• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಮನರಂಜನೆ
  • /ರಂಗಭೂಮಿ, ಸಿನಿಮಾ, ರಾಜಕೀಯ : ನಾಗ್ ಜೀವನ ಪಯಣ ಸಿನಿಮಾ ಕಥೆಗೂ ವಿಭಿನ್ನ

ರಂಗಭೂಮಿ, ಸಿನಿಮಾ, ರಾಜಕೀಯ : ನಾಗ್ ಜೀವನ ಪಯಣ ಸಿನಿಮಾ ಕಥೆಗೂ ವಿಭಿನ್ನ

ಕನ್ನಡ ಚಿತ್ರರಂಗದ ದಂತಕಥೆ, ಹಿರಿಯ ನಟ ಅನಂತ್ ನಾಗ್ ಅವರಿಗೆ ಭಾರತ ಸರ್ಕಾರವು ಚಿತ್ರರಂಗದ ಅತ್ಯುನ್ನತ ಬಹುಮಾನವಾದ 'ದಾದಾ ಸಾಹೇಬ್ ಫಾಲ್ಕೆ' ಪ್ರಶಸ್ತಿಯನ್ನು ಪ್ರಕಟಿಸಿದೆ. ಕಳೆದ ಅರ್ಧ ಶತಮಾನಕ್ಕೂ ಹೆಚ್ಚು ಕಾಲದಿಂದ ಭಾರತೀಯ ಬೆಳ್ಳಿತೆರೆಯ ಮೇಲೆ ತಮ್ಮ ಸಟಲ್ ಹಾಗೂ ನೈಜ ಅಭಿನಯದ ಮೂಲಕ ಕೋಟ್ಯಂತರ ರಸಿಕರ ಮನ ಗೆದ್ದಿರುವ ಈ ಕಲಾತಪಸ್ವಿಗೆ ಸಂದ ಅರ್ಹ ಗೌರವ ಇದಾಗಿದೆ. ಅವರ ವೈವಿಧ್ಯಮಯ ಸಿನಿಮಾ ಪಯಣದ ಒಂದು ಮೆಲುಕು ಇಲ್ಲಿದೆ..

Reported ByKrishna NKEdited ByKrishna NK
Published: Sep 16, 2026, 08:55 PM IST|Updated: Sep 17, 2026, 02:22 PM IST
joinshare
ರಂಗಭೂಮಿ, ಸಿನಿಮಾ, ರಾಜಕೀಯ : ನಾಗ್ ಜೀವನ ಪಯಣ ಸಿನಿಮಾ ಕಥೆಗೂ ವಿಭಿನ್ನ
Image Credit: Sandalwood actor Anant Nag life story in Kannada

About the Author

Krishna NK

Krishna NK

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಸದಾ ನೈಜ ನಟನೆಯಿಂದಲೇ ಕೋಟ್ಯಂತರ ಪ್ರೇಕ್ಷಕರ ಹೃದಯ ಗೆದ್ದಿರುವ ಹಿರಿಯ ನಟ ಅನಂತ್ ನಾಗ್ ಅವರಿಗೆ ಭಾರತ ಸರ್ಕಾರವು ಚಿತ್ರರಂಗದ ಅತ್ಯುನ್ನತ ಹಾಗೂ ಅತ್ಯಂತ ಗೌರವಾನ್ವಿತ 'ದಾದಾ ಸಾಹೇಬ್ ಫಾಲ್ಕೆ' ಪ್ರಶಸ್ತಿಯನ್ನು ಘೋಷಿಸಿದೆ. ಕಳೆದ ಅರ್ಧ ಶತಮಾನಕ್ಕಿಂತಲೂ ಹೆಚ್ಚು ಕಾಲದಿಂದ ಕಲಾ ಸೇವೆಯಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿರುವ ಈ ದಿಗಿಲ ನಟನಿಗೆ ಈ ಗೌರವ ಒಲಿದಿರುವುದು ಇಡೀ ಕನ್ನಡ ಚಿತ್ರರಂಗ ಹಾಗೂ ಕೋಟ್ಯಂತರ ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ. ಅರ್ಧ ಶತಮಾನದ ಸುದೀರ್ಘ ಕಲಾ ಪಯಣದಲ್ಲಿ ವೈವಿಧ್ಯಮಯ ಪಾತ್ರಗಳಿಗೆ ಜೀವ ತುಂಬಿದ ಈ ಅಪರೂಪದ ನಟನಿಗೆ ದಶಕಗಳಿಂದಲೂ ಸಿಗಬೇಕಿದ್ದ ಅರ್ಹ ಗೌರವ ಈಗ ತಡವಾಗಿಯಾದರೂ ಸಂದಾಯವಾದಂತಾಗಿದೆ.

