SOCIAL MEDIA

Newsletter

PARTNER SITES
Select Language Select State

ವಿಡಿಯೋ ಮಾಡಿ ಕಣ್ಣೀರಿಟ್ಟ ಡ್ರೋನ್‌ ಪ್ರತಾಪ್‌..! ಸತ್ಯಕ್ಕೆ ಸಿಕ್ಕಿತು ಜಯ.. ಫ್ಯಾನ್ಸ್‌ಗೆ ಧನ್ಯವಾದ ಅರ್ಪಣೆ

ಬಿಗ್ ಬಾಸ್ ಕನ್ನಡ ರನ್ನರ್ ಅಪ್ ಹಾಗೂ ಯುವ ಉದ್ಯಮಿ ಡ್ರೋನ್ ಪ್ರತಾಪ್ ಸೋಶಿಯಲ್ ಮೀಡಿಯಾದಲ್ಲಿ ಭಾವುಕ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಸಂಕಷ್ಟದ ಸಮಯದಲ್ಲಿ ಜೊತೆಗಿದ್ದ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಅಲ್ಲದೆ, ಕೆಲ ಯೂಟ್ಯೂಬರ್‌ಗಳ ವಿರುದ್ಧ ಪ್ರತಾಪ್ ಕಿಡಿಕಾರಿದ್ದಾರೆ.. ಅಸಲಿಗೆ ಆಗಿದ್ದೇನು..? ಇಲ್ಲಿದೆ ವರದಿ..

Reported By Krishna NK Written By Krishna NK
Published: Sep 28, 2026, 08:50 PM IST | Updated: Sep 28, 2026, 08:52 PM IST
Image Credit: Drone Prathap
Join

ಬೆಂಗಳೂರು: ತಮ್ಮ ವಿರುದ್ಧ ದಾಖಲಾಗಿದ್ದ ಎಲ್ಲಾ ಕಾನೂನು ಪ್ರಕರಣಗಳನ್ನು ಹೈಕೋರ್ಟ್ ರದ್ದುಗೊಳಿಸಿದೆ ಎಂದು 'ಯುವ ವಿಜ್ಞಾನಿ' ಹಾಗೂ ಬಿಗ್ ಬಾಸ್ ಕನ್ನಡ ರನ್ನರ್ ಅಪ್ ಡ್ರೋನ್ ಪ್ರತಾಪ್ ತಿಳಿಸಿದ್ದಾರೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿರುವ ಅವರು, ಭಾವೋದ್ರೇಕಗೊಂಡು ಕಣ್ಣೀರು ಹಾಕುತ್ತಾ ತಮ್ಮ ಪರವಾಗಿ ವಾದ ಮಂಡಿಸಿದ ವಕೀಲರ ತಂಡಕ್ಕೆ ಹಾಗೂ ಸಂಕಷ್ಟದ ಸಮಯದಲ್ಲಿ ಬೆನ್ನೆಲುಬಾಗಿ ನಿಂತ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.  

ಲೈಕ್ಸ್ ಮತ್ತು ವೀವ್ಸ್‌ಗಾಗಿ ಸುಳ್ಳು ಪ್ರಚಾರ: ವಿಡಿಯೋದಲ್ಲಿ ಸೋಶಿಯಲ್ ಮೀಡಿಯಾ ಟ್ರೋಲರ್ಸ್ ಹಾಗೂ ಕೆಲವು ಯೂಟ್ಯೂಬರ್‌ಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಪ್ರತಾಪ್, "ಸಾಮಾಜಿಕ ಜಾಲತಾಣಗಳಲ್ಲಿ ಲೈಕ್ಸ್ ಮತ್ತು ವೀವ್ಸ್ ಗಾಗಿ ಕೆಲವರು ಸತ್ಯಾಸತ್ಯತೆ ತಿಳಿಯದೆ ನನ್ನ ವಿರುದ್ಧ ಬೇಕಾಬಿಟ್ಟಿ ಮಾತನಾಡಿದ್ದರು. ನಾನು ಕಾನೂನು ಹೋರಾಟದಲ್ಲಿ ಗೆದ್ದು ಮೇಲಿದ್ದೇನೆ ಎಂಬ ಅಹಂನಿಂದ ಈಗ ಮಾತನಾಡುತ್ತಿಲ್ಲ. ಯಾರೇ ಆದರೂ ಒಬ್ಬರ ಬಗ್ಗೆ ಪೂರ್ಣವಾಗಿ ತಿಳಿದುಕೊಂಡು ಮಾತನಾಡಬೇಕು," ಎಂದು ಕಿಡಿ ಕಾರಿದ್ದಾರೆ.

