SOCIAL MEDIA

Newsletter

PARTNER SITES
Select Language Select State

ಮತ್ತೊಮ್ಮೆ ಹೆಣ್ಣು ಮಗುವಿಗೆ ಜನ್ಮ ನೀಡಿದ ದೀಪಿಕಾ ಪಡುಕೋಣೆ: ಸಂಭ್ರಮದಲ್ಲಿ ರಣವೀರ್ ಸಿಂಗ್ ಕುಟುಂಬ!

ಬಾಲಿವುಡ್‌ ಸ್ಟಾರ್‌ ಜೋಡಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಸೆಪ್ಟೆಂಬರ್ ತಮ್ಮ ಎರಡನೇ ಮಗುವನ್ನು ಸ್ವಾಗತಿಸಿದ್ದಾರೆ. ದೀಪಿಕಾ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಮಗುವಿನ ಪುಟ್ಟ ಹೆಜ್ಜೆಗುರುತಿನ ಚಿತ್ರದೊಂದಿಗೆ ಈ ಸಂತಸದ ಸುದ್ದಿಯನ್ನು ಹಂಚಿಕೊಂಡಿದ್ದಾರೆ.. ಹೆಚ್ಚಿನ ವಿವರಗಳು ಇಲ್ಲಿವೆ..

Reported By Krishna NK Written By Krishna NK
Published: Sep 19, 2026, 07:49 PM IST | Updated: Sep 19, 2026, 07:50 PM IST
Image Credit: Deepika Padukone Ranveer Singh baby
Join

Deepika Padukone : ಬಾಲಿವುಡ್‌ನ ಜನಪ್ರಿಯ ಹಾಗೂ ತಾರಾ ದಂಪತಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರ ಕುಟುಂಬದಲ್ಲಿ ಮತ್ತೊಮ್ಮೆ ಸಂಭ್ರಮದ ವಾತಾವರಣ ಮನೆಮಾಡಿದೆ. ದಂಪತಿ ತಮ್ಮ ಎರಡನೇ ಮಗುವನ್ನು ಪ್ರೀತಿಯಿಂದ ಸ್ವಾಗತಿಸಿದ್ದು, ಈ ಬಾರಿಯೂ ಹೆಣ್ಣು ಮಗುವಿನ ಆಗಮನವಾಗಿದೆ.

ಹೌದು.. ಸೆಪ್ಟೆಂಬರ್ 19, 2026ರಂದು ತಮಗೆ ಎರಡನೇ ಮಗು ಜನಿಸಿರುವ ಸಂತಸದ ಸುದ್ದಿಯನ್ನು ದೀಪಿಕಾ ಪಡುಕೋಣೆ ಅವರು ತಮ್ಮ ಇನ್‌ಸ್ಟಾಗ್ರಾಮ್ ಸೇರಿದಂತೆ ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ದೀಪಿಕಾ ತಮ್ಮ ಪೋಸ್ಟ್‌ನಲ್ಲಿ ಮಗುವಿನ ಪುಟ್ಟ ಹೆಜ್ಜೆಗುರುತಿನ ಚಿತ್ರವನ್ನು ಹಂಚಿಕೊಳ್ಳುವ ಮೂಲಕ “ವೆಲ್ಕಮ್ ಬೇಬಿ ಗರ್ಲ್, 19/09/2026” ಎಂದು ಬರೆದುಕೊಂಡಿದ್ದಾರೆ. ಈ ಸರಳ ಹಾಗೂ ಭಾವನಾತ್ಮಕ ಪೋಸ್ಟ್ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು, ಸಹ ನಟರು ಹಾಗೂ ಸ್ನೇಹಿತರು ದಂಪತಿಗೆ ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.  