ಮೆಲೊಡ್ರಾಮಾದ ಯುಗದಲ್ಲಿ ನೈಜ ನಟನೆಯ ಮೂಲಕ ಹೊಸ ಅಲೆ ಸೃಷ್ಟಿಸಿದ ಹರಿಕಾರ

೭೦ ಮತ್ತು ೮೦ರ ದಶಕದ ಭಾರತೀಯ ಚಿತ್ರರಂಗವನ್ನು ಒಮ್ಮೆ ತಿರುಗಿ ನೋಡಿದರೆ, ಅಂದಿನ ಕಾಲದಲ್ಲಿ ಅತಿಯಾದ ನಾಟಕೀಯತೆ, ಮಾಸ್ ಡೈಲಾಗ್‌ಗಳು, ಶಕ್ತಿಶಾಲಿ ಆಕ್ಷನ್ ಹಾಗೂ ವಿಶಿಷ್ಟ ಮ್ಯಾನರಿಸಂ ಹೊಂದಿದ್ದ ನಟರೇ ಹೆಚ್ಚಾಗಿ ಸ್ಟಾರ್‌ಗಳಾಗಿ ಮೆರೆಯುತ್ತಿದ್ದರು. ಇಡೀ ಚಿತ್ರರಂಗ ಮೆಲೊಡ್ರಾಮಾ ಹಾಗೂ ನಾಟಕೀಯ ಶೈಲಿಯ ನಟನೆಯ ಹಿಂದೆ ಓಡುತ್ತಿದ್ದ ಸಂದರ್ಭದಲ್ಲಿ, ಯಾವುದೇ ಆರ್ಭಟವಿಲ್ಲದೆ ಅತ್ಯಂತ ಸಹಜ ಹಾಗೂ ನೈಜ ನಟನೆಯ ಮೂಲಕ (ಸಟಲ್ ಆಕ್ಟಿಂಗ್) ಪ್ರೇಕ್ಷಕರನ್ನು ಆಕರ್ಷಿಸಿದ ಏಕೈಕ ನಟ ಅನಂತ್ ನಾಗ್. ನಟನಿಗೆ ಭಾಷೆ, ಜಾನರ್ ಅಥವಾ ಪಾತ್ರದ ಗಡಿಗಳಿರುವುದಿಲ್ಲ ಎಂಬುದಕ್ಕೆ ಅನಂತ್ ನಾಗ್ ಅವರ ಕಲಾ ಪಯಣವೇ ಜೀವಂತ ಸಾಕ್ಷಿ. ಕಲಾತ್ಮಕ, ವಾಣಿಜ್ಯಿಕ, ಪೌರಾಣಿಕ, ಬಂಡಾಯ, ಹಾಸ್ಯ, ಕೌಟುಂಬಿಕ ಹಾಗೂ ಹಾರರ್ ಸೇರಿದಂತೆ ಎಲ್ಲಾ ಮಾದರಿಯ ಸಿನಿಮಾಗಳಲ್ಲೂ ಅವರು ಲೀಲಾಜಾಲವಾಗಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ.

