SOCIAL MEDIA

Newsletter

PARTNER SITES
Select Language Select State

ಬೇಲ್ ಟ್ರೈಲರ್‌ನಲ್ಲಿ ಶಿವಣ್ಣನ ಖದರ್‌ ಆಕ್ಟಿಂಗ್‌.. ಖಡಕ್‌ ಖಾಕಿ ಅವತಾರದಲ್ಲಿ ಹ್ಯಾಟ್ರಿಕ್‌ ಹೀರೋ ಅಬ್ಬರ!

ಶಿವರಾಜಕುಮಾರ್ ಅವರಿಗೆ ಸಾಥ್ ನೀಡಲು ಡೈಲಾಗ್ ಕಿಂಗ್ ಸಾಯಿಕುಮಾರ್, ಬಹುಭಾಷಾ ನಟ ಜಯರಾಮ್, ಲೂಸ್ ಮಾದ ಯೋಗೇಶ್, ದೀಕ್ಷಿತ್‌ ಶೆಟ್ಟಿ ಹಾಗೂ ನಟಿ ಸಂಜನಾ ಆನಂದ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

Written By Bhimappa
Published: Sep 21, 2026, 04:38 PM IST | Updated: Sep 21, 2026, 04:50 PM IST
Image Credit: Shivarajkumar acting Bail Movies
Join

Dr Shivarajkumar Bail Movies Trailer release; ಹ್ಯಾಟ್ರಿಕ್ ಹೀರೋ ಡಾ ಶಿವರಾಜಕುಮಾರ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ಬಹುನಿರೀಕ್ಷಿತ ಆಕ್ಷನ್ ಡ್ರಾಮಾ ಬೇಲ್ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು ಅಭಿಮಾನಿಗಳಿಂದ ಭರ್ಜರಿ ರೆಸ್ಪಾನ್ಸ್‌ ಸಿಗುತ್ತಿದೆ. ಪ್ರತಿಷ್ಠಿತ ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣದ ಈ ಸಿನಿಮಾದ ಟ್ರೇಲರ್‌ನಲ್ಲಿ ಪೋಲಿಸ್ ಆಕ್ಷನ್, ನ್ಯಾಯದ ಹೋರಾಟ, ರೋಚಕ ಸಂಘರ್ಷ ಮತ್ತು ತೀವ್ರ ಭಾವನಾತ್ಮಕ ಮುಖಾಮುಖಿಗಳ ಝಲಕ್ ಅನ್ನು ಸಿನಿಪ್ರಿಯರ ಮುಂದಿಟ್ಟಿದೆ. ಟ್ರೈಲರ್ ಮೂಲಕ ಹೈವೋಲ್ಟೇಜ್ ಸಿನಿಮಾ ಅನುಭವದ ಭರವಸೆ ಮೂಡಿಸಿರುವ ಈ ಸಿನಿಮಾವು ಗಾಂಧಿ ಜಯಂತಿಯ ಪ್ರಯುಕ್ತ ಅಕ್ಟೋಬರ್ 2 ರಂದು ವಿಶ್ವಾದ್ಯಂತ ಥಿಯೇಟರ್‌ಗಳಲ್ಲಿ ಅಬ್ಬರಿಸಲಿದೆ.

ಶಿವರಾಜಕುಮಾರ್ ಅವರ ಗಂಭೀರ ಸ್ಕ್ರೀನ್ ಪ್ರೆಸೆನ್ಸ್, ಅಬ್ಬರದ ಪೋಲಿಸ್ ಅವತಾರ ಹಾಗೂ ರೋಮಾಂಚಕ ದೃಶ್ಯ ವೈಭವದಿಂದಾಗಿ ಟ್ರೈಲರ್ ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ಆನ್‌ಲೈನ್‌ನಲ್ಲಿ ಭಾರೀ ಸದ್ದು ಮಾಡಿದೆ. ಸಿನಿಪ್ರಿಯರಲ್ಲಿ ಚಿತ್ರದ ಮೇಲಿನ ನಿರೀಕ್ಷೆಯನ್ನು ಮುಗಿಲೆತ್ತರಕ್ಕೆ ಕೊಂಡೊಯ್ದಿದೆ. ಶಿವಣ್ಣನ ನಟನೆಗೆ ಅಭಿಮಾನಿಗಳು ಫುಲ್‌ ಫಿದಾ ಆಗೋಗಿದ್ದಾರೆ. ಮೊದಲಿನಂತೆ ಈಗಲೂ ಶಿವಣ್ಣ ಯಂಗ್‌ ಅಂಡ್ ಎನರ್ಜಿಯಾಗಿ ಖದರ್‌ ಆಗಿ ನಟನೆ ಮಾಡಿದ್ದಾರೆ.

