• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಮನರಂಜನೆ
  • /'ದೇವಿ' ಚಿತ್ರತಂಡದಿಂದ ಅರ್ಥಪೂರ್ಣ ದೀಪಾವಳಿ : ಪೌರಕಾರ್ಮಿಕರಿಗೆ ಸೀರೆ, ಸಿಹಿ ಹಂಚಿಕೆ!

'ದೇವಿ' ಚಿತ್ರತಂಡದಿಂದ ಅರ್ಥಪೂರ್ಣ ದೀಪಾವಳಿ : ಪೌರಕಾರ್ಮಿಕರಿಗೆ ಸೀರೆ, ಸಿಹಿ ಹಂಚಿಕೆ!

ವಿಶಿಷ್ಠವಾಗಿ ದೀಪಾವಳಿಯನ್ನು ಆಚರಿಸುವ ಮೂಲಕ 'ದೇವಿ' ಚಿತ್ರತಂಡ ಮಾದರಿಯಾಗಿದೆ. ಚಿತ್ರದ ನಾಯಕ ಮತ್ತು ನಿರ್ಮಾಪಕ ಚೇತನ್ ಗೌಡ, ಪೌರಕಾರ್ಮಿಕರಿಗೆ ಸೀರೆ ಹಾಗೂ ಸಿಹಿ ಹಂಚುವುದರ ಜೊತೆಗೆ ಇಡೀ ಚಿತ್ರತಂಡದ ಕೆಲಸಗಾರರಿಗೆ ಹಬ್ಬದ ಬೋನಸ್ ನೀಡಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

Written ByKrishna NK
Published: Nov 08, 2026, 15:32 IST|Updated: Nov 08, 2026, 15:51 IST
joinshare
'ದೇವಿ' ಚಿತ್ರತಂಡದಿಂದ ಅರ್ಥಪೂರ್ಣ ದೀಪಾವಳಿ : ಪೌರಕಾರ್ಮಿಕರಿಗೆ ಸೀರೆ, ಸಿಹಿ ಹಂಚಿಕೆ!
Image Credit: Devi Movie Team

About the Author

Krishna NK

Krishna NK

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

2

ಭಾರತದಲ್ಲಿ ಅತಿ ಹೆಚ್ಚು ಬಳಕೆಯಾಗುವ ಪಾಸ್‌ವರ್ಡ್ ಇಲ್ಲಿದೆ ನೋಡಿ

3

ಆಸಿಯಾ ಮೇಲೆ ಸೌಂದರ್ಯಾ ಶೆಟ್ಟಿ ಹಲ್ಲೆ! ಇಂದೇ ಬಿಗ್‌ ಬಾಸ್‌ನಿಂದ ಹೊರ ಹೋಗ್ತಾರಾ?