ಅಂದಹಾಗೆ, ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ 2018ರಲ್ಲಿ ಅದ್ಧೂರಿಯಾಗಿ ವಿವಾಹವಾದರು. ತದನಂತರ ಸೆಪ್ಟೆಂಬರ್ 8, 2024ರಂದು ತಮ್ಮ ಮೊದಲ ಮಗಳು 'ದುವಾ ಪಡುಕೋಣೆ ಸಿಂಗ್' (Dua Padukone Singh) ಅನ್ನು ಸ್ವಾಗತಿಸಿದ್ದರು. ಇದೀಗ ದುವಾಗೆ ಎರಡು ವರ್ಷ ತುಂಬಿದ ಬೆನ್ನಲ್ಲೇ, ಮತ್ತೊಂದು ಹೆಣ್ಣು ಮಗಳ ಆಗಮನವಾಗಿದ್ದು, ದೀಪಿಕಾ-ರಣವೀರ್ ಕುಟುಂಬದ ಸಂತೋಷ ಹೆಚ್ಚಿಸಿದೆ.

ಇನ್ನು ಕೆಲಸದ ವಿಷಯವಾಗಿ ನೋಡುವುದಾದರೆ, ಶಾರೂಖ್ ಖಾನ್ ಜೊತೆ ದೀಪಿಕಾ ಕಿಂಗ್‌ ಆಕ್ಷನ್ ಥ್ರಿಲ್ಲರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಶಾರೂಖ್ ಅವರ ಮಗಳು ಸುಹಾನಾ ಖಾನ್ ಕೂಡ ಅಭಿನಯಿಸುತ್ತಿದ್ದಾರೆ. ಅಷ್ಟೇ ಅಲ್ಲದೆ, ಅಲ್ಲು ಅರ್ಜುನ್‌ ನಟನೆಯ, ಸ್ಟಾರ್‌ ನಿರ್ದೇಶಕ ಅಟ್ಲಿ ನಿರ್ದೇಶಿಸುತ್ತಿರುವ ಬಿಗ್ ಬಜೆಟ್ ಆಕ್ಷನ್ ಎಪಿಕ್ ಸಿನಿಮಾ "ರಾಕಾ"ದಲ್ಲಿಯೂ ದೀಪಿಕಾ ಪ್ರಮುಖ ನಿರ್ವಹಿಸಲಿದ್ದಾರೆ ಎನ್ನಲಾಗಿದೆ. ಇದರ ಜೊತೆ ಅಯಾನ್ ಮುಖರ್ಜಿ ನಿರ್ದೇಶನದ  "ಬ್ರಹ್ಮಾಸ್ತ್ರ - ಭಾಗ 2"ರಲ್ಲಿ ದೀಪಿಕಾ 'ಅಮೃತ' ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ರಣವೀರ್ ಸಿಂಗ್ ಅವರ ಮುಂಬರುವ ಪ್ರಾಜೆಕ್ಟ್‌ಗಳನ್ನು ನೋಡುವುದಾದರೆ, ಫರ್ಹಾನ್ ಅಖ್ತರ್ ನಿರ್ದೇಶನದ 'ಡಾನ್ 3' ಚಿತ್ರದಲ್ಲಿ ರಣವೀರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಜೊತೆಗೆ "ಪ್ರಳಯ್" ಎಂಬ ಬಿಗ್ ಆಕ್ಷನ್ ಸಿನಿಮಾದಲ್ಲಿಯೂ ನಟಿಸಲಿದ್ದಾರೆ. ಅಷ್ಟೇ ಅಲ್ಲದೆ, ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದಲ್ಲಿ ಮೂಡಿಬರಲಿರುವ ಐತಿಹಾಸಿಕ ಕಥಾಹಂದರ ಹೊಂದಿರುವ ಸಿನಿಮಾ "ಶಕ್ತಿಮಾನ್" ಚಿತ್ರದಲ್ಲೂ ಅಭಿನಯಿಸಲಿದ್ದಾರೆ ಎಂಬ ಟಾಕ್‌ ಇದೆ.

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ZEENEWS TRENDING STORIES