• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಮನರಂಜನೆ
  • /ಬೇಲ್‌ಗೆ ಮೊದಲ ದಿನವೇ ಫುಲ್ ಮಾರ್ಕ್ಸ್.. ಶಿವಣ್ಣನ ಮೀಸೆ ಲುಕ್‌ಗೆ ಫ್ಯಾನ್ಸ್ ಫಿದಾ!..

ಬೇಲ್‌ಗೆ ಮೊದಲ ದಿನವೇ ಫುಲ್ ಮಾರ್ಕ್ಸ್.. ಶಿವಣ್ಣನ ಮೀಸೆ ಲುಕ್‌ಗೆ ಫ್ಯಾನ್ಸ್ ಫಿದಾ!..

Actor shivanna Bail film Public Review: ಶಿವರಾಜ್‌ಕುಮಾರ್ ಅಭಿನಯದ ಬಹುನಿರೀಕ್ಷಿತ ‘ಬೇಲ್’ ಸಿನಿಮಾ ರಿಲೀಸ್ ಆಗಿದ್ದು, ಮೊದಲ ದಿನವೇ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಶಿವಣ್ಣನ ಅಭಿನಯ, ಅವರ ವಿಭಿನ್ನ ಮೀಸೆ ಗೆಟಪ್, ಆ್ಯಕ್ಷನ್ ಸೀಕ್ವೆನ್ಸ್ ಸೇರಿದಂತೆ ಸಿನಿಮಾದ ಹಲವು ಅಂಶಗಳನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಹಾಗಾದ್ರೆ ‘ಬೇಲ್’ ಸಿನಿಮಾವನ್ನು ಪ್ರೇಕ್ಷಕರು ಹೇಗೆ ಸ್ವೀಕರಿಸಿದ್ದಾರೆ? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್.

Written ByRamya. R. Gowda
Published: Oct 02, 2026, 09:05 PM IST|Updated: Oct 02, 2026, 09:09 PM IST
joinshare
ಬೇಲ್‌ಗೆ ಮೊದಲ ದಿನವೇ ಫುಲ್ ಮಾರ್ಕ್ಸ್.. ಶಿವಣ್ಣನ ಮೀಸೆ ಲುಕ್‌ಗೆ ಫ್ಯಾನ್ಸ್ ಫಿದಾ!..

About the Author

Ramya. R. Gowda

Ramya. R. Gowda

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.
Read More

Trending

  • News
  • Photos
  • Videos
ವಯಸ್ಸು ಒಂದೇ ಆದರೂ ಕೆಲವರು ಯಂಗ್‌, ಕೆಲವರು ವಯಸ್ಸಾದಂತೆ ಕಾಣೋದ್ಯಾಕೆ? ವೈದ್ಯರ ಉತ್ತರ ಇಲ್ಲಿದೆ

ವಯಸ್ಸು ಒಂದೇ ಆದರೂ ಕೆಲವರು ಯಂಗ್‌, ಕೆಲವರು ವಯಸ್ಸಾದಂತೆ ಕಾಣೋದ್ಯಾಕೆ? ವೈದ್ಯರ ಉತ್ತರ ಇಲ್ಲಿದೆ

2

ಬೇಲ್‌ಗೆ ಮೊದಲ ದಿನವೇ ಫುಲ್ ಮಾರ್ಕ್ಸ್.. ಶಿವಣ್ಣನ ಮೀಸೆ ಲುಕ್‌ಗೆ ಫ್ಯಾನ್ಸ್ ಫಿದಾ!..

3

44 ವರ್ಷಗಳ ಬಳಿಕ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಬೇಟೆ! ಭಾರತ ಮಹಿಳಾ ಹಾಕಿ ತಂಡಕ್ಕೆ ಐತಿಹಾಸಿಕ ಗೆಲುವು!

4

ಡಾ. ಸುಭಾಷ್ ಚಂದ್ರ ಫೌಂಡೇಶನ್ ಬಾಕ್ಸಿಂಗ್ ಕೇಂದ್ರದ ಅಂಕುಶ್ ಪಂಗಲ್‌ಗೆ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ; ಇತಿಹಾಸ ಸೃಷ್ಟಿ!

