುಂಬಕ್ಕೆ ಬೆಂಬಲವಾಗಿ ನಿಲ್ಲುವ ಸಂಪ್ರದಾಯದ ಪರಿಕಲ್ಪನೆಯನ್ನೇ ಸರ್ಕಾರ ಯೋಜನೆಯ ಮೂಲಕ ಮುಂದುವರಿಸಿದೆ.

ತಾಯಿಮಾಮನ್ ಥಂಗ ಮೊತಿರಂ ಯೋಜನೆ
ಇನ್ನು ಈ ಯೋಜನೆಗಾಗಿ ತಮಿಳುನಾಡು ಸರ್ಕಾರ ಬರೋಬ್ಬರಿ 755.83 ಕೋಟಿ ರೂಪಾಯಿ ಮೀಸಲಿಟ್ಟಿದೆ. ಮಾತೃತ್ವವನ್ನು ಗೌರವಿಸುವುದರ ಜೊತೆಗೆ ಮಹಿಳೆಯರ ಆರೋಗ್ಯವನ್ನು ಉತ್ತೇಜಿಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ.ಅಷ್ಟೇ ಅಲ್ಲ, ಸರ್ಕಾರಿ ಆಸ್ಪತ್ರೆಗಳಲ್ಲಿ ಹೆರಿಗೆ ಪ್ರಮಾಣ ಹೆಚ್ಚಿಸುವುದು ಮತ್ತು ಸರ್ಕಾರಿ ಆರೋಗ್ಯ ಸೇವೆಗಳ ಬಗ್ಗೆ ಜನರ ವಿಶ್ವಾಸ ಹೆಚ್ಚಿಸುವ ಗುರಿಯೂ ಇದೆ.

ಈಗಾಗಲೇ ಯೋಜನೆಯ ಆರಂಭಿಕ ಹಂತಕ್ಕಾಗಿ 1.28 ಲಕ್ಷ ಚಿನ್ನದ ಉಂಗುರಗಳನ್ನು ಸರ್ಕಾರ ಸಿದ್ಧಪಡಿಸಿದೆ.ಜೂನ್ 22, 2026ರಂದು ಅಥವಾ ಅದರ ನಂತರ ಜನಿಸಿರುವ ಅರ್ಹ ಶಿಶುಗಳು ಯೋಜನೆಯ ಫಲಾನುಭವಿಗಳಾಗಲಿದ್ದಾರೆ.ಯೋಜನೆ ಅಧಿಕೃತವಾಗಿ ಆರಂಭವಾಗುವವರೆಗೂ ಜನಿಸಿರುವ ಅರ್ಹ ಮಕ್ಕಳಿಗೆ ಬಾಕಿ ಉಳಿದಿರುವ ಉಂಗುರಗಳನ್ನು ವಿತರಿಸಲು ರಾಜ್ಯಾದ್ಯಂತ 107 ವಿತರಣಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.


1.28 ಲಕ್ಷ – ಸಿದ್ಧವಾಗಿರುವ ಉಂಗುರಗಳು
107 – ವಿತರಣಾ ಕೇಂದ್ರಗಳು
₹755.83 ಕೋಟಿ – ಯೋಜನೆಗೆ ಮೀಸಲು


ಪ್ರತಿ ವಿತರಣಾ ಕೇಂದ್ರದಲ್ಲಿ ದಿನಕ್ಕೆ ಸುಮಾರು 100 ಶಿಶುಗಳಿಗೆ ಉಂಗುರ ನೀಡುವ ವ್ಯವಸ್ಥೆ ಮಾಡಲಾಗಿದೆ.ಇನ್ನು ಯೋಜನೆ ಅಧಿಕೃತವಾಗಿ ಆರಂಭವಾದ ಬಳಿಕ ಸರ್ಕಾರಿ ಆಸ್ಪತ್ರೆಯಲ್ಲಿ ಜನಿಸುವ ಅರ್ಹ ಶಿಶುಗಳಿಗೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಸಮಯದಲ್ಲೇ ಉಂಗುರ ನೀಡಲಾಗುತ್ತದೆ. ಅಂದರೆ ಫಲಾನುಭವಿಗಳು ಪ್ರತ್ಯೇಕವಾಗಿ ಕಚೇರಿಗಳಿಗೆ ಅಲೆದಾಡುವ ಅಗತ್ಯವೂ ಇರುವುದಿಲ್ಲ.ಹಾಗಾದರೆ ಈ ಯೋಜನೆಗೆ ಯಾರೆಲ್ಲಾ ಅರ್ಹರು?

