SOCIAL MEDIA

Newsletter

PARTNER SITES
Select Language Select State

ನಟ ದರ್ಶನ್‌-ಪವಿತ್ರಾ 2 ನಿಮಿಷದ ಮಾತುಕತೆಯೇ ಈಗ ಪ್ರಾಸಿಕ್ಯೂಷನ್‌ಗೆ ಅಸ್ತ್ರ! ನ್ಯಾಯಾಧೀಶರ ಮುಂದೆ ಆಡಿಯೋ ಕ್ಲಿಪ್?

ಚಿತ್ರದುರ್ಗದ ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ಮತ್ತು ಪವಿತ್ರಾ ಗೌಡ ನಡುವಿನ ಸುಮಾರು ಎರಡು ನಿಮಿಷಗಳ ಮಾತುಕತೆಯ ಆಡಿಯೋ ಕ್ಲಿಪ್ ಪ್ರಾಸಿಕ್ಯೂಷನ್ ಗಮನ ಸೆಳೆದಿದೆ. ವಿಡಿಯೋ ಕಾನ್ಫರೆನ್ಸ್ ವೇಳೆ ತಾಂತ್ರಿಕ ಸಮಸ್ಯೆ ಉಂಟಾದಾಗ ಇಬ್ಬರೂ ಮಾತನಾಡಿಕೊಂಡಿದ್ದು, ಆನ್‌ಲೈನ್ ಸಂಪರ್ಕ ಮುಂದುವರಿದಿದ್ದರಿಂದ ಸಂಭಾಷಣೆ ರೆಕಾರ್ಡ್ ಆಗಿದೆ ಎನ್ನಲಾಗಿದೆ. ಈ ಆಡಿಯೋವನ್ನ ಎಸ್‌ಪಿಪಿ ಸೋಮವಾರ ನ್ಯಾಯಾಧೀಶರ ಗಮನಕ್ಕೆ ತರುವ ಸಾಧ್ಯತೆಯಿದೆ.

Written By Puttaraj K Alur
Published: Nov 14, 2026, 12:31 IST | Updated: Nov 14, 2026, 13:00 IST
Image Credit: Renukaswamy Case
Join

Renukaswamy Murder Case: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ನಡೆಯುತ್ತಿರುವ ನಡುವೆಯೇ ನಟ ಚಾಲೆಂಜಿಂಗ್‌ ಸ್ಟಾರ್ ದರ್ಶನ್ ಮತ್ತು ಪವಿತ್ರಾ ಗೌಡ ನಡುವಿನ ಮಾತುಕತೆ ಹೊಸ ಚರ್ಚೆಗೆ ಕಾರಣವಾಗಿದೆ. ನ್ಯಾಯಾಲಯದ ವಿಡಿಯೋ ಕಾನ್ಫರೆನ್ಸ್ ವಿಚಾರಣೆ ವೇಳೆ ನಡೆದ ಸುಮಾರು ಎರಡು ನಿಮಿಷಗಳ ಸಂಭಾಷಣೆಯ ಆಡಿಯೋ ರೆಕಾರ್ಡಿಂಗ್ ಇದೀಗ ಪ್ರಾಸಿಕ್ಯೂಷನ್ ಗಮನ ಸೆಳೆದಿದೆ. ಈ ಮಾತುಕತೆಯನ್ನ ನ್ಯಾಯಾಧೀಶರ ಗಮನಕ್ಕೆ ತರಲು ವಿಶೇಷ ಸರ್ಕಾರಿ ಅಭಿಯೋಜಕರು (SPP) ಮುಂದಾಗಿದ್ದಾರೆ ಎನ್ನಲಾಗಿದೆ.

ಕಳೆದ ಗುರುವಾರ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ದರ್ಶನ್ ಮತ್ತು ಪವಿತ್ರಾ ಗೌಡ ಪರಸ್ಪರ ಮಾತನಾಡಿಕೊಂಡಿದ್ದರು. ಈ ಮಾತುಕತೆ ನಡೆದಿದ್ದು ವಿಡಿಯೋ ಕಾನ್ಫರೆನ್ಸ್ ವ್ಯವಸ್ಥೆಯಲ್ಲಿ ತಾಂತ್ರಿಕ ಸಮಸ್ಯೆ ಉಂಟಾದ ಸಂದರ್ಭದಲ್ಲಿ. ನ್ಯಾಯಾಲಯದ ಹಾಲ್‌ನಲ್ಲಿದ್ದ ವಿಡಿಯೋ ಕಾನ್ಫರೆನ್ಸ್ ಸಂಪರ್ಕ ಕಡಿತಗೊಂಡಿದ್ದರಿಂದ ವಿಚಾರಣೆ ಸ್ಥಗಿತಗೊಂಡಿದೆ ಎಂದು ಇಬ್ಬರೂ ಭಾವಿಸಿದ್ದರು. ಆದರೆ ಆನ್‌ಲೈನ್‌ನಲ್ಲಿನ ಸಂಪರ್ಕ ಮುಂದುವರಿದಿತ್ತು ಎನ್ನಲಾಗಿದೆ. ಹೀಗಾಗಿ ಅವರ ಮಾತುಕತೆ ಆನ್‌ಲೈನ್ ಮೂಲಕ ಸಂಪರ್ಕದಲ್ಲಿದ್ದವರಿಗೆ ಕೇಳಿಸಿದೆ ಎಂದು ವರದಿಯಾಗಿದೆ.