5

ಬೇಯಿಸಿದ ಮೊಟ್ಟೆಗಳನ್ನು ಎಷ್ಟು ದಿನ ಹೊರಗೆ ಇಡಬಹುದು? ಆಹಾರ ವಿಷದ ಬಗ್ಗೆ ತಜ್ಞರ ಸಲಹೆ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

 Bail film : ಶಿವರಾಜ್‌ಕುಮಾರ್ ಅಭಿನಯದ ಬಹುನಿರೀಕ್ಷಿತ ‘ಬೇಲ್’ ಸಿನಿಮಾ ರಿಲೀಸ್ ಆಗಿದ್ದು, ಮೊದಲ ದಿನವೇ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಶಿವಣ್ಣನ ಅಭಿನಯ, ಅವರ ವಿಭಿನ್ನ ಮೀಸೆ ಗೆಟಪ್, ಆ್ಯಕ್ಷನ್ ಸೀಕ್ವೆನ್ಸ್ ಸೇರಿದಂತೆ ಸಿನಿಮಾದ ಹಲವು ಅಂಶಗಳನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಹಾಗಾದ್ರೆ ‘ಬೇಲ್’ ಸಿನಿಮಾವನ್ನು ಪ್ರೇಕ್ಷಕರು ಹೇಗೆ ಸ್ವೀಕರಿಸಿದ್ದಾರೆ? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್.

ಬಿಗ್ ಸ್ಕ್ರೀನ್‌ಗೆ ಶಿವಣ್ಣ ಎಂಟ್ರಿ ಕೊಡ್ತಿದ್ದಂತೆ ಅಭಿಮಾನಿಗಳ ಸಂಭ್ರಮ ಜೋರಾಗಿದೆ. ಮೊದಲ ದಿನವೇ ಸಿನಿಮಾ ನೋಡಿದ ಫ್ಯಾನ್ಸ್, ಶಿವರಾಜ್‌ಕುಮಾರ್ ಅಭಿನಯಕ್ಕೆ ಫಿದಾ ಆಗಿದ್ದಾರೆ. ಅದರಲ್ಲೂ ಶಿವಣ್ಣನ ಮೀಸೆ ಲುಕ್ ಅಭಿಮಾನಿಗಳ ಗಮನ ಸೆಳೆದಿದೆ.

ಶಿವಣ್ಣನ ಅಭಿನಯಕ್ಕೆ ಮೆಚ್ಚುಗೆ
ವಯಸ್ಸು ಹೆಚ್ಚಾದರೂ ಅಭಿನಯದ ಜೋಶ್ ಮಾತ್ರ ಕಡಿಮೆಯಾಗಿಲ್ಲ ಅನ್ನೋ ಮಾತುಗಳು ಅಭಿಮಾನಿಗಳಿಂದ ಕೇಳಿ ಬಂದಿವೆ. ಶಿವಣ್ಣ ತಮ್ಮ ಪಾತ್ರವನ್ನು ಅದ್ಭುತವಾಗಿ ನಿಭಾಯಿಸಿದ್ದಾರೆ ಅಂತ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚಿತ್ರವನ್ನು ಮೊದಲ ದಿನವೇ ವೀಕ್ಷಿಸಿದ ಧೀರೇನ್ ರಾಮ್‌ಕುಮಾರ್ ಕೂಡ ಸಿನಿಮಾದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶಿವಣ್ಣ, ಸಾಯಿಕುಮಾರ್ ಹಾಗೂ ಜಯರಾಮ್ ಅವರ ಪಾತ್ರಗಳು ಗಮನ ಸೆಳೆದಿವೆ ಎಂಬ ಮಾತುಗಳು ಕೇಳಿ ಬಂದಿವೆ.