ರಂಗಭೂಮಿಯಿಂದ ಆರಂಭವಾದ ಅನಂತ್ ನಾಗರಕಟ್ಟೆಯ ಅಪೂರ್ವ ಕಲಾ ಪಯಣ

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಶಿರಾಲಿಯಲ್ಲಿ ಸ್ವಾತಂತ್ರ್ಯ ಸಿಕ್ಕ ಮರುವರ್ಷ ಅಂದರೆ ೧೯೪೮ರಲ್ಲಿ ಜನಿಸಿದ ಅನಂತ್ ನಾಗ್ ಅವರ ಬಾಲ್ಯದ ಹೆಸರು ಅನಂತ್ ನಾಗರಕಟ್ಟೆ. ಹದಿನಾರರ ಹರಯದಲ್ಲೇ ಶಿಕ್ಷಣಕ್ಕಾಗಿ ಮುಂಬೈ ನಗರಕ್ಕೆ ತೆರಳಿದ ಇವರಿಗೆ ಆರಂಭದಲ್ಲಿ ಭಾರತೀಯ ವಾಯುಸೇನೆಗೆ ಸೇರಿ ದೇಶಸೇವೆ ಮಾಡಬೇಕೆಂಬ ಕಟುವಾದ ಬಯಕೆಯಿತ್ತು. ಆದರೆ ಅವರ ಶಾರೀರಿಕ ರಚನೆಯ ಕಾರಣದಿಂದ ಆ ಕನಸು ನನಸಾಗಲಿಲ್ಲ. ಆದರೆ ಅದೇ ಸಮಯದಲ್ಲಿ ಮುಂಬೈ ಮತ್ತು ಮಹಾರಾಷ್ಟ್ರದಾದ್ಯಂತ ಆಧುನಿಕ ರಂಗಭೂಮಿಯ ದೊಡ್ಡ ಅಲೆಯೇ ಏದ್ದಿತ್ತು. ಸ್ಪುರದ್ರೂಪಿಯಾಗಿದ್ದ ಅನಂತ್ ನಾಗ್ ಅವರನ್ನು ರಂಗಭೂಮಿಯ ರಂಗು ಬಲವಾಗಿ ಸೆಳೆಯಿತು. ಅಮೋಲ್ ಪಾಲೇಕರ್ ಅವರಂತಹ ದಿಗ್ಗಜರೊಂದಿಗೆ ಸೇರಿ ಸುಮಾರು ೭೦ಕ್ಕೂ ಹೆಚ್ಚು ನಾಟಕಗಳಲ್ಲಿ ನಟಿಸಿದ ಅವರು ಹಿಂದಿ, ಕನ್ನಡ, ಕೊಂಕಣಿ ಹಾಗೂ ಮರಾಠಿ ಭಾಷೆಗಳಲ್ಲಿ ಅಭಿನಯಿಸಿ ನಟನೆಯ ಸಕಲ ಕಲೆಗಳನ್ನು ಕರಗತ ಮಾಡಿಕೊಂಡರು.

