ರುಕ್ಮಿಣಿ ವಸಂತ್‌ಗಾಗಿಯೇ ತಯಾರಾದ "ಪ್ರೇಮದ ಊರಲಿ" ಆದರೆ ಕೊನೆ ಕ್ಷಣದಲ್ಲಿ ನಡೆದಿದ್ದೇ ಬೇರೆ
premada oorali: ‘ಪ್ರೇಮದ ಊರಲಿ’ಗೆ ಮೊದಲು ‘ರುಕ್ಮಿಣಿ ವಸಂತ’! ರುಕ್ಮಿಣಿ ವಸಂತ್‌ಗಾಗಿ ಬರೆಯಲಾಗಿದ್ದ ಕಥೆ ಈಗ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ!
‘ಪ್ರೇಮದ ಊರಲಿ’ಗೆ ಮೊದಲು ‘ರುಕ್ಮಿಣಿ ವಸಂತ’! ರುಕ್ಮಿಣಿ ವಸಂತ್‌ಗಾಗಿ ಬರೆಯಲಾಗಿದ್ದ ಕಥೆ ಈಗ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ!
ಸ್ಯಾಂಡಲ್‌ವುಡ್ ಬಾಕ್ಸಾಫೀಸ್‌ನಲ್ಲಿ ಸದ್ಯ ಸದ್ದು ಮಾಡ್ತಿರೋ ಸಿನಿಮಾ ಅಂದ್ರೆ ‘ಪ್ರೇಮದ ಊರಲಿ’. ಕೇವಲ 10 ದಿನಗಳಲ್ಲೇ 15 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿರುವ ಈ ಸಿನಿಮಾ ಈಗ ಹಾಟ್ ಟಾಪಿಕ್ ಆಗಿದೆ. ಆದ್ರೆ ಇದೇ ಸಿನಿಮಾದ ಹಿಂದೆ ಒಂದು ಇಂಟ್ರೆಸ್ಟಿಂಗ್ ಕಥೆಯಿದೆ. ನಟಿ ರುಕ್ಮಿಣಿ ವಸಂತ್ ಈ ಸಿನಿಮಾದಲ್ಲಿ ನಟಿಸಬೇಕಿತ್ತಂತೆ. ಅಷ್ಟೇ ಅಲ್ಲ, ಸಿನಿಮಾಗೆ ಅವರ ಹೆಸರನ್ನೇ ಟೈಟಲ್ ಆಗಿ ಇಡೋ ಪ್ಲಾನ್ ಕೂಡ ಇತ್ತಂತೆ.ಹಾಗಾದ್ರೆ ‘ರುಕ್ಮಿಣಿ ವಸಂತ’ ಅನ್ನೋ ಟೈಟಲ್ ಹುಟ್ಟಿದ್ದು ಹೇಗೆ? ಯಾಕೆ ಆಮೇಲೆ ‘ಪ್ರೇಮದ ಊರಲಿ’ ಆಯ್ತು? ಇಲ್ಲಿದೆ ಕಂಪ್ಲೀಟ್ ಸ್ಟೋರಿ.
ಸ್ಯಾಂಡಲ್‌ವುಡ್‌ನಲ್ಲಿ ಸದ್ಯ ‘ಪ್ರೇಮದ ಊರಲಿ’ ಸಿನಿಮಾದದ್ದೇ ಹವಾ ಜೋರಾಗಿದೆ ಮನೋಜ್ ಕುಮಾರ್ ನಿರ್ದೇಶನ, ಶ್ರೀರಾಮ್ ಅಭಿನಯದ ಈ ಸಿನಿಮಾ ಪ್ರೇಕ್ಷಕರ ಮನ ಗೆದ್ದು ಬಾಕ್ಸಾಫೀಸ್‌ನಲ್ಲಿ ಭರ್ಜರಿ ಓಟ ಮುಂದುವರಿಸಿದೆ. ಕೇವಲ 10 ದಿನಗಳಲ್ಲಿ 15 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ ಎನ್ನಲಾಗ್ತಿದ್ದು, ಇದೇ ಸಮಯದಲ್ಲಿ ಸಿನಿಮಾಗೆ ಸಂಬಂಧಿಸಿದ ಕುತೂಹಲಕಾರಿ ವಿಚಾರವೊಂದು ಹೊರಬಿದ್ದಿದೆ.
