SOCIAL MEDIA

Newsletter

PARTNER SITES
Select Language Select State

ನನ್ನಿಂದ ತಪ್ಪಾಗಿದೆ ಸರ್, ಕ್ಷಮಿಸಿ ಬಿಡಿ..! ಪೊಲೀಸರ ಮುಂದೆ ಮಾಡಿದ ತಪ್ಪೊಪ್ಪಿಕೊಂಡ ನಟ ಧನ್ವೀರ್‌

ದರ್ಶನ್ ಪತ್ನಿ ವಿಜಯಲಕ್ಷ್ಮಿ ಮ್ಯಾನೇಜರ್ ಗೆ ನಿಂದಿಸಿದ ಕೇಸಲ್ಲಿ ನಟ ಧನ್ವೀರ್ ಪೊಲೀಸ್ ವಿಚಾರಣೆಗೆ ಹಾಜರಾಗಿದ್ದಾರೆ.

Written By Ramya. R. Gowda
Published: Nov 29, 2026, 16:47 IST | Updated: Nov 29, 2026, 16:59 IST
Join

 Danveer apolized police: ದರ್ಶನ್ ಪತ್ನಿ ವಿಜಯಲಕ್ಷ್ಮಿ ಮ್ಯಾನೇಜರ್ ಗೆ ನಿಂದಿಸಿದ ಕೇಸಲ್ಲಿ ನಟ  ಧನ್ವೀರ್ ಪೊಲೀಸ್ ವಿಚಾರಣೆಗೆ ಹಾಜರಾಗಿದ್ರು. ಈ ವೇಳೆ ಪೊಲೀಸ್ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಬಜಾರ್ ಹುಡುಗ ಕೆಲ ಹೇಳಿಕೆ ಕೊಟ್ಟು ತೆರಳಿದ್ರು. ಈಗ ಪೊಲೀಸರ ಮುಂದೆ ಧನ್ವೀರ್ ಏನ್ ಹೇಳಿದ್ರು ಎಂಬುದು ಗೊತ್ತಾಗಿದ್ದು, ಪ್ರಕರಣಕ್ಕೆ ಮುಂದೆ ಟ್ವಿಸ್ಟ್ ಸಿಗುವ ಸಾಧ್ಯತೆ ಇದೆ.

ನಟ ಧನ್ವೀರ್‌ಗೆ ಪೊಲೀಸರ ವಿಚಾರಣೆ ಬಿಸಿ ತಟ್ಟಿದೆ.ವಿಜಯಲಕ್ಷ್ಮಿ ಮ್ಯಾನೇಜರ್ ನಾಗರಾಜ್‌ಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್.ಆರ್.ನಗರ ಪೊಲೀಸರ ಮುಂದೆ ನಟ ಧನ್ವೀರ್ ವಿಚಾರಣೆಗೆ ಹಾಜರಾಗಿದ್ದರು.ಈ ವೇಳೆ ನಾಗರಾಜ್‌ಗೆ ಕರೆ ಮಾಡಿ ಮೆಸೇಜ್ ಮಾಡಿದ್ದು, ನಿಂದಿಸಿದ್ದು ನಿಜ ಎಂದು‌ ಧನ್ವೀರ್ ಒಪ್ಪಿಕೊಂಡಿದ್ದಾರೆ. ನನ್ನಿಂದ ತಪ್ಪಾಗಿದೆ ಸರ್, ಕ್ಷಮಿಸಿ ಬಿಡಿ ಎಂದು ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ.

ಇನ್ನು ವಿಜಯಲಕ್ಷ್ಮಿ ಹಾಗೂ ನಾಗರಾಜ್ ತಮ್ಮ ಮನೆಗೆ ಬಂದು ಗಲಾಟೆ ಮಾಡಿದ್ದರು.ನನ್ನ ತಂದೆ-ತಾಯಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದರು. ಇದೇ ಕೋಪದಲ್ಲಿ ನಾಗರಾಜ್‌ಗೆ ಬೈದಿದ್ದೇನೆ ಎಂದು ಧನ್ವೀರ್ ಹೇಳಿದ್ದಾರೆ. ಹಣಕಾಸಿನ ವಿಚಾರವಾಗಿ ಗಲಾಟೆಯಾಗಿದ್ದು, ಲೆಕ್ಕ ಕೊಡಲು ನಾನು ಸಿದ್ಧನಿದ್ದೇನೆ.ಆದರೆ ಅವರೇ ಬರುತ್ತಿಲ್ಲ ಎಂದು ತಮ್ಮ ಹೇಳಿಕೆಯಲ್ಲಿ ಧನ್ವೀರ್ ತಿಳಿಸಿದ್ದಾರೆ.

ಇದೇ ವೇಳೆ ಸಿಎಂ ಹಾಗೂ ಸಚಿವ ಜಮೀರ್ ಅಹ್ಮದ್ ಪುತ್ರ ಝೈದ್ ಖಾನ್ ಬಗ್ಗೆ ನಾನು ಯಾವುದೇ ಮಾತನಾಡಿಲ್ಲ. ವೈರಲ್ ಆಗಿರುವ ಆಡಿಯೋ ಎಐ ಮೂಲಕ ಸೃಷ್ಟಿಸಲಾಗಿದೆ. ನನ್ನ ಹೆಸರಿಗೆ ಕೆಟ್ಟ ಹೆಸರು ತರಲು ಈ ರೀತಿ ಮಾಡಲಾಗಿದೆ ಎಂದು ಧನ್ವೀರ್ ಸ್ಪಷ್ಟನೆ ನೀಡಿದ್ದಾರೆ. ಇನ್ನೂ ಈ ಹಿಂದೆ ನೋಟಿಸ್ ನೀಡಿದ್ದರೂ ವಿಚಾರಣೆಗೆ ಹಾಜರಾಗದ ಹಿನ್ನೆಲೆ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು.ಕೋರ್ಟ್ ಆದೇಶದಂತೆ ಎಫ್‌ಐಆರ್ ದಾಖಲಾಗಿತ್ತು.ಎಫ್‌ಐಆರ್ ರದ್ದು ಕೋರಿ ಹೈಕೋರ್ಟ್ ಮೊರೆ ಹೋಗಿದ್ದ ಧನ್ವೀರ್‌ಗೆ ವಿಚಾರಣೆಗೆ ಹಾಜರಾಗುವಂತೆ ಹೈಕೋರ್ಟ್ ಸೂಚಿಸಿತ್ತು. ಒಟ್ಟಾರೆ ಧನ್ವೀರ್ ಹಾಗೂ ನಟ ದರ್ಶನ್ ಪತ್ನಿ ನಡುವಿನ ಕಿರಿಕ್ ಬೀದಿಗೆ ಬಂದಿದ್ದು, ದಾಸನ ಅಭಿಮಾನಿಗಳಿಗೆ ಬೇಸರ ತರಿಸಿರೋದಂತು ಸುಳ್ಳಲ್ಲ.

 

Add Zee News as a Preferred Source
TAGS:

About the Author

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.
Read More

ZEENEWS TRENDING STORIES