4

'ಜೀ ನ್ಯೂಸ್' ಬಿಗ್‌ ಇಂಪ್ಯಾಕ್ಟ್: ದೆಹಲಿ ಫ್ಲಾಟ್ ಹರಾಜು ವಿವಾದದಲ್ಲಿ ತಪ್ಪೊಪ್ಪಿಕೊಂಡ NBCC

5

ಮುದ್ದು ಮಗಳ ಸಾವಿನ ನಂತರ ಬರಿಗಾಲಲ್ಲೇ ನಡೆಯುತ್ತಾರೆ ಈ ನಟ... ಕೋಟಿ ಕೋಟಿ ಒಡೆಯನಾದರೂ ಇದೆಂಥ ಸ್ಥಿತಿ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಬೆಂಗಳೂರು : ಸಿನಿರಂಗದಲ್ಲಿ ಪ್ರತಿ ಹಬ್ಬಕ್ಕೂ ಒಂದಲ್ಲ ಒಂದು ವಿಶೇಷತೆಗಳು ಇರುತ್ತವೆ. ಆದರೆ, ಈ ಬಾರಿಯ ದೀಪಾವಳಿಯನ್ನು 'ದೇವಿ' ಚಿತ್ರದ ತಂಡ ಆಚರಿಸಿಕೊಂಡ ರೀತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಚಿತ್ರದ ನಾಯಕ ಮತ್ತು ನಿರ್ಮಾಪಕರಾಗಿರುವ ಯುವ ರೈತ ಚೇತನ್ ಗೌಡ, ತಮ್ಮದೇ ಆದ ಸರಳತೆ ಹಾಗೂ ಉದಾರತೆಯ ಮೂಲಕ ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ರೈತ ಕುಟುಂಬದಿಂದ ಬಂದಿರುವ ಚೇತನ್, ಸಿನಿಮಾ ಯಶಸ್ಸಿನ ಖುಷಿಯ ಜೊತೆಗೆ ಸಮಾಜಮುಖಿ ಕೆಲಸಗಳ ಮೂಲಕವೂ ಗಮನ ಸೆಳೆಯುತ್ತಿದ್ದಾರೆ.

ಹೌದು.. ದೀಪಾವಳಿ ಹಬ್ಬದ ವಿಶೇಷ ದಿನದಂದು, 'ದೇವಿ' ಚಿತ್ರತಂಡವು ನಗರದ ಪೌರಕಾರ್ಮಿಕ ಮಹಿಳಾ ಮಣಿಗಳಿಗೆ ಸೀರೆ ಮತ್ತು ಸಿಹಿ ಹಂಚುವ ಮೂಲಕ ಅರ್ಥಪೂರ್ಣವಾಗಿ ಹಬ್ಬ ಆಚರಿಸಿದೆ. ಬೆಳ್ಳಂಬೆಳಗ್ಗೆ ಎದ್ದು ಊರನ್ನು ಸ್ವಚ್ಛಗೊಳಿಸುವ ಪೌರಕಾರ್ಮಿಕರ ಶ್ರಮವನ್ನು ಗುರುತಿಸಿ ಅವರಿಗೆ ಹಬ್ಬದ ಉಡುಗೊರೆ ನೀಡಿರುವುದು ನಿಜಕ್ಕೂ ಶ್ಲಾಘನೀಯ. ಇಷ್ಟು ಮಾತ್ರವಲ್ಲದೆ, 'ದೇವಿ' ಸಿನಿಮಾಗಾಗಿ ಹಗಲಿರುಳು ಶ್ರಮಿಸುತ್ತಿರುವ ತಂತ್ರಜ್ಞರು, ಸಹಾಯಕರು ಸೇರಿದಂತೆ ಇಡೀ ಚಿತ್ರತಂಡದ ಎಲ್ಲಾ ಶ್ರಮಿಕ ಕೈಗಳಿಗೂ ಖುಷಿಯಾಗುವಷ್ಟು ಬೋನಸ್ ನೀಡಿ ಮಾದರಿಯಾಗಿದ್ದಾರೆ.

ಬೆಂಗಳೂರಿನಲ್ಲಿರುವ 'ದೇವಿ' ಚಿತ್ರದ ಅಧಿಕೃತ ಕಚೇರಿಯಲ್ಲಿ ನಡೆದ ಈ ಸರಳ ಸಮಾರಂಭದಲ್ಲಿ ಚಿತ್ರದ ನಾಯಕ ಚೇತನ್, ನಾಯಕಿ ಭವ್ಯ ಗೌಡ, ನಿರ್ದೇಶಕ ಪ್ರಕಾಶ್, ಸಂಗೀತ ನಿರ್ದೇಶಕ ಶ್ರೀಧರ್ ವಿ. ಸಂಭ್ರಮ್ ಹಾಗೂ ಸಂಭಾಷಣೆಕಾರ ಮಾಸ್ತಿ ಸೇರಿದಂತೆ ಇಡೀ ಚಿತ್ರತಂಡದ ಪ್ರಮುಖರು ಭಾಗವಹಿಸಿದ್ದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಚಿತ್ರತಂಡ, ಕನ್ನಡ ಸಿನಿಪ್ರೇಮಿಗಳಿಗೆ ದೀಪಾವಳಿ ಹಬ್ಬದ ಶುಭಾಶಯಗಳನ್ನು ಕೋರುವುದರ ಜೊತೆಗೆ ಸಿನಿಮಾದ ಇತ್ತೀಚಿನ ಅಪ್ಡೇಟ್ಸ್‌ಗಳನ್ನು ಹಂಚಿಕೊಂಡಿತು.