‘ಪ್ರೇಮದ ಊರಲಿ’ಗೆ ಮೊದಲು ‘ರುಕ್ಮಿಣಿ ವಸಂತ’!
ಹೌದು.. ‘ಪ್ರೇಮದ ಊರಲಿ’ ಸಿನಿಮಾದಲ್ಲಿ ನಟಿ ರುಕ್ಮಿಣಿ ವಸಂತ್ ನಟಿಸಬೇಕಿತ್ತಂತೆ.ನಿರ್ದೇಶಕ ಮನೋಜ್ ಕುಮಾರ್ ಅವರಿಗೆ ರುಕ್ಮಿಣಿ ವಸಂತ್ ಅವರ ಅಭಿನಯದ ಮೇಲೆ ಅಪಾರ ಅಭಿಮಾನವಿತ್ತು.ಹೀಗಾಗಿ ಕಥೆ ಬರೆಯುವಾಗಲೇ ಪ್ರಮುಖ ನಾಯಕಿಯ ಪಾತ್ರವನ್ನು ರುಕ್ಮಿಣಿ ಅವರನ್ನೇ ಮನಸ್ಸಿನಲ್ಲಿಟ್ಟುಕೊಂಡು ರೂಪಿಸಲಾಗಿತ್ತು.ಇಷ್ಟೇ ಅಲ್ಲ.. ಆರಂಭದಲ್ಲಿ ಸಿನಿಮಾಗೆ ‘ರುಕ್ಮಿಣಿ ವಸಂತ’ ಎಂದೇ ಟೈಟಲ್ ಇಡಲು ಚಿತ್ರತಂಡ ಪ್ಲಾನ್ ಮಾಡಿತ್ತು.ಆದ್ರೆ ಈ ಟೈಟಲ್‌ನ ಹಿಂದೆ ಇದ್ದದ್ದು ನಟಿಯ ಹೆಸರಷ್ಟೇ ಅಲ್ಲ.. ಕಥೆಯಲ್ಲಿದ್ದ ಇಬ್ಬರು ಪಾತ್ರಗಳ ಹೆಸರೂ ಇದೇ ಆಗಿತ್ತು. ಸಿನಿಮಾದ ಕಥೆಯಲ್ಲಿ ಇಬ್ಬರು ಪ್ರಮುಖ ನಾಯಕಿಯರ ಪಾತ್ರಗಳಿದ್ದವು. ಒಂದು ಪಾತ್ರಕ್ಕೆ ‘ರುಕ್ಮಿಣಿ’ ಅಂತ ಹೆಸರಿಟ್ಟಿದ್ರೆ, ಮತ್ತೊಂದು ಪಾತ್ರಕ್ಕೆ ‘ವಸಂತ’ ಅಂತ ಹೆಸರಿಡಲಾಗಿತ್ತು. ಈ ಎರಡು ಪಾತ್ರಗಳ ಹೆಸರುಗಳನ್ನು ಸೇರಿಸಿ ‘ರುಕ್ಮಿಣಿ ವಸಂತ’ ಎಂಬ ಟೈಟಲ್ ಇಡಲಾಗಿತ್ತು.
ಇದರ ಜೊತೆಗೆ ನಿರ್ದೇಶಕರಿಗೆ ನಟಿ ರುಕ್ಮಿಣಿ ವಸಂತ್ ಅವರ ಮೇಲಿದ್ದ ಅಭಿಮಾನವೂ ಈ ಶೀರ್ಷಿಕೆಗೆ ಮತ್ತೊಂದು ಕಾರಣವಾಗಿತ್ತು. ಹೀಗಾಗಿ ನಟಿಯ ಹೆಸರು ಹಾಗೂ ಕಥೆಯ ಪಾತ್ರಗಳು ಎರಡನ್ನೂ ಗಮನದಲ್ಲಿಟ್ಟುಕೊಂಡು ಈ ಟೈಟಲ್ ಫೈನಲ್ ಮಾಡುವ ಯೋಚನೆ ಮಾಡಲಾಗಿತ್ತು.