ಬೆಳ್ಳಿತೆರೆ ಪ್ರವೇಶ ಮತ್ತು ರಾಷ್ಟ್ರಮಟ್ಟದಲ್ಲಿ ಮೂಡಿಸಿದ ಛಾಪು

೧೯೭೩ರಲ್ಲಿ ಚಿತ್ರರಂಗಕ್ಕೆ ಕಾಲಿಡುವ ಹೊತ್ತಿಗಾಗಲೇ ರಂಗಭೂಮಿಯ ಅನುಭವದಿಂದ ಪರಿಪೂರ್ಣ ನಟನಾಗಿ ರೂಪುಗೊಂಡಿದ್ದ ಅನಂತ್ ನಾಗ್, ಹೊಸ ಅಲೆಯ ಸಿನಿಮಾಗಳ ನಾಯಕನಾಗಿ ಹೊರಹೊಮ್ಮಿದರು. ಶ್ಯಾಮ್ ಬೆನಗಲ್, ಅಮೋಲ್ ಪಾಲೇಕರ್ ಹಾಗೂ ಶಬಾನಾ ಆಜ್ಮಿ ಅವರಂತಹ ಹೆಸರಾಂತ ಚಿತ್ರಕರ್ಮಿಗಳ ಜೊತೆ ಕಾರ್ಯನಿರ್ವಹಿಸಿದರು. ೧೯೭೪ರಿಂದ ೧೯೭೮ರ ನಡುವೆ ಕನ್ನಡದ ಜೊತೆಗೆ ಹಿಂದಿ ಹಾಗೂ ತೆಲುಗು ಸಿನಿಮಾಗಳಲ್ಲೂ ಸಕ್ರಿಯರಾಗಿದ್ದರು. ಇವರು ಅಭಿನಯಿಸಿದ ಮೊದಲ ಹಿಂದಿ ಚಿತ್ರ 'ಅಂಕುರ್' ಬರೋಬ್ಬರಿ ಮೂರು ರಾಷ್ಟ್ರ ಪ್ರಶಸ್ತಿಗಳನ್ನು ಪಡೆದುಕೊಂಡು ದೇಶಾದ್ಯಂತ ಸದ್ದು ಮಾಡಿತು.

ಸಿದ್ಧ ಸೂತ್ರಗಳಿಗೆ ಬಗ್ಗದ ವೈವಿಧ್ಯಮಯ ಪಾತ್ರಗಳ ಸರದಾರ

ಚಿತ್ರರಂಗಕ್ಕೆ ಬಂದ ಕೆಲವೇ ದಿನಗಳಲ್ಲಿ ಅತ್ಯಂತ ಪ್ರಸಿದ್ಧ ರೊಮ್ಯಾಂಟಿಕ್ ಹೀರೋ ಆಗಿ ಹೊರಹೊಮ್ಮಿದ ಅನಂತ್ ನಾಗ್ ಅವರನ್ನು ನಿರ್ದಿಷ್ಟ ಬ್ರ್ಯಾಂಡ್‌ಗೆ ಸೀಮಿತಗೊಳಿಸಲು ಉದ್ಯಮ ಪ್ರಯತ್ನಿಸಿತು. ಆದರೆ ಯಾವ ಸಿದ್ಧ ಸೂತ್ರಕ್ಕೂ ಒಳಪಡದ ಅವರು 'ಕನ್ನೇಶ್ವರ ರಾಮ' ಹಾಗೂ 'ಹಂಸಗೀತೆ'ಯಂತಹ ಭಿನ್ನ ಪಾತ್ರಗಳನ್ನು ಆಯ್ದುಕೊಂಡು ಸವಾಲಾಗಿ ಸ್ವೀಕರಿಸಿದರು. ಲವ್ವರ್ ಬಾಯ್ ಪಾತ್ರಗಳಲ್ಲಿ ಮಿಂಚುತ್ತಿದ್ದಾಗಲೇ 'ನಾ ನಿನ್ನ ಬಿಡಲಾರೆ' ಅಂತಹ ಹಾರರ್, 'ಮಾತು ತಪ್ಪದ ಮಗ' ಅಂತಹ ಸಾಮಾಜಿಕ, ಗಣೇಶ ಸರಣಿಯ ಅಪ್ರತಿಮ ಹಾಸ್ಯಚಿತ್ರಗಳು ಹಾಗೂ 'ಶಾಂತಿ ಕ್ರಾಂತಿ'ಯಂತಹ ಚಿತ್ರದಲ್ಲಿ ಖಳನಟನಾಗಿಯೂ ನಟಿಸಿ ತಮ್ಮ ನಟನಾ ವೈವಿಧ್ಯತೆಯನ್ನು ತೋರಿಸಿದರು. ಮುಖ್ಯವಾಹಿನಿಯಲ್ಲಿ ಸ್ಟಾರ್‌ಗಿರಿ ಸಿಕ್ಕ ಮೇಲೂ ಪ್ರಯೋಗಾತ್ಮಕ ಚಿತ್ರಗಳನ್ನು ಮಾಡುವುದನ್ನು ಅವರು ಎಂದಿಗೂ ಕೈಬಿಡಲಿಲ್ಲ.

