SOCIAL MEDIA

Newsletter

PARTNER SITES
Select Language Select State

ರಾಮಾಯಣ ಚಿತ್ರದ ಕೊನೆಯಲ್ಲಿ ಬಿಗ್ ಸರ್ಪ್ರೈಸ್.. ಆ ಸೀಕ್ರೆಟ್ ಏನು ಗೊತ್ತಾ?

Ramayana: ಬಹುನಿರೀಕ್ಷಿತ 'ರಾಮಾಯಣ ಭಾಗ 1' ಸಿನಿಮಾ ಇಂದು (ನವೆಂಬರ್ 5) ತೆರೆಗೆ ಬಂದಿದೆ. ರಣಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ, ಯಶ್ ರಾವಣನಾಗಿ ಅಬ್ಬರಿಸಿದ್ದಾರೆ. ಆದ್ರೆ ಸಿನಿಮಾ ನೋಡಿದ ಪ್ರೇಕ್ಷಕರಿಗೆ ಕೊನೆಯಲ್ಲಿ ಮತ್ತೊಂದು ಸರ್ಪ್ರೈಸ್ ಕಾದಿದೆ.

Written By Ramya. R. Gowda
Published: Nov 05, 2026, 15:13 IST | Updated: Nov 05, 2026, 15:18 IST
Join

ಬಹುನಿರೀಕ್ಷಿತ 'ರಾಮಾಯಣ ಭಾಗ 1' ಸಿನಿಮಾ ಇಂದು (ನವೆಂಬರ್ 5) ತೆರೆಗೆ ಬಂದಿದೆ. ರಣಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ, ಯಶ್ ರಾವಣನಾಗಿ ಅಬ್ಬರಿಸಿದ್ದಾರೆ. ಆದ್ರೆ ಸಿನಿಮಾ ನೋಡಿದ ಪ್ರೇಕ್ಷಕರಿಗೆ ಕೊನೆಯಲ್ಲಿ ಮತ್ತೊಂದು ಸರ್ಪ್ರೈಸ್ ಕಾದಿದೆ. ಅದುವೇ ಪೋಸ್ಟ್ ಕ್ರೆಡಿಟ್ ದೃಶ್ಯದಲ್ಲಿ ಸನ್ನಿ ಡಿಯೋಲ್ ಎಂಟ್ರಿ! ಹನುಮಂತನಾಗಿ ಸನ್ನಿ ಡಿಯೋಲ್ ಕಾಣಿಸಿಕೊಂಡಿದ್ದು, ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ. ಹಾಗಾದ್ರೆ ಆ ದೃಶ್ಯ ಹೇಗಿದೆ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.


ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ ಭಾಗ 1' ಸಿನಿಮಾ ತೆರೆಗೆ ಬರುತ್ತಿದ್ದಂತೆ ಸಿನಿಪ್ರಿಯರ ಗಮನ ಸೆಳೆದಿದೆ. ಅದ್ಧೂರಿ ದೃಶ್ಯಗಳು, ಬೃಹತ್ ಸೆಟ್‌ಗಳು, ಯುದ್ಧದ ಸನ್ನಿವೇಶಗಳು ಚಿತ್ರದ ಪ್ರಮುಖ ಆಕರ್ಷಣೆಯಾಗಿವೆ. ಈಗಾಗಲೇ ಚಿತ್ರದ ಬಗ್ಗೆ ಸಕಾರಾತ್ಮಕ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಆದರೆ ಸಿನಿಮಾದ ಕೊನೆಯಲ್ಲಿ ಬರುವ ಪೋಸ್ಟ್ ಕ್ರೆಡಿಟ್ ದೃಶ್ಯ ಮಾತ್ರ ಎಲ್ಲರ ಗಮನ ಸೆಳೆಯುತ್ತಿದೆ.
 