ಆದ್ರೆ ಸಿನಿಮಾ ಶುರುವಾಗುವ ವೇಳೆಗೆ ರುಕ್ಮಿಣಿ ವಸಂತ್ ಬೇರೆ ದೊಡ್ಡ ಬಜೆಟ್ ಹಾಗೂ ಪರಭಾಷಾ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರು.ಕಾಲ್‌ಶೀಟ್ ಹಾಗೂ ಡೇಟ್‌ಗಳ ಹೊಂದಾಣಿಕೆ ಸಾಧ್ಯವಾಗಲಿಲ್ಲ. ಇದರ ಜೊತೆಗೆ ‘ಪ್ರೇಮದ ಊರಲಿ’ ಸಣ್ಣ ಬಜೆಟ್‌ನಲ್ಲಿ ನಿರ್ಮಾಣವಾಗ್ತಿದ್ದ ಕಾರಣ, ರುಕ್ಮಿಣಿ ಅವರನ್ನು ಸಿನಿಮಾಗೆ ಕರೆತರಲು ಸಾಧ್ಯವಾಗಲಿಲ್ಲ ಎಂದು ನಿರ್ದೇಶಕ ಮನೋಜ್ ಕುಮಾರ್ ಹೇಳಿಕೊಂಡಿದ್ದಾರೆ. ರುಕ್ಮಿಣಿ ವಸಂತ್ ಸಿನಿಮಾದಲ್ಲಿ ನಟಿಸೋಕೆ ಸಾಧ್ಯವಾಗದಿದ್ದರೂ, ನಿರ್ದೇಶಕರು ಮಾತ್ರ ಅವರ ಮೇಲಿನ ಅಭಿಮಾನವನ್ನ ಬಿಟ್ಟುಕೊಡಲಿಲ್ಲ. ಕಥೆಯಲ್ಲಿದ್ದ ಇಬ್ಬರು ನಾಯಕಿಯರ ಹೆಸರುಗಳಾದ ‘ರುಕ್ಮಿಣಿ’ ಮತ್ತು ‘ವಸಂತ’ ಅನ್ನೇ ಉಳಿಸಿಕೊಂಡರು.
ಆದ್ರೆ ಸಿನಿಮಾದ ಟೈಟಲ್ ಮಾತ್ರ ಬದಲಾಯ್ತು.‘ರುಕ್ಮಿಣಿ ವಸಂತ’ ಎನ್ನುವ ಶೀರ್ಷಿಕೆಗೆ ಬದಲಾಗಿ ‘ಪ್ರೇಮದ ಊರಲಿ’ ಅನ್ನೋ ಟೈಟಲ್ ಫೈನಲ್ ಆಯ್ತು.ಹೀಗೆ ರುಕ್ಮಿಣಿ ವಸಂತ್ ಅವರ ಹೆಸರಿನೊಂದಿಗೆ ಆರಂಭವಾದ ಒಂದು ಕಥೆ, ಇಂದು ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡ್ತಿರುವ ‘ಪ್ರೇಮದ ಊರಲಿ’ ಆಗಿ ಪ್ರೇಕ್ಷಕರ ಮುಂದೆ ಬಂದಿದೆ.ಇನ್ನು ಸದ್ಯ ಸಿನಿಮಾದಲ್ಲಿ ನಟಿ ತಪಸ್ವಿನಿ ಪೂಣಚ್ಚ ‘ರುಕ್ಮಿಣಿ’ ಪಾತ್ರದಲ್ಲಿ ಮಿಂಚಿದ್ರೆ, ರಮಿಕಾ ಶಿವು ‘ವಸಂತ’ ಪಾತ್ರಕ್ಕೆ ಜೀವ ತುಂಬಿದ್ದಾರೆ. ಹೀಗಾಗಿ ತೆರೆಮೇಲೆ ರುಕ್ಮಿಣಿ ವಸಂತ್ ಇಲ್ಲದಿದ್ದರೂ.. ಅವರ ಹೆಸರಿನ ಕನೆಕ್ಷನ್ ಮಾತ್ರ ಸಿನಿಮಾದ ಕಥೆಯಲ್ಲಿ ಹಾಗೆಯೇ ಉಳಿದಿದೆ.
ಹೀಗೆ ರುಕ್ಮಿಣಿ ವಸಂತ್‌ಗಾಗಿ ರೂಪುಗೊಂಡಿದ್ದ ಕಥೆ, ಕೊನೆಗೆ ‘ಪ್ರೇಮದ ಊರಲಿ’ ಆಗಿ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡ್ತಿದೆ