ತಾಂತ್ರಿಕ ಸಮಸ್ಯೆಯಿಂದ ನಡೆದ ಮಾತುಕತೆ

ನ್ಯಾಯಾಲಯದ ಹಾಲ್‌ನಲ್ಲಿ ವಿಡಿಯೋ ಕಾನ್ಫರೆನ್ಸ್ ಸ್ಥಗಿತಗೊಂಡಿದ್ದರೂ ಆನ್‌ಲೈನ್ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿರಲಿಲ್ಲ ಎನ್ನುವುದು ಈ ಘಟನೆಯ ಪ್ರಮುಖ ಅಂಶವಾಗಿದೆ. ಕೋರ್ಟ್ ಹಾಲ್‌ನಲ್ಲಿನ ವಿಡಿಯೋ ಕಾನ್ಫರೆನ್ಸ್ ಲಾಗ್ ಔಟ್ ಆಗಿದೆ ಎಂದು ಭಾವಿಸಿದ ದರ್ಶನ್ ಮತ್ತು ಪವಿತ್ರಾ ಗೌಡ ಪರಸ್ಪರ ಮಾತುಕತೆ ಆರಂಭಿಸಿದ್ದರು. ಆದರೆ ಆನ್‌ಲೈನ್‌ನಲ್ಲಿ ಲಾಗಿನ್ ಆಗಿದ್ದವರಿಗೆ ಇವರ ಸಂಭಾಷಣೆ ಕೇಳಿಸಿತ್ತು ಎನ್ನಲಾಗಿದೆ.

ಈ ಸಂದರ್ಭದಲ್ಲಿ ಇಬ್ಬರೂ ತಮ್ಮ ಕಷ್ಟ-ಸುಖಗಳನ್ನ ಹಂಚಿಕೊಂಡಿದ್ದಾರೆ ಎನ್ನಲಾಗಿದೆ. ಈ ಮಾತುಕತೆಯ ಆಡಿಯೋ ರೆಕಾರ್ಡಿಂಗ್ ಈಗ ಪ್ರಕರಣದ ವಿಚಾರಣೆಯಲ್ಲಿ ಮಹತ್ವ ಪಡೆದುಕೊಂಡಿದೆ. ಸುಮಾರು ಎರಡು ನಿಮಿಷಗಳ ಸಂಭಾಷಣೆಯ ಕ್ಲಿಪ್ ಪ್ರಾಸಿಕ್ಯೂಷನ್‌ಗೆ ಲಭ್ಯವಾಗಿರುವ ಹಿನ್ನೆಲೆಯಲ್ಲಿ ಅದನ್ನ ನ್ಯಾಯಾಧೀಶರ ಗಮನಕ್ಕೆ ತರುವ ಪ್ರಯತ್ನ ನಡೆಯುತ್ತಿದೆ ಎಂದು ತಿಳಿದುಬಂದಿದೆ.

ಎಸ್‌ಪಿಪಿಗೆ ಹೊಸ ಅಸ್ತ್ರವಾದ ಆಡಿಯೋ ಕ್ಲಿಪ್

ದರ್ಶನ್ ಮತ್ತು ಪವಿತ್ರಾ ಗೌಡ ನಡುವಿನ ಮಾತುಕತೆಯ ಆಡಿಯೋ ಇದೀಗ ವಿಶೇಷ ಸರ್ಕಾರಿ ಅಭಿಯೋಜಕರಿಗೆ ಹೊಸ ಅಸ್ತ್ರವಾಗಿ ಪರಿಣಮಿಸಿದೆ ಎನ್ನಲಾಗಿದೆ. ಈ ಆಡಿಯೋ ರೆಕಾರ್ಡಿಂಗ್ ಅನ್ನ ನ್ಯಾಯಾಧೀಶರ ಮುಂದೆ ಪ್ರಸ್ತಾಪಿಸುವ ಸಾಧ್ಯತೆಯಿದೆ. ಅಲ್ಲದೆ ಇಬ್ಬರ ಸಂಭಾಷಣೆಯ ರೆಕಾರ್ಡ್ ಕ್ಲಿಪ್ ಅನ್ನ ನ್ಯಾಯಾಧೀಶರಿಗೆ ಸಲ್ಲಿಸುವ ಸಾಧ್ಯತೆಯೂ ಇದೆ ಎಂದು ತಿಳಿದುಬಂದಿದೆ. ಎಸ್‌ಪಿಪಿ ಸೋಮವಾರ ಈ ವಿಚಾರವನ್ನ ನ್ಯಾಯಾಧೀಶರ ಗಮನಕ್ಕೆ ತರುವ ಸಾಧ್ಯತೆಯಿದೆ ಎನ್ನಲಾಗಿದೆ. ಹೀಗಾಗಿ ಗುರುವಾರ ನಡೆದ ಮಾತುಕತೆಯ ವಿಚಾರ ಮುಂದಿನ ವಿಚಾರಣೆಯ ಸಂದರ್ಭದಲ್ಲಿ ಪ್ರಸ್ತಾಪವಾಗಬಹುದೆಂಬ ನಿರೀಕ್ಷೆ ಮೂಡಿದೆ. 