ಲೂಸ್ ಮಾದ ಯೋಗಿಗೂ ಸಖತ್ ಸ್ಕೋರ್
ಸಿನಿಮಾದಲ್ಲಿ ಶಿವಣ್ಣ ಮಾತ್ರವಲ್ಲ, ಲೂಸ್ ಮಾದ ಯೋಗಿ ಕೂಡ ಗಮನ ಸೆಳೆದಿದ್ದಾರೆ. ವಿಲನ್ ಪಾತ್ರದಲ್ಲಿ ಯೋಗಿ ತಮ್ಮ ಅಭಿನಯದ ಮೂಲಕ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದಾರೆ.
ಇನ್ನು ಸಂಜನಾ ಹಾಗೂ ದೀಕ್ಷಿತ್ ಶೆಟ್ಟಿ ಕೂಡ ತಮ್ಮ ಪಾತ್ರಗಳ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ದೀಕ್ಷಿತ್ ಅವರ ಅಭಿನಯದ ಜೊತೆಗೆ ಅವರ ಡ್ಯಾನ್ಸ್‌ಗೂ ಯುವ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಅಜನೀಶ್ ಸಂಗೀತಕ್ಕೆ ಶಹಬ್ಬಾಸ್
‘ಬೇಲ್’ ಸಿನಿಮಾಗೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಸಿನಿಮಾದ ಸಂಗೀತವೂ ಪ್ರೇಕ್ಷಕರ ಗಮನ ಸೆಳೆದಿದೆ. ಕಥೆಗೆ ಪೂರಕವಾಗಿ ಸಂಗೀತ ಮೂಡಿ ಬಂದಿದೆ ಅನ್ನೋ ಅಭಿಪ್ರಾಯಗಳು ಕೇಳಿ ಬಂದಿವೆ.
‘ಬೇಲ್’ ಸಿನಿಮಾದ ಮತ್ತೊಂದು ಹೈಲೈಟ್ ಆ್ಯಕ್ಷನ್ ಸೀಕ್ವೆನ್ಸ್. ಸಿನಿಮಾದಲ್ಲಿರುವ ಆ್ಯಕ್ಷನ್ ದೃಶ್ಯಗಳನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಮೊದಲ ದಿನ ಸಿನಿಮಾ ನೋಡಿದ ಬಹುತೇಕ ಅಭಿಮಾನಿಗಳು ಚಿತ್ರ ತಮ್ಮ ನಿರೀಕ್ಷೆಯನ್ನು ತಲುಪಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯದೆಲ್ಲೆಡೆ ರಿಲೀಸ್
ಪವನ್ ಒಡೆಯರ್ ನಿರ್ದೇಶನದ ‘ಬೇಲ್’ ಸಿನಿಮಾ ರಾಜ್ಯಾದ್ಯಂತ ಅದ್ಧೂರಿಯಾಗಿ ತೆರೆ ಕಂಡಿದೆ. ಶಿವಣ್ಣನ ಜೊತೆ ಸಿನಿಮಾ ಮಾಡಬೇಕು ಅನ್ನೋ ಪವನ್ ಒಡೆಯರ್ ಅವರ ಕನಸು ಈ ಚಿತ್ರದ ಮೂಲಕ ನನಸಾಗಿದೆ.
ಮೂರು ಸ್ಟಾರ್ ನಟರು ಒಂದೇ ಸಿನಿಮಾದಲ್ಲಿ ಕಾಣಿಸಿಕೊಂಡಿರುವುದು ಕೂಡ ಚಿತ್ರದ ವಿಶೇಷತೆ. ಕಥೆ ಹಾಗೂ ಪಾತ್ರಗಳನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ.

ಕೆವಿಎನ್ ಪ್ರೊಡಕ್ಷನ್
‘ಬೇಲ್’ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ ನಿರ್ಮಾಣ ಮಾಡಿದೆ. ದೊಡ್ಡ ಮಟ್ಟದಲ್ಲಿ ಸಿನಿಮಾವನ್ನು ರಾಜ್ಯದೆಲ್ಲೆಡೆ ರಿಲೀಸ್ ಮಾಡಲಾಗಿದೆ. ಮೊದಲ ದಿನವೇ ಸಿಕ್ಕಿರುವ ಪ್ರೇಕ್ಷಕರ ಪ್ರತಿಕ್ರಿಯೆ ಚಿತ್ರತಂಡಕ್ಕೆ ಖುಷಿ ತಂದಿದೆ.
 

ಒಟ್ಟಿನಲ್ಲಿ, ಶಿವಣ್ಣನ ಅಭಿನಯ, ಮೀಸೆ ಲುಕ್, ಯೋಗಿಯ ವಿಲನ್ ಪಾತ್ರ, ದೀಕ್ಷಿತ್ ಶೆಟ್ಟಿ ಅಭಿನಯ, ಅಜನೀಶ್ ಲೋಕನಾಥ್ ಸಂಗೀತ ಹಾಗೂ ಆ್ಯಕ್ಷನ್ ದೃಶ್ಯಗಳಿಗೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಮೊದಲ ದಿನವೇ ‘ಬೇಲ್’ಗೆ ಸಿಕ್ಕಿರುವ ಪ್ರತಿಕ್ರಿಯೆ ಮುಂದಿನ ದಿನಗಳ ಮೇಲೆ ಕುತೂಹಲ ಮೂಡಿಸಿದೆ.

 

Add Zee News as a Preferred Source
TAGS:
Cinema