ಸಾಮಾನ್ಯವಾಗಿ ಸಿನಿಮಾ ಮುಗಿದ ತಕ್ಷಣ ಪ್ರೇಕ್ಷಕರು ಚಿತ್ರಮಂದಿರದಿಂದ ಹೊರಬರುತ್ತಾರೆ. ಆದ್ರೆ ರಾಮಾಯಣ ಭಾಗ 1ರಲ್ಲಿ ಕೊನೆಯವರೆಗೂ ಕುಳಿತವರಿಗೆ ವಿಶೇಷ ಸರ್ಪ್ರೈಸ್ ಸಿಗುತ್ತದೆ. ಹೌದು.. ಪೋಸ್ಟ್ ಕ್ರೆಡಿಟ್ ದೃಶ್ಯದಲ್ಲಿ ಹನುಮಂತನ ಆಗಮನವನ್ನು ತೋರಿಸಲಾಗಿದೆ. ಆರಂಭದಲ್ಲಿ ಮುಖವನ್ನು ಸಂಪೂರ್ಣವಾಗಿ ತೋರಿಸದೆ, ಶಕ್ತಿಯುತ ಹಿನ್ನೆಲೆ ಸಂಗೀತದ ಮೂಲಕ ಆಂಜನೇಯನ ಎಂಟ್ರಿಯನ್ನು ಪರಿಚಯಿಸಲಾಗಿದೆ.

ಕೊನೆಯಲ್ಲಿ ಕೈಯಲ್ಲಿ ಗದೆ ಹಿಡಿದು 'ಜೈ ಶ್ರೀ ರಾಮ್' ಎಂದು ಘೋಷಿಸುವ ಹನುಮಂತನ ದೃಶ್ಯ ಪ್ರೇಕ್ಷಕರಲ್ಲಿ ರೋಮಾಂಚನ ಮೂಡಿಸುತ್ತಿದೆ. ಈ ಪಾತ್ರದಲ್ಲಿ ಬಾಲಿವುಡ್ ನಟ ಸನ್ನಿ ಡಿಯೋಲ್ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಹನುಮಂತನ ಪಾತ್ರದಲ್ಲಿ ಸನ್ನಿ ಡಿಯೋಲ್ ಅಭಿನಯಿಸಲಿದ್ದಾರೆ ಎಂಬ ಘೋಷಣೆ ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿತ್ತು. ಇದೀಗ ಪೋಸ್ಟ್ ಕ್ರೆಡಿಟ್ ದೃಶ್ಯದ ಮೂಲಕ ಅವರ ಪಾತ್ರದ ಪರಿಚಯ ಮಾಡಿಕೊಡಲಾಗಿದೆ.

ಚಿತ್ರದಲ್ಲಿ ರಣಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಹಾಗೂ ಕನ್ನಡದ ನಟ ಯಶ್ ರಾವಣನಾಗಿ ಕಾಣಿಸಿಕೊಂಡಿದ್ದಾರೆ. ಭಾರತೀಯ ಮಹಾಕಾವ್ಯ ರಾಮಾಯಣವನ್ನು ಬೃಹತ್ ಮಟ್ಟದಲ್ಲಿ ಬೆಳ್ಳಿತೆರೆಗೆ ತರುವ ಪ್ರಯತ್ನವನ್ನು ನಿರ್ದೇಶಕ ನಿತೇಶ್ ತಿವಾರಿ ಮಾಡಿದ್ದಾರೆ. ಮೊದಲ ಭಾಗದ ಅಂತ್ಯದಲ್ಲಿ ಹನುಮಂತನ ಸುಳಿವು ನೀಡಿರುವುದು ಎರಡನೇ ಭಾಗದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.
 

ಹನುಮಂತನ ಪರಾಕ್ರಮ, ರಾಮನ ಮೇಲಿನ ಅಪಾರ ಭಕ್ತಿ ಹಾಗೂ ರಾಮಾಯಣದ ಪ್ರಮುಖ ಯುದ್ಧದ ಸನ್ನಿವೇಶಗಳು ಎರಡನೇ ಭಾಗದಲ್ಲಿ ಪ್ರಮುಖ ಆಕರ್ಷಣೆಯಾಗುವ ಸಾಧ್ಯತೆಯಿದೆ. ಒಟ್ಟಿನಲ್ಲಿ ರಾಮಾಯಣ ಭಾಗ 1ರ ಕೊನೆಯಲ್ಲಿ ಸನ್ನಿ ಡಿಯೋಲ್ ಎಂಟ್ರಿ ಕೊಟ್ಟಿರುವುದು ಅಭಿಮಾನಿಗಳಿಗೆ ಬಿಗ್ ಸರ್ಪ್ರೈಸ್ ಆಗಿದೆ.

 

 

Add Zee News as a Preferred Source
TAGS:

About the Author

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.
Read More

ZEENEWS TRENDING STORIES