ತಡವಾಗಿ ಗಮನಕ್ಕೆ ಬಂದ ಆಡಿಯೋ ಸೋರಿಕೆಯ ಮಾಹಿತಿ

ದರ್ಶನ್ ಮತ್ತು ಪವಿತ್ರಾ ಗೌಡ ತಮ್ಮ ನಡುವಿನ ಸಂಭಾಷಣೆ ಹೊರಗಿನವರಿಗೆ ಕೇಳಿಸಿದೆ ಎಂಬುದನ್ನ ಆರಂಭದಲ್ಲಿ ಅರಿತಿರಲಿಲ್ಲ ಎನ್ನಲಾಗಿದೆ. ಮಾತುಕತೆಯ ವಿಚಾರ ವೈರಲ್ ಆದ ನಂತರವಷ್ಟೇ ಈ ಬಗ್ಗೆ ಇಬ್ಬರ ಗಮನಕ್ಕೆ ಬಂದಿದೆ. ಜೈಲಿನ ಸಿಬ್ಬಂದಿಯ ಮೂಲಕ ತಮ್ಮ ಸಂಭಾಷಣೆ ಹೊರಬಂದಿರುವ ಸಂಗತಿ ಇಬ್ಬರಿಗೂ ತಿಳಿದಿದೆಯಂತೆ.

ವಿಡಿಯೋ ಕಾನ್ಫರೆನ್ಸ್ ವಿಚಾರಣೆ ವೇಳೆ ತಾಂತ್ರಿಕ ಸಮಸ್ಯೆಯಿಂದ ಉಂಟಾದ ಈ ಘಟನೆ ಇದೀಗ ರೇಣುಕಾಸ್ವಾಮಿ ಕೊ*ಲೆ ಪ್ರಕರಣದ ಚರ್ಚೆಯ ಮತ್ತೊಂದು ವಿಷಯವಾಗಿದೆ. ನ್ಯಾಯಾಲಯದ ಹಾಲ್‌ನಲ್ಲಿ ಸಂಪರ್ಕ ಕಡಿತಗೊಂಡಿದ್ದರೂ ಆನ್‌ಲೈನ್ ಸಂಪರ್ಕ ಮುಂದುವರಿದಿದ್ದರಿಂದ ಇಬ್ಬರ ಮಾತುಕತೆ ರೆಕಾರ್ಡ್ ಆಗಿರುವುದು ಪ್ರಕರಣದ ವಿಚಾರಣೆಯಲ್ಲಿ ಗಮನ ಸೆಳೆದಿದೆ.

ಒಟ್ನಲ್ಲಿ ದರ್ಶನ್ ಮತ್ತು ಪವಿತ್ರಾ ಗೌಡ ನಡುವಿನ ಸುಮಾರು ಎರಡು ನಿಮಿಷಗಳ ಸಂಭಾಷಣೆಯ ಆಡಿಯೋ ಕ್ಲಿಪ್ ಈಗ ಪ್ರಾಸಿಕ್ಯೂಷನ್ ಗಮನದಲ್ಲಿದೆ. ಎಸ್‌ಪಿಪಿ ಸೋಮವಾರ ಈ ವಿಚಾರವನ್ನ ನ್ಯಾಯಾಧೀಶರ ಮುಂದೆ ಪ್ರಸ್ತಾಪಿಸುವ ಸಾಧ್ಯತೆಯಿದ್ದು, ಆಡಿಯೋ ರೆಕಾರ್ಡಿಂಗ್ ಸಲ್ಲಿಸುವ ಬಗ್ಗೆಯೂ ಚರ್ಚೆ ನಡೆದಿದೆ. ಮುಂದಿನ ವಿಚಾರಣೆಯಲ್ಲಿ ಈ ಮಾತುಕತೆ ಯಾವ ರೀತಿಯಲ್ಲಿ ಪ್ರಸ್ತಾಪವಾಗಲಿದೆ ಎಂಬುದು ಕುತೂಹಲ ಮೂಡಿಸಿದೆ.

Add Zee News as a Preferred Source
TAGS:

About the Author

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

ZEENEWS TRENDING STORIES