ಸಿನಿಮಾದಲ್ಲಿ ಶಿವರಾಜಕುಮಾರ್ ದೃಢನಿಶ್ಚಯದ, ಕಟ್ಟುನಿಟ್ಟಿನ ಹಾಗೂ ನಿರ್ಭೀತ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಅಬ್ಬರಿಸಿದ್ದಾರೆ. ಅಪರಾಧ ಮತ್ತು ನ್ಯಾಯದ ನಡುವಿನ ಜಟಿಲ ಜಗತ್ತಿನಲ್ಲಿ ಎದುರಾಗುವ ಯಾವುದೇ ಆಪತ್ತಿಗೂ ಅಂಜದೆ ಧೈರ್ಯವಾಗಿ ನಿಲ್ಲುವ ಖಡಕ್ ಅಧಿಕಾರಿಯಾಗಿ ಅವರು ಕಾಣಿಸಿಕೊಂಡಿದ್ದಾರೆ.

ಕೇವಲ ಪೋಲಿಸ್ ವರ್ಸಸ್ ಕ್ರಿಮಿನಲ್ ನಡುವಿನ ಕಥೆಯಾಗಷ್ಟೇ ಉಳಿಯದೆ, ಕೌಟುಂಬಿಕ ಭಾವನಾತ್ಮಕ ತಿರುಳನ್ನು ಹೊಂದಿರುವುದು 'ಬೇಲ್' ಸಿನಿಮಾದ ಮತ್ತೊಂದು ಪ್ರಮುಖ ಹೈಲೈಟ್. ಈ ಸಿನಿಮಾವನ್ನು ಎಲ್ಲಾ ವರ್ಗದ ಪ್ರೇಕ್ಷಕರಿಗೂ ಹತ್ತಿರವಾಗಿಸುವ ಲಕ್ಷಣಗಳನ್ನು ತೋರುತ್ತಿದೆ. ಯಶಸ್ವಿ ನಿರ್ದೇಶಕ ಪವನ್ ಒಡೆಯರ್ ಈ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ದಕ್ಷಿಣ ಭಾರತದ ಬೃಹತ್ ವೆಚ್ಚದ ಸಿನಿಮಾಗಳ ಮೂಲಕ ಗಮನ ಸೆಳೆದಿರುವ ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ವೆಂಕಟ್ ಕೆ. ನಾರಾಯಣ ಅವರು ಈ ಸಿನಿಮಾವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದಾರೆ.  

ಸಿನಿಮಾದ ತಾರಾಗಣದಲ್ಲಿ ಬಹುದೊಡ್ಡ ಪ್ರತಿಭೆಗಳ ದಂಡೇ ಇದೆ. ಶಿವರಾಜಕುಮಾರ್ ಅವರಿಗೆ ಸಾಥ್ ನೀಡಲು ಡೈಲಾಗ್ ಕಿಂಗ್ ಸಾಯಿಕುಮಾರ್, ಬಹುಭಾಷಾ ನಟ ಜಯರಾಮ್, ಲೂಸ್ ಮಾದ ಯೋಗೇಶ್, ದೀಕ್ಷಿತ್‌ ಶೆಟ್ಟಿ ಹಾಗೂ ನಟಿ ಸಂಜನಾ ಆನಂದ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರತಿಯೊಂದು ಪಾತ್ರಕ್ಕೂ ಕಥೆಯಲ್ಲಿ ಸಮಾನ ತೂಕವಿದ್ದು, ಪಾತ್ರಗಳ ನಡುವಿನ ಸಂಘರ್ಷದ ಸಣ್ಣ ತುಣುಕುಗಳು ಟ್ರೈಲರ್‌ನ ವೇಗ ಮತ್ತು ರೋಚಕತೆಯನ್ನು ಹೆಚ್ಚಿಸಿವೆ.

ಸುಮಾರು ಎರಡೂವರೆ ನಿಮಿಷಗಳ ಈ ಟ್ರೈಲರ್‌ಗೆ ಚುರುಕಾದ ಸಂಕಲನ, ಪವರ್‌ಫುಲ್ ಸಂಭಾಷಣೆಗಳು ಮತ್ತು ಖ್ಯಾತ ಸಂಗೀತ ನಿರ್ದೇಶಕ ಬಿ. ಅಜನೀಶ್ ಲೋಕನಾಥ್ ಅವರ ಹಿನ್ನೆಲೆ ಸಂಗೀತ ಜೀವ ತುಂಬಿದೆ. ಖ್ಯಾತ ಸರೇಗಮ ಸೌತ್ ಸಂಸ್ಥೆಯು ಚಿತ್ರದ ಆಡಿಯೋ ಹಕ್ಕುಗಳನ್ನು ಪಡೆದುಕೊಂಡಿದ್ದು, ದೊಡ್ಡ ಮಟ್ಟದ ಪ್ರಚಾರ ಅಭಿಯಾನಕ್ಕೆ ಕೈಜೋಡಿಸಿದೆ. ಶಿವಣ್ಣನ ಖಡಕ್ ಖಾಕಿ ಅವತಾರ ಹಾಗೂ ಭರ್ಜರಿ ಮಾಸ್-ಎಮೋಷನಲ್ ಡ್ರಾಮಾವನ್ನು ಹೊತ್ತು ತರುತ್ತಿರುವ 'ಬೇಲ್' ಅಕ್ಟೋಬರ್ 2 ರಂದು ಬೆಳ್ಳಿತೆರೆಗೆ ಅಪ್ಪಳಿಸಲಿದೆ. 

ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣದ ಬೇಲ್ ಸಿನಿಮಾದ ಟ್ರೇಲರ್‌ನಲ್ಲಿ ಶಿವಣ್ಣ ಅವರ ಪೋಲಿಸ್ ಆಕ್ಷನ್, ನ್ಯಾಯದ ಹೋರಾಟ, ರೋಚಕ ಸಂಘರ್ಷ ಮತ್ತು ತೀವ್ರ ಭಾವನಾತ್ಮಕ ಮುಖಾಮುಖಿಗಳ ಝಲಕ್ ಇವೆ. ಸಿನಿಪ್ರಿಯರ ಮನಸ್ಸು ಮತ್ತೊಮ್ಮೆ ಗೆಲ್ಲುವುದರಲ್ಲಿ ಅನುಮಾನವೇ ಬೇಡ. ಏಕೆಂದರೆ ಶಿವಣ್ಣನ ನಟನೆಗೆ ಜನರು ಫಿದಾ ಆಗೋಗುವುದು ಪಕ್ಕಾ. ಟ್ರೈಲರ್‌ ಅತ್ಯದ್ಭುತವಾಗಿದ್ದು ಅಭಿಮಾನಿಗಳಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಥಿಯೇಟರ್‌ಗೆ ಬೇಲ್‌ ಸಿನಿಮಾ ಬರುವುದನ್ನು ಶಿವಣ್ಣ ಫ್ಯಾನ್ಸ್‌ ಕಾಯುತ್ತಿದ್ದಾರೆ. ಬೇಲ್‌ ಸಿನಿಮಾ ಮುಂದಿನ ತಿಂಗಳು ತೆರೆಗೆ ಅಪ್ಪಳಿಸಲಿದ್ದು ಸಾಕಷ್ಟು ನಿರೀಕ್ಷೆಗಳನ್ನು ಮೂಡಿಸಿದೆ. ಬಿಡುಗಡೆ ಆಗಿರುವ ಟ್ರೈಲರ್‌ ರೋಚಕತೆಯಿಂದ ಕೂಡಿದೆ. ಈ 'ಬೇಲ್' ಸಿನಿಮಾದ ಮತ್ತೊಂದು ಬಿಗ್‌ ಹೈಲೈಟ್ ಎಂದರೆ ಎಲ್ಲಾ ವರ್ಗದ ಪ್ರೇಕ್ಷಕರಿಗೂ ಹತ್ತಿರವಾಗುವ ಸಿನಿಮಾ ಇದಾಗಿದೆ. ಕುಟುಂಬ ಸಮೇತ ಕುಳಿತು ಸಿನಿಮಾ ನೋಡಬಹುದು.  
 

Add Zee News as a Preferred Source
TAGS:

About the Author

ಭೀಮಪ್ಪ (Bhimappa) ಜೀ ಕನ್ನಡ ನ್ಯೂಸ್‌ನಲ್ಲಿ ಸದ್ಯ ಡಿಜಿಟಲ್ (ವೆಬ್‌ಸೈಟ್‌) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ, ಸ್ಫೋರ್ಟ್ಸ್‌, ಸಿನಿಮಾ, ಆರೋಗ್ಯ, ಎಂಟರ್ಟೈನ್‌ಮೆಂಟ್, ಲೈಫ್‌ಸ್ಟೈಲ್‌, ವೈರಲ್‌ ಸುದ್ದಿಗಳನ್ನು ಓದುಗರಿಗೆ ನೀಡುತ್ತಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿರುವ ಇವರು ಪ್ರಜಾವಾಣಿಯಲ್ಲಿ ಒಂದು ವರ್ಷ ಅಪ್ರೆಂಟಿಸ್‌ ಹಾಗೂ ನ್ಯೂಸ್‌ಫಸ್ಟ್‌ನಲ್ಲಿ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. 

ZEENEWS TRENDING STORIES