ಡ್ರೋನ್ ಪ್ರತಾಪ್ ಹಿನ್ನೆಲೆ ಮತ್ತು ಹಳೆಯ ಪ್ರಕರಣಗಳು : ಕೆಲವು ವರ್ಷಗಳ ಹಿಂದೆ ತಾನು ತಾವೇ ಡ್ರೋನ್ ವಿನ್ಯಾಸಗೊಳಿಸಿ ವಿದೇಶಗಳಲ್ಲಿ ಪ್ರಶಸ್ತಿ ಗೆದ್ದಿರುವುದಾಗಿ ಪ್ರತಾಪ್ ಪ್ರತಿಪಾದಿಸಿದ್ದರು. ಆದರೆ, ಅವರ ತಂತ್ರಜ್ಞಾನ ಹಾಗೂ ಪ್ರಶಸ್ತಿಗಳ ಸತ್ಯಾಸತ್ಯತೆಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದ ಅನುಮಾನ ಮತ್ತು ವಿವಾದಗಳು ಎದ್ದಿದ್ದವು.  

ಕ್ವಾರಂಟೈನ್ ನಿಯಮ ಉಲ್ಲಂಘನೆ ಪ್ರಕರಣ : ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿ ಹೋಮ್ ಕ್ವಾರಂಟೈನ್ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಬೆಂಗಳೂರಿನಲ್ಲಿ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿ, ಬಂಧನಕ್ಕೊಳಗಾಗಿದ್ದರು.  

ಕೃಷಿ ಹೊಂಡದಲ್ಲಿ ಸ್ಫೋಟ ಪ್ರಯೋಗ (ಎಫ್‌ಐಆರ್): ಯೂಟ್ಯೂಬ್ ವಿಡಿಯೋಗಾಗಿ ಕೃಷಿ ಹೊಂಡದಲ್ಲಿ ಸೋಡಿಯಂ ಬಳಸಿ ಸ್ಫೋಟಿಸಿದ ಆರೋಪದ ಮೇಲೆ ತುಮಕೂರು ಪೊಲೀಸರು ಸ್ಫೋಟಕ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಬಂಧಿಸಿದ್ದರು.

ಬಿಗ್ ಬಾಸ್ ಮೂಲಕ ಮರುಜೀವ : ಸಾಕಷ್ಟು ವಿವಾದ ಮತ್ತು ನೆಗೆಟಿವಿಟಿ ನಡುವೆಯೂ ಬಿಗ್ ಬಾಸ್ ಕನ್ನಡ ಸೀಸನ್ 10 ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದ ಪ್ರತಾಪ್, ತಮ್ಮ ವರ್ತನೆ ಹಾಗೂ ತಾಳ್ಮೆಯಿಂದ ಪ್ರೇಕ್ಷಕರ ಮನಗೆದ್ದು 'ರನ್ನರ್ ಅಪ್' ಆಗಿ ಹೊರಹೊಮ್ಮಿದ್ದರು. ಇದೀಗ ಹೈಕೋರ್ಟ್ ತಮ್ಮ ಮೇಲಿದ್ದ ಎಲ್ಲಾ ಪ್ರಮುಖ ಪ್ರಕರಣ ಹಾಗೂ ಎಫ್‌ಐಆರ್‌ಗಳನ್ನು ರದ್ದುಗೊಳಿಸಿರುವುದರಿಂದ, ಪ್ರತಾಪ್ ಕಾನೂನಾತ್ಮಕವಾಗಿ ದೊಡ್ಡ ಸಮಾಧಾನ ನಿಟ್ಟುಸಿರು ಬಿಟ್ಟಿದ್ದಾರೆ.

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ZEENEWS TRENDING STORIES