ಚಿತ್ರದ ಕುರಿತು ಮಾತನಾಡಿದ ನಿರ್ಮಾಪಕ ಹಾಗೂ ನಾಯಕ ಚೇತನ್, "ದೀಪಾವಳಿಯ ಹಬ್ಬದ ಸಂಭ್ರಮವನ್ನು ನಮ್ಮ ಚಿತ್ರದ ಕಾರ್ಮಿಕರು ಹಾಗೂ ಪೌರಕಾರ್ಮಿಕರೊಂದಿಗೆ ಆಚರಿಸಿಕೊಳ್ಳುವುದರಲ್ಲಿ ನಿಜವಾದ ಖುಷಿಯಿದೆ" ಎಂದರು. ಅಲ್ಲದೆ, ಚಿತ್ರದ ಚಿತ್ರೀಕರಣದ ಬಗ್ಗೆಯೂ ಮಾಹಿತಿ ನೀಡಿದ ತಂಡ, ಸದ್ಯದಲ್ಲೇ ಮಂಡ್ಯದಲ್ಲಿ ಸಿನಿಮಾದ ಅಂತಿಮ ಹಂತದ ಶೂಟಿಂಗ್ ಆರಂಭವಾಗಲಿದೆ ಎಂದು ತಿಳಿಸಿದೆ. ಮಂಡ್ಯದ ಸುಂದರ ತಾಣಗಳಲ್ಲಿ ನಡೆಯಲಿರುವ ಈ ಹಂತದ ಚಿತ್ರೀಕರಣದೊಂದಿಗೆ ಶೂಟಿಂಗ್ ಸಂಪೂರ್ಣಗೊಳ್ಳಲಿದೆ.

ಸಿ.ಆರ್. ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ರೂಪುಗೊಳ್ಳುತ್ತಿರುವ 'ದೇವಿ' ಚಿತ್ರಕ್ಕೆ ಯುವ ರೈತ ಚೇತನ್ ಕುಮಾರ್ ಸ್ವತಃ ಕಥೆ ಮತ್ತು ಚಿತ್ರಕಥೆ ಬರೆದು ನಟಿಸುವುದರ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಈ ಚಿತ್ರಕ್ಕೆ ಪ್ರಕಾಶ್ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಮಾಗಿಯ ಸಂಭ್ರಮದ ಬಳಿಕ ಅಂದರೆ ಮುಂದಿನ ವರ್ಷ ಮಾರ್ಚ್ ವೇಳೆಗೆ ಸಿನಿಮಾವನ್ನು ತೆರೆಗೆ ತರಲು ಚಿತ್ರತಂಡ ಭರ್ಜರಿ ಸಿದ್ಧತೆ ನಡೆಸಿದೆ. ಒಟ್ಟಿನಲ್ಲಿ, ಯುವ ರೈತ ಚೇತನ್ ಅವರ ಈ ಹೃದಯವಂತಿಕೆಯ ನಡೆ ಸ್ಯಾಂಡ್‌ವುಡ್‌ನಲ್ಲಿ ಈಗ ಹೊಸ ಚರ್ಚೆಗೆ ಹಾಗೂ ಮೆಚ್ಚುಗೆಗೆ ಕಾರಣವಾಗಿದೆ.

Add Zee News as a Preferred Source
TAGS:
Cinema