ತಮಿಳುನಾಡಿನ ಖಾಯಂ ನಿವಾಸಿಗಳಾಗಿರುವ ತಾಯಂದಿರು ಯೋಜನೆಯಡಿ ಪ್ರಯೋಜನ ಪಡೆಯಬಹುದು. ಆದರೆ ಗರ್ಭಿಣಿಯರು PICME, ಅಂದರೆ Pregnancy and Infant Cohort Monitoring and Evaluation ವ್ಯವಸ್ಥೆಯಲ್ಲಿ ನೋಂದಣಿಯಾಗಿರಬೇಕು.

ಅದರ ಜೊತೆಗೆ ಅರ್ಹ ತಾಯಂದಿರು RCH ID ಹೊಂದಿರಬೇಕಾಗುತ್ತದೆ. ಈ ದಾಖಲೆಗಳ ಆಧಾರದ ಮೇಲೆ ಫಲಾನುಭವಿಗಳನ್ನು ಗುರುತಿಸಿ ಯೋಜನೆಯ ಲಾಭ ನೀಡಲಾಗುತ್ತದೆ. ಇನ್ನು ಚಿನ್ನದ ಉಂಗುರಗಳ ಸುರಕ್ಷತೆಗೂ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಉಂಗುರಕ್ಕೂ ವಿಶಿಷ್ಟ ಕ್ರಮ ಸಂಖ್ಯೆ ಇರಲಿದೆ. ಉಂಗುರಗಳನ್ನು ಸುಲಭವಾಗಿ ತೆರೆಯಲು ಅಥವಾ ಬದಲಾಯಿಸಲು ಸಾಧ್ಯವಾಗದ ರೀತಿಯಲ್ಲಿ tamper-proof ಪ್ಯಾಕೇಜಿಂಗ್ನಲ್ಲಿ ವಿತರಿಸಲಾಗುತ್ತದೆ. ಇದರಿಂದ ಉಂಗುರಗಳ ವಿತರಣೆ ಹಾಗೂ ಫಲಾನುಭವಿಗಳ ದಾಖಲೆಗಳನ್ನು ವ್ಯವಸ್ಥಿತವಾಗಿ ನಿರ್ವಹಿಸಲು ಸಾಧ್ಯವಾಗಲಿದೆ.


ಇನ್ನು ಈ ಮಹತ್ವದ ಯೋಜನೆಗೆ ಮಧುರೈನಿಂದಲೇ ಚಾಲನೆ ನೀಡಲಾಗಿದೆ. ರಾಜ್ಯದಲ್ಲಿ ಯೋಜನೆ ಆರಂಭಿಸಲು ಮಧುರೈಯನ್ನು ಆಯ್ಕೆ ಮಾಡಲಾಗಿದೆ ಎಂದು ಸಚಿವ ಅರುಣ್ ರಾಜ್ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.

ಮೀನಾಕ್ಷಿ ದೇವಿಯ ಆಶೀರ್ವಾದ ಪಡೆದ ಪವಿತ್ರ ಭೂಮಿಯಾಗಿ ಮಧುರೈಗೆ ಇರುವ ವಿಶೇಷತೆಯನ್ನು ಅವರು ಉಲ್ಲೇಖಿಸಿದ್ದಾರೆ. ಒಟ್ಟಿನಲ್ಲಿ,ಚುನಾವಣಾ ಭರವಸೆಗಳಲ್ಲೊಂದನ್ನು ಜಾರಿಗೆ ತಂದಿರುವುದಾಗಿ ತಮಿಳುನಾಡು ಸರ್ಕಾರ ಹೇಳಿದೆ. ಇನ್ಮುಂದೆ ತಮಿಳುನಾಡಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಜನಿಸುವ ಅರ್ಹ ನವಜಾತ ಶಿಶುಗಳ ಕೈಗೆ ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ಉಂಗುರ ಸೇರಲಿದೆ. 

ಮಗು ಹುಟ್ಟಿದ ಖುಷಿಯಲ್ಲಿ ಚಿನ್ನದ ಉಂಗುರ ನೀಡುವ ಈ ಯೋಜನೆ ಇದೀಗ ತಮಿಳುನಾಡಿನಲ್ಲಿ ಜಾರಿಯಾಗಿದೆ. ಅರ್ಹತೆ ಹೊಂದಿರುವ ಕುಟುಂಬಗಳಿಗೆ ಆಸ್ಪತ್ರೆಯಿಂದಲೇ ಉಂಗುರ ವಿತರಿಸುವ ವ್ಯವಸ್ಥೆಯನ್ನೂ ಮಾಡಲಾಗಿದೆ.

Add Zee News as a Preferred Source
TAGS:

About the Author

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.

ZEENEWS TRENDING STORIES