ಸಮಾಜಮುಖಿ ಕಾಳಜಿ ಮತ್ತು ಬಹುಮುಖ ವ್ಯಕ್ತಿತ್ವದ ಅಪರೂಪದ ಸಾಧಕ

೭೦ ಮತ್ತು ೮೦ರ ದಶಕದ ಸಹಕ ಕಲಾವಿದರೆಲ್ಲರೂ ಅಭಿನಯದಿಂದ ದೂರವಾಗಿ ವಿಶ್ರಾಂತಿ ಪಡೆಯುತ್ತಿರುವ ಈ ಸಮಯದಲ್ಲಿ, ೩೦೦ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಅನಂತ್ ನಾಗ್ ಅವರು ಇಂದಿಗೂ ಸಕ್ರಿಯರಾಗಿ ನಟಿಸುತ್ತಿದ್ದಾರೆ. ವಯಸ್ಸು ೭೫ ದಾಟಿದ ಮೇಲೂ ದಿನವೂ ಕಥೆ ಕೇಳುವ ಅವರು, ಚಿತ್ರಕಥೆಯಲ್ಲಿ ಅಶ್ಲೀಲತೆ ಇರಬಾರದು ಮತ್ತು ಸಮಾಜಕ್ಕೆ ಕೆಟ್ಟ ಸಂದೇಶ ರವಾನೆಯಾಗಬಾರದು ಎಂಬ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ನಟನೆಯ ಹೊರತಾಗಿ ಅವರು ನಿರ್ಮಾಪಕರಾಗಿ, ಉದ್ಯಮಿಯಾಗಿ ಹಾಗೂ ರಾಜಕಾರಣಿಯಾಗಿಯೂ ಯಶಸ್ವಿ ಸೇವೆ ಸಲ್ಲಿಸಿದ್ದಾರೆ. ಶಾಸಕರಾಗಿ, ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿ ಜೆ.ಎಚ್. ಪಟೇಲ್ ಅವರ ಸಚಿವ ಸಂಪುಟದಲ್ಲಿ ಕೆಲಸ ಮಾಡಿದ ಅನುಭವ ಇವರಿಗಿದೆ.

ತಡವಾಗಿ ಒಲಿದ ಅತ್ಯುನ್ನತ ರಾಷ್ಟ್ರೀಯ ಗೌರವಗಳು

ದಶಕಗಳ ಕಾಲ ಚಿತ್ರರಂಗಕ್ಕೆ ನೀಡಿರುವ ಅನುಪಮ ಸೇವೆಯನ್ನು ಪರಿಗಣಿಸಿ ಕೇಂದ್ರ ಸರ್ಕಾರವು ೨೦೨೫ರಲ್ಲಿ ಇವರಿಗೆ 'ಪದ್ಮಭೂಷಣ' ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. ಇದೀಗ ಅದರ ಮರು ವರ್ಷವೇ ಭಾರತೀಯ ಚಿತ್ರರಂಗದ ಅತ್ಯುನ್ನತ ಮತ್ತು ಸುದೀರ್ಘ ಜೀವನಶ್ರೇಷ್ಠ ಕೊಡುಗೆಗೆ ನೀಡಲಾಗುವ 'ದಾದಾ ಸಾಹೇಬ್ ಫಾಲ್ಕೆ' ಪ್ರಶಸ್ತಿಯನ್ನು ಪ್ರಕಟಿಸುವ ಮೂಲಕ ಕೇಂದ್ರ ಸರ್ಕಾರವು ಈ ಮಹಾನ್ ಕಲಾಜೀವಿಗೆ ಸೂಕ್ತ ಗೌರವವನ್ನು ನೀಡಿದೆ. ಈ ಪ್ರಶಸ್ತಿಯು ಅನಂತ್ ನಾಗ್ ಅವರ ದೀರ್ಘಕಾಲದ ಕಲಾ ತಪಸ್ಸಿಗೆ ಸಿಕ್ಕ ನಿಜವಾದ ಗೆಲುವಾಗಿದೆ.

Add Zee News as a Preferred Source
TAGS:
Cinema