SOCIAL MEDIA

Newsletter

PARTNER SITES
Select Language Select State

ಮಲ್ಲಮ್ಮ ಬಿಗ್‌ಬಾಸ್‌ಗೆ ಬರಲು ಕಾರಣವಾಗಿದ್ದ ಫ್ಯಾಷನ್ ಡಿಸೈನರ್ ಪಲ್ಲವಿ ಹಠಾತ್ ನಿಧನ!

ಬಿಗ್ ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿ ಮಲ್ಲಮ್ಮ ಅವರು ಉತ್ತರ ಕರ್ನಾಟಕದಿಂದ ಬೆಂಗಳೂರಿಗೆ ಬಂದಾಗ, ಪಲ್ಲವಿ ತಮ್ಮ ಬೋಟಿಕ್‌ನಲ್ಲಿ ಕೆಲಸ ನೀಡಿ ಕುಟುಂಬದ ಸದಸ್ಯರಂತೆ ನೋಡಿಕೊಂಡಿದ್ದರು. ಅಲ್ಲದೆ, ಬಿಗ್‌ ಬಾಸ್‌ಗೆ ಮಲ್ಲಮ್ಮ ಸ್ಪರ್ಧಿಯಾಗಿ ಪ್ರವೇಶ ಮಾಡಲು ಇವರೇ ಕಾರಣವಾಗಿದ್ದರು.. ಆದ್ರೀ ಹಠಾತ್‌ ನಿಧನರಾಗಿದ್ದಾರೆ.. ಈ ಕುರಿತು ವರದಿ ಇಲ್ಲಿದೆ..

Reported By Krishna NK Written By Krishna NK
Published: Sep 20, 2026, 06:41 PM IST | Updated: Sep 20, 2026, 06:44 PM IST
Image Credit: Pallavi Lakshmikanth death
Join

ಬೆಂಗಳೂರು: ಖ್ಯಾತ ಫ್ಯಾಷನ್ ಡಿಸೈನರ್ ಹಾಗೂ 'ರಿಷಿ ಡಿಸೈನ್' ಸಂಸ್ಥೆಯ ಸಂಸ್ಥಾಪಕಿ ಪಲ್ಲವಿ ಲಕ್ಷ್ಮಿಕಾಂತ್ ಅವರು ಹಠಾತ್ ನಿಧನರಾಗಿದ್ದಾರೆ. 'ಬಿಗ್ ಬಾಸ್ ಕನ್ನಡ ಸೀಸನ್ 12' ಸ್ಪರ್ಧಿ ಮಲ್ಲಮ್ಮ ಅವರ ಜೀವನದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪಲ್ಲವಿ ಅವರ ನಿಧನದ ಸುದ್ದಿ ಕಿರುತೆರೆ ಹಾಗೂ ಫ್ಯಾಷನ್ ರಂಗಕ್ಕೆ ತೀವ್ರ ಆಘಾತ ತಂದಿದೆ.

ಮಲ್ಲಮ್ಮನಿಗೆ ಆಸರೆಯಾಗಿದ್ದ ಪಲ್ಲವಿ
ಉತ್ತರ ಕರ್ನಾಟಕ ಮೂಲದ ಮಲ್ಲಮ್ಮ ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಮೂರನೇ ಸ್ಪರ್ಧಿಯಾಗಿ ಭಾಗವಹಿಸಿ ತಮ್ಮ ಮುಗ್ಧತೆಯಿಂದ ವೀಕ್ಷಕರ ಮನ ಗೆದ್ದಿದ್ದರು. ಬೆಂಗಳೂರಿಗೆ ಬಂದಿದ್ದ ಆರಂಭಿಕ ದಿನಗಳಲ್ಲಿ ಸಂಕಷ್ಟದಲ್ಲಿದ್ದ ಮಲ್ಲಮ್ಮಗೆ ಪಲ್ಲವಿ ಲಕ್ಷ್ಮಿಕಾಂತ್ ಅವರು ಬೆನ್ನೆಲುಬಾಗಿ ನಿಂತಿದ್ದರು.

ತಮ್ಮ ಫ್ಯಾಷನ್ ಬೋಟಿಕ್‌ನಲ್ಲಿ ಮಲ್ಲಮ್ಮಗೆ ಉದ್ಯೋಗ ನೀಡಿದ್ದ ಪಲ್ಲವಿ, ಅವರನ್ನು ಕೇವಲ ಕೆಲಸಗಾರ್ತಿಯಾಗಿ ನೋಡದೆ ಕುಟುಂಬದ ಸದಸ್ಯರಂತೆ ಪ್ರೀತಿಯಿಂದ ನೋಡಿಕೊಂಡಿದ್ದರು. ಮಲ್ಲಮ್ಮ ಬಿಗ್ ಬಾಸ್ ವೇದಿಕೆ ಏರುವಲ್ಲಿ ಹಾಗೂ ಅವರಲ್ಲಿದ್ದ ವಿಶಿಷ್ಟ ವ್ಯಕ್ತಿತ್ವವನ್ನು ಗುರುತಿಸಿ ಪ್ರೋತ್ಸಾಹಿಸುವಲ್ಲಿ ಪಲ್ಲವಿ ಅವರ ಪಾತ್ರ ಹಿರಿದಾಗಿತ್ತು.

ಸ್ಯಾಂಡಲ್‌ವುಡ್‌ನಲ್ಲಿ ಗುರುತಿಸಿಕೊಂಡಿದ್ದ ಡಿಸೈನರ್
ಪಲ್ಲವಿ ಲಕ್ಷ್ಮಿಕಾಂತ್ ಅವರು 'ರಿಷಿ ಡಿಸೈನ್' ಮೂಲಕ ಫ್ಯಾಷನ್ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ಚಂದನವನದ ಪ್ರಮುಖ ನಟ-ನಟಿಯರು ಹಾಗೂ ಕಿರುತೆರೆಯ ಹಲವು ಸೆಲೆಬ್ರಿಟಿಗಳಿಗೆ ವಸ್ತ್ರ ವಿನ್ಯಾಸ ಮಾಡುವ ಮೂಲಕ ಖ್ಯಾತಿ ಗಳಿಸಿದ್ದರು.

ಪಲ್ಲವಿ ಅವರ ಸಾವಿಗೆ ನಿಖರ ಕಾರಣ ಏನೆಂಬುದು ಇನ್ನು ಸ್ಪಷ್ಟವಾಗಿಲ್ಲ. ಅವರ ಅಕಾಲಿಕ ಮರಣಕ್ಕೆ ಕಿರುತೆರೆ ಗಣ್ಯರು, ಫ್ಯಾಷನ್ ಲೋಕದ ಪ್ರಮುಖರು ಹಾಗೂ ಅಭಿಮಾನಿಗಳು ತೀವ್ರ ಕಂಬನಿ ಮಿಡಿದಿದ್ದಾರೆ.

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ZEENEWS